Search
  • Follow NativePlanet
Share
» »ಗುಜರಾತ್‌ನ ದಂತಾ ಪಟ್ಟಣದಲ್ಲಿ ಏನೇನೆಲ್ಲಾ ಇದೆ ನೋಡಿ

ಗುಜರಾತ್‌ನ ದಂತಾ ಪಟ್ಟಣದಲ್ಲಿ ಏನೇನೆಲ್ಲಾ ಇದೆ ನೋಡಿ

ದಂತಾ ಪಟ್ಟಣವು ರಾಜಸ್ತಾನ ಮತ್ತು ಗುಜರಾತಿನ ಗಡಿಯಲ್ಲಿನ ಬಾಣಸ್ಕಾಂತ ಜಿಲ್ಲೆಯಲ್ಲಿದೆ. ದಂತಾ ಒಂದು ಕಾಲದಲ್ಲಿ ಅಗ್ನಿವಂಶ ರಜಪೂತರ ಸಾಮಂತರಾಗಿದ್ದ ಪಾರಮಾರ ವಂಶದವರ ರಾಜಧಾನಿಯಾಗಿತ್ತು. ಸ್ವಾತಂತ್ರ್ಯಾನಂತರ ದಂತಾ ಭಾರತದೊಂದಿಗೆ ವಿಲೀನಗೊಂಡಿತು.

ಭವಾನಿ ವಿಲ್ಲಾ ಹೆರಿಟೇಜ್ ಹೋಂ ಸ್ಟೇ

ಭವಾನಿ ವಿಲ್ಲಾ ಹೆರಿಟೇಜ್ ಹೋಂ ಸ್ಟೇ

ಅಹಮದಾಬಾದಿನಿಂದ ದಕ್ಷಿಣಕ್ಕೆ 150 ಕಿಮೀ ದೂರದಲ್ಲಿದೆ. ಇಂದಿಗೂ ರಾಜಮನೆತನದ ಸದಸ್ಯರು ಈ ಅರಮನೆಯಲ್ಲಿದ್ದಾರೆ ಎನ್ನಲಾಗುತ್ತದೆ.ರಾಜಸ್ಥಾನದ ಮೌಂಟ್ ಅಬುವಿಗೆ ಸಮೀಪದಲ್ಲಿ ಈ ರಾಜಮನೆತನದವರು "ಭವಾನಿ ವಿಲ್ಲಾ ಹೆರಿಟೇಜ್ ಹೋಂ ಸ್ಟೇ" ಎನ್ನುವ ಹೋಂ ಸ್ಟೇ ಒಂದನ್ನು ನಡೆಸುತ್ತಿದ್ದಾರೆ.

 ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ


ದಂತಾದಲ್ಲಿ ಬೇಸಿಗೆಗಳಲ್ಲಿ ಹೆಚ್ಚು ಉಷ್ಣತೆಯಿರುತ್ತದೆ. ಉಳಿದ ಸಮಯಗಳಲ್ಲಿ ಸಾಧಾರಣ ಹವಾಮಾನವಿರುತ್ತದೆ. ಮಳೆಗಾಲ ಮತ್ತು ಚಳಿಗಾಲಗಳು ಒಳ್ಳೆಯ ಪ್ರವಾಸಿ ಅನುಭವವನ್ನು ನೀಡುತ್ತವೆ.

ದಂತಾದ ಸುತ್ತಮುತ್ತಲ ಸ್ಥಳಗಳು

ದಂತಾದ ಸುತ್ತಮುತ್ತಲ ಸ್ಥಳಗಳು

PC: Ashish Choudhary
ದಂತಾದ ಸುತ್ತಮುತ್ತಲು ಭೇಟಿ ನೀಡಬೇಕಾಗಿರುವ ಸ್ಥಳಗಳೆಂದರೆ ಅಂಬಾಜಿ ದೇವಾಲಯ, ಪಟನ್‌ನಲ್ಲಿನ ರಾಣಿ ಕಿ ವಾವ್, ಜೈನ ಮಂದಿರದ ಅವಶೇಷಗಳು, ವಾದ್ನಗರದ ಸ್ಮಾರಕಗಳು, ಕೊಟೇಶ್ವರ ದೇವಾಲಯ, ಮೊದ್ಹೇರದ ಸೂರ್ಯನ ದೇವಾಲಯ, ತರಂಗ ಮತ್ತು ಕುಂಭಾರಿಯಾದ ಜೈನ ದೇಗುಲಗಳು ಮತ್ತು ಧರೋಜ್ ಅಣೆಕಟ್ಟು. ಪಶ್ಚಿಮಿನ ಹಾರಗಳು, ಕಂಚಿನ ಆಭರಣಗಳು, ದಂತದಲ್ಲಿ ಕೆತ್ತಿದ ಚಿತ್ರಗಳು ಇತ್ಯಾದಿ ಸ್ಮರಣಿಕೆಗಳನ್ನು ಇಲ್ಲಿ ನೋಡಬಹುದು.

