Search
  • Follow NativePlanet
Share
» »ವಿಸ್ಮಯಗೊಳಿಸುವ ತ್ರೀಡಿ ಮ್ಯೂಸಿಯಂ!

ವಿಸ್ಮಯಗೊಳಿಸುವ ತ್ರೀಡಿ ಮ್ಯೂಸಿಯಂ!

By Vijay

ನೀವು ತ್ರೀಡಿ ಸಿನೆಮಾ, ಚಿತ್ರ ಅಂತೆಲ್ಲ ಕೇಳಿರಬಹುದು. ಅದನ್ನು ನೋಡಲು ವಿಶೇಷವಾದ ಕನ್ನಡಕಗಳಿದ್ದು ಅದರ ಮೂಲಕ ನೋಡಿದಾಗ ನೀವೆ ಆ ಸ್ಥಳದಲ್ಲಿ ಇದ್ದಿರೇನೊ ಅನ್ನುವಷ್ಟರ ಮಟ್ಟಿಗೆ ನಿಮಗೆ ನೈಜತೆಯ ಅನುಭವವಾಗುತ್ತದೆ. ಇದು ಖಂಡಿತವಾಗಿಯೂ ಎಲ್ಲರಲ್ಲಿ ರೋಮಾಂಚನ ಮೂಡಿಸುತ್ತದೆ.

ಮೊದಲಿಗೆ ಚಿತ್ರಗಳಿಗೆ ಸೀಮಿತವಾಗಿದ್ದ ತ್ರೀಡಿ ಅಥವಾ ಮೂರು ಆಯಾಮಗಳ ಸಿದ್ಧಾಂತ ಇಂದು ಕಲೆಯಲ್ಲೂ ಸಹ ಅರಳಿರುವುದು ವಿಶೇಷವಾಗಿದೆ. ತ್ರೀಡಿ ಅನುಭವವನ್ನೆ ನೀಡುವ ಚಿತ್ರಗಳನ್ನು ಇಂದು ಹಲವು ಪ್ರಖ್ಯಾತ ಹಾಗೂ ಪ್ರತಿಭಾನ್ವಿತ ಕಲಾಕಾರರು ತಮ್ಮ ಚಿತ್ರಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ.

ಬೆಂಗಳೂರಿನ ಅದ್ಭುತ "ನಂಬಿದರೆ ನಂಬಿ, ಬಿಟ್ಟರೆ ಬಿಡಿ" ಸಂಗ್ರಹಾಲಯ

ನಿಜ ಹೇಳಬೇಕೆಂದರೆ ಈ ರೀತಿಯ ಚಿತ್ರಗಳನ್ನು ಸಾಮಾನ್ಯವಾಗಿ ಎರಡು ಆಯಾಮ ಅಂದರೆ ಟುಡಿ (2D) ಯಲ್ಲೆ ಬಿಡಿಸಲಾಗುತ್ತದಾದರೂ ಅದನ್ನು ನಿರ್ದಿಷ್ಟ ಕೋನಗಳಲ್ಲಿ ವ್ಯವಸ್ಥಿತವಾಗಿ ಬಿಡಿಸುವುದರಿಂದ ಇದು ನೋಡುಗರಿಗೆ "3D" ಅನುಭವ ನೀಡುತ್ತವೆ. ಇಲ್ಲಿ ನೆರಳು ಬೆಳಕಿನ ಸಂಯೋಜನೆ, ನೋಡುಗರ ದೃಷ್ಟಿಕೋನ ಆ ರೀತಿಯ ಅನುಭವ ಉಂಟುಮಾಡುತ್ತದೆ.

