Search
  • Follow NativePlanet
Share
» »ಅತಿ ಹೆಚ್ಚು ಭೇಟಿ ನೀಡಲ್ಪಡುವ ಉತ್ತರದ ನೆಚ್ಚಿನ ಗಿರಿಧಾಮಗಳು

ಅತಿ ಹೆಚ್ಚು ಭೇಟಿ ನೀಡಲ್ಪಡುವ ಉತ್ತರದ ನೆಚ್ಚಿನ ಗಿರಿಧಾಮಗಳು

By Vijay

ಫೆಬ್ರುವರಿ ಕಳೆದು ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಸಾಕು, ದೇಹಕ್ಕೆ ಬಿಸಿಯ ಅನುಭವ ಶುರುವಾಗುತ್ತದೆ, ಕಷ್ಟ ಪಟ್ಟು ದೇಹ ದಂಡಿಸಿದಾಗ ಬರುವ ಬೆವರು, ಏನಿಲ್ಲದೆಯೆ ಸರಾಗವಾಗಿ ಬರತೊಡಗುತ್ತದೆ. ಏಷ್ಟು ಕುಡಿದರೂ ಬಾಯೊಣಗಿ ಮತ್ತೆ ಮತ್ತೆ ಕುಡಿಯಬೇಕೆಂಬ ನೀರಿನ ದಾಹ ಉಂಟಾಗುತ್ತದೆ. ತಂಪಾದ ಪರಿಸರದಲ್ಲಿ ವಿಶ್ರಾಂತಿ ಪಡೆಯಬೇಕೆನಿಸುತ್ತದೆ.

ಥಾಮಸ್ ಕುಕ್ ವತಿಯಿಂದ ಡಾಮೆಸ್ಟಿಕ್ ಪ್ಯಾಕೇಜ್ ಮೇಲೆ ರೂ. 1000 ಕಡಿತ

ಹೌದು, ಈ ಎಲ್ಲ ಅನುಭವಗಳು ಬೇಸಿಗೆ ಬರುತ್ತಿದ್ದಂತೆಯೆ ನಮ್ಮ ಮೇಲೆ ದಾಳಿ ಮಾಡಿ ಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಸಾಕಷ್ಟು ಜನರು ಪ್ರವಾಸ ಹೊರಡಲು ಅದರಲ್ಲೂ ವಿಶೇಷವಾಗಿ ತಂಪಾದ ವಾತಾವರಣವಿರುವ ಪ್ರದೇಶಗಳಿಗೋ ಇಲ್ಲವೆ ಗಿರಿಧಾಮ ಪ್ರದೇಶಗಳಿಗೊ ಹೋಗಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಕ್ಕಳ ಪರೀಕ್ಷೆಗಳೂ ಸಹ ಕೊನೆಗೊಂಡು ದೀರ್ಘ ರಜೆಗಳು ಬರುವುದರಿಂದ ಈ ಸಮಯವು ಪ್ರವಾಸ ಹೊರಡಲು ಆದರ್ಶಮಯವೂ ಆಗಿರುತ್ತದೆ.

ವಿಶೇಷ ಲೇಖನ : ಊಟಿಯ ಮೈಮಾಟ ಕಂಡವನೆ ಬಲ್ಲ

ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಹೋಗಲು ಬಯಸುವುದು ಗಿರಿಧಾಮ ಪ್ರದೇಶಗಳಿಗೆ. ಇನ್ನೂ ದಕ್ಷಿಣ ಭಾರತದಲ್ಲಿ ತಂಪಾದ ವಾತಾವರಣ ಹೊಂದಿರುವ ಗಿರಿಧಾಮ ತಾಣಗಳಂತೂ ಸಾಕಷ್ಟಿವೆ. ನೀವೇನಾದರೂ ದ.ಭಾರತದ ಬಹುತೇಕ ಎಲ್ಲ ಜನಪ್ರೀಯ ಗಿರಿಧಾಮಗಳಿಗೆ ಈಗಾಗಲೆ ಭೇಟಿ ನೀಡಿದ್ದು ಮುಂಬರುವ ಬಿರು ಬೇಸಿಗೆಯಲಿ ನಿಮ್ಮ ಚಿತ್ತ ಉತ್ತರದೆಡೆ ಏನಾದರೂ ಮುಖ ಮಾಡಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ ಬಿಡಿ. ಪ್ರಸ್ತುತ ಲೇಖನವು ಮಹಾರಾಷ್ಟ್ರದಿಂದ ಹಿಡಿದು ಉತ್ತರ ಭಾರತದ ಕೆಲ ಅಗ್ರಗಣ್ಯ ಗಿರಿಧಾಮಗಳ ಕುರಿತು ತಿಳಿಸುತ್ತದೆ. ಇವು ಅತಿ ಹೆಚ್ಚು ಭೇಟಿ ನೀಡಲ್ಪಡುವ ಪ್ರವಾಸಿ ಗಿರಿಧಾಮಗಳಾಗಿವೆ.

ಆಸಕ್ತಿ ಮೂಡಿಸುವ ಇತರೆ ಲೇಖನಗಳು : ಅದ್ಭುತವಾದ ಆದರೆ ಅಪರಿಚಿತವಾದ ಗಿರಿಧಾಮಗಳು ಮೋಡಿ ಮಾಡುವ ಕೊಡಗಿನ ಸೊಬಗು

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಅಲ್ಮೋರಾ : ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ! ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಉತ್ತರಾಖಂಡ ರಾಜ್ಯದ ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ. 5 ಕಿಮೀ ಉದ್ದದ ಈ ಪರ್ವತ ಸುಯಲ್ ಮತ್ತು ಕೊಸಿ ನದಿಯ ಮಧ್ಯದಲ್ಲಿದೆ. ಈ ಸುಂದರ ತಾಣದಲ್ಲಿ ಬೇಸಿಗೆ ಉತ್ತಮ ಹವಾಮಾನ ಹೊಂದಿರುವುದರಿಂದ ಈ ಸಮಯದಲ್ಲಿಯೇ ಭೇಟಿ ನೀಡುವುದು ಒಳ್ಳೆಯದು.

