ಅರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮಾಡಲಾಗುವ ವ್ಯಾಯಾಮ ಚಟುವಟಿಕೆಗಳಲ್ಲಿ ಸೈಕ್ಲಿಂಗ್ ಅಥವಾ ಸೈಕಲ್ ತುಳಿಯುವುದು ಅತಿ ಉತ್ತಮ ಎಂದು ಹೇಳಲಾಗಿದೆ. ಹೃದಯದ ರಕ್ತನಾಳಗಳು ಚಟುವಟಿಕೆಯಿಂದಿರಲು, ಮಾಂಸ ಖಂಡಗಳು ಬಲಗೊಳ್ಳಲು ಹಾಗೂ ಮೂಳೆಗಳು, ಕೀಲುಗಳು ಸುಲಭವಾಗಿ ಬಾಗಲು ಸೈಕ್ಲಿಂಗ್ ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ಇಂದು ಬೆಂಗಳೂರು ನಗರವನ್ನು ಹೊರತುಪಡಿಸಿ ಮಿಕ್ಕ ಎಲ್ಲ ಕರ್ನಾಟಕದ ತಾಲೂಕು, ಹಳ್ಳಿ ಪ್ರದೇಶಗಳಲ್ಲಿ ಸೈಕಲ್ ತುಳಿಯುವುದನ್ನು ಬಹುವಾಗಿ ನೋಡಬಹುದು. ಇದರರ್ಥ ಬೆಂಗಳೂರಿನಲ್ಲಿ ಸೈಕಲ್ ತುಳಿಯುವುದು ಮಾಯವಾಗಿದೆ ಎಂದೇನಲ್ಲ. ಸಾಕಷ್ಟು ಪ್ರಮಾಣದಲ್ಲಿ ಮೊದಲಿನಿಗಿಂತ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಹೆಚ್ಚುತ್ತಿರುವ ವಾಹನಗಳು, ಶಿಘ್ರಗತಿಯ ಅಭಿವೃದ್ಧಿಗಳು, ಅದಕ್ಕೆ ಪೂರಕವಾಗಿ ಕೆಲಸವರಸಿ ಬರುತ್ತಿರುವ ವಿವಿಧ ಭಾಗಗಳ ಜನರು. ಇವೆಲ್ಲವೂ ಸೇರಿ ಇಂದು ಸಮಯದ ಅಭಾವವನ್ನು ಸೃಷ್ಟಿಸಿರುವುದರಿಂದ ಅದನ್ನು ಸರಿದೂಗಿಸಲು ಜನರು ಹೆಚ್ಚು ಹೆಚ್ಚಾಗಿ ವಾಹನಗಳನ್ನು ಉಪಯೋಗಿಸುತ್ತಿರುವುದು.
ವಿಶೇಷ ಲೇಖನ : ದೊಡ್ಡ ಆಲದಮರದಿಂದ ಸಾವನದುರ್ಗ
ಹೋಟೆಲ್ ಬುಕ್ ಮಾಡಿ 50% ಕಡಿತ, ತ್ವರೆ ಮಾಡಿ, ಇದು ಸೀಮಿತ ಕೊಡುಗೆ!

