Search
  • Follow NativePlanet
Share
» »ಚಿದಂಬರ ದೇವಸ್ಥಾನ ಚಿದಂಬರ ರಹಸ್ಯ

ಚಿದಂಬರ ದೇವಸ್ಥಾನ ಚಿದಂಬರ ರಹಸ್ಯ

By Vijay

ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯ ನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಹಾಗೂ ಗಮನಾರ್ಹವಾಗಿ ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ ದೇವಾಲಯಗಳಿಗಾಗಿ ಹೆಸರುವಾಸಿಯಾಗಿದೆ. ಮುಂಜಾನೆ ಎದ್ದೊಡನೆ ಕೇಳುವ ದೇಗುಲಗಳ ಘಂಟಾ ನಿನಾದ, ಪರಿಶುದ್ಧವಾದ ಫಿಲ್ಟರ್ ಕಾಫಿಯ ಜೊತೆಗೆ ಚಿದಂಬರಂನಲ್ಲಿರುವ ಪ್ರತಿಯೊಂದು ಅಂಶವು ಸಹ ತಮಿಳುನಾಡಿನ ತಾಜಾತನವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.

ಗ್ಲೋಬಲ್ ಆನ್‍ಲೈನ್ ಶಾಪಿಂಗ್ ಉತ್ಸವ 2014 ರ ಕೊಡುಗೆ : ಪ್ರವಾಸ ಹಾಗೂ ವಿಮಾನ ಹಾರಾಟಗಳ ಮೇಲೆ 80% ರ ವರೆಗೂ ಕಡಿತ

ವಿಶೇಷ ಲೇಖನ : ರಾಮನಾಮದ ಪ್ರಭಾವವಿರುವ ರಾಮೇಶ್ವರಂ

ಪ್ರಮುಖವಾಗಿ ಇಲ್ಲಿರುವ ತಿಲ್ಲೈ ನಟರಾಜನ ದೇವಸ್ಥಾನವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದ್ದು ಪಂಚಭೂತಗಳ ಪೈಕಿ ಆಕಾಶವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದಲ್ಲಿ ಶಿವನನ್ನು "ನಟರಾಜ"ನ ರೂಪದಲ್ಲಿ ನರ್ತಿಸುತ್ತಿರುವ ಭಂಗಿಯಲ್ಲಿ ಪೂಜಿಸಲಾಗುತ್ತದೆ ಹಾಗೂ ಈ ರೀತಿಯ ಏಕೈಕ ದೇವಾಲಯವಾಗಿ ಇದು ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಈ ದೇವಾಲಯದ ಕುರಿತು ಹಲವಾರು ರಹಸ್ಯಮಯ ನಂಬಿಕೆಗಳು ತಳುಕು ಹಾಕಿಕೊಂಡಿವೆ. ಅವುಗಳ ಕುರಿತು ಸ್ಲೈಡುಗಳಲ್ಲಿ ತಿಳಿಯಿರಿ.

ವಿಶೇಷ ಲೇಖನ : ರಹಸ್ಯಮಯ ಸ್ಥಳಗಳು

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂಗೆ ತಮಿಳು ನಾಡಿನ ಎಲ್ಲಾಭಾಗಗಳಿಂದ ರಸ್ತೆ ಸಂಪರ್ಕವಿದೆ. ಇದು ಚೆನ್ನೈಗೆ ಸಮೀಪವಿರುವುದರಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿರುತ್ತದೆ. ಚಿದಂಬರಂ ಬೆಂಗಳೂರು ಹಾಗೂ ಚೆನ್ನೈನಿಂದ ಕ್ರಮವಾಗಿ 390 ಹಾಗೂ 242 ಕಿ.ಮೀ ಗಳಷ್ಟು ದೂರವಿದೆ. ಬೆಂಗಳೂರಿನಿಂದ ಚಿದಂಬರಂಗೆ ತೆರಳಲು ರೈಲು ಕೂಡ ಲಭ್ಯವಿದೆ. ಮುಂದಿನ ಸ್ಲೈಡುಗಳಲ್ಲಿ ಚಿದಂಬರಂ ಕುರಿತು ಸ್ವಾರಸ್ಯಕರವಾದ ಸಂಗತಿಗಳನ್ನು ತಿಳಿಯಿರಿ.