ಚಿತ್ರಕೃಪೆ: Rajarshi MITRA

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಪಹಲ್ಗಾಮ್ : ಪಹಲ್ಗಾಂ ಎಂಬುದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಅನಂತ್‍ನಾಗ್ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸಮುದ್ರ ಮಟ್ಟದಿಂದ 2740 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ದಟ್ಟವಾದ ಅರಣ್ಯಗಳು, ಸುಂದರವಾದ ಕೆರೆಗಳು ಮತ್ತು ಪರಿಶುದ್ಧವಾದ ಜಲಪಾತಗಳು ಹಾಗು ಹೂವುಗಳಿಂದ ಕೂಡಿದ ಹುಲ್ಲುಗಾವಲುಗಳನ್ನು ಹೊಂದಿದ್ದು, ಶ್ರೀನಗರದಿಂದ 95 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದಲ್ಲದೆ ಈ ಸ್ಥಳದ ಮತ್ತೊಂದು ವಿಶೇಷತೆಯೇನೆಂದರೆ ಇಲ್ಲಿ ಅರು ಮತ್ತು ಶೇಷ್‍ನಾಗ್ ಎಂಬ ಎರಡು ನದಿಗಳು ಸಂಗಮವಾಗುತ್ತವೆ. ಅತ್ಯಂತ ಪ್ರಸಿದ್ಧ ಧಾರ್ಮಿಕ ಯಾತ್ರೆಯಾದ ಅಮರನಾಥ ಯಾತ್ರೆಯು ಪಹಲ್ಗಾಂ ಮೂಲಕವೇ ಸಾಗುತ್ತದೆ. ಪಹಲ್ಗಾಂನಿಂದ ಅಮರನಾಥಕ್ಕೆ ತಲುಪಲು 3 ದಿನಗಳಷ್ಟು ಸಮಯ ತಗುಲುತ್ತದೆ.

ಚಿತ್ರಕೃಪೆ: Ankur P

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಚಂಪಾವತ್ : ಸಮುದ್ರ ಮಟ್ಟದಿಂದ ಸುಮಾರು 1615 ಮೀ ಎತ್ತರದಲ್ಲಿರುವ ಚಂಪಾವತ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 1997 ರಲ್ಲಿ ಉತ್ತರಾಖಂಡದ ಒಂದು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಲಾದ ಇದು ಇಲ್ಲಿರುವ ದೇವಾಲಯಗಳು ಮತ್ತು ಅತ್ಯದ್ಭುತವಾದ ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಇದು ನೇಪಾಳ ದೇಶ ಹಾಗೂ ಉಧಮ್ ಸಿಂಗ್ ನಗರ್, ನೈನಿತಾಲ್ ಜಿಲ್ಲೆ ಮತ್ತು ಅಲ್ಮೋರಾ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ.

ಚಿತ್ರಕೃಪೆ: rajkumar1220

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಮಸ್ಸೂರಿ : ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ' ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ ಎತ್ತರದಲ್ಲಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು ಡೂನ್ ಕಣಿವೆಗಳ ಅದ್ಭುತವಾದ ದೃಶ್ಯಾವಳಿಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿದೆ. ಇದು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಯಮುನೋತ್ರಿ ಮತ್ತು ಗಂಗೋತ್ರಿಯಿಂದಲೂ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Paul Hamilton

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಚಂಬಾ : ಉತ್ತರಾಖಂಡದ ತೆಹ್ರಿ ಗಡ್ವಾಲ್ ಜಿಲ್ಲೆಯ ಅತಿ ಸುಂದರ ಗಿರಿಧಾಮವೇ ಚಂಬಾ. ಈ ಗಿರಿಧಾಮದ ಪ್ರದೂಷಣ ರಹಿತ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ದೇವದಾರು ಮತ್ತು ಪೈನ್ ಮರಗಳಿಂದ ಆವೃತವಾಗಿರುವ ಚಂಬಾ ಪ್ರಕೃತಿ ಪ್ರಿಯರಿಗೆ ಸ್ವರ್ಗಸದೃಶವಾದ ತಾಣವಾಗಿದೆ. ಪ್ರಯಾಣಿಕರು ವರ್ಷದ ಯಾವುದೇ ಕಾಲದಲ್ಲಾದರೂ ಚಂಬಾಗೆ ಭೇಟಿ ನೀಡಬಹುದು. ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯನ್ನು ಹೊರನೋಟ ಹಾಗೂ ಇತರೆ ಹೊರಾಂಗಣ ಚಟುವಟಿಕೆಗಳಿಗೆ ಆದರ್ಶ ಕಾಲವೆಂದು ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Vivek Thakyal

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಬದರಿನಾಥ : ಭಾರತದ ಉತ್ತರಾಖಂಡ್ ರಾಜ್ಯದಲ್ಲಿರುವ ಬದರಿನಾಥವು ಪ್ರಖ್ಯಾತ ಪ್ರವಾಸಿ ಆಕರ್ಷಣೆಯ ಗಿರಿಧಾಮವಾಗಿರುವುದೂ ಅಲ್ಲದೆ ನಾಲ್ಕು ಪವಿತ್ರ ಧಾಮಗಳ ಪೈಕಿ ಅತಿ ಪ್ರಮುಖವಾದ ಧಾಮವಾಗಿದೆ. ಬದರಿ ನಾರಾಯಣ ಎಂತಲೂ ಕರೆಯಲ್ಪಡುವ ಬದರಿನಾಥ ದೇವಾಲಯವು ವಿಷ್ಣು ಭಗವಾನನಿಗೆ ಮುಡಿಪಾದ ದೇವಾಲಯವಾಗಿದೆ. ಹಲವು ಪವಿತ್ರವಾದ ಧಾರ್ಮಿಕ ಆಕರ್ಷಣೆಗಳನ್ನು ಇದರ ಸುತ್ತಮುತ್ತಲು ನೋಡಬಹುದಾಗಿದೆ.