ಚಿತ್ರಕೃಪೆ: Raghu Mohan
ಆದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಯುವ ಜನಾಂಗದವರಲ್ಲಿ ಸೈಕ್ಲಿಂಗ್ ಆಸಕ್ತಿ ಮೂಡುತ್ತಿರುವುದನ್ನು ಗಮನಿಸಬಹುದಾಗಿದೆ. ಬೆಂಗಳೂರಿನಲ್ಲಿ ಸೈಕ್ಲಿಂಗ್ ಗೆಂದೆ ಕೆಲವು ಸಂಗ ಸಂಸ್ಥೆಗಳು ರೂಪಗೊಂಡಿದ್ದು ವಾರಾಂತ್ಯದ ರಜೆಗಳಲ್ಲಿ ಸೈಕ್ಲಿಂಗ್ ಚಟುವಟಿಕೆಗಳನ್ನು ಆಯೋಜಿಸುತ್ತವೆ. ಅದೇನೆ ಇರಲಿ ಸೈಕ್ಲಿಂಗ್ ಖಂಡಿತವಾಗಿಯೂ ಒಂದು ರೀತಿಯ ಸಂತಸ, ರೋಮಾಂಚನಗಳನ್ನುಂಟು ಮಾಡುವ ಅದ್ಭುತ ಚಟುವಟಿಕೆಯಾಗಿದೆ. ದಿನವಿಡಿ ಒಂದೇ ಸೀಟಿನಲ್ಲಿ ಕುಳಿತು ಬೊಜ್ಜನ್ನು ಸ್ವಾಗತಿಸುತ್ತಿರುವ ನಮಗೆ ಅದನ್ನು ಕರಗಿಸಲು ಸೈಕ್ಲಿಂಗ್ ಪರಿಣಾಮಕಾರಿಯಾದ ಚಟುವಟಿಕೆ ಎಂದೇ ಹೇಳಬಹುದು.
ನಿಮಗೂ ಕೂಡ ಸೈಕ್ಲಿಂಗ್ ಮಾಡುವುದು ಇಷ್ಟವಿದ್ದಲ್ಲಿ ಈ ಕೆಳಗೆ ನೀಡಲಾಗಿರುವ ಮಾರ್ಗಗಳಲ್ಲಿ ಪಯಣಿಸಿ. ಸೈಕಲ್ ತುಳಿಯುವವರಿಗೆ ಈ ಮಾರ್ಗಗಳು ವಿಶಿಷ್ಟವಾದ ಅನುಭೂತಿಯನ್ನು ನೀಡುತ್ತವೆ ಹಾಗೂ ನಿಮ್ಮ ಸೈಕ್ಲಿಂಗ್ ಸಾಹಸ ರೋಮಾಂಚನಕರವಾದ ಭಾವನೆಯನ್ನು ಕರುಣಿಸುತ್ತದೆ. ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಮಾತ್ರ ಬಳಸಲಾಗಿದೆ.

ಚಿತ್ರಕೃಪೆ: modi.kumar
ನಾರಾಯಣಕೆರೆ : ಬೆಂಗಳೂರು ಬಳಿಯಲ್ಲಿರುವ ನಾರಾಯಣ ಕೆರೆಯ ಕುರಿತು ಬಹುಶಃ ಹಲವರಿಗೆ ತಿಳಿದಿರಲಿಕ್ಕಿಲ್ಲ. ಇದೊಂದು ಸುಂದರ ಪ್ರದೇಶವಾಗಿದ್ದು, ಸೈಕಲ್ ತುಳಿಯಲು ಆದರ್ಶಮಯ ಮಾರ್ಗವಾಗಿದೆ. ನೀವು ಮಾಡಬೇಕಾಗಿರುವುದಿಷ್ಟೆ, ಬೆಳೆಂಬೆಳಿಗ್ಗೆ ಸರ್ಜಾಪುರ ರಸ್ತೆಯೆಡೆಗೆ ಸಾಗಿ. ಅಲ್ಲಿ ಬಹುಶಃ ನಿಮಗೆ ಇತರೆ ಸೈಕ್ಲಿಂಗ್ ಮಾಡುವವರು ಕಾಣಲೂ ಬಹುದು. ಅಲ್ಲಿಂದ ನೇರವಾಗಿ ಚಿಕ್ಕತಿರುಪತಿಯ ಹತ್ತಿರ ಸಾಗಿ. ಅಲ್ಲಿರುವ ದೇವಾಲಯದ ದರುಶನ ಪಡೆದು (ಅವರವರ ನಂಬಿಕೆಯಂತೆ, ಮಾಡಲೇಬೇಕೆಂದೇನಿಲ್ಲ) ಅಲ್ಲಿಂದ ಎರಡು ಕಿ.ಮೀ ಮುಂದೆ ಸಾಗಿದರೆ ಸಾಕು ನೀವು ನಾರಾಯಣೆಕೆರೆಯ ಬಳಿ ಇರುತ್ತಿರಿ.

