Search
  • Follow NativePlanet
Share
» »ಕೋಲ್ಕತ್ತ ಕಾಳಿ ದೇವಾಲಯದ ಇತಿಹಾಸ

ಕೋಲ್ಕತ್ತ ಕಾಳಿ ದೇವಾಲಯದ ಇತಿಹಾಸ

ಭಾರತದಲ್ಲಿ ಹಲವಾರು ದೇವರನ್ನು ಪೂಜಿಸಲಾಗುತ್ತದೆ. ಕೋಟ್ಯಾಂತರ ದೇವರು ನಮ್ಮ ದೇಶದಲ್ಲಿ ನೆಲೆಗೊಂಡಿದ್ದು, ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ದೇವರು ಅತ್ಯಂತ ಪ್ರಸಿದ್ದರಾಗಿರುತ್ತಾರೆ. ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿ, ಕೇರಳದಲ್ಲಿ ಅನಂತ ಪದ್ಮನಾಭ ಸ್ವಾಮಿ ಹೇಗೆ ವಿಶ್ವ ವಿಖ್ಯಾತವಾದ ಪುಣ್ಯ ಕ್ಷೇತ್ರವೂ ಹಾಗೇಯೆ ಕೋಲ್ಕತ್ತದಲ್ಲಿಯೂ ದಕ್ಷಿಣೇಶ್ವರ ಕಾಳಿ ದೇವಾಲಯವು ಅತ್ಯಂತ ಸುಪ್ರಸಿದ್ದವಾದ ದೇವಾಲಯವಾಗಿದೆ.

ಕೋಲ್ಕತ್ತ ಕಾಳಿ ದೇವಾಲಯ
PC: Jim Carter

ಕೋಲ್ಕತ್ತ ಕಾಳಿ ಎಂದೇ ಖ್ಯಾತಿಯಾಗಿರುವ ಈ ತಾಯಿಯನ್ನು ಕೋಲ್ಕತ್ತ ಜನತೆಯು ಅತ್ಯಂತ ಭಕ್ತಿ, ಶ್ರಧ್ದೆಯಿಂದ ಪುಜಿಸುತ್ತಾರೆ. ಈ ದಕ್ಷಿಣೇಶ್ವರ ಕಾಳಿಯ ದರ್ಶನ ಭಾಗ್ಯ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಪಕ್ಚಿಮ ಬಂಗಾಳ ಕೋಲ್ಕತ್ತದ ದಕ್ಷಿಣೇಶ್ವರದಲ್ಲಿದ್ದು ಹೊಗ್ಲಿ ನದಿಯ ದಡದ ಮೇಲೆ ಈ ದೇವಾಲಯವಿದೆ.. ದಕ್ಷಿಣೇಶ್ವರ ಕಾಳಿಯನ್ನು ಭಕ್ತರು "ಭವತಾರಿಣಿ"ಎಂದು ಸಹಾ ಕರೆಯುತ್ತಾರೆ.

ದೇವಾಲಯದ ನಿರ್ಮಾಣಕಾರರು.
ಈ ದೇವಾಲಯವನ್ನು 19 ನೇ ಶತಮಾನ 1855 ರಲ್ಲಿ ರಾಣಿ ರೆಶ್ಮೊನಿ ನಿರ್ಮಿಸಿದರು ಎನ್ನಲಾಗಿದೆ. ಕಾಳಿ ದೇವತೆಯು ರೆಶ್ಮೂನಿರಾಣಿಯ ಅತ್ಯಂತ ಅಚ್ಚುಮೆಚ್ಚಿನ ದೇವತೆಯಾಗಿದ್ದಳು. ಈ ರಾಣಿಯು 1847 ರಲ್ಲಿ ಪ್ರಪಂಚದಲ್ಲಿರುವ ತೀರ್ಥಯಾತ್ರೆ ಕೈಗೊಳ್ಳಲು ನಿಶ್ಚಯಿಸಿದಳು. ತದನಂತರ ಕಾಶಿ ನಗರದಲ್ಲಿ ನೆಲೆಸಿರುವ ಆದಿ ಪಾರಾಶಕ್ತಿಯ ದರ್ಶನ ಭಾಗ್ಯ ಪಡೆಯಲು ನಿಶ್ಚಿಯಿಸಿದಳು. ತನ್ನ ಬಂಧು ಮಿತ್ರರು ಹಾಗೂ ಸೇವಕರೊಂದಿಗೆ ಕಾಶಿಗೆ ಹೋರಟಳು.

