Search
  • Follow NativePlanet
Share
» »ಚೆನ್ನೈ ಯಿಂದ ಭಾರತದ ಸ್ಕಾಟ್ ಲ್ಯಾಂಡ್ ಎನಿಸಿರುವ ಕೊಡಗಿನ ಅನ್ವೇಷಣೆ

ಚೆನ್ನೈ ಯಿಂದ ಭಾರತದ ಸ್ಕಾಟ್ ಲ್ಯಾಂಡ್ ಎನಿಸಿರುವ ಕೊಡಗಿನ ಅನ್ವೇಷಣೆ

ಹಿಂದಿನ ಬ್ರಿಟಿಷ್ ಪ್ರಾಂತ್ಯವಾಗಿದ್ದ ಕೂರ್ಗ್, ನಂತರ ಕೊಡಗು ಎಂದು ಕರೆಯಲ್ಪಟ್ಟಿತು, ಇದು ಕರ್ನಾಟಕದ ಗ್ರಾಮೀಣ ಜಿಲ್ಲೆಯಾಗಿದೆ. ಉತ್ತರಕ್ಕೆ ಮಂಡೇರಿ ಕೋಟೆಯಿಂದ ಸುತ್ತುವರಿಯಲ್ಪಟ್ಟಿದ್ದು, ಗಜ ಗಾತ್ರದ ಆನೆಗಳ ಕಾವಲು ಕಾಯುವಂತಿರುವ ಪ್ರತಿಮೆಯ ಪ್ರವೇಶದ್ವಾರವು ನಿಮ್ಮನ್ನು ಸ್ವಾಗತಿಸುತ್ತದೆ, , ಗೋಥಿಕ್ ಶೈಲಿಯ ಚರ್ಚ್ ಮತ್ತು ಓಂಕಾರೇಶ್ವರ ಪವಿತ್ರ ದೇಗುಲ, ಕೂರ್ಗ್ ನಲ್ಲಿ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ. ಅಬ್ಬೇ ಜಲಪಾತದ ನೋಟವು ನಿಮ್ಮ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಅದರ ಜೊತೆಗೆ ರಾಜನ ಸಮಾಧಿಯು ಉತ್ತರ ಭಾಗದಲ್ಲಿದ್ದು, ನಿಮ್ಮನ್ನು ಐತಿಹಾಸಿಕ ಕಾಲಕ್ಕೆ ಕೊಂಡೊಯ್ಯುತ್ತದೆ.

ಕೂರ್ಗ್ ಗೆ ಭೇಟಿ ಕೊಡಲು ಉತ್ತಮವಾದ ಸಮಯ

ಕೂರ್ಗ್ ಗೆ ಭೇಟಿ ಕೊಡಲು ಉತ್ತಮವಾದ ಸಮಯ

ಡೀ ಪಟ್ಟಣವು ಹಸಿರುಮಯವಾಗಿ ಅರಳುವುದರಿಂದ ಮಾನ್ಸೂನ್ ಮಳೆಗಾಲವು ಭೇಟಿಗೆ ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಮಳೆಯು ಹೆಚ್ಚಾಗಿರುವುದರಿಂದ ಅತ್ಯಂತ ಈ ಸ್ಥಳದಲ್ಲಿ ಅದ್ಬುತವಾದ ಜಲಪಾತಗಳನ್ನು ಕಾಣಬಹುದಾಗಿದೆ. ಇದಲ್ಲದೆ ಈ ಸಮಯವು ಸಾಹಸಪ್ರಿಯರಿಗಾಗಿ ಸೂಕ್ತವಾಗಿದ್ದು, ರಿವರ್ ರಾಫ್ಟಿಂಗ್ ಅನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಸೂಕ್ತವಾದ ಸಮಯವಾಗಿದೆ.

ಚೆನ್ನೈ ನಿಂದ ಕೂರ್ಗ್ ಗೆ ತಲುಪುವುದು ಹೇಗೆ?

ಚೆನ್ನೈ ನಿಂದ ಕೂರ್ಗ್ ಗೆ ತಲುಪುವುದು ಹೇಗೆ?

ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಹಾಗೂ ಸಮುದ್ರ ಮಟ್ಟದಿಂದ 900ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಬೆಟ್ಟಗಳ ನಗರವು ಪಶ್ಚಿಮಘಟ್ಟಗಳ ಶ್ರೇಣಿಗಳಲ್ಲಿ ನೆಲೆಸಿದೆ. ಚೆನ್ನೈನಿಂದ ಕೂರ್ಗ್‌ಗೆ ಮೂರು ಪ್ರಾಥಮಿಕ ರಸ್ತೆ ಮಾರ್ಗಗಳಿವೆ.

ಮಾರ್ಗ 1 - ಚೆನ್ನೈ - ವೆಲ್ಲೂರು - ಹೊಸೂರು - ಮೈಸೂರು ಮೂಲಕ ರಾ.ಹೆ 48 ಮತ್ತುರಾ.ಹೆ 275ರ ಮೂಲಕ

ಮಾರ್ಗ 2 - ಚೆನ್ನೈ - ಚಿತ್ತೂರು - ಬೆಂಗಳೂರು - ಕೊಡಗು ರಾ.ಹೆ75ರ ಮೂಲಕ

ಮಾರ್ಗ 3 - ಚೆನ್ನೈ - ವಿಲ್ಲುಪುರಂ - ತಿರುಚ್ಚಿ - ಮೈಸೂರು ಮೂಲಕ ಕನ್ಯಾಕುಮಾರಿ ರಸ್ತೆಯಲ್ಲಿ

ಮಾರ್ಗ 1 ಮೊದಲ ಆದ್ಯತೆ ಕೊಡುವ ಮಾರ್ಗವಾಗಿದ್ದು ಸುಮಾರು 580ಕಿ.ಮೀಗಳಷ್ಟು ಸುಂದರವಾದ ಮತ್ತು ಐತಿಹಾಸಿಕ ಹಾಗು ವಾಣಿಜ್ಯವಾಗಿ ನೆಲೆಗೊಂಡ ಸ್ಥಳಗಳನ್ನು ಹೊಂದಿರುವ ಮಾರ್ಗಗಳ ಮೂಲಕ ಹಾದು ಹೋಗುತ್ತದೆ. ಈ ಮಾರ್ಗಗಳಲ್ಲಿಯ ನಿಲ್ದಾಣಗಳು ಸುಂದರವಾಗಿ ಕೆತ್ತಿದ ನಗರಗಳು ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಹಳ್ಳಿಗಳನ್ನು ಹೊಂದಿವೆ. ಅಲ್ಲದೆ ರಸ್ತೆಯು ಉತ್ತಮ ಸ್ಥಿತಿಯಲ್ಲಿರುವುದರಿಂದ, ದಾರಿಯುದ್ದಕ್ಕೂ ನಿಮಗೆ ಸುಗಮವಾಗಿ ಸವಾರಿಯ ಅನುಭವ ನೀಡುತ್ತದೆ.

ವೆಲ್ಲೂರು

ವೆಲ್ಲೂರು

ಮೊದಲು ಸಿಗುವ ತಾಣವೆಂದರೆ ಚೆನ್ನೈ ಯಿಂದ 140 ಕಿ.ಮೀ ಅಂತರದಲ್ಲಿರುವ ವೆಲ್ಲೂರು. ಇಲ್ಲಿಯ ಶ್ರೀಪುರಂ ಸುವರ್ಣ ದೇವಾಲಯವು ವಿಶ್ವದ ಅತೀ ದೊಡ್ಡ ಸುವರ್ಣ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ! ಈ ದೇವಾಲಯವು ಚಿನ್ನ ಹಾಳೆಯಿಂದ ಆವೃತವಾಗಿದ್ದು, ಪ್ರಾಚೀನ ವಾಸ್ತುಶಿಲ್ಪದ ಭವ್ಯತೆಯನ್ನು ಸಾರುವ ಒಂದು ಸುಂದರವಾದ ರಚನೆಯಾಗಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಧೈರ್ಯಶಾಲಿಗಳ ಬಗ್ಗೆ ಚಿತ್ರಿಸುವ ಹಾಗೂ 1857 ರ ದಂಗೆಯ ನೆನಪುಗಳನ್ನು ಹೊಂದಿರುವ ವೆಲ್ಲೂರು ಕೋಟೆಯನ್ನು ಸಹ ನೀವು ಭೇಟಿ ಮಾಡಬಹುದು.ನಿಮ್ಮ ವಾಹನವನ್ನು ನಿಲ್ಲಿಸಿ ಹೊರಗಿನ ಹುಲ್ಲುಹಾಸಿನಲ್ಲಿಯೂ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ.