ಚಿತ್ರಕೃಪೆ: Enric Bach

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಲ್ಯಾನ್ಸ್ ಡಾವ್ನ್ : ಸುಂದರ ಹಾಗು ಸಾಹಸಿಗಳಿಗೆ ನೆಚ್ಚಿನ ಸ್ಥಳ ಉತ್ತರಖಂಡದ ಲಾನ್ಸ್ ಡೌನ್ ಪಟ್ಟಣ. ಲಾನ್ಸ್ ಡೌನ್ ಉತ್ತರಖಂಡದ ಪೌರಿ ಜಿಲ್ಲೆಯಲ್ಲಿರುವ ಒಂದು ದಂಡು(ಕಾಂಟೋನ್ಮೆಂಟ್)ಪಟ್ಟಣ. ಸಾಹಸ ಉತ್ಸಾಹಿಗಳು ಈ ಪ್ರದೇಶದಲ್ಲಿ ಚಾರಣ ಮಾಡುವಿಕೆ ಮತ್ತು ಜಂಗಲ್ ಸಫಾರಿಯನ್ನು ಆನಂದಿಸಬಹುದು. ಇಡೀ ಪ್ರದೇಶದಲ್ಲಿ ಅತ್ಯುತ್ತಮ ಚಾರಣ ಮಾಡುವಿಕೆ ಮಾರ್ಗ ಎಂದರೆ ಲೌವರ್ಸ್ ಲೇನ್. ಇದು ವಿಸ್ಮಯಕಾರಿಯಾದ ಚಾರಣದ ಅವಕಾಶಗಳನ್ನು ಒದಗಿಸುತ್ತದೆ. ಸಮೃದ್ಧ ಹಸಿರು ಕಾಡುಗಳು ಪ್ರದೇಶದ ಮಧ್ಯೆ ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಿಫುಲವಾಗಿವೆ.

ಚಿತ್ರಕೃಪೆ: Sudhanshusinghs4321

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಡಾಲ್ ಹೌಸಿ : ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್‌ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್‌ಹೌಸಿ. ಬ್ರಿಟಿಷ್‌ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್ ಡಾಲ್‌ಹೌಸಿ ಅವರ ಹೆಸರನ್ನೇ ಪಟ್ಟಣಕ್ಕೆ ಇಡಲಾಗಿದೆ. ಲಾರ್ಡ್ ಡಾಲ್‌ಹೌಸಿ ತನ್ನ ಬೇಸಿಗೆ ದಿನಗಳನ್ನು ಕಳೆಯಲು ಈ ತಾಣವನ್ನು ಆಶ್ರಯಿಸಿದ್ದ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ ಛಂಬಲ್‌ ಅರಣ್ಯ ಪ್ರದೇಶದ ಪ್ರವೇಶದ್ವಾರ ಕೂಡ ಹೌದು. ಡಾಲಹೌಸಿಯ ವಾತಾವರಣ ವರ್ಷದ ಎಲ್ಲಾ ಸಮಯದಲ್ಲೂ ಸಹನೀಯವಾಗಿರುತ್ತದೆ. ಮಾರ್ಚ್ ನಿಂದ ಮೇ ಡಾಲಹೌಸಿಯಲ್ಲಿ ಬೇಸಿಗೆ. ತಾಪಮಾನ ಈ ಸಂದರ್ಭದಲ್ಲಿ 15.5 ಡಿಗ್ರಿ ಸೆಂಟಿಗ್ರೇಡ್‌ನಿಂದ 25.5 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರುತ್ತದೆ. ಇಲ್ಲಿಗೆ ಭೇಟಿ ನೀಡಲು ಇದು ಪ್ರಶಸ್ತ ಸಮಯವಾಗಿದೆ.

ಚಿತ್ರಕೃಪೆ: Sabyk2001

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ರಾನಿಖೇತ್ : ಬೇಸಿಗೆಯ ಸಮಯ ಕಳೆಯಲೊಂದು ಆದರ್ಶ ತಾಣ. ಇದು ಅಲ್ಮೋರಾ ಜಿಲ್ಲೆಯಲ್ಲಿರುವ ನೋಡಲೇ ಬೇಕಾದ ಗಿರಿಧಾಮ. ಒಂದು ದಂತಕಥೆಯ ಪ್ರಕಾರ, ಕುಮಾವೂನ್ ಪ್ರದೇಶದ ಸುಂದರರಾಣಿ ಪದ್ಮಿನಿಯು, ಒಮ್ಮೆ ರಾನಿಖೇತ್ ಗೆ ಭೇಟಿ ನೀಡಿದ್ದಳು ಮತ್ತು ಈ ಸ್ಥಳದ ಸೌಂದರ್ಯದಿಂದ ವಿಸ್ಮಯಗೊಂಡಳು. ಇದನ್ನರಿತ ಅವಳ ಪತಿ ರಾಜ ಸುಖೇರ್ ದೇವನು ಈ ಸ್ಥಳದಲ್ಲಿ ಅರಮನೆಯನ್ನು ನಿರ್ಮಿಸಿದ ಮತ್ತು ಅದಕ್ಕೆ 'ರಾನಿಖೇತ್' ಎಂದು ಹೆಸರಿಸಿದ. ಅಲ್ಮೋರಾ ಪಟ್ಟಣದಿಂದ 50 ಕಿ.ಮೀ ಮತ್ತು ನೈನಿತಾಲ್ ನಿಂದ 60 ಕಿ. ಮೀ ದೂರದಲ್ಲಿದೆ ರಾನಿಖೇತ್. ರಾನಿಖೇತ್ ಸಮೃದ್ಧ ಹಸಿರು ಪೈನ್, ಓಕ್ ಮತ್ತು ದೇವದಾರು ಕಾಡುಗಳ ಮಧ್ಯೆ ವಿಶ್ರಾಂತಿ ಪಡೆಯಲು ಅವಕಾಶವನ್ನು ಒದಗಿಸುತ್ತದೆ.

