Search
  • Follow NativePlanet
Share
» »ಕರ್ನಾಟಕದ ಬಾಗಲಕೋಟೆಯ ಐತಿಹಾಸಿಕ ಪರಂಪರೆಯ ಬಗ್ಗೆ ತಿಳಿಯೋಣ ಬನ್ನಿ

ಕರ್ನಾಟಕದ ಬಾಗಲಕೋಟೆಯ ಐತಿಹಾಸಿಕ ಪರಂಪರೆಯ ಬಗ್ಗೆ ತಿಳಿಯೋಣ ಬನ್ನಿ

ಕರ್ನಾಟಕದ ಬಾಗಲಕೋಟೆ ಪರಂಪರೆಯ ಸಂಪೂರ್ಣ ಮಾರ್ಗದರ್ಶಿ

ಬಾಗಲಕೋಟೆ ಜಿಲ್ಲೆಯು ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜ ಚಾಲುಕ್ಯ ರಾಜವಂಶವು ಆಧುನಿಕ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಆಳ್ವಿಕೆ ನಡೆಸಿತು; ಆದ್ದರಿಂದ, ಅವರ ಉಪಸ್ಥಿತಿಯನ್ನು ಅವರು ನಿರ್ಮಿಸಿದ ಅವಶೇಷಗಳ ರೂಪದಲ್ಲಿ ವೀಕ್ಷಿಸಬಹುದು.

ಹೆಚ್ಚು ಮುಖ್ಯವಾಗಿ, ಬಾದಾಮಿಯು ಚಾಲುಕ್ಯ ರಾಜವಂಶದ ರಾಜಧಾನಿಯಾಗಿದ್ದರಿಂದ, ಇಡೀ ಬಾಗಲಕೋಟೆ ಜಿಲ್ಲೆಯು ಭವ್ಯವಾದ ಮತ್ತು ಮೂಕವಿಸ್ಮಿತಗೊಳಿಸುವಂತಹ ದೇವಾಲಯಗಳು ಮತ್ತು ಸ್ಮಾರಕಗಳಿಂದ ಹರಡಿದೆ, ಅದು ಈಗ ಪ್ರಸಿದ್ಧ ಪರಂಪರೆಯ ತಾಣಗಳಾಗಿವೆ. ಬಾಗಲಕೋಟೆಯ ವಾಸ್ತುಶಿಲ್ಪದ ವೈಭವಕ್ಕಾಗಿ ಭೇಟಿ ನೀಡಬೇಕಾದ 5 ಪ್ರಮುಖ ಸ್ಥಳಗಳ ಬಗ್ಗೆ ಓದಿ.

ಪಟ್ಟದಕಲ್ಲು

ಪಟ್ಟದಕಲ್ಲು

ಈ ಹಿಂದೆ ಪಟ್ಟದಕಲ್ಲನ್ನು ಪಟ್ಟದ ಕಿಸುವೊಲಲ್ ಎಂದು ಕರೆಯಲಾಗುತ್ತಿತ್ತು, ಇದನ್ನು ಅಕ್ಷರಶಃ 'ಕಿರೀಟದ ಮಾಣಿಕ್ಯಗಳ ನಗರ' ಎಂದು ಅನುವಾದಿಸಲಾಗುತ್ತದೆ. ಬಾಗಲಕೋಟೆಯ ಈ ಸುಂದರ ನಗರವು 8 ನೇ ಶತಮಾನದಲ್ಲಿ ಚಾಲುಕ್ಯ ರಾಜವಂಶದಿಂದ ನಿರ್ಮಿಸಲಾದ ರಾಜಮನೆತನದ ಕಟ್ಟಡಗಳು ಮತ್ತು ಸ್ಮಾರಕಗಳಿಂದಾಗಿ ಜನಪ್ರಿಯವಾಗಿದೆ.

