Search
  • Follow NativePlanet
Share
» »ಮಕರ ರಾಶಿಯವರಿಗೆ ಇಷ್ಟವಾಗೋ ತಾಣಗಳಿವು

ಮಕರ ರಾಶಿಯವರಿಗೆ ಇಷ್ಟವಾಗೋ ತಾಣಗಳಿವು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 22 ರಿಂದ ಜನವರಿ 19ರ ವರೆಗೆ ಜನಿಸಿದವರು ಮಕರ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಮಹಾತ್ವಾಕಾಂಕ್ಷಿಗಳೂ, ಬುದ್ದಿವಂತರೂ ಹಾಗೂ ಜವಬ್ದಾರಿಯುಳ್ಳವರೂ ಆಗಿರುತ್ತಾರೆ. ಮಕರ ರಾಶಿಯವರು ಸಂಸ್ಕೃತಿ, ಇತಿಹಾಸವನ್ನು ಹೊಂದಿರುವಂತಹ ಸ್ಥಳವನ್ನು ಇಷ್ಟಪಡುತ್ತಾರೆ. ಹಾಗಾಗಿ ಅವರ ರಾಶಿಗೆ ಆಗ್ರಾ ಹಾಗೂ ವಾರಣಾಸಿಯ ಪ್ರವಾಸ ಹೆಚ್ಚು ಸೂಕ್ತವಾಗಿದೆ.

ಧನುರಾಶಿಯವರು ಸುತ್ತಾಡಲು ಬೆಸ್ಟ್ ತಾಣಗಳಿವು

ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳು

ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳು

PC: Wikicomons

ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಪುಣರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗೂ ಸಾರಿ ಸಾರಿ ಹೇಳುತ್ತಿವೆ.

ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳು

ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳು

PC: KD7827

ಆಗ್ರಾದಲ್ಲಿ ತಾಜ್ ಮಹಲ್‍ ಹೊರತಾಗಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳು ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಆಗ್ರಾದ ಇತಿಹಾಸವು ಅಧಿಕೃತವಾಗಿ 11ನೇ ಶತಮಾನದಲ್ಲಿ ದಾಖಲೆಗಳಲ್ಲಿ ಸೇರ್ಪಡೆಗೊಂಡಿದೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಭೇಟಿ ನೀಡಲು ಅತ್ಯುತ್ತಮ ಅವಧಿ ಆಗ್ರಾಗೆ ಭೇಟಿ ನೀಡಲು ಅಕ್ಟೋಬರಿನಿಂದ ಮಾರ್ಚ್ ವರೆಗಿನ ಅವಧಿಯು ಅತ್ಯುತ್ತಮ ಕಾಲವಾಗಿದೆ.

ವಾರಾಣಾಸಿ

ವಾರಾಣಾಸಿ

PC: Jorge Royan

ಸ್ವಾಮಿಯ ಮುಂದೆ ಪ್ರಹಿಸುತ್ತಿರುವ ಪವಿತ್ರ ಗಂಗ ನದಿಯು ವಾರಾಣಾ ಹಾಗೂ ಅಸಿ ಎಂಬ 2 ಪವಿತ್ರವಾದ ನದಿಗಳು ಇಲ್ಲಿ ಸೇರುತ್ತದೆ. ಹಾಗಾಗಿಯೇ ಈ ಪ್ರದೇಶಕ್ಕೆ ವಾರಾಣಾಸಿ ಎಂದು ಹೆಸರು ಬಂದಿತು. ಪುಣ್ಯ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲಾ ತೋಲಗಿ ಹೋಗುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಉತ್ತರ ಪ್ರದೇಶದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಇರುವುದು ಕಾಶಿಯಲ್ಲಿ. 3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾಗಿದೆ.12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಾಗು ಶಿವನ ದೇವಸ್ಥಾನಗಳಲ್ಲೇ ಪವಿತ್ರವಾದ ಕಾಶಿ ವಿಶ್ವನಾಥ ದೇವಸ್ಥಾನ ಗಂಗಾ ನದಿಯ ಪಶ್ಚಿಮ ದಡದ ಮೇಲಿದೆ. ಇಲ್ಲಿನ ಮುಖ್ಯ ದೇವರಾದ ಶಿವನನ್ನು ವಿಶ್ವನಾಥ ಅಥವಾ ವಿಶ್ವೇಶ್ವರ ಎಂದು ಕರೆಯುತ್ತಾರೆ. ಇದರ ಅರ್ಥ ವಿಶ್ವವನ್ನು ಆಳುವವನು ಎಂದರ್ಥ.

ಮೋಕ್ಷ ಪ್ರಾಪ್ತಿ

ಮೋಕ್ಷ ಪ್ರಾಪ್ತಿ

PC: wikicommons

ಸಾಕಷ್ಟು ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲಿ ನಿತ್ಯ ಜರುಗುತ್ತಿರುತ್ತವೆ. ಪ್ರತಿಯೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕಾಶಿಯ ಮಹಾರಾಜ ಕಾಶಿ ನರೇಶನ ಪೂಜೆಯು ಒಂದು ಭಾಗವಾಗಿರುವುದನ್ನು ಗಮನಿಸಬಹುದು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಭಾಗವಾದ ಸುಪ್ರಸಿದ್ಧ ಬನಾರಸ್ ಘರಾನಾ ಸ್ಥಾಪನೆಯಾಗಿದ್ದೆ ವಾರಣಾಸಿಯಲ್ಲಿ. ಯಾವುದೇ ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಇಲ್ಲಿ ನಡೆಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

Read more about: india travel agra varanasi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more