Search
  • Follow NativePlanet
Share
» »ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 23ರಿಂದ ಸೆಪ್ಟೆಂಬರ್ 22ರ ವರೆಗೆ ಹುಟ್ಟಿದವರು ಕನ್ಯಾರಾಶಿಯವರಾಗಿರುತ್ತಾರೆ. ಇವರು ಸಾಧಾರಣವಾಗಿರುವವರು, ಬುದ್ಧಿವಂತರಾಗಿರುವವರು ಹಾಗೂ ಪರಿಪೂರ್ಣರಾಗಿರುವ ವ್ಯಕ್ತಿಗಳಾಗಿರುತ್ತಾರೆ. ಕನ್ಯಾರಾಶಿಯವರು ಶಾಂತಿಯನ್ನು ಬಯಸುವ ವ್ಯಕ್ತಿಗಳು. ಇವರು ಧ್ಯಾನ ಮಾಡುವ ಮೂಲಕ ತಮ್ಮ ಮೌಲ್ಯಯುತವಾದ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ತಮ್ಮ ಮನಸ್ಸನ್ನು ನೆಮ್ಮದಿಯಾಗಿಡಲು 2018ರಲ್ಲಿ ಯಾವ ಸ್ಥಳಗಳಿಗೆ ಸುತ್ತಾಡುವುದು ಬೆಸ್ಟ್ ಅನ್ನೋದು ಗೊತ್ತಾ?

ಇವರು ಮಹಾರಾಷ್ಟ್ರದ ಮುಂಬೈ ಹಾಗೂ ರಾಜಸ್ಥಾನದ ಜೈಪುರ ಪ್ರವಾಸವನ್ನು ತುಂಬಾ ಆನಂದಿಸುತ್ತಾರೆ. ಗೋವಾದ ಕಡಲ ಕಿನಾರೆ, ರೆಸಾರ್ಟ್‌ಗಳು ಇವರಿಗೆ ಖುಷಿಯನ್ನು ನೀಡುತ್ತದೆ.

ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ಗೋವಾದ ಬೀಚ್

ಗೋವಾದ ಬೀಚ್

PC:Aleksandr Zykov

ಗೋವಾದ ಪ್ರತಿ ಸಾಯಂಕಾಲ ಔತಣ ಪ್ರೀಯರಿಗೆ ಸ್ವರ್ಗವೆಂದೇ ಹೇಳಬಹುದು. ಹಲವಾರು 'ಪಬ್'ಗಳು ಹೊಟೆಲ್ ಗಳು ರಾತ್ರಿಯೆಲ್ಲ ತೆರೆದಿದ್ದು ನಸುಕಿನವರೆಗೂ ಸಂಗೀತಮಯವಾಗಿರುವುದನ್ನು ಗಮನಿಸಬಹುದು. ರಜೆಯ ಮೋಜಿನ ಪರಿಣಾಮಕಾರಿಯಾದ ಅನುಭವವನ್ನು ಪಡೆಯಲು ಗೋವಾ ಇಡಿ ಭಾರತದಲ್ಲೇ ನೆಚ್ಚಿನ ತಾಣವಾಗಿದ್ದು, ಬೇರಾವ ಕರಾವಳಿ ಪ್ರದೇಶವು ಇದರ ಮಟ್ಟಕ್ಕೆ ಬೆಳೆದಿಲ್ಲ ಎಂದರೆ ತಪ್ಪಾಗಲಾರದು.

ದೇಶಿ, ವಿದೇಶಿಯರ ಮೆಚ್ಚಿನ ತಾಣ

ದೇಶಿ, ವಿದೇಶಿಯರ ಮೆಚ್ಚಿನ ತಾಣ

PC: Samuel Abinezer

ಶಾಂತಿ ಹಾಗು ನಿಧಾನಗತಿಯ ಜೀವನ ಶೈಲಿಗೆ ಹೆಸರುವಾಸಿಯಾಗಿರುವ ಗೋವಾ ದೇಶಿಯ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನು ವಿದೇಶಿಯರು ಇಲ್ಲಿರುವ ಸ್ವಾತಂತ್ರ್ಯ, ವಿಸ್ಮಯಭರಿತ ಜೀವನಶೈಲಿಗೆ ಮನಸೋಲದೆ ಇರಲಾರರು.

ಜೈಪುರದ ಕೋಟೆ, ಅರಮನೆ

ಜೈಪುರದ ಕೋಟೆ, ಅರಮನೆ

PC: A.Savin

ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು. ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ.

ವಾಸ್ತುಶಿಲ್ಪ ತಜ್ಞರಿಂದ ನಿರ್ಮಿತವಾದದ್ದು

ವಾಸ್ತುಶಿಲ್ಪ ತಜ್ಞರಿಂದ ನಿರ್ಮಿತವಾದದ್ದು

PC:PP Yoonus

ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.

ಮುಂಬೈನಗರಿ

ಮುಂಬೈನಗರಿ

PC: Gursikander

ಭಾರತದಲ್ಲಿರುವ ಎಲ್ಲಾ ನಗರಗಳಲ್ಲಿ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರ ಇದಾಗಿದೆ. ಕನಸುಗಳ ನಗರ ಮುಂಬೈ, ಫ್ಯಾಶನ್ ಗೆ ಹೆಸರುವಾಸಿ, ಇಲ್ಲಿನ ಜೀವನ ಶೈಲಿಯೇ ರೋಮಾಂಚನಕಾರಿ, ಇದು ಬಾಲಿವುಡ್ ನ ನೆಲೆ, ವೈವಿಧ್ಯಮಯ ಕಲೆ ಹಾಗೂ ಹಲವಾರು ಹೆಸರಾಂತ ಸಿನಿಮಾ ತಾರೆಯರ ನೆಲೆಯಾಗಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತದೆ

ಪ್ರವಾಸಿಗರನ್ನು ಆಕರ್ಷಿಸುತ್ತದೆ

PC: Universalashic

ಮುಂಬೈ ಇಲ್ಲಿಗೆ ಬರುವ ಪ್ರವಾಸಿಗರಿಗೆ, ಆಹಾರ ಖರೀದಿಯಿಂದ ಹಿಡಿದು ಸಡಗರದ ರಾತ್ರಿ ಜೀವನ ಶೈಲಿ, ಸುಂದರ ಪ್ರಕೃತಿ ವೀಕ್ಷಣೆಯ ಸ್ಥಳದ ವರೆಗೆ ಎಲ್ಲಾ ಬಗೆಯ ಸನ್ನಿವೇಶಗಳನ್ನೂ ಒದಗಿಸುತ್ತದೆ. ಇಲ್ಲಿರುವ ದೇವಾಲಯ, ಮಸೀದಿ ಹಾಗೂ ಚರ್ಚ್ ಗಳು ಕೇವಲ ಆಯಾ ಧರ್ಮದ ಜನರನ್ನು ಮಾತ್ರವಲ್ಲದೆ ಎಲ್ಲಾ ಧರ್ಮದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X