ಚಿತ್ರಕೃಪೆ: Pjoshi260

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ನೈನಿತಾಲ್ : "ಭಾರತದ ಸರೋವರ ಜಲ್ಲೆ" ನೈನಿತಾಲ್ ನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇಲ್ಲಿನ ಸೌಂದರ್ಯವನ್ನು ಬಣ್ಣೀಸುವುದೇ ಅಸಾಧ್ಯ. ಹಲವಾರು ಪುರಾಣ ಕಥೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪ್ರದೇಶ ಇಲ್ಲಿಗೆ ಬಂದ ಪ್ರವಾಸಿಗರನ್ನು ಮೈಮರೆಯುವಂತೆ ಮಾಡುತ್ತದೆ. ನೈನಿತಾಲ್ ಅನ್ನು 'ಮೂರು ಸನ್ಯಾಸಿಗಳ ಸರೋವರ' ಅಥವಾ ಮಾನಸ ಖಂಡದಲ್ಲಿ 'ತ್ರಿ-ಋಷಿ ಸರೋವರ', (ಸ್ಕಂದ ಪುರಾಣದಲ್ಲಿ) ಎಂದು ಕರೆಯಲಾಗುತ್ತದೆ. ಮೂರು ಋಷಿಗಳಾದ, ಅತ್ರಿ, ಪುಲಸ್ತ್ಯಾ ಮತ್ತು ಪುಲಹ ಋಷಿಗಳು ತಮ್ಮ ಬಾಯಾರಿಕೆಯನ್ನು ನೈನಿತಾಲ್ ನಲ್ಲಿ ನೀಗಿಸಿಕೊಂಡರು ಎಂದು ಹೇಳಲಾಗುತ್ತದೆ. ಇದು ಉತ್ತರಾಖಂಡದ ಕುಮಾವೂನ್ ಬೆಟ್ಟಗಳ ನಡುವೆ ನೆಲೆಗೊಂಡಿದೆ.

ಚಿತ್ರಕೃಪೆ: Sanjoy

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಕುಲ್ಲು : ಕುಲ್ಲು "ದೇವತೆಗಳ ಕಣಿವೆ" ಎಂದು ಖ್ಯಾತಿ ಪಡೆದಿರುವ ಹಿಮಾಚಲ್ ಪ್ರದೇಶದ ಒಂದು ಸುಂದರವಾದ ಜಿಲ್ಲೆಯಾಗಿದೆ. ನಂಬಿಕೆಗಳ ಪ್ರಕಾರ, ಈ ಕಣಿವೆಯು ಒಂದಾನೊಂದು ಕಾಲದಲ್ಲಿ ಹಿಂದೂ ದೇವಾನುದೇವತೆಗಳ ಆವಾಸ ಸ್ಥಾನವಾಗಿತ್ತು ಎಂದು ನಂಬಲಾಗಿದೆ. ಈ ಸ್ಥಳವು ತಂಪಾದ, ಹಿತಕರವಾದ ವಾತಾವರಣ ಹಾಗೂ ತನ್ನ ಸುತ್ತ ಮುತ್ತಲವಿರುವ ಸುಂದರ ಪರಿಸರಕ್ಕಾಗಿ ಹೆಸರುವಾಸಿಯಾಗಿದೆ. ಈ ಸುಂದರವಾದ ಬೇಸಿಗೆ ವಿಹಾರ ತಾಣವು ಕಡಿದಾದ ಬೆಟ್ಟಗಳು, ದೇವಾದಾರು ಮರಗಳ ಕಾಡುಗಳು, ನದಿಗಳು ಮತ್ತು ಸೇಬಿನ ತೋಟಗಳಿಂದ ಸುತ್ತುವರೆದಿದೆ. ಈ ಸ್ಥಳವು ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿ ವಿಶ್ವದೆಲ್ಲೆಡಿಯಲ್ಲಿರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಚಿತ್ರಕೃಪೆ: John Hill

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಮನಾಲಿ : ಸಮುದ್ರ ಮಟ್ಟದಿಂದ 1950 ಮೀಟರ್‌ ಎತ್ತರದಲ್ಲಿದೆ ಗಿರಿ ಶಿಖರ ಮನಾಲಿ. ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ತಾಣ ಇದಾಗಿದೆ. ರಾಜ್ಯದ ರಾಜಧಾನಿ ಶಿಮ್ಲಾದಿಂದ 250 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಕುಲ್ಲು ಜಿಲ್ಲೆಯ ಒಂದು ಭಾಗ.

ಚಿತ್ರಕೃಪೆ: Jishnu2602

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಶಿಮ್ಲಾ : ಶಿಮ್ಲಾ ನಗರವು ಒಂದು ಸುಂದರ ಗಿರಿಧಾಮವಾಗಿದ್ದು, ಹಿಮಾಚಲ್ ಪ್ರದೇಶದ ರಾಜಧಾನಿಯಾಗಿದೆ. ಈ ಸ್ಥಳವು " ಬೇಸಿಗೆಯ ಆಶ್ರಯ ತಾಣ" ಮತ್ತು " ಗಿರಿಧಾಮಗಳ ರಾಣಿ" ಎಂದೆ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ 2202 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳದ ಹೆಸರು ಕಾಳಿ ಮಾತೆಯ ಇನ್ನೊಂದು ಹೆಸರಾದ " ಶ್ಯಾಮಲ" ಎಂಬ ಹೆಸರಿನಿಂದ ಬಂದಿದೆ. ಈ ನಯನ ಮನೋಹರ ಗಿರಿಧಾಮವು ಪ್ರವಾಸಿಗರಿಗೆ ಅತ್ಯಾಕರ್ಷಕ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ.