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇಲ್ಲಿರುವ ನಟರಾಜನ ಕಾಲಿನ ಹೆಬ್ಬೆರಳು ಭೂಮಿಯ ಆಯಾಸ್ಕಾಂತೀಯ ಕೇಂದ್ರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಸುಮಾರು 5000 ವರ್ಷಗಳ ಹಿಂದೆಯೆ ತಮಿಳಿನ ಪ್ರಖ್ಯಾತ ಸಿದ್ಧ ಪುರುಷ ಹಾಗೂ ಸಂತರಾಗಿದ್ದ ತಿರುಮೂಲರ್ ನಿರುಪಿಸಿದ್ದರಂತೆ!

ಚಿತ್ರಕೃಪೆ: BishkekRocks

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರವು ಪಂಚಭೂತ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಅದರಲ್ಲಿ ಈ ಸ್ಥಳವು ಪಂಚಭೂತಗಳಲ್ಲೊಂದಾದ ಆಕಾಶವನ್ನು ಪ್ರತಿನಿಧಿಸುತ್ತದೆ. ಮತ್ತೊಂದು ವಿಷಯವೆಂದರೆ ಈ ದೇವಸ್ಥಾನವು, ವಾಯುವನ್ನು ಪ್ರತಿನಿಧಿಸುವ ಆಂಧ್ರದ ಶ್ರೀಕಾಳಹಸ್ತಿ ಹಾಗೂ ಭೂಮಿ ಪ್ರತಿನಿಧಿಸುವ ಕಂಚಿಯ ಏಕಾಂಬರೇಶ್ವರ ಜೊತೆಯಾಗಿ 79 ಡಿಗ್ರಿ ಸಮಭಾಜಕ ರೇಖಾಂಶದಲ್ಲಿ ಸ್ಥಿತಗೊಂಡಿವೆ.

ಚಿತ್ರಕೃಪೆ: Ryan

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂ ದೇವಸ್ಥಾನದ ಮೇಲ್ಛಾವಣಿಯು 21600 ಸುವರ್ಣ ಲೇಪಿತ ಹೊದಿಕೆಗಳಿಂದ ಕೂಡಿದ್ದು ಈ ಸಂಖ್ಯೆಯು ಮನುಷ್ಯನ ದಿನವೊಂದಕ್ಕೆ ಉಸಿರಾಡುವ ಉಸಿರಾಟಗಳ ಸಂಖ್ಯೆಯನ್ನು ಸೂಚಿಸುತ್ತದೆ.

ಚಿತ್ರಕೃಪೆ: Varun Shiv Kapur

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

21600 ಸ್ವರ್ಣ ಲೇಪಿತ ಹೊದಿಕೆಗಳನ್ನು ಗೋಪುರಕ್ಕೆ ಅಂಟಿಸಲು 79000 ಹುಕ್ಕುಗಳನ್ನು ಅಳವಡಿಸಲಾಗಿದ್ದು, ಅವು ಮನುಷ್ಯನ ದೇಹದಲ್ಲಿರುವ 79000 ನಾಡಿಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Nataraja

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇವಲ್ಲದೆ ಇನ್ನೂ ಸ್ವಾರಸ್ಯಕರ ಅಂಶಗಳನ್ನು ಹೇಳಲಾಗುತ್ತದೆ. ಅಂದರೆ ದೇವಸ್ಥಾನದ ರಂಗಮಂಟಪವು ಸಮಾನವಾಗಿರದೆ ಕೊಂಚ ಎಡಭಾಗದಲ್ಲಿರುವುದು ಕಂಡುಬರುತ್ತದೆ. ಇದು ಮನುಷ್ಯನ ಎದೆಯ ಎಡ ಭಾಗದಲ್ಲಿರುವ ಹೃದಯದ ಸೂಚಕವಾಗಿದೆಯಂತೆ!