ಬಲರಾಂ ಅಂಬಾಜಿ ವನ್ಯಜೀವಿಧಾಮ

ಬಲರಾಂ ಅಂಬಾಜಿ ವನ್ಯಜೀವಿಧಾಮ

PC:વિહંગ
ಬಲರಾಂ ಅಂಬಾಜಿ ವನ್ಯಜೀವಿಧಾಮವು ಕೂಡ ದಂತಾದಲ್ಲಿ ನೋಡಬೇಕಾದ ಸ್ಥಳವಾಗಿದೆ. ಬ್ಲೂ ಬುಲ್ಸ್ ರೀತಿಯ ಪ್ರಾಣಿಗಳು, ಜಂಗಲ್ ಫೌಲ್ ಮತ್ತು ಸ್ಪೌರ್ ಫೌಲ್, ಪಾರ್ಟಿರಿಡ್ಜಸ್, ನವಿಲುಗಳು, ಕ್ವೈಲ್ ಮತ್ತಿತರ ವನ್ಯಜೀವಿಗಳಾದ ಕರಡಿ, ತೋಳ, ನರಿ, ಕಾಡು ಬೆಕ್ಕು ಹೈನಾ,ಚಿರತೆ, ಸ್ಲೋತ್ ಕರಡಿ ಮತ್ತು ಪೊರ್ಕುಪೈನ್‌ಗಳನ್ನು ಇಲ್ಲಿ ಕಾಣಬಹುದು.

ಧಾರೊಯಿ ಅಣೆಕಟ್ಟು

ಧಾರೊಯಿ ಅಣೆಕಟ್ಟು


1978ರಲ್ಲಿ ಮೆಹ್ಸಾನ ಜಿಲ್ಲೆಯ ಧಾರೊಯಿ ಹಳ್ಳಿಯಲ್ಲಿ ಸಾಬರಮತಿ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ಸಾಬರಮತಿಯ ಮೇಲ್ಭಾಗದ ಉಪ-ಜಲಾನಯನ ಪ್ರದೇಶದಲ್ಲಿದೆ. ಈ ಭಾಗವನ್ನು ಧಾರೊಯಿ ಉಪ-ಜಲಾನಯನ ಪ್ರದೇಶವೆಂದು ಕರೆಯಲಾಗುತ್ತದೆ.

ಕುಂಭಾರಿಯ ಜೈನ ಮಂದಿರ

ಕುಂಭಾರಿಯ ಜೈನ ಮಂದಿರ

ಕುಂಭಾರಿಯ ಜೈನ ಮಂದಿರಗಳನ್ನು 12ನೆಯ ಶತಮಾನದಲ್ಲಿ ವಿಮಲ್ ಷಾನು ಕಟ್ಟಿಸಿದನು. ಈ 5 ಮಂದಿರಗಳನ್ನು 5 ಮಂದಿ ಜೈನ ತೀರ್ಥಂಕರರಾದ ಮಹಾವೀರ, ನೇಮಿನಾಥ, ಸಂಭವನಾಥ, ಶಾಂತಿನಾಥ ಮತ್ತು ಪಾರ್ಶ್ವನಾಥರಿಗೆ ಸಮರ್ಪಿಸಲಾಗಿದೆ. ಕಲಾತ್ಮಕವಾಗಿ ಬಿಳಿ ಅಮೃತಶಿಲೆಯಲ್ಲಿ ಈ ಮಂದಿರಗಳನ್ನು ಕಟ್ಟಲಾಗಿದೆ. ವಿಮಲ್ ಷಾನು ಕಟ್ಟಿಸಿದ 360 ಜೈನ ಮಂದಿರಗಳಲ್ಲಿ ಉಳಿದಿರುವುದು ಇವು ಮಾತ್ರ. ವಿಮಲ್ ಷಾನು ಚಾಲುಕ್ಯ ದೊರೆ ಭೀಮದೇವ- Iನ ಮಂತ್ರಿಯಾಗಿದ್ದನು. ಈ ಮಂದಿರಗಳು ತರಂಗ ಬೆಟ್ಟಗಳಿಂದ 40 ಕಿಮೀ ದೂರದಲ್ಲಿದೆ. ಇಲ್ಲಿ ದೇವ ದೇವತೆಗಳ, ದೇವಕನ್ನಿಕೆಯರ, ಕುದುರೆಸವಾರರ ಮತ್ತು ಸಂಗೀತಗಾರರ ಸುಂದರ ಕಲಾತ್ಮಕ ಕೆತ್ತನೆಗಳನ್ನು ಕಾಣಬಹುದು. ಈ ಮಂದಿರಗಳು ಬೆಳಗ್ಗೆ 6.30 ರಿಂದ ರಾತ್ರಿ 7.30ರವರೆಗೆ ತೆರೆದಿರುತ್ತದೆ.