ಚಿತ್ರಕೃಪೆ: Uspn

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಔಲಿ : ಇಡೀ ವಿಶ್ವದಲ್ಲೇ ಔಲಿಯು, ಸ್ಕೀಯಿಂಗ್ (ಹಿಮದ ಇಳಿಜಾರಿನಲ್ಲಿ ವಿಶೇಷವಾದ ಸಾಧನಗಳ ಮೂಲಕ ಜಾರುವುದು) ಕ್ರೀಡೆಗೆ ಅತ್ಯಂತ ಹೆಸರುವಾಸಿಯಾದ ಪ್ರದೇಶವಾಗಿದೆ. ಈ ಸುಂದರವಾದ ಪ್ರದೇಶವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿದ್ದು, ಓಕ್ ಹಾಗೂ ಕೋನಿಫೆರೋಸ್ ಮರಗಳ ಆಕರ್ಷಕವಾದ ನೋಟವನ್ನು ಒದಗಿಸುತ್ತದೆ. ಇಲ್ಲಿನ ಕೃತಕ ಸರೋವರ ಬಹಳ ಜನಪ್ರೀಯವಾದದ್ದು ಹಾಗೂ ಹಿಮ ಬೀಳುವುದು ಕಡಿಮೆ ಆದ ದಿನಗಳಲ್ಲೂ ಇಲ್ಲಿ ಕೃತಕ ಹಿಮ ಸುರಿಸುವ ವ್ಯವಸ್ಥೆ ಮಾಡಿರುವುದರಿಂದ ಈ ಪ್ರದೇಶವು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Mandeep Thander

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ದಾರ್ಜೀಲಿಂಗ್ : ಭಾರತದ ಸಿನೆಮಾಗಳಲ್ಲಿ ಈಗಾಗಲೇ ಚಿರಸ್ಥಾಯಿಯಾಗಿರುವ ದಾರ್ಜೀಲಿಂಗ ನ ಬೆಟ್ಟ ಹಾಗೂ ಕಣಿವೆಗಳಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುವಂತಹ ಮಿನಿ ರೈಲು ಸೇವೆಯಾದ ವಿಶ್ವಪ್ರಸಿದ್ಧ ದಾರ್ಜೀಲಿಂಗ ಹಿಮಾಲಯನ್ ರೈಲು ಹಾಲಿವುಡ್ ನಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿರುವ ದಾರ್ಜೀಲಿಂಗ ಗಿರಿಧಾಮವು ಹಿಮದಿಂದ ಆವೃತವಾದ ಶಿಖರಗಳು, ಸಣ್ಣ ಹಿಮಾಲಯ ಅಥವಾ ಮಹಾಭಾರತ ಪರ್ವತ ಶ್ರೇಣಿಯ ನಿಜವಾದ ಸ್ವರ್ಗ.

ಚಿತ್ರಕೃಪೆ: Ekabhishek

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಗ್ಯಾಂಗ್ಟಾಕ್: ಬುದ್ಧರ ಪ್ರಮುಖ ಯಾತ್ರಾ ಸ್ಥಳ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಸಿಕ್ಕಿಂನ ರಾಜ್ಯದ ಅತ್ಯಂತ ದೊಡ್ಡ ನಗರವಾಗಿರುವ ಗ್ಯಾಂಗ್ಟಾಕ್, ಹಿಮಾಲಯ ಪರ್ವತ ಶ್ರೇಣಿಯ ಈಶಾನ್ಯದಲ್ಲಿರುವ ಶಿವಲಿಕ್ ಬೆಟ್ಟದಲ್ಲಿದೆ. ವರ್ಷದ ಯಾವುದೇ ಸಮಯದಲ್ಲೂ ಗ್ಯಾಂಗ್ಟಾಕ್ ಗೆ ಪ್ರವಾಸಿಗಳು ಭೇಟಿ ನೀಡಬಹುದು. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿನ ಹವಾಮಾನ ಹಿತಕರವಾಗಿರುತ್ತದೆ. ಈ ಪಟ್ಟಣ ಮನ್ಸೂನ್ ಪ್ರಭಾವಿತ ಉಷ್ಣವಲಯದ ಹವಾಮಾನವನ್ನು ಹೊಂದಿದೆ.

ಚಿತ್ರಕೃಪೆ: kalyan3

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಮಿರಿಕ್ : ಪಶ್ಚಿಮ ಬಂಗಾಳ ರಾಜ್ಯದ ಏಕೈಕ ಗಿರಿಧಾಮವಾದ ದಾರ್ಜೀಲಿಂಗ್ ಜಿಲ್ಲೆಯಲ್ಲಿ ನೆಲೆಸಿರುವ ಮಿರಿಕ್ ಒಂದು ಸುಂದರ ಹಾಗೂ ಅದ್ಭುತ ಪ್ರವಾಸಿ ತಾಣವಾಗಿದೆ. ಲೆಪ್ಚಾ ಎಂಬ ಸ್ಥಳೀಯ ಭಾಷೆಯಿಂದ ಇದಕ್ಕೆ ಮಿರಿಕ್ ಎಂಬ ಹೆಸರು ಬಂದಿದ್ದು ಇದರ ಮೂಲ ಅರ್ಥ ಮೀರ್ ಹಾಗೂ ಯಾಕ್ ಎಂದಾಗುತ್ತದೆ. ಇದರ ಅರ್ಥ ಬೆಂಕಿಯಿಂದ ಸುಟ್ಟು ಹೋದ ಸ್ಥಳ. ಈ ಪುಟ್ಟ ತಾಣವು ಅಹ್ಲಾದಕರವಾದ ವಾತಾವರಣವನ್ನು ಹೊಂದಿದ್ದು ಒಂದು ಸುಂದರ ಕೆರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕೆರೆಯ ಹಿನ್ನಿಲೆಯಲ್ಲಿ ಪ್ರಸಿದ್ಧ ಕಂಚನಜುಂಗಾ ಪರ್ವತದ ರಮಣೀಯ ನೋಟವನ್ನು ಸವಿಯಬಹುದು.