ನಿಮಗೂ ಇಂತಹ ಅದ್ಭುತ ತ್ರೀಡಿ ಅನುಭವ ನೀಡುವಂತಹ ವೈವಿಧ್ಯಮಯ ಚಿತ್ರಕಲೆಗಳನ್ನು ಅಥವಾ ಚಿತ್ರಸಂಗ್ರಹವನ್ನು ನೋಡುವ ತವಕವಿದ್ದರೆ ಒಂದೊಮ್ಮೆ ಚೆನ್ನೈ ನಗರದಲ್ಲಿರುವ ಕ್ಲಿಕ್ ಆರ್ಟ್ ಸಂಗ್ರಹಾಲಯಕ್ಕೆ ತಪ್ಪದೆ ಭೇಟಿ ನೀಡಿ. ಅಲ್ಲಿರುವ ಪ್ರತಿ ಚಿತ್ರಗಳು ನಿಮ್ಮನ್ನು ಬೆಕ್ಕಸು ಬೆರಗಾಗುವಂತೆ ಮಾಡದೆ ಇರಲಾರವು. ಈ ಸಂಗ್ರಹಾಲಯ ಹೇಗಿದೆ ಹಾಗೂ ಇದರ ಹಿನ್ನೆಲೆಯ ಕುರಿತು ಈ ಲೇಖನದಲ್ಲಿ ತಿಳಿಯಿರಿ.

ಲೇಖನದಲ್ಲಿ ಬಳಸಲಾದ ಪ್ರತಿಯೊಂದು ಚಿತ್ರಗಳಿಗೆ ಚಿತ್ರಕೃಪೆ ಹಾಗೂ ಮಾಹಿತಿ ಕೃಪೆ: clickartmuseum.com ಅಧಿಕೃತ ತಾಣ.

ಎಷ್ಟು ಪುರಾತನ?

ಎಷ್ಟು ಪುರಾತನ?

ಟ್ರಿಕ್ ಆರ್ಟ್ ಎಂದು ಕರೆಯಲಾಗುವ ಈ ಕಲೆಯು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿದೆ. ಉಪಾಯದಿಂದ ಕಣ್ಣಿಗೆ ಮಣ್ಣೆರಚುವಂತಹ (ಭ್ರ್ಮಗೊಳಿಸುವ) ಈ ಕಲೆ ಬಲು ಆಕರ್ಷಕವಾಗಿ ಇಂದು ಬಹಳಷ್ಟು ಜನರ ಗಮನ ಸೆಳೆಯುತ್ತಿದೆ. ಜಾಸ್ತಿ ತಮಾಷೆ ಬೇಡ, ಸುಮ್ನೆ ನೋಡ್ತಾ ಮನೆಗೆ ಹೊಯ್ತಾ ಇರು ಅಷ್ಟೆ.

ಕಣ್ಣಿಗೆ ಭ್ರಮೆ

ಕಣ್ಣಿಗೆ ಭ್ರಮೆ

ಇದನ್ನು ತಾಂತ್ರಿಕವಾಗಿ ಫ್ರೆಂಚ್ ಭಾಷೆಯಲ್ಲಿ ಟೊಂಪೆ-ಲ್'ಓಯ್ಲ್ ಅಂದರೆ ಕಣ್ಣುಗಳನ್ನು ಮೋಸಗೊಳಿಸು ಎಂದಾಗುತ್ತದೆ. ಈ ಕಲೆಯ ಮೂಲ ಉದ್ದೇಶ ಭ್ರಮೆಯನ್ನು ಸೃಷ್ಟಿಸಿ ಇಲ್ಲದ್ದನ್ನು ಇರುವ ಹಾಗೆ ಕಾಣುವಂತೆ ಮಾಡುವುದಾಗಿದೆ. ಸುಮ್ಕೆ ಬಿಡ್ರವ್ವಾ, ಸೆನ್ಸಾರ್ ಪ್ರಾಬ್ಲೆಮ್ ಆಗ್ತದೆ.

ಏತಕ್ಕಾಗಿ?

ಏತಕ್ಕಾಗಿ?