ಚಿತ್ರಕೃಪೆ: Sankar.s

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ರಂಗಮಂಟಪವನ್ನು ತಲುಪಲು ಒಟ್ಟಾರೆ ಐದು ಮೆಟ್ಟಿಲುಗಳಿದ್ದು ಅವುಗಳು ಕ್ರಮವಾಗಿ ಪಂಚಾಕ್ಷರಿ ಮಂತ್ರವಾದ ನ ಮಃ ಶಿ ವಾ ಯ ವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Azzam AWADA

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ದೇವಸ್ಥಾನದ ಕನಕ ಸಭೆ ಅಂದರೆ ನಟರಾಜನು ನರ್ತಿಸುತ್ತಿರುವ ಜಾಗದಲ್ಲಿ ನಾಲ್ಕು ಖಂಬಗಳಿದ್ದು, ಇವು ನಾಲ್ಕು ವೇದಗಳನ್ನು ಸೂಚಿಸುತ್ತವೆಯಂತೆ!

ಚಿತ್ರಕೃಪೆ: Ryan

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇನ್ನೂ ರಂಗಸ್ಥಳದಲ್ಲಿ 28 ಖಂಬಗಳಿದ್ದು ಅವು 28 ಪ್ರಕಾರದ ಅಹಂಗಳನ್ನು ಹಾಗೂ 28 ಬಗೆಯ ಶಿವ ಪೂಜೆಯ ವಿಧಾನಗಳನ್ನೂ ಸೂಚಿಸುತ್ತವೆಯಂತೆ.

ಚಿತ್ರಕೃಪೆ: Jean-Pierre Dalbéra

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಮಿಕ್ಕಂತೆ ದೇವಸ್ಥಾನದ ಅರ್ಥಮಂಟಪದಲ್ಲಿರುವ ಆರು ಖಂಬಗಳು ಆರು ಶಾಸ್ತ್ರಗಳನ್ನು, ದೇವಸ್ಥಾನದ ಒಂಬತ್ತು ಕಳಶಗಳು ಒಂಬತ್ತು ಶಕ್ತಿಗಳನ್ನು ಹಾಗೂ ದೇವಸ್ಥಾನದ 18 ಖಂಬಗಳು 18 ಉಪನಿಷತ್ತುಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Mydhili Bayyapunedi

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇನ್ನೂ ಸ್ಥಳ ಪುರಾಣದ ಪ್ರಕಾರ, ತಿಲ್ಲೈ ಮರಗಳ ಈ ಕಾಡಿನಲ್ಲಿ (ತಿಲ್ಲೈ ಒಂದು ಬಗೆಯ ಮರವಾಗಿದ್ದು ಹಾಲಿನಂತಹ ದ್ರವವನ್ನು ಸ್ರವಿಸುತ್ತದೆ) ಶಿವನು ವಿಹರಿಸುತ್ತಿದ್ದನಂತೆ. ಈ ಪ್ರದೇಶದಲ್ಲಿ ಅತಿಶಯ ಶಕ್ತಿ ಹೊಂದಿದ್ದ ಸಿದ್ಧ ಪುರುಷರು ವಾಸಿಸುತ್ತಿದ್ದರು.

ಚಿತ್ರಕೃಪೆ: Jean-Pierre Dalbéra

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಈ ಸಿದ್ಧ ಪುರುಷರು ಜಾದು ಶಕ್ತಿಯಲ್ಲಿ ಹೆಚ್ಚಿನ ನಂಬಿಕೆಯುಳ್ಳವರಾಗಿದ್ದು ಅದರ ಪ್ರಭಾವದಿಂದ ದೇವರನ್ನೂ ಸಹ ನಿಯಂತ್ರಿಸಬಹುದೆಂದು ನಂಬಿದ್ದರು. ಇವರ ಈ ನಂಬಿಕೆಯನ್ನು ಪರೀಕ್ಷಿಸಲು ಶಿವನು ಒಬ್ಬ ಭಿಕ್ಷುಕನ ವೇಶ ಧರಿಸಿ ಇಲ್ಲಿ ಸುತ್ತ ತೊಡಗಿದನು. ಅವನಿಗೆ ಸಹಾಯವಗಿ ವಿಷ್ಣು ಮೋಹಿನಿಯ ವೇಷಧರಿಸಿ ಅವನ ಜೊತೆಯಾಗಿ ಅಲೆದನು.

