Search
  • Follow NativePlanet
Share
» »ಇಲ್ಲಿ ಪ್ರಪೋಸ್ ಮಾಡಿದ್ರೆ ನೋ ಅನ್ನೋಕೆ ಚಾನ್ಸೇ ಇಲ್ಲ!

ಇಲ್ಲಿ ಪ್ರಪೋಸ್ ಮಾಡಿದ್ರೆ ನೋ ಅನ್ನೋಕೆ ಚಾನ್ಸೇ ಇಲ್ಲ!

ಲವ್ ಪ್ರಪೋಸ್ ಮಾಡೋದಂದ್ರೆ ಏನು ಸುಲಭದ ಕೆಲಸ ಅಂತಾ ತಿಳ್ಕೋಂಡಿದ್ದೀರಾ? ಅದಕ್ಕೂ ಗುಂಡಿಗೆ ಬೇಕು. ಅದಕ್ಕೂ ಸಮಯ, ಸಂದರ್ಭ ಅನ್ನೋದು ಮುಖ್ಯವಾಗುತ್ತದೆ. ನಿಮ್ಮ ಮನಸ್ಸಿನ ಮಾತನ್ನು ವ್ಯಕ್ತಪಡಿಸಲು, ನಿಮ್ಮ ಹುಡುಗೀಗೆ ಪ್ರಪೋಸ್ ಮಾಡಲು ಕೆಲವು ಬೆಸ್ಟ್ ಸ್ಥಳಗಳು ಇಲ್ಲಿವೆ.ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಪ್ರಪೋಸ್ ಮಾಡಿದ್ರೆ ಅವರು ನೋ ಅನ್ನೋಕೆ ಚಾನ್ಸೇ ಇಲ್ಲ.

ಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿ

ರಣಥಂಬೋರ್ ನ್ಯಾಷನಲ್ ಪಾರ್ಕ್‌ನಲ್ಲಿ ಗಾಳಿ ಬಲೂನ್

ರಣಥಂಬೋರ್ ನ್ಯಾಷನಲ್ ಪಾರ್ಕ್‌ನಲ್ಲಿ ಗಾಳಿ ಬಲೂನ್

PC: Tomas Castelazo
ನಿಮ್ಮ ಪಾರ್ಟನರ್ ಪಾರ್ಕ್‌ನಲ್ಲಿ ಕೆಳಗಿನ ಹಸಿರು ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುತ್ತಿರುವಾಗ ಆಕಾಶದಲ್ಲಿ ನಿಮ್ಮ ಲವ್ ಪ್ರಪೋಸಲ್ ಬಲೂನ್ ಹಾರಿದಾಗ ಆಕೆಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ . ರಣಥಂಬೋರ್ ನ್ಯಾಷನಲ್ ಪಾರ್ಕ್‌ನಾದ್ಯಂತ ಈ ಬಲೂನ್ ಗಾಳಿಯಲ್ಲಿ ತೇಲುತ್ತಿರುತ್ತದೆ. ಸ್ವಲ್ಪ ಕಾಲದ ವರೆಗೆ ಗಾಳಿಯಲ್ಲೇ ಸ್ಟಕ್ ಆಗಿ ಉಳಿದಿಡುತ್ತದೆ. ಇಷ್ಟೊಂದು ಸುಂದರ ರೊಮ್ಯಾಂಟಿಕ್ ಪ್ರಪೋಸಲ್‌ನ್ನು ಯಾರೂ ತಾನೇ ಬೇಡ ಅನ್ನಲು ಸಾಧ್ಯ ಹೇಳಿ.
ತಲುಪುವುದು ಹೇಗೆ? ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಜೈಪುರ್‌ ವಿಮಾನ ನಿಲ್ದಾಣ. ದೆಹಲಿಯಿಂದ ಜೈಪುರ್ ವಿಮಾನ ಹಿಡಿಯಬಹುದು.