ಈ ಕಲೆಯು ಸಾವಿರಾರು ವರ್ಷಗಳ ಹಿಂದೆ ಪ್ರಪ್ರಥಮವಾಗಿ ಗ್ರೀಕರು ಹಾಗೂ ರೋಮನ್ನರು ಬಳಸಿದ್ದರು. ಇವರು ಕೋಠಡಿಗಳು ಚಿಕ್ಕದಿದ್ದರೂ ಅವು ಬಲು ವಿಶಾಲವಾಗಿರುವಂತೆ ಭ್ರಮೆ ಮೂಡಿಸಲು ಈ ರೀತಿಯ ಕಲೆಯನ್ನು ಬಳಸುತ್ತಿದ್ದರೆನ್ನಲಾಗಿದೆ. ಎಲ್ಲಿಗಪ್ಪಾ ಹೋಗ್ತಾ ಇದಿನಿ..ಸುಮ್ಕೆ ಬಂದೆ ಅನ್ಸತ್ತೆ!

ಎ ಪಿ ಶ್ರೀಧರ್

ಎ ಪಿ ಶ್ರೀಧರ್

ರಾಮನಾಥ ಜಿಲ್ಲೆಯವರಾದ ಎ ಪಿ ಶ್ರೀಧರ್ ಎಂಬ ಅದ್ವಿತೀಯ ಕಲಾಕಾರರು ಈ ಅದ್ಭುತ ಸಂಗ್ರಹಾಲಯದ ನಿರ್ಮಾತೃ. ಇವರು ತಮ್ಮ ಅತ್ಯುನ್ನತ ಚಿತ್ರಕಲೆಗಳ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ. ಇವರ ಕೆಲವು ಅದ್ಭುತ ಚಿತ್ರಕಲೆಗಳನ್ನು ದೇಶದ ಗಣ್ಯವ್ಯಕ್ತಿಗಳಲ್ಲಿ ಪರಿಗಣಿಸಲ್ಪಡುವ ಸಚಿನ್ ತೆಂಡುಲ್ಕರ್, ಕಮಲ್ ಹಾಸನ್ ಹಾಗೂ ಅಮಿತಾಬ್ ಬಚ್ಚನ್ ನಂಥವರ ಮನೆಗಳಲ್ಲಿಯೂ ಕಾಣಬಹುದಾಗಿದೆ. ಲೇ ಜಂಪ್ ಮಾಡ್ ನೋಡೋಣ.

ಚೆನ್ನೈ ನಗರ

ಚೆನ್ನೈ ನಗರ

ಚೆನ್ನೈ ನಗರದ ಈಸ್ಟ್ ಕೋಸ್ಟ್ ಹೆದ್ದಾರಿಯಲ್ಲಿರುವ ದೇಶದ ಅತಿ ದೊಡ್ಡ ಸ್ನೋವ್ ಪಾರ್ಕ್ ಆದ ವಿಜಿಪಿ ಸಂಕೀರ್ಣದಲ್ಲಿ ಈ ಅದ್ಭುತ ಕ್ಲಿಕ್ ಆರ್ಟ್ ಸಂಗ್ರಹಾಲಯವಿದೆ. ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರಿಂದ ಈ ಸಂಗ್ರಹಾಲಯ ಭೇಟಿ ನೀಡಲ್ಪಡುತ್ತದೆ. ಗುಳ್ಳಿಯಲಿ ಬಳುಕುತ..ಮಜವಾಗಿದೆ.