ಚಿತ್ರಕೃಪೆ: Lijo Jose
ತಟ್ಟೆಕೆರೆ : ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಲಯದಲ್ಲಿರುವ ಗುಡ್ಡದ ಮೇಲೆ ಕಣಿವೆ ಮಹದೇಶ್ವರನ ಸ್ಥಿತವಿದೆ. ಈ ಒಂದು ಮಾರ್ಗದಲ್ಲಿ ಅಷ್ಟೊಂದಾಗಿ ಕೇಳಲ್ಪಡ ಕೆರೆಯೊಂದನ್ನು ಕಾಣಬಹುದು. ಇಲ್ಲಿ ಸೈಕ್ಲಿಂಗ್ ಮಾಡುವುದು ಒಂದು ಅನನ್ಯವಾದ ಅನುಭವವನ್ನು ಕರುಣಿಸುತ್ತದೆ. ಇಲ್ಲಿ ತಲುಪಲು ಕನಕಪುರ ರಸ್ತೆಯನ್ನೂ ಸಹ ಬಳಸಬಹುದಾಗಿದ್ದರು ರಾಗಿಹಳ್ಳಿ ಮತ್ತು ಬನ್ನೇರುಘಟ್ಟದ ಕಾಡು ಪ್ರದೇಶಗಳ ಮಧ್ಯದ ದಿಂದ ಸಾಗುವುದು ರೋಮಾಂಚನವನ್ನುಂಟು ಮಾಡುತ್ತದೆ.
ವಿಶೇಷ ಲೇಖನ : ಬನ್ನೇರುಘಟ್ಟದಲ್ಲಿರುವ ಪ್ರಾಣಿಗಳು
ತುರಹಳ್ಳಿ ಕಾಡು : ಕನಕಪುರ ರಸ್ತೆಯಿಂದ ಸೈಕ್ಲಿಂಗ್ ಮಾಡಬಹುದಾದ ಮತ್ತೊಂದು ಮಾರ್ಗವೆಂದರೆ ತುರಹಳ್ಳಿ ಕಾಡಿನವರೆಗೆ. ಈಗಾಗಲೆ ಬೆಂಗಳೂರಿಗರ ನೆಚ್ಚಿನ ಸೈಕ್ಲಿಂಗ್ ಮಾರ್ಗವಾಗಿರುವ ತುರಹಳ್ಳಿಯನ್ನು ನಗರದ ಉತ್ತರಹಳ್ಳಿ ಪ್ರದೇಶ ಇಲ್ಲವೆ ಬನಶಂಕರಿಯಿಂದ ಹೊರಟು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Harsha K R
ನಂದಿ ಬೆಟ್ಟ : ಬೆಂಗಳೂರಿಗೆ ಹತ್ತಿರವಿರುವ, ಸ್ನೇಹಿತರೊ ಇಲ್ಲವೆ ಕುಟುಂಬದವರೊಡನೆ ಶೀಘ್ರ ಪ್ರವಾಸ ಹೊರಡಲು ಆದರ್ಶಮಯವಾದ ಸ್ಥಳ ನಂದಿ ಬೆಟ್ಟ. ಬೆಂಗಳೂರಿನಿಂದ ನಂದಿ ಬೆಟ್ಟದವರೆಗೆ ಸೈಕ್ಲಿಂಗ್ ಒಂದು ಅದ್ಭುತವಾದ ಅನುಭವ. ಆದರೆ ನೀವು ಒಬ್ಬ ವೃತ್ತಿಪರ ಸೈಕಲ್ ತುಳಿಯುವವರಾಗಿದ್ದರೆ ಉತ್ತಮ. ಏಕೆಂದರೆ ಇದು ಉದ್ದವಾದ ಮಾರ್ಗವಾಗಿದ್ದು ಬೆಟ್ಟ ಏರುವಾಗ ಅಲ್ಲಲ್ಲಿ ಮೊನಚಾದ ತಿರುವುಗಳಿರುವುದನ್ನು ಕಾಣಬಹುದು.