ಮೆಹ್ಸಾನ

ಮೆಹ್ಸಾನ

ಮೆಹ್ಸಾನ ಜಿಲ್ಲೆಯ ಒಂದು ಸಣ್ಣ ನಗರ ಮೆಹ್ಸಾನ. ಈ ನಗರದಲ್ಲಿ ಎಣ್ಣೆ, ನೈಸರ್ಗಿಕ ಅನಿಲ ಮತ್ತು ಡೈರಿ ಉತ್ಪನ್ನಗಳ ಕೈಗಾರಿಕೆಗಳನ್ನು ಕಾಣಬಹುದು. ಇಲ್ಲಿ ಮೊಟ್ಟಮೊದಲ ಜಲೋದ್ಯಾನ ಯುರೇಷ್ಯಾ ಮತ್ತು ಭಾರತದ ಅತಿ ದೊಡ್ಡ ಕಬ್ಬಿಣ ಮತ್ತು ಉಕ್ಕಿನ ಮಾರುಕಟ್ಟೆಯನ್ನು ಕಾಣಬಹುದು. ಇಲ್ಲಿನ ಕೆಲವು ಪ್ರಮುಖ ಪ್ರವಾಸಿ ತಾಣಗಳೆಂದರೆ: 161 ಅಡಿ ಎತ್ತರದ ಮುಲ್ನಾಯಕ ದೇವಾಲಯ, ಮೊದಹೆರ ಸೂರ್ಯನ ದೇವಾಲಯ, ಹಿಂಗ್ನಾಜ ಮಠ ದೇವಾಲಯ, ಸ್ವಾಮಿನಾರಾಯಣ ದೇವಾಲಯ, ಥೋಲ್ ವನ್ಯಜೀವಿಧಾಮ. ಈ ಧಾಮದಲ್ಲಿ ಹಲವು ರೀತಿಯ ಹಕ್ಕಿಗಳಾದ ಫ್ಲೆಮಿಂಗೋಗಳು, ಗ್ರೆ ಪೆಲಿಕಾನ್ಗಳು, ತೇವ ಭೂಮಿಯ ಹಕ್ಕಿಗಳು, ಕಪ್ಪು ಐಬಿಸ್ಗಳನ್ನು ಇಲ್ಲಿ ಕಾಣಬಹುದು. ವೈಡ್ ಆ್ಯಂಗಲ್ ಥಿಯೇಟರ್ ಇಲ್ಲಿನ ಮೊದಲ ಮಲ್ಟಿಪ್ಲೆಕ್ಸ್.

 ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ : ಸಮೀಪದ ವಿಮಾನ ನಿಲ್ದಾಣ ಅಹಮದಾಬಾದ್. ಇದು 184 ಕಿಮೀ ದೂರದಲ್ಲಿದೆ.

ರೈಲು: ಅಹಮದಾಬಾದ್ - ದೆಹಲಿಯಲ್ಲಿರುವ ಹತ್ತಿರದ ನಿಲ್ದಾಣವೆಂದರೆ ಪಾಲನ್ಪುರ್. ಇದು 38 ಕಿಮೀ ದೂರದಲ್ಲಿದೆ.

ರಸ್ತೆ: ಅಹಮದಾಬಾದ್ ಬಸ್‌ ನಿಲ್ದಾಣವು ದಂತಾಗೆ ಸಮೀಪದ ಬಸ್‌ ನಿಲ್ದಾಣವಾಗಿದೆ. ಇದು 184 ಕಿಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ರಿಕ್ಷಾದ ಮೂಲಕ ನೀವು ದಂತಾ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X