ಹೊಸೂರು

ಹೊಸೂರು

ವೆಲ್ಲೂರಿನಿಂದ 174 ಕಿ.ಮೀ ಗಳಷ್ಟು ಮುಂದಕ್ಕೆ ಬಂದಲ್ಲಿ ಕೈಗಾರಿಕಾ ನಗರ ಹೊಸೂರು ಸಿಗುತ್ತದೆ. ಕೆಲವು ಉತ್ತಮ ಸ್ಥಳೀಯ ಆಹಾರ ಮಳಿಗೆಗಳು, ಇಂಧನ ತುಂಬಿಸುವ ಕೇಂದ್ರಗಳು, ಮತ್ತು ಎಲ್ಲವನ್ನೂ ಮಾರ್ಗ ಮಧ್ಯೆಯಲ್ಲಿ ಸರಬರಾಜು ಮಾಡುವ ವಾಣಿಜ್ಯ ಕೇಂದ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಹೊಸೂರನ್ನು ಭಾರತದ ಲಿಟಲ್ (ಸಣ್ಣ) ಇಂಗ್ಲೆಂಡ್ ಎಂದೂ ಕರೆಯುತ್ತಾರೆ. . 500 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಮುರುಗನ್ ದೇವಾಲಯವು ಸಮೀಪದಲ್ಲಿದ್ದು, ಇದನ್ನು ಮಾರ್ಗದಲ್ಲಿ ಪ್ರಯಾಣಿಸುತ್ತಾ ಭೇಟಿ ನೀಡಲೇಬೇಕು.

ರಾಮನಗರ

ರಾಮನಗರ

ಹೊಸೂರಿನಿಂದ 79ಕಿ.ಮೀ ದೂರದಲ್ಲಿ ರಾಮನಗರವಿದೆ. ಇಲ್ಲಿಯ ರಾಮದೇವರ ಬೆಟ್ಟವು ಬಹಳ ಹಳೆಯ ರಾಕ್ ಕ್ಲೈಂಬಿಂಗ್ ತಾಣವಾಗಿದೆ. ಅಲ್ಲದೆ ಪಕ್ಷಿವೀಕ್ಷಣೆಗೂ ಈ ಸ್ಥಳವು ಜನಪ್ರಿಯವಾಗಿದ್ದು ಇಲ್ಲಿ ಲಾಂಗ್ ಬಿಲ್ಡ್ ಮತ್ತು ಈಜಿಪ್ಟಿನ ರಣಹದ್ದುಗಳನ್ನು ಕೂಡಾ ಸಂರಕ್ಷಿಸಲಾಗಿದೆ. ವಿಶ್ವದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದಾದ ಸಾವಣದುರ್ಗ , ಗ್ರಾನೈಟ್, ಲ್ಯಾಟರೈಟ್ ಮತ್ತು ಗ್ನಿಸ್ ಬಂಡೆಗಳನ್ನು ಒಳಗೊಂಡ ಭವ್ಯವಾದ ನೋಟವನ್ನು ನೀಡುತ್ತದೆ.