 ಕೂರ್ಗ್

ಕೂರ್ಗ್

PC:Shriharinbelur
ಕೂರ್ಗ್‌ನ ಪ್ರಕೃತಿ ಸೌಂದರ್ಯಕ್ಕೆ ಸಾಟಿನೇ ಇಲ್ಲ. ಸುತ್ತಲೂ ಕಾಫಿ ತೋಟ, ಮಂಜಿನಿಂದ ಕೂಡಿದ ವಾತಾವರಣ ಎಂಥವರನ್ನೂ ರೊಮ್ಯಾಂಟಿಕ್‌ ಮೂಡ್‌ಗೆ ತರುತ್ತದೆ. ಇಲ್ಲಿ ಬೇಕಾದಷ್ಟು ಹೋಂ ಸ್ಟೇ ಇದೆ ಹಾಗೆಯೇ ರೆಸಾರ್ಟ್‌ಗಳೂ ಇವೆ. ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಸೂಕ್ತ ತಾಣ ಇದಾಗಿದೆ. ಲವ್ ಪ್ರಪೋಸ್ ಮಾಡಿದ್ರೆ ಸಕ್ಸಸ್ ಆಗೋದು ಗ್ಯಾರಂಟಿ

ಗೋವಾ

ಗೋವಾ

PC:Zerohund
ಗೋವಾ ಎಂದರೆ ಬಹಳಷ್ಟು ಜನರಿಗೆ ಇಷ್ಟ ಇರುತ್ತದೆ.ಗೋವಾದ ಬೀಚ್‌ನಲ್ಲಿ ಸೂರ್ಯಾಸ್ತ ಸಮಯದಲ್ಲಿ ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ನಲ್ಲಿ ನಿಮ್ಮ ಹುಡುಗಿಗೆ ಪ್ರಮೋಸ್ ಮಾಡಿ ಆಕೆ ಖಂಡಿತ ಓಕೆ ಎನ್ನುತ್ತಾಳೆ. ಗೋವಾಕ್ಕೆ ಹೋಗಲು ಬೆಂಗಳೂರಿನಿಂದ ವಿಮಾನ ಏರಬಹುದು.

ಮುನ್ನಾರ್/ ವಯನಾಡ್

ಮುನ್ನಾರ್/ ವಯನಾಡ್

PC: Kanthmss
ಮುನ್ನಾರ್/ ವಯನಾಡ್‌ನಲ್ಲಿರುವ ಹಸಿರು ಪ್ರಕೃತಿ ಸೌಂದರ್ಯದ ನಡುವೆ ಇರುವ ಫ್ಯಾನ್ಸಿ ರೆಸಾರ್ಟ್‌ನಲ್ಲಿನ ತೆರೆದ ಆವರಣದಲ್ಲಿ ಆಕೆಗೆ ನಿಮ್ಮ ಪ್ರೀತಿಯ ಅನಾವರಣ ಮಾಡಿ. ನೀವು ಈ ದಿನವನ್ನು ಸ್ಪೆಶಲ್ ಆಗಿಸಲು ಇಷ್ಟೊಂದು ಖರ್ಚು ಮಾಡಿದ್ದೀರಲ್ಲಾ ಎಂದು ಆಕೆ ಖುಷಿ ಪಡುತ್ತಾಳೆ. ಇಲ್ಲಿಗೆ ಹೋಗಲು ಬೆಂಗಳೂರಿನಿಂದ ಕೊಚ್ಚಿಗೆ ವಿಮಾನ ಬುಕ್ ಮಾಡಿ.

ಹಿಮಾಲಯ ಬೆಟ್ಟಗಳು

ಹಿಮಾಲಯ ಬೆಟ್ಟಗಳು

PC:Rajarshi MITRA
ನಿಮ್ಮ ಹುಡುಗಿ ಸ್ವಲ್ಪ ಸಾಹಸಮಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವಳಾಗಿದ್ದರೆ, ಮಂಜು ಅಂದರೆ ಇಷ್ಟಪಡುವವಳಾಗಿದ್ದಳೆ ಹಿಮಾಲಯದ ಬೆಟ್ಟಗಳು ಬೆಸ್ಟ್ ಆಪ್ಷನ್ ಆಗಿದೆ. ಅಲ್ಲಿನ ವಾತಾವರಣ ನಿಮ್ಮನ್ನು ಇನ್ನಷ್ಟು ಹತ್ತಿರವಾಗಿಸಬಹುದು. ಹಾಗಾಗಿ ಪ್ರಪೋಸಲ್ ಮಾಡಲು ಬೆಸ್ಟ್ ಸ್ಥಳವಾಗಿದೆ.