ಮಲಪ್ರಭಾ ನದಿಯ ದಡದಲ್ಲಿ ನೆಲೆಸಿರುವ ಪಟ್ಟದಕಲ್ ನಲ್ಲಿ 10 ದೇವಾಲಯಗಳಿವೆ, ಇವೆಲ್ಲವೂ ಶಿವನಿಗೆ ಸಮರ್ಪಿತವಾಗಿವೆ, ಇವುಗಳ ಮೂಲಕ ನೀವು ಚಾಲುಕ್ಯರ ವಾಸ್ತುಶಿಲ್ಪದ ವೈಭವವನ್ನು ನೋಡಬಹುದು.

ವಿರೂಪಾಕ್ಷ ದೇವಸ್ಥಾನ, ಸಂಗಮೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ,ಇತ್ಯಾದಿಗಳನ್ನು ನೀವು ತಪ್ಪಿಸಿಕೊಳ್ಳಬಾರದ ಕೆಲವು ಪ್ರಮುಖ ದೇವಾಲಯಗಳು.

ಕೂಡಲ ಸಂಗಮ

ಕೂಡಲ ಸಂಗಮ

ಕೂಡಲ ಸಂಗಮವು ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಯ ಸಂಗಮದ ಸ್ಥಳವಾಗಿದೆ. ಈ ಜನಪ್ರಿಯ ಸ್ಥಳವು ಹಿಂದೂಗಳಿಗೆ ಪ್ರಮುಖ ಯಾತ್ರಾಸ್ಥಳವಾಗಿದೆ. ಈ ಪಟ್ಟಣವು ಶಿವನಿರ್ಪಿತವಾದ ಹಲವಾರು ದೇವಾಲಯಗಳನ್ನು ಹೊಂದಿದೆ. ಈ ಸ್ಥಳವು ಕರ್ನಾಟಕದ ಅತ್ಯಂತ ಪ್ರಸಿದ್ದ ಹಿಂದೂ ಕವಿ ಹಾಗೂ ತತ್ವಜ್ಞಾನಿ ಬಸವಣ್ಣನವರ ಜನ್ಮಸ್ಥಳವೂ ಆಗಿದೆ. ಇಲ್ಲಿಯ ಪ್ರಮುಖ ದೇವಾಲಯಗಳಲ್ಲಿ ಶ್ರೀ ಸಂಗಮೇಶ್ವರ ದೇವಾಲಯವು ಪ್ರಮುಖವಾಗಿದ್ದು, ಇದನ್ನು 12ನೇ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಪ್ರಸಿದ್ದ ಕವಿ ಬಸವಣ್ಣನವರಿಗೆ ಅರ್ಪಿತವಾದುದಾಗಿದ್ದು ಇದು ಲಿಂಗಾಯಿತ ಸಮುದಾಯದವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ.

ಬಾದಾಮಿ

ಬಾದಾಮಿ

ಬಾದಾಮಿಯು ಪ್ರಕೃತಿ ಮತ್ತು ಇತಿಹಾಸದ ಸಂಪೂರ್ಣ ಅನುಭವವನ್ನು ನೀಡುತ್ತದೆ. ಈ ದೇವಾಲಯವು ಅದರಲ್ಲೂ ಬಾದಾಮಿಯು ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಜಗತ್ರ್ಪಸಿದ್ದ ಗುಹಾಂತರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ ಅವರ ಅತ್ಯುತ್ತಮ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ.