ಮೈಸೂರು

ಮೈಸೂರು

ನೀವು ಮೈಸೂರಿನಲ್ಲಿ ತಂಗದಿದ್ದಲ್ಲಿ ನಿಮ್ಮ ಪ್ರವಾಸವು ಅಪೂರ್ಣವೇ ಸರಿ. ರಾಮನಗರದಿಂದ ಸುಮಾರು 98 ಕಿ.ಮೀ ದೂರದಲ್ಲಿರುವ ಒಡೆಯರ ಆಳ್ವಿಕೆಗೆ ಒಳಪಟ್ಟಿದ್ದ ಪ್ರಾಚೀನ ನಗರ ಮೈಸೂರು. ಮೈಸೂರು ಅರಮನೆಯು ಇದರ ಪರಿಪೂರ್ಣ ಚಿತ್ರಣ ನೀಡುತ್ತದೆ. ಮೈಸೂರಿನಲ್ಲಿಯ ಶ್ರೀಚಾಮುಂಡೇಶ್ವರಿ ದೇವಾಲಯದ ನೆಲೆಯಾದ ಚಾಮುಂಡಿಬೆಟ್ಟವು ಹೆಸರುವಾಸಿಯಾದುದಾಗಿದೆ. ಚಾಮುಂಡಿ ಬೆಟ್ಟಗಳು ಸುತ್ತಲೂ ದಟ್ಟವಾದ ಹಸಿರಿನಿಂದ ಆವೃತವಾಗಿರುವ ಒಂದು ಶಾಂತಿಯುತವಾದ ತಾಣವಾಗಿದೆ ಮತ್ತು ದೇವಾಲಯದಲ್ಲಿ ನೆಲೆಸಿರುವ ದೈವಿಕತೆಯ ಅನುಭವವು ಅಲ್ಪಾವಧಿಗೆ ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ. ಇದಲ್ಲದೆ ಟಿಪ್ಪು ಸುಲ್ತಾನನು ಮೈಸೂರನ್ನು ಆಳಿದ ಸಮಯದಲ್ಲಿ ಇದ್ದ ಶ್ರೀರಂಗಪಟ್ಟಣದ ಭವ್ಯ ಅರಮನೆಯನ್ನು ಭೇಟಿ ಕೊಡಲು ಮರೆಯದಿರಿ.

ಕೂರ್ಗ್‌ನಲ್ಲಿ ಭೇಟಿ ನೀಡುವ ಸ್ಥಳಗಳು

ಅಂತಿಮ ಗಮ್ಯಸ್ಥಾನ- ಕೂರ್ಗ್

ಅಂತಿಮ ಗಮ್ಯಸ್ಥಾನ- ಕೂರ್ಗ್

ಮೈಸೂರಿನಿಂದ ಸುಮಾರು 107 ಕಿ.ಮೀ ಅಂತರದಲ್ಲಿ ಕೂರ್ಗ್ ಇದೆ. ತಣ್ಣನೆಯ ಮಂಜು ನಿಮ್ಮ ಇಂದ್ರಿಯಗಳನ್ನು ಸೋಕಿದಾಗ ಅದರಿಂದ ನೀವು ತಕ್ಷಣ ಉಲ್ಲಾಸಭರಿತ ಅನುಭವವನ್ನು ಪಡೆಯುವಿರಿ. ಪಶ್ಚಿಮ ಘಟ್ಟದಲ್ಲಿ ನೆಲೆಸಿರುವ ಕೂರ್ಗ್ ತನ್ನ ನೈಸರ್ಗಿಕ ಇತಿಹಾಸವನ್ನು ಚೆನ್ನಾಗಿ ಕಾಪಾಡಿಕೊಂಡಿದೆ ಮತ್ತು ಸುತ್ತಲೂ ಕಂಡುಬರುವ ಸುವಾಸನೆಯ ಹಸಿರು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಿಮ್ಮ ಆಗಮನದ ಸಮಯದಲ್ಲಿ, ಕೂರ್ಗ್‌ನ ಸ್ಥಳೀಯ ಖಾದ್ಯವಾದ ಬೇಯಿಸಿದ ಅಕ್ಕಿ ಚೆಂಡುಗಳು ಮತ್ತು ಹಂದಿಮಾಂಸವನ್ನು ಗ್ರೇವಿಯೊಂದಿಗೆ ಕೊಡಲಾಗುವ ಕಡುಂಬುಟ್ಟು ಮತ್ತು ಪಾಂಡಿ ಕರಿ ಇವುಗಳನ್ನು ಸವಿಯಲು ಮರೆಯದಿರಿ.