ಕೋಲ್ಕತ್ತ ಕಾಳಿ

PC: Jagadhatri

ದೇವಾಲಯದ ನಿರ್ಮಾಣದ ಇತಿಹಾಸ
ಸಾಂಪ್ರದಾಯಿಕ ಆಧಾರದ ಪ್ರಕಾರ, ರಾಣಿ ರೆಶ್ಮೊನಿಯು ಕಾಶಿ ಯಾತ್ರೆ ಕೈಗೊಳ್ಳುವ ಹಿಂದಿನ ರಾತ್ರಿ ರಾಣಿಯ ಕನಸಿನಲ್ಲಿ ಬಂದು ಯಾತ್ರೆಗೆ ಹೋರಡಲು ತಿಳಿಸಿರಬುದು ಎಂಬ ಸಂಶಯವಿದೆ. ಸ್ವಪ್ನದಲ್ಲಿ ಬಂದ ಈ ಕನಸಿನ ಪ್ರಭಾವದಿಂದ ರಾಣಿ ರೆಶ್ಮೊನಿ ತ್ವರಿತವಾಗಿ ಕೋಲ್ಕತ್ತದ ದಕ್ಷಿಣೇಶ್ವರದಲ್ಲಿ 20 ಎಕ್ಕರೆ ಸ್ಥಳದಲ್ಲಿ 1857 ರಿಂದ 1855 ರವರೆಗೆ ದೊಡ್ಡಾದಾದ ಕಾಳಿಯ ದೇವಾಲಯ ಹಾಗೂ ಸಮುದಾಯವನ್ನು ಸ್ಥಾಪಿಸಿದಳು. ಈ ದೇವಾಲಯದ ನಿರ್ಮಾಣಕ್ಕೆ ಸರಾಸರಿ 8 ವರ್ಷಗಳ ಕಾಲ ಹಾಗೂ ಆ ಕಾಲದಲ್ಲೇ 900,000 ರೂಪಾಯಿಗಳಾಗಿತ್ತು. ನಿರ್ಮಾಣವಾದ ನಂತರ ಮೇ 31,1855 ರಂದು ಕಾಳಿ ದೇವತೆಯ ವಿಗ್ರಹವನ್ನು ತಂದು ಪ್ರತಿಷ್ಟಾಪಿಸಿದರು. ಉತ್ಸವಗಳಲ್ಲಿ ಈ ಕಾಳಿಯನ್ನು ಶ್ರೀ ಶ್ರೀ ಜಗದೀಶ್ವರಿ ಮಹಾಕಾಳಿಯೆಂದು ಪ್ರಸಿದ್ದಿ ಹೊಂದಿದಳು. ಈ ಕಾಳಿ ತಾಯಿಯನ್ನು ಪ್ರತಿಷ್ಟಾಪನೆ ಮಾಡುವ ದಿನದಂದು ಒಂದು ಲಕ್ಷಕಿಂತ ಹೆಚ್ಚು ಮಂದಿ ಬ್ರಾಹ್ಮಣರನ್ನು ವಿವಿಧ ಪ್ರಾಂತ್ಯಗಳಿಂದ ಕರೆಸಲಾಗಿತ್ತು. ರಾಣಿ ರೆಶ್ಮೋನಿ ದೇವಾಲಯ ಪ್ರಾರಂಭೋತ್ಸವವಾಗಿ ಕೇವಲ 5 ವರ್ಷಗಳು ಮಾತ್ರ ಜೀವಿಸಿದ್ದರು. ತೀವ್ರ ಆನಾರೋಗ್ಯದಿಂದ ಬಳಲುತಿದ್ದ ರಾಣಿ ರೆಶ್ಮೋನಿ 1861ರಲ್ಲಿ ಮೃತರಾದರು.