ನಾಲ್ಕು ಗುಹೆ ದೇವಾಲಯಗಳನ್ನು ಮರಳುಗಲ್ಲುಗಳಿಂದ ಕೆತ್ತಲಾಗಿದೆ ಮತ್ತು 4 ನೇ ದೇವಸ್ಥಾನವನ್ನು ಹೊರತುಪಡಿಸಿ ಉಳಿದ ಮೂರೂ ದೇವಾಲಯಗಳೂ ಹಿಂದೂ ದೇವರುಗಳಿಗೆ ಸಮರ್ಪಿಸಲಾಗಿದೆ, ನಾಲ್ಕನೆಯ ದೇವಾಲಯವು ಜೈನ ದೇವಾಲಯವಾಗಿದೆ. ಇವುಗಳ ಹೊರತಾಗಿ ಇಲ್ಲಿ ಬಾದಾಮಿ ಮ್ಯೂಸಿಯಂ, ಅಗಸ್ತ್ಯತೀರ್ಥ, ಭೂತನಾಥ ದೇವಾಲಯ, ಇತ್ಯಾದಿಗಳಿಗೆ ಭೇಟಿ ನೀಡಬಹುದು.

ಐಹೊಳೆ

ಐಹೊಳೆ

ಐಹೊಳೆಯಲ್ಲಿ ಕಂಡುಬರುವ ದೇವಾಲಯಗಳ ಸಮೂಹವು ಅನೇಕರ ಗಮನವನ್ನು ಸೆಳೆಯುತ್ತದೆ. ಇದರಿಂದಾಗಿ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಬಾಕಿಯಿರುವ ಪಟ್ಟಿಯಲ್ಲಿದೆ. ಈ ಐತಿಹಾಸಿಕ ನಗರದಲ್ಲಿ 125 ಕ್ಕೂ ಹೆಚ್ಚು ದೇವಾಲಯಗಳನ್ನು ಒಳಗೊಂಡಿರುವ 20 ದೇವಾಲಯ ಸಂಕೀರ್ಣಗಳನ್ನು ಕಾಣಬಹುದು, ಇವೆಲ್ಲವೂ ಚಾಲುಕ್ಯರ ಹೊರತು ಬೇರೆ ಯಾರಿಂದಲೂ ನಿರ್ಮಿಸಲ್ಪಟ್ಟಿಲ್ಲ.

ಈ ಸಂಕೀರ್ಣಗಳು ಒಂದು ಬೌದ್ಧ ಗುಹೆಯೊಂದಿಗೆ ಹಿಂದೂ ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿವೆ. ನೀವು ದುರ್ಗಾ ದೇವಾಲಯ, ಲಾಡ್ ಖಾನ್ ದೇವಾಲಯ, ಮೇಗುಟಿ ಜೈನ ದೇವಾಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ಈ ದೇವಾಲಯಗಳು 5 ನೇ ಶತಮಾನದಷ್ಟು ಹಿಂದಿನವುಗಳಾಗಿವೆ

ಮಹಾಕೂಟ

ಮಹಾಕೂಟ

ಮಹಾಕೂಟವು ಬಾಗಲ್ ಕೋಟೆಯ ಒಂದು ಹಳ್ಳಿಯಾಗಿದ್ದು, ಇದು ಹಲವಾರು ಸುಂದರ ದೇವಾಲಯ ಸಮೂಹಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಹೆಚ್ಚಿನವು ಶಿವ ದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯಗಳನ್ನು ಕ್ರಿ.ಶ 6 ರಿಂದ 8 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ ಮತ್ತು ಬಾದಾಮಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ.

ಚಾಲುಕ್ಯರ ಸೇನೆಯ ಸಾಧನೆಗಳನ್ನು ಶ್ಲಾಘಿಸುವ ಕಂಬದ ಶಾಸನಗಳು, ಮುಖಮಂಟಪ ಶಾಸನಗಳು ಇತ್ಯಾದಿಗಳನ್ನು ದೇವಾಲಯದ ಸಂಕೀರ್ಣದೊಂದಿಗೆ ಕಾಣಬಹುದು. ಈ ದೇವಾಲಯಗಳ ವಾಸ್ತುಶೈಲಿಯು ದ್ರಾವಿಡ ಮತ್ತು ನಾಗರ ಶೈಲಿಗಳ ಶ್ರೇಷ್ಠ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ, ಹಾಗೂ ಚಾಲುಕ್ಯರ ವಾಸ್ತುಶಿಲ್ಪವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X