ದೂರವಾಣಿ ಸಂಖ್ಯೆ

ದೂರವಾಣಿ ಸಂಖ್ಯೆ

ಈ ಕ್ಲಿಕ್ ಆರ್ಟ್ ಸಂಗ್ರಹಾಲಯದ ಸಂಪೂರ್ಣ ವಿಳಾಸ ಹೀಗಿದೆ : ಕ್ಲಿಕ್ ಆರ್ಟ್ ಮ್ಯೂಸಿಯಂ (ವಿಜಿಪಿ), ಈಸ್ಟ್ ಕೋಸ್ಟ್ ಹೆದ್ದಾರಿ, ಅಕ್ಕರೈ, ಇಂಜಂಬಕ್ಕಂ, ಚೆನ್ನೈ-600115. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಮ್ಪರ್ಕಿಸಬಹುದು. 8939933999 ಮುಂದಿನ ಸಲಿಡುಗಳಲ್ಲಿ ಇಲ್ಲಿರುವ ಕೆಲವು ಅದ್ಭುತ ಚಿತ್ರಗಳನ್ನು ನೋಡಿ ಆನಂದಿಸಿ. ಸೆಲ್ಫೀ ಬೇಕಾ? ನವಿಬ್ರೂ ಒಂದೆ ಕಣಣ್ಣ.

ತೆಗೆದುಕೊ

ತೆಗೆದುಕೊ

ಅಬ್ಬಾ ಏನ್ ಸಾಧನೆಯೊ ಗೊತ್ತಿಲ್ಲ...ಬುಡು ಪ್ರಶಸ್ತಿ ಸಿಕ್ತಲ್ಲ!

ಜೋಕೆ!

ಜೋಕೆ!

ಯಪ್ಪೊ ಬೀಳ್ತಾ ಇದೆ....ತಡಿ ಗುರು ಹಿಡಿತಿನಿ!

ಗೊತ್ತಿಲ್ಲ

ಗೊತ್ತಿಲ್ಲ

ಯಾರಿಗಾದ್ರೇನೂ ಇಬ್ರ ಹಂಚಿಕೊಳ್ಳುವಾ....

ಓಡು

ಓಡು

ಯಾಕಾದ್ರೂ ಬಂದ್ನ್ಯಪ್ಪಾ ಇಲ್ಲಿ...ಕಾಪಾಡಿ!

ಸಾಕಾ?

ಸಾಕಾ?

ಅವ್ಳಿಗ್ ಸಾಕಂತೆ...ಇದ್ನ ನೀನೆ ಮಡಿಕ್ಕೊ..

ನಗರ ಸುತ್ತಾಟ

ನಗರ ಸುತ್ತಾಟ

ಆಹಾ ನೀರಿನಲ್ಲಿ ತೇಲುತ್ತ ನಗರ ನೋಡುವುದು ತುಂಬಾ ಸಂತಸ ನೀಡುತ್ತದಲ್ಲವೆ?

ತುಳುಕ್ತಿದೆ

ತುಳುಕ್ತಿದೆ

ಸಾಕ್ಬಿಡಮ್ಮಾ ತುಂಬಿ ತುಳುಕ್ತಾ ಇದೆ...

ಇಗೋ ತುಗೊ ಬೆಂಕಿನಾ

ಇಗೋ ತುಗೊ ಬೆಂಕಿನಾ

ಅದೆಸ್ಟ್ ಬೆಂಕಿ ಬಿಡ್ತಿ ಬಿಡು....ಆರ್ಸಾಕ್ ನಾನ್ ರೆಡಿ.

ಯಾರ್ ಗೆಲ್ತಾರೆ

ಯಾರ್ ಗೆಲ್ತಾರೆ

ನಾನೆ ಗೆಲ್ಲೊದು...

ಹುಷಾರು

ಹುಷಾರು

ಇಕೊ ತಕೊ ನಿನ್ ಕಾರ್ಡ್ನಾ!

ಪಳಗಿಸುವೆ ನಿನ್ನ

ಪಳಗಿಸುವೆ ನಿನ್ನ

ಪಳಗ್ಸುದು ಹಂಗಿರ್ಲಿ ಗುರು...ಮೊದ್ಲು ನಿನ್ ನಿ ಕಾಪಾಡ್ಕೊ...

ಕೇಳು

ಕೇಳು

ವಸಿ ನಾನು ಸ್ವಲ್ಪ ತಂತಿನ ಮಿಟ್ಕಸ್ಲಾ?