ಚಿತ್ರಕೃಪೆ: Soumyasch

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಗುಲ್ಮಾರ್ಗ್ : ಸಮುದ್ರ ಮಟ್ಟದಿಂದ 2730 ಮೀಟರ್‌ ಎತ್ತರದಲ್ಲಿರುವ ಅತ್ಯಾಕರ್ಷಕ ಗಿರಿಧಾಮ ಗುಲ್‌ಮಾರ್ಗ್. ಜಮ್ಮು- ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಈ ಪ್ರದೇಶದ ನಿಜರ್ಥ "ಪುಷ್ಪಗಳಿಂದ ತುಂಬಿರುವ ಪ್ರದೇಶ (ಭಾಗ)" ಎಂದಾಗುತ್ತದೆ. ಹಿಂದು ದೇವತೆ ಗೌರಿಯಿಂದಾಗಿ ಈ ಪ್ರದೇಶಕ್ಕೆ ಹೆಸರು ಬಂದಿದೆ. ಗೌರಿಮಾರ್ಗ ಎಂದಿದ್ದ ಹೆಸರು ಕಾಲಾನಂತರದಲ್ಲಿ ಬದಲಾಗಿ ಈಗ ಗುಲ್‌ಮಾರ್ಗ್ ಆಗಿದೆ. ಆಕರ್ಷಕ ನೋಟ, ತಗ್ಗು ಪ್ರದೇಶ, ಸಹನೀಯ ವಾತಾವರಣ ಮನಸೂರೆಗೊಳ್ಳುತ್ತದೆ.

ಚಿತ್ರಕೃಪೆ: Codik

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಧರ್ಮಶಾಲಾ : ಹಿಮ ಬೆಟ್ಟವನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂತಹ ಅದ್ಭುತ ಪ್ರವಾಸಿ ತಾಣಕ್ಕೆ ವರ್ಷದ ಯಾವುದೇ ಘಳಿಗೆಯಲ್ಲಾದರೂ ಬೇಟಿ ನೀಡಬಹುದು. ನಿಮ್ಮ ರಜಾ ದಿನವನ್ನು ಮೋಜಿನ ದಿನವನ್ನಾಗಿ ಮಾಡಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದರೆ ಹಿಮಾಚಲ ಪ್ರದೇಶದ ಧರ್ಮಶಾಲಾ ಪಟ್ಟಣ. ಹಿಮದ ಟೊಪ್ಪಿಗೆಯನ್ನು ಹಾಕಿದಂತೆ ಅನುಭವ ನೀಡುವ ಪರ್ವತ ಶ್ರೇಣಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಚಿತ್ರಕೃಪೆ: Johnanth

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಕಲಿಂಪಾಂಗ್ : ಭಾರತದ ಪಶ್ಚಿಮ ಬಂಗಾಳದಲ್ಲಿರುವ ಹಿಮಾಚ್ಛಾದಿತ ಗಿರಿಧಾಮ ಕಾಲಿಂಪಾಂಗ್. ಕಾಲಿಂಪಾಂಗ್ ಪಶ್ಚಿಮ ಬಂಗಾಳದ ಕಲೆ, ಆಹಾರ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲು ಸೂಕ್ತ ತಾಣ. ಇಲ್ಲಿ ಬೌದ್ಧ ಮಠಗಳ ಪ್ರಭಾವವನ್ನು ಮತ್ತು ಮಹಾಭಾರತ ಕಾಲವನ್ನು ಒಟ್ಟಿಗೆ ನೆನಪು ಮಾಡಿಕೊಳ್ಳಬಹುದು. ಇಲ್ಲಿ ಪೈನ್ ಮರಗಳನ್ನು ಹೆಚ್ಚಾಗಿ ಕಾಣಬಹುದು. ಕಾಲಿಂಪಾಂಗ್ ನೂರಾರು ಜಾತಿಯ ಆರ್ಕಿಡ್ ಹೂವುಗಳಿಗೆ ಆಶ್ರಯ ತಾಣವಾಗಿದ್ದು, ಪ್ರಪಂಚದ ವಿವಿಧೆಡೆಗೆ ರಫ್ತು ಮಾಡಲಾಗುತ್ತದೆ. ನಿಮ್ಮ ಸಂಗಾತಿಯನ್ನು ಈ ತಾಜಾ ಹೂಗಳಿಂದ ಖುಷಿಗೊಳಿಸಬಹುದು.

ಚಿತ್ರಕೃಪೆ: Prateek Rungta

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಶಿಲ್ಲಾಂಗ್ : ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ. ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ ಪ್ರದೇಶಗಳು, ಅತ್ಯುನ್ನತ ಪರ್ವತಶ್ರೇಣಿಗಳನ್ನು ಮುತ್ತಿಕೊಂಡಿರುವ ಮೋಡಗಳು, ಕಂಪನ್ನು ಸೂಸುವ ಹೂಗಳು, ಯಾವುದೇ ಗ್ರಂಥದಲ್ಲಿ ಅಲಭ್ಯವಿರಬಹುದಾದ, ಉಲ್ಲೇಖಗೊಂಡಿರದ ತಾಣಗಳು, ಸ್ನೇಹಪರ ಜನರು, ಆತ್ಮೀಯವಾದ ಆತಿಥ್ಯ ನೀಡುವ ವಸತಿಗೃಹಗಳು, ಇವೆಲ್ಲವೂ ಕೂಡ ಶಿಲ್ಲಾಂಗ್ ನ ವೈಶಿಷ್ಟ್ಯಗಳು.

ಚಿತ್ರಕೃಪೆ: AmyNorth

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ತವಾಂಗ್: ತವಾಂಗ್, ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ಏಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ (10,000 ಅಡಿಗಳಷ್ಟು) ಎತ್ತರದಲ್ಲಿದೆ. ಅಷ್ಟೆ ಅಲ್ಲ, ಎರಡು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. (ಉತ್ತರದಲ್ಲಿ ಟಿಬೆಟ್ ಮತ್ತು ನೈರುತ್ಯದಲ್ಲಿ ಭೂತಾನ್). ಪಶ್ಚಿಮ ಕಮೆಂಗ್ ದ ಸೇಲ್ ಪರ್ವತ ಶ್ರೇಣಿಗಳು ತವಾಂಗ್ ದ ಪೂರ್ವಕ್ಕೆ ನೈಸರ್ಗಿಕ ಕೋಟೆ ನಿರ್ಮಿಸಿವೆ.