ರಾಜಾ'ಸ್ ಸೀಟ್

ರಾಜಾ'ಸ್ ಸೀಟ್

ಮಡಿಕೇರಿ ಪಟ್ಟಣದಲ್ಲಿರುವ ರಾಜಾಸ್ ಸೀಟ್ ಅಂದರೆ ರಾಜನ ಆಸನವೆಂದು ಅರ್ಥೈಸುತ್ತದೆ. ಇದು ರಾಜರು ಸೂರ್ಯಾಸ್ತಗಳನ್ನು ವೀಕ್ಷಿಸಲು ತಮ್ಮ ನೆಚ್ಚಿನ ಸಂಗಾತಿಗಳೊಂದಿಗೆ ಕುಳಿತುಕೊಳ್ಳುತ್ತಿದ್ದ ಸ್ಥಳವಾಗಿತ್ತು. ಎತ್ತರದ ಬೆಟ್ಟಗಳು ಮತ್ತು ಇಲ್ಲಿ ಮಂತ್ರಮುಗ್ದಗೊಳಿಸುವ ನೋಟಗಳು ಮತ್ತು ಹಸಿರು ಕಣಿವೆಗಳು ಇವೆಲ್ಲವನ್ನೂ ಹೊಂದಿರುವ ಈ ಸ್ಥಳವು ದಕ್ಷಿಣ ಭಾರತದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದೆನಿಸಿದೆ. ರಾಜಾಸ್ ಸೀಟ್ ನ ಸುತ್ತಲೂ ಸುಂದರವಾದ ಉದ್ಯಾನವನವಿದೆ.

ಗದ್ದಿಗೆ

ಗದ್ದಿಗೆ

ದೊಡ್ಡ ವೀರ ರಾಜೇಂದ್ರ ಮತ್ತು ಲಿಂಗ ರಾಜೇಂದ್ರ ಇವರುಗಳ ಸಮಾಧಿಗಳನ್ನು ಹೊಂದಿರುವ ಐತಿಹಾಸಿಕ ಸ್ಮಾರಕ ಗದ್ದಿಗೆ. ಈ ಸ್ಥಳದಿಂದ ನಗರದ ಸಂಪೂರ್ಣ ನೋಟವನ್ನು ನೋಡಬಹುದಾಗಿದೆ. ಈ ಸಮಾಧಿಗಳು ಗೋಪುರಗಳು ಮತ್ತು ಕೇಂದ್ರ ಗುಮ್ಮಟಗಳಿಂದ ಕೂಡಿದ್ದು ಇವುಗಳು ಮುಹಮ್ಮದನ್ ಶೈಲಿಯಲ್ಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿಯ ಕಿಟಕಿ ಕಂಬಿಗಳು ಹಿತ್ತಾಳೆಯಿಂದ ಕೂಡಿದ್ದು ಸುಂದರವಾದ ಕೆತ್ತನೆಗಳಿಂದ ಕೂಡಿದೆ.

ಓಂಕಾರೇಶ್ವರ ದೇವಾಲಯ

ಓಂಕಾರೇಶ್ವರ ದೇವಾಲಯ

ಮಧ್ಯಕಾಲೀನ ಶೈಲಿಯ ವಾಸ್ತುಶಿಲ್ಪ ಕಟ್ಟಡವನ್ನು ಎರಡನೇ ಲಿಂಗ ರಾಜೇಂದ್ರ ನಿರ್ಮಿಸಿದನು. ಇದು ಕೇಂದ್ರ ಗುಮ್ಮಟ ಮತ್ತು ಚತುರ್ಭುಜ ಮೂಲೆಗಳನ್ನು ಗೋಪುರಗಳೊಂದಿಗೆ ಹೊಂದಿದೆ. ದಂತಕಥೆಯ ಪ್ರಕಾರ, ರಾಜನು ಧರ್ಮನಿಷ್ಠ ಧಾರ್ಮಿಕ ಪೂಜಾರಿಯನ್ನು ಕೊಂದುಹಾಕಿದನು ಮತ್ತು ಬ್ರಾಹ್ಮಣನ ಆತ್ಮವು ಇವನನ್ನು ಕಾಡುತ್ತಿತ್ತು. ಇದಕ್ಕಾಗಿ ರಾಜನು ತನ್ನ ದಿವಾನ ಸಲಹೆಯ ಮೇರೆಗೆ ಬ್ರಾಹ್ಮಣನ ಆತ್ಮವನ್ನು ಸಮಾಧಾನಪಡಿಸಲು ದೇವಾಲಯವನ್ನು ನಿರ್ಮಿಸಿದನು. ದೇವಾಲಯದ ಪ್ರವೇಶದ್ವಾರದಲ್ಲಿ ತಾಮ್ರದ ಕೆತ್ತನೆ ಇದ್ದು ಅದು ದಂತಕಥೆಯನ್ನು ಸಾರುತ್ತದೆ.