ಶ್ರೀನಗರದ ದಾಲ್ ಸರೋವರದ ಮಧ್ಯೆ

ಶ್ರೀನಗರದ ದಾಲ್ ಸರೋವರದ ಮಧ್ಯೆ

PC:Harry 27
ಬಹಳಷ್ಟು ಹುಡುಗೀಯರಿಗೆ ಬೀಚ್, ನೀರು ಅಂದರೆ ಇಷ್ಟ. ಇನ್ನೂ ಬೋಟಿಂಗ್ ಅಂದರೆ ಇನ್ನೂ ಇಷ್ಟವಿರುತ್ತದೆ. ಅನೇಕ ಸಿನಿಮಾಗಳಲ್ಲಿ ನೀವು ನೋಡಿರಬಹುದು ಲವ್‌ ಸೀನ್‌ನ್ನು ಶ್ರೀನಗರದ ದಾಲ್ ಲೇಕ್‌ನಲ್ಲಿ ಶೂಟಿಂಗ್ ಮಾಡಲಾಗಿರುತ್ತದೆ. ಕಾಟನ್ ಕ್ಯಾಂಡಿಯ ಮೋ ಡ, ಲಿಲ್ಲಿ ಪ್ಯಾಡ್ ಕಾರ್ಪೇಟ್ ಇವೆಲ್ಲಾ ನಿಮ್ಮನ್ನು ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.

ರನ್‌ ಆಫ್ ಕುಚ್

ರನ್‌ ಆಫ್ ಕುಚ್

PC:Superfast1111
ಗುಜರಾತ್‌ನಲ್ಲಿ ಉಪ್ಪಿನ ಮರುಭೂಮಿಗೆ ನಿಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿ. ಯಾವುದೋ ಒಂದು ಬೇರೆ ಪ್ರಪಂಚಕ್ಕೆ ಹೋದಂತಹ ಅನುಭವವಾಗುತ್ತದೆ. ಈವರೆಗೂ ನೋಡಿರದ ಸ್ಥಳವಾಗಿದ್ದು ಈ ಮರುಭೂಮಿಯಲ್ಲಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ.

ಹೆಲಿಪ್ಯಾಡ್ ಡಿನ್ನರ್

ಹೆಲಿಪ್ಯಾಡ್ ಡಿನ್ನರ್

PC:Eggi
ನಿಮಗೆ ನಿಮ್ಮ ಪ್ರಪೋಸಿಂಗ್ ದಿನವನ್ನು ಸಾಕಷ್ಟು ಇಂಟ್ರಸ್ಟಿಂಗ್ ಆಗಿಸಬೇಕೆಂಬ ಆಸೆ ಇದ್ದರೆ, ನೀವು ಸ್ವಲ್ಪ ಡಿಫರೆಂಟ್ ಆಗಿ ಯೋಚಿಸಬೇಕಾಗುತ್ತದೆ. ಹೆಲಿಪ್ಯಾಡ್ ಐಡಿಯಾ ಬೆಸ್ಟ್ ಆಗಿದೆ. ಇದರಲ್ಲಿ ನೀವು ಎತ್ತರದಿಂದ ಕೆಳಗಿನ ಸೌಂದರ್ಯವನ್ನು ವೀಕ್ಷಿಸಬಹುದು. ಹೆಲಿಪ್ಯಾಡ್‌ನಲ್ಲೇ ಡಿನ್ನರ್ ಮಾಡಿ. ಇದರಲ್ಲಿ ಕುಕ್ ನಿಮಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಈ ಮೂಲಕ ನಿಮ್ಮ ಮನಸಿನಲ್ಲಿರೋದನ್ನು ಬಿಚ್ಚಿಡಿ.

Read more about: india coorg goa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X