ಚಿತ್ರಕೃಪೆ: rajkumar1220

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಸಪುತಾರಾ : ಸಪುತರಾ, ಗುಜರಾತಿನ ಶುಷ್ಕ ಪ್ರಕೃತಿ ನಡುವೆ ಸ್ಥಿತವಾಗಿರುವ ವಿಭಿನ್ನವಾದ ಸ್ಥಳವಾಗಿದೆ. ಇದು ಗುಜರಾತ್ ಈಶಾನ್ಯ ಗಡಿನಾಡಿನ ಮತ್ತು ಪಶ್ಚಿಮ ಘಟ್ಟ ಸಹ್ಯಾದ್ರಿಯ ಎರಡನೇ ಅತಿ ಎತ್ತರದ ಪ್ರಸ್ಥಭೂಮಿಯ ಮೇಲೆ ನೆಲೆಸಿದೆ. ಸಪುತರಾ, ಸಹ್ಯಾದ್ರಿ ಪರ್ವತ ಶ್ರೇಣಿಯ ಬೃಹತ್ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ , ಸಪುತರಾ ಸೊಂಪಾದ ಹಸಿರಿನ ಜೊತೆ ಒಂದು ವೈವಿಧ್ಯತೆಯನ್ನು ಹೊಂದಿರುವ ಆಕರ್ಷಕ ಗಿರಿಧಾಮವಾಗಿದ್ದು, ಪ್ರವಾಸಿಗರನ್ನು ಸ್ವಾಗತಿಸುತ್ತದೆ.

ಚಿತ್ರಕೃಪೆ: Master purav

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಪಂಚಗಣಿ : ಮಹಾರಾಷ್ಟ್ರ ರಾಜ್ಯದಲ್ಲಿರುವ ಪಂಚಗಣಿಯು ಒಂದು ಸುಂದರ ಗಿರಿಧಾಮವಾಗಿದೆ. ನೀವು ಮೊದಲ ಬಾರಿಗೆ ಭೇಟಿ ನೀಡಿದ ಪ್ರವಾಸಿಗರಾಗಿದ್ದರು ಅಥವಾ ಸರ್ವೋತ್ಕೃಷ್ಟ ಪ್ರವಾಸಿಗರೆ ಆಗಿದ್ದರೂ, ಪಂಚಗಣಿಯ ಆಕರ್ಷಣೀಯ ಬೆಟ್ಟಗಳು ಎಲ್ಲರಿಗೂ ನೀಡಲು ದೊಡ್ಡಪ್ರಮಾಣದ ಕೊಡುಗೆಗಳನ್ನು ಹೊಂದಿವೆ. ಪಂಚಗಣಿಯು ಪಾಶ್ಚಾತ್ಯ ಭಾರತದಲ್ಲಿ ಕಂಡುಬರುವ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ಸ್ಥಳಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Akhilesh Dasgupta

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಮಹಾಬಳೇಶ್ವರ : ಮಹಾಬಳೇಶ್ವರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಒಂದು ಜನಪ್ರಿಯ ಗಿರಿಧಾಮ. ಬಹುಕಾಂತೀಯ ಪಶ್ಚಿಮ ಘಟ್ಟಗಳ ಭಾಗದಲ್ಲಿದ್ದು, ವಿಶ್ವದ ಕೆಲವೇ ನಿತ್ಯಹರಿದ್ವರ್ಣ ತಾಣಗಳಲ್ಲಿ ಇದು ಒಂದಾಗಿದೆ. ಇತರೆ ಅನೇಕ ರೀತಿಯ ಗಿರಿಧಾಮಗಳ ಹಾಗೆ, ಮಹಾಬಲೇಶ್ವರವು ಕೂಡ, ಬ್ರಿಟೀಷರಿಗೆ ಬೇಸಿಗೆಯ ಅನಾನುಕೂಲ ಬೇಗೆಯ ಅವಧಿಯಲ್ಲಿ, ಬೇಸಿಗೆಯಿಂದ ದೂರ ಉಳಿಯಲು ಇದ್ದ ಒಂದು ತಾಣವಾಗಿತ್ತು. ಮಹಾಬಳೇಶ್ವರ ಅರಣ್ಯಗಳು ಹೇರಳವಾದ ಅಮೂಲ್ಯ ಔಷಧಿ ಮತ್ತು ಆಯುರ್ವೇದ ಸಸ್ಯಗಳನ್ನು ಹೊಂದಿದೆ.

ಚಿತ್ರಕೃಪೆ: Ganesh G

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಮಾಥೇರಾನ್ : ಮಹಾರಾಷ್ಟ್ರದಲ್ಲಿರುವ ಮಾಥೆರಾನ್‌ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಇತರ ಎಲ್ಲಾ ಗುಡ್ಡ ಪ್ರದೇಶದ ರೀತಿಯಲ್ಲೇ ಮಾಥೆರಾನ್‌ ಕೂಡಾ ಹಲವು ವೀಕ್ಷಣಾ ತಾಣವನ್ನು ಹೊಂದಿದೆ. 38 ಅಧಿಕೃತ ತಾಣಗಳ ಪೈಕಿ, ಪನೋರಮಾ ಪಾಯಿಂಟ್‌ನಲ್ಲಿ ನೀವು ಇಡೀ ಪ್ರದೇಶವನ್ನು 360 ಡಿಗ್ರಿ ಕೋನದಲ್ಲಿ ನೋಡಬಹುದು. ಇಲ್ಲಿ ಕಾಣುವ ಸೂರ್ಯಾಸ್ತಮಾನ ಮತ್ತು ಸೂರ್ಯೋದಯವನ್ನು ನೋಡಿದ ಪ್ರವಾಸಿಗರು ನಿಸರ್ಗದ ಮೇಲೆ ಅವ್ಯಕ್ತ ಪ್ರೀತಿಯಲ್ಲಿ ಬೀಳುತ್ತಾರೆ.