ಅಬ್ಬೇ ಜಲಪಾತ

ಅಬ್ಬೇ ಜಲಪಾತ

ಅಬ್ಬೆ ಫಾಲ್ಸ್ ಕೂರ್ಗ್ ನ ಅತ್ಯಂತ ಭವ್ಯವಾದ ಜಲಪಾತವಾಗಿದ್ದು, ಬೆಟ್ಟಗಳ ಕಡಿದಾದ ಇಳಿಜಾರುಗಳಲ್ಲಿ ಕಾವೇರಿ ನದಿಯ ನೀರು ಇದರ ಮೂಲಕ ಹರಿಯುತ್ತದೆ.

ತಲಕಾವೇರಿ ಮತ್ತು ಭಾಗಮಂಡಲ

ತಲಕಾವೇರಿ ಮತ್ತು ಭಾಗಮಂಡಲ

ಕಾವೇರಿ ನದಿಯ ಜನ್ಮಸ್ಥಳವಾದ ತಲಕಾವೇರಿಯು ಬ್ರಹ್ಮಗಿರಿ ಬೆಟ್ಟಗಳ ಇಳಿಜಾರಿನಲ್ಲಿ ನೆಲೆಸಿದೆ. ತಲಕಾವೇರಿಯು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಇದು ಪ್ರಸಿದ್ಧ ತೀರ್ಥಯಾತ್ರೆಯ ಕೇಂದ್ರವಾಗಿದೆ.

ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ

ನಿಸರ್ಗಧಾಮ ರಾಜ್ಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಒಂದು ಸುಂದರ ದ್ವೀಪವಾಗಿದೆ. 64 ಎಕರೆ ವಿಸ್ತೀರ್ಣದ ಈ ದ್ವೀಪವು ಕಾವೇರಿ ನದಿಯಿಂದ ಆವೃತವಾಗಿದೆ ಮತ್ತು ನೇತಾಡುವ ಸೇತುವೆಯ ಮೂಲಕ ನಡೆದು ಪ್ರವೇಶಿಸಬಹುದಾಗಿದೆ. ಈ ಸ್ಥಳವು ಸುಂದರವಾದ ಪರಿಸರವನ್ನು ತನ್ನ ಸುತ್ತಮುತ್ತಲೂ ಹೊಂದಿದ್ದು, ಇವುಗಳು ಶ್ರೀಗಂಧದ ಮರ, ತೇಗ ಮತ್ತು ಬಿದಿರಿನ ತೋಪುಗಳ ದಪ್ಪ ಎಲೆಗಳಿಂದ ಕೂಡಿದೆ. ವಸತಿಗಾಗಿ ಸುಂದರವಾದ ನದಿಯ ಪಕ್ಕದ ಕುಟೀರಗಳು ಲಭ್ಯವಿದೆ ಮತ್ತು ಇತರ ಆಕರ್ಷಣೆಗಳಲ್ಲಿ ಮಕ್ಕಳ ಉದ್ಯಾನವನ, ಆರ್ಕಿಡೇರಿಯಂ ಮತ್ತು ಆನೆ ಸವಾರಿಗಳು ಸೇರಿವೆ.

ಬೈಲಕುಪ್ಪೆ

ಬೈಲಕುಪ್ಪೆ

ಬೈಲಕುಪ್ಪೆಯು ಟಿಬೇಟಿಯನ್ನರ ವಸಾಹತುವಾಗಿದೆ. ಇದು ನಾಮಡ್ರೊಲಿಂಗ್ ಜೊತೆಗೆ ಸೆರಾ ಮೇ ಮತ್ತು ಸೆರಾ ಜೆ ಹಾಗೂ ಪ್ರಮುಖ ಗೊಂಪಾದಂತಹ ಹಲವಾರು ಮಠಗಳನ್ನು ಹೊಂದಿದೆ. ತಶಿಲ್‌ಹುನ್‌ಪೋ ಮಠವು ಪಂಚೆನ್ ಲಾಮಾಗಳ ಸ್ಥಾನವಾಗಿದೆ. ಈ ಮಠಗಳು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಬುದ್ಧನ ಪ್ರತಿಮೆಗಳು ಆಳವಾದ ಧ್ಯಾನದ ತಾಣಗಳಾಗಿವೆ ಮತ್ತು ಅವುಗಳ ಕಟ್ಟಡ ಶೈಲಿಗಳಲ್ಲಿ ಅನನ್ಯತೆಯನ್ನು ಹೊಂದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more