ವಿಶೇಷ ಲೇಖನ : ನಂದಿ ಬೆಟ್ಟ ಸುತ್ತೋಣ ಬಾರಾ!

ಹೆಸರಘಟ್ಟ ಪ್ರದೇಶ
ಚಿತ್ರಕೃಪೆ: kiran kumar
ಹೆಸರಘಟ್ಟ : ತುಮಕೂರಿಗೆ ಹೋಗುವ ರಸ್ತೆಯಲ್ಲಿ ಸಾಗುತ್ತ ಗುರಗುಂಟೆಪಾಳ್ಯದಿಂದ ನೃತ್ಯಗ್ರಾಮದವರೆಗೆ ಸೈಕಲ್ ತುಳಿಯಬಹುದು. ಹೆಸರಘಟ್ಟ ಪ್ರದೇಶದ ಹುಲ್ಲುಗಾವಲಿನ ಸುಂದರ ಪರಿಸರದ ಆನಂದವನ್ನು ಪಡೆಯಬಹುದು. ಅಲ್ಲದೆ ಹೆಸರಘಟ್ಟ ಜಲಾಶಯವಾಗಲಿ ಇಲ್ಲಿವೆ ನೃತ್ಯಗ್ರಾಮಕ್ಕಾಗಲಿ ತೆರಳಬಹುದು. ಹೆಸರಘಟ್ಟ ಪ್ರದೇಶದಲ್ಲಿ ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ ಕೆಲ ಅಪರೂಪದ ಪಕ್ಷಿಗಳನ್ನು ಕಾಣಬಹುದು.

ಮಂಚನಬೆಲೆ ಹಿನ್ನೀರಿನಿಂದ ಸಾವನದುರ್ಗ ಗೋಚರಿಸುತ್ತಿರುವುದು
ಚಿತ್ರಕೃಪೆ: Jarrakaj
ಮಂಚನಬೆಲೆ : ಮೈಸೂರು ರಸ್ತೆಯಿಂದ ದೊಡ್ಡ ಆಲದಮರಕ್ಕೆ ತೆರಳುವ ರಸ್ತೆಯ ಮಾರ್ಗವಾಗಿ ರಾಮೋಹಳ್ಳಿ, ಬ್ಯಾಲಾಳು ಮೂಲಕ ಮಂಚನಬೆಲೆ ಜಲಾಶಯಕ್ಕೆ ಸೈಕ್ಲಿಂಗ್ ಮಾಡುವುದು ಎಲ್ಲಿಲ್ಲದ ಸಂತಸ ಉಂಟು ಮಾಡುತ್ತದೆ. ಪ್ರಮುಖವಾಗಿ ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರಕ್ಕೆಂದು ಬಲ ತಿರುವು ಪಡೆದಾಗ ವಾಹಣ ದಟ್ಟನೆಯು ಕಡಿಮೆಯಾಗಿ ಸೈಕಲ್ ಚಲಾಯಿಸಲು ಸುಲಭವಾಗುತ್ತದೆ. ನಂತರ ಚಿಕ್ಕ ಪುಟ್ಟ ಗ್ರಾಮಗಳನ್ನು ದಾಟಿ ಕೊನೆಯದಾಗಿ ಮಂಚನಬೆಲೆ ಜಲಾಶಯಕ್ಕೆ ಭೇಟಿ ನೀಡಬಹುದು.


Click it and Unblock the Notifications

