ಚಿತ್ರಕೃಪೆ: Marwada

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಲೋನಾವಲಾ : ಜನಸಂದಣಿಯ ಶಹರ ಮುಂಬೈ ಪ್ರವೇಶಕ್ಕೊಂದು ಸುಂದರ ಪ್ರವೇಶದ್ವಾರವಿದು. ಮಹಾರಾಷ್ಟ್ರದಲ್ಲಿರುವ ಲೋನಾವಲಾ ಬೆಟ್ಟಗುಡ್ಡಗಳ ಜನಪ್ರಿಯ ಪಟ್ಟಣ. ಸಮುದ್ರಮಟ್ಟದಿಂದ ಸುಮಾರು 625 ಮೀ ಎತ್ತರದಲ್ಲಿದೆ. ಲೋನಾವಲಾದ ಸಮೀಪದಿಂದಲೇ ಸಹ್ಯಾದ್ರಿ ಪರ್ವತವೆಂಬ ಕಡಿದಾದ ಭಯಂಕರ ಪರ್ವತಶ್ರೇಣಿಯ ಆರಂಭ. ಇಲ್ಲಿಂದ ಕೇವಲ 38 ಕಿ.ಮೀ ದೂರದಲ್ಲಿದೆ ಈ ಸಹ್ಯಾದ್ರಿ ಪರ್ವತಶ್ರೇಣಿ. ಲೋನಾವಲಾವು ಪುಣೆಯಿಂದ ಸುಮಾರು 64 ಕಿ.ಮೀ ದೂರದಲ್ಲಿದೆ ಮತ್ತು ಮುಂಬೈನಿಂದ 97 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Ravinder Singh Gill

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಖಂಡಾಲಾ : ಮಹಾರಾಷ್ಟ್ರದಲ್ಲಿ ವಾರದ ದೈನಂದಿನ ಜಂಜಡಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ ಖಂಡಾಲಾವು ಒಂದು ಅತ್ಯಂತ ಸೂಕ್ತ ವಿಹಾರ ತಾಣವಾಗಿದೆ. ಸಮುದ್ರ ಮಟ್ಟದಿಂದ 625 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಸಹ್ಯಾದ್ರಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಇದು ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪರಿಸರ ಪ್ರಿಯರಿಗೆ ಖಂಡಾಲಾವು ನಯನ ಮನೋಹರ ಕಣಿವೆಗಳ ದೃಶ್ಯದ ಜೊತೆಗೆ ಮಂಜಿನಿಂದ ಕೂಡಿದ ದೃಶ್ಯಗಳನ್ನು ಸಹ ಒದಗಿಸುತ್ತದೆ. ಖಂಡಾಲಾವು ಅತ್ಯಂತ ಸುಂದರವಾದ ಪರಿಸರವನ್ನು ಹೊಂದಿದೆ.

ಚಿತ್ರಕೃಪೆ: Alewis2388

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಪನ್ಹಾಲಾ : ಪನ್ಹಾಲಾ, ಇದೊಂದು ಪ್ರಮುಖವಾದ ಗಿರಿಧಾಮವಾಗಿದ್ದು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 3200 ಅಡಿಗಳಷ್ಟು ಎತ್ತರದಲ್ಲಿದೆ. ಹಾಗೂ ಇದು ಕೊಲ್ಹಾಪುರ ಜಿಲ್ಲೆಯ ಅತ್ಯಂತ ಸಣ್ಣ ನಗರ ಎಂದು ಹೇಳಲ್ಪಟ್ಟಿದೆ. ಚಾರಣವನ್ನು ಮಾಡುತ್ತ ಪ್ರಕೃತಿ ಸೌಂದರ್ಯವನ್ನು ಉಣಿಸುವಲ್ಲಿ ಮಹಾರಾಷ್ಟ್ರದ ಪನ್ಹಾಲಾ ಪ್ರದೇಶ ಹೆಸರು ಮಾಡಿದೆ. ಈ ಪ್ರದೇಶವು ಅತ್ಯಂತ ಚಿಕ್ಕ ಪಟ್ಟಣವಾಗಿದ್ದರೂ ಕೂಡಾ ಇಲ್ಲಿನ ಆಕರ್ಷಣೆಗಳು ಮಾತ್ರ ಅಗಣ್ಯ!

ಚಿತ್ರಕೃಪೆ: Nilesh2 str

ಉತ್ತರ ಭಾರತದ ಗಿರಿಧಾಮಗಳು:

ಉತ್ತರ ಭಾರತದ ಗಿರಿಧಾಮಗಳು:

ಅಂಬೋಲಿ : ಇಡೀ ವಾರದ ಬದುಕಿನ ಜಂಜಾಟದ ನಡುವೆ ವಾರಾತ್ಯಂದ ದಿನ ಕಳೆಯಲು ಅಂಬೋಲಿಯು ಒಂದು ಸುಂದರ ಸ್ಥಳ, ಅದರಲ್ಲೂ ಪ್ರೇಮಿಗಳಿಗೆ ಹೇಳಿ ಮಾಡಿಸಿದ್ದು ಎಂದರೆ ತಪ್ಪಾಗಲಾರದು! ಅಂಬೋಲಿ ಜಲಪಾತಗಳಿರುವ ಸ್ವರ್ಗ. ಶರ್ಗಾಂಕರ್ ಜಲಪಾತ, ಮಹಾದೇವ ಜಲಪಾತ ಹಾಗೂ ನಘಟ್ಟ ಜಲಪಾತ ಇಂಥಹ ಅನೇಕ ಜಲಪಾತಗಳು ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ನಘಟ್ಟ ಜಲಪಾತವು ಅತ್ಯಂತ ಸುಂದರವಾಗಿದ್ದು ಪಿಕ್ ನಿಕ್ ಹಾಗೂ ವಿಶ್ರಾಂತಿ ಪಡೆಯಲು ಬಯಸುವವರಿಗೆ ವೆಚ್ಚುಗೆಯಾಗುವ ಸ್ಥಳವಾಗಿದೆ. ಅಂಬೋಲಿ ತಂಪಾದ ಬೆಟ್ಟ ಪ್ರದೇಶವಾದ್ದರಿಂದ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದೆ ಉತ್ತಮ.

ಚಿತ್ರಕೃಪೆ: UrbanWanderer

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X