ಸುಮ್ನಿರಕ್ಕಾಗಲ್ವಾ

ಸುಮ್ನಿರಕ್ಕಾಗಲ್ವಾ

ಆಗಲ್ಲಾ...ನಾನ್ ಈ ಗ್ಲಾಸ್ ಒಡಿಬೇಕ್...

ಮೇಲೆ ನಿಂತವ್ನೆ

ಮೇಲೆ ನಿಂತವ್ನೆ

ನಾನ್ ಎನ್ಮಾಡ್ಲಪ್ಪಾ ಈಗ....ಇದು ಬೊಂಬೆಯಾಟವಯ್ಯ!

ಕುತೂಹಲ

ಕುತೂಹಲ

ಒಂದ್ಸಲಿ ನೀರ್ನಾ ತೆಗೆದ್ ನೋಡ್ಲಾ?

ಹೆಮ್ಮೆ

ಹೆಮ್ಮೆ

ನನಗಿದು ಬಲು ಹೆಮ್ಮೆಯ ಘಳಿಗೆ...ನೀವು ಭೇಟಿ ನೀಡಿದರೆ ನಿಮಗೂ ಬರಬಹುದು.

ನಾನೆ ಧನ್ಯ!

ನಾನೆ ಧನ್ಯ!

ಮಮತೆಯ ಸಾಕಾರ ಮೂರ್ತಿಯಿಂದ ಬಂದೊದಗಿದ ಆಶೀರ್ವಾದ.

ಇಷ್ಟಿದಿಯಾ

ಇಷ್ಟಿದಿಯಾ

ಯಾಕಪ್ಪಾ...ಏನಪ್ಪಾ ಮಾಡ್ತಿಯಾ..ನಮ್ದು ಟೈಮ್ ಬರ್ತದೆ.

ನಿಮ್ಗೂ ತಪ್ಪಿದ್ದಲ್ಲ

ನಿಮ್ಗೂ ತಪ್ಪಿದ್ದಲ್ಲ

ಇದು ಸೆಲ್ಫೀ ಟೈಂ. ಬಾ ಗುರು ಬೇಗ, ಬ್ಯಾಟರಿ ಹೊಯ್ತಾ ಇದೆ. ಇಗೋ ಬಂದೆ!

ನಾನೆ ನಾಯಕ

ನಾನೆ ನಾಯಕ

ನೆನಪಿನ ಘಳಿಗೆ.

ಏನ್ ಗುರು

ಏನ್ ಗುರು

ಏನ್ ಗುರು ವಿಚಿತ್ರ...ಒಂದ್ ಶೂ ಇಷ್ಟೊಂದು ದೊಡ್ಡದಾಗೈತೆ? ಹೌದಲ್ವಾ?

ಸ್ವಾತಂತ್ರ್ಯ

ಸ್ವಾತಂತ್ರ್ಯ

ಬನ್ನಿ ಪಕ್ಷಿಗಳೆ....ನಾನೆ ನಿಮ್ಮ ಹೊಸ ಸ್ನೇಹಿತ!

ಬಾ ಇಲ್ಲಿ

ಬಾ ಇಲ್ಲಿ

ಯಪ್ಪಾ...ವೈನ್ ಕುಡಿತೌಳೆ, ಶರ್ಟ್ ಎಳಿ ತೌಳೆ...ಏನೋ ವಿಷ್ಯಾ ಅಯ್ತೆ..ಬೇಗ ಎಸ್ಕೇಪ್ ಆಗ್ಬೇಕು.

ತಿನ್ನು ಈ ಒದೆನಾ!

ತಿನ್ನು ಈ ಒದೆನಾ!

ಈಗ ಬರಿ ಕನ್ನಡಕ ಹೊಗೈತೆ, ನೆಕ್ಸ್ಟ್ ಟೈಮ್ ಬಂದ್ರೆ ಕಣ್ಣೂ ಹೊಕ್ಕೈತೆ ಹುಷಾರು!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more