ಕೋಲ್ಕತ್ತ ಕಾಳಿ ದೇವಾಲಯದ

PC:Kinjal bose 78

ರಾಮಕೃಷ್ಣ ಪರಮಹಂಸ
ಈ ಕಾಳಿ ದೇವಾಲಯದಲ್ಲಿ ಪ್ರಧಾನ ಆರ್ಚಕರಾಗಿದ್ದ ರಾಮಕುಮಾರ್ ಚಟ್ಟೋಪಾದ್ಯಾಯರವರು ಮೃತರಾದ ನಂತರ ದೇವಾಲಯದ ಜವಾಬ್ದಾರಿಯನ್ನು ರಾಮಕುಮಾರ್ ಚಟ್ಟೋಪಾದ್ಯಾಯರವರ ಸಹೋದರ ಪ್ರಖ್ಯಾತ ಆಧ್ಯಾತ್ಮಿಕ ಗುರುವಾಗಿದ್ದ ರಾಮಕೃಷ್ಣ ಪರಮಹಂಸ ಹಾಗೂ ಇವರ ಧರ್ಮಪತ್ನಿಯಾದ ಶಾರದ ದೇವಿಯವರಿಗೆ ನೀಡಲಾಯಿತು. ರಾಮಕೃಷ್ಣರವರು ಸತತ 30 ವರ್ಷದವರೆಗೂ ಈ ದೇವಾಲಯದ ಕೀರ್ತಿ ಪ್ರತಿಷ್ಟೆಗಳನ್ನು ಎತ್ತಿಹಿಡಿದರು. ನಂತರ 1886ರಲ್ಲಿ ರಾಮಕೃಷ್ಣರು ನಿಧನರಾದರು.

ರಾಮಕೃಷ್ಣ ಪರಮಹಂಸ

PC: Abinash Chandra Dna


ದೇವಾಲಯದ ವಾಸ್ತು ಶಿಲ್ಪ
ಈ ದೇವಾಲಯವನ್ನು ಬೆಂಗಾಲಿ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ 9 ಸ್ತಂಭಗಳಿವೆ ಇವುಗಳನ್ನು ನವರತ್ನ ಸ್ತಂಭವೆಂದೇ ಕರೆಯಲಾಗುತ್ತದೆ. ಈ ದೇವಾಲಯವು 3 ಮಹಡಿಯನ್ನು ಒಳಗೊಂಡಿದ್ದು, ದಕ್ಷಿಣಭಿಮುಖವಾಗಿದೆ. ಈ ದೇವಾಲಯ ಗರ್ಭಗೃಹದಲ್ಲಿ ಪ್ರಧಾನ ದೇವತೆಯಾಗಿ ಕಾಳಿ ಮಾತೆ ನೆಲೆಸಿದ್ದಾಳೆ. ಸಾಮಾನ್ಯವಾಗಿ ಈ ಕಾಳಿಯು ಶಿವನ ಎದೆಯ ಮೇಲೆ ಕಾಲಿಟ್ಟು ನಿಂತಿರುವ ಭಂಗಿಯ ಮೂರ್ತಿಯಾಗಿದೆ. ಹಾಗೇಯೆ ಈ ದೇವಾಲಯದ ಈಶಾನ್ಯದಲ್ಲಿ ವಿಷ್ಣು ದೇವಾಲಯ ಹಾಗೂ ರಾಧ ದೇವಾಲಯವಿದೆ. ಮುಖ್ಯವಾಗಿ 12 ಶಿವನ ದೆವಾಲಯವಿದೆ.

ವಿಶೇಷ ಪೂಜೆ
ಈ ಕಾಳಿಯನ್ನು ಕಾಳಿ ಪೂಜೆ ಹಾಗೂ ಸ್ನಾನ ಯಾತ್ರಗಳೆಂಬ ವಿಶೇಷ ಪೂಜೆಗಳು ಮಾಡಲಾಗುತ್ತದೆ ಹಾಗೂ ಕಲ್ಪತರು ಎಂಬ ದಿನ ಈ ಕಾಳಿಗೆ ದೊಡ್ಡ ಉತ್ಸವ ನಡೆಸಲಾಗುತ್ತದೆ.

ಕಾಳಿ ಮಾತ ದರ್ಶನದ ಸಮಯ
ಈ ದಕ್ಷಿಣೇಶ್ವರ ಕಾಳಿ ದೇವಾಲಯವು ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 10.30 ರವರೆಗೆ ಭಕ್ತದಿಗಳಿಗೆ ದರ್ಶನದ ಅವಕಾಶವಿರುತ್ತದೆ.

ಭೇಟಿ ನೀಡಲು ಉತ್ತಮ ಕಾಲಾವಧಿ
ಈ ದೇವಾಲಯಕ್ಕೆ ವರ್ಷದಲ್ಲಿ ಯಾವಾಗಲಾದರೂ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X