ಚಿತ್ರಕೃಪೆ: Sankara Subramanian

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇವರ ಗಂಡು ಹೆಣ್ಣಿನ ಅತಿ ಸುಂದರವಾದ ಜೊತೆಯನ್ನು ಕಂಡು ಆ ಪ್ರದೇಶದ ಮಹಿಳೆಯರು ಮೋಹಪರವಶರಾದರು. ಇದನ್ನು ಗಮನಿಸುತ್ತಿದ್ದಂತೆ ಸಿದ್ಧರು ಭಿಕ್ಷುಕ ವೇಷದಲ್ಲಿದ್ದ ಶಿವನಿಗೆ ಪಾಠ ಕಲಿಸಲು ಯೋಚಿಸಿ ಹಾವುಗಳನ್ನು ಸೃಷ್ಟಿಸಿ ಅವನ ಮೇಲೆ ಹರಿಬಿಟ್ಟರು. ಶಿವನು ಆ ಹಾವುಗಳನ್ನು ಮಾಲೆಗಳ ಹಾಗೆ ತನ್ನ ಜಡೆಯಲ್ಲಿ ಸಿಕ್ಕಿಸಿಕೊಂಡನು.

ಚಿತ್ರಕೃಪೆ: Melanie Molitor

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ನಂತರ ಸಿದ್ಧರು ಕ್ರೂರವಾದ ಹುಲಿಯೊಂದನ್ನು ಸೃಷ್ಟಿಸಿ ಆಕ್ರಮಣ ಮಾಡಿದರು. ಆಗ ಶಿವನು ಆ ಹುಲಿಯನ್ನು ವಧಿಸಿ ಅದರ ಚರ್ಮವನ್ನೆ ತನ್ನ ಉಡುಪನ್ನಾಗಿ ಮಾಡಿಕೊಂಡನು.

ಚಿತ್ರಕೃಪೆ: Jean-Pierre Dalbéra

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಆಗಲೂ ಸೋಲೊಪ್ಪದ ಸಿದ್ಧರು ದೈತ್ಯ ಆನೆಯೊಂದನ್ನು ಸೃಷ್ಟಿಸಿದರು. ಶಿವನು ಆ ಆನೆಯನ್ನೆ ಸಂಹರಿಸಿ ಗಜಸಂಹಾರಮೂರ್ತಿ ಎಂಬ ಹೆಸರು ಪಡೆದನು. ಕೊನೆಗೆ ಆ ಎಲ್ಲ ಸಿದ್ಧರು ತಮ್ಮ ಶಕ್ತಿಗಳನ್ನು ಕ್ರೋಢಿಕರಿಸಿ ಮುಯಲಕನ್ ಎಂಬ ರಾಕ್ಷಸನನ್ನು ಸೃಷ್ಟಿಸಿದರು.

ಚಿತ್ರಕೃಪೆ: Nataraja

ಚಿದಂಬರಂನ ಚಿದಂಬರ ರಹಸ್ಯ:

ಚಿದಂಬರಂನ ಚಿದಂಬರ ರಹಸ್ಯ:

ಇದರಿಂದ ಕುಪಿತನಾದ ಶಿವ ಆ ರಾಕ್ಷಸನನ್ನು ಥಳಿಸುತ್ತ ಕೆಳಗೆ ಬಿಳಿಸಿ ಅವನ ಬೆನ್ನಿನ ಮೇಲೆ ಆನಂದ ತಾಂಡವ ನೃತ್ಯ ಮಾಡುತ್ತ ತನ್ನ ಮೂಲ ರೂಪವನ್ನು ತಳೆದನು. ಆಗ ಸಿದ್ಧರೆಲ್ಲರಿಗು ತಮ್ಮ ತಪ್ಪಿನ ಅರಿವಾಗಿ ಶಿವನಿಗೆ ಶರಣಾದರು ಹಾಗೂ ಅತಿಶಯ ಶಕ್ತಿಗಳಿಂದ ದೇವರನ್ನು ನಿಯಂತ್ರಿಸಲಾಗುವುದಿಲ್ಲ ಎಂಬ ಸತ್ಯವನ್ನು ಅರಿತುಕೊಂಡರು.

ಚಿತ್ರಕೃಪೆ: Mydhili Bayyapunedi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X