Search
  • Follow NativePlanet
Share
» »ಫ್ರೆಂಡ್ಸ್‌ಜೊತೆ ಕಾಲ ಕಳೆಯೋಕೆ ಚೀಪ್ & ಬೆಸ್ಟ್ ಹ್ಯಾಂಗ್‌ಔಟ್ ಸ್ಪಾಟ್

ಫ್ರೆಂಡ್ಸ್‌ಜೊತೆ ಕಾಲ ಕಳೆಯೋಕೆ ಚೀಪ್ & ಬೆಸ್ಟ್ ಹ್ಯಾಂಗ್‌ಔಟ್ ಸ್ಪಾಟ್

ಫ್ರೆಂಡ್ಸ್ ಜೊತೆ ಹ್ಯಾಂಗ್ಔಟ್ ಮಾಡ್ಲಿಕ್ಕೆ ಚೀಪ್ ಆ್ಯಂಡ್ ಬೆಸ್ಟ್ ಸ್ಥಳವನ್ನು ಹುಡುಕುತ್ತಿದ್ದೀರಾ ? ಫ್ರೆಂಡ್ಸ್ ಜೊತೆ ಮಜಾನೂ ಆಗಬೇಕು ಖರ್ಚೂ ಕಡಿಮೆ ಆಗಬೇಕು. ಹಾಗಾದ್ರೆ ಇಲ್ಲಿದೆ ಕೆಲವು ಇಂಟ್ರಸ್ಟಿಂಗ್ ಆಪ್ಷನ್ ...

ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ದಿ ಹಮ್ಮಿಂಗ್ ಟ್ರೀ

ದಿ ಹಮ್ಮಿಂಗ್ ಟ್ರೀ

PC: youtube

ಓಪನ್ ಮೈಕ್ ಇಷ್ಟಪಡುವವರಿಗೆ ದಿ ಹಮ್ಮಿಂಗ್ ಟ್ರಿ ಬೆಸ್ಟ್ ಆಪ್ಷನ್ ಆಗಿದೆ, ಇಂದಿರಾನಗರದಲ್ಲಿರುವ ಓಪನ್ ಮೈಕ್‌ಗೆ ಯಾವುದೇ ಎಂಟ್ರೀ ಫಿ ಇರೋದಿಲ್ಲ. ಫರ್‌ಫಾಮೆನ್ಸ್ ನಡೆಯುತ್ತಾ ಇರುವಾಗ ಫ್ರೆಂಡ್ಸ್‌ ಜೊತೆ ಹ್ಯಾಂಗ್‌ಔಟ್ ಮಾಡಲಿಕ್ಕೆ ಸೂಕ್ತ ಸ್ಥಳವಾಗಿದೆ. ಓಪನ್ ಮೈಕ್‌ನಲ್ಲಿ ಫರ್‌ಪಾಮೆನ್ಸ್ ಆಗುತ್ತಿರುವಾಗ ಡ್ಯಾನ್ಸ್ ಕೂಡಾ ಮಾಡುತ್ತಾರೆ.

ರಾಸ್ತಾ ಕೆಫೆ

ರಾಸ್ತಾ ಕೆಫೆ

PC: youtube

ನೀವು ಲಾಂಗ್ ಡ್ರೈವ್‌ನ್ನು ಇಷ್ಟಪಡುತ್ತೀರಾದರೆ. ಹಾಗೂ ಲಾಂಗ್‌ಡ್ರೈವ್ ಮುಗಿದಾದಮೇಲೆ ಟೇಸ್ಟಿ ಊಟ ಮಾಡಬೇಕೆಂಬ ಮನಸಿದ್ದರೆ ರಾಸ್ತಾ ಕೆಫೆಗೆ ಹೋಗಿ. ಮೈಸೂರು ರೋಡ್‌ನಲ್ಲಿರುವ ಈ ಕೆಫೆಯು ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಕೆಫೆ ದಿನದಲ್ಲಿ 20 ಗಂಟೆ ತೆರೆದಿರುತ್ತದೆ.

ಅಮೀಬಾ ಬೌಲಿಂಗ್ ಅಲ್ಲೆ

ಅಮೀಬಾ ಬೌಲಿಂಗ್ ಅಲ್ಲೆ

PC: youtube

ಇದು ಬೆಂಗಳೂರಿಗೆ ಹೊಸತೇನಲ್ಲ. ಬೆಂಗಳೂರಿನ ಮೊತ್ತ ಮೊದಲ ಬೌಲಿಂಗ್ ಅಲ್ಲೆ ಇದಾಗಿದೆ. ಚರ್ಚ್ ಸ್ಟ್ರೀಟ್ ಹಾಗೂ ವೈಟ್‌ಫೀಲ್ಡ್‌ನಲ್ಲಿದೆ. ನೀವು ಬೌಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೆ, ಫ್ರೆಂಡ್ಸ್‌ ಗ್ರೂಪ್ ಜೊತೆ ಬೌಲಿಂಗ್ ಮಾಡೋದರಲ್ಲಿ ಮಜಾ ಇರುತ್ತದೆ.

ಕಮರ್ಷಿಯಲ್ ಸ್ಟ್ರೀಟ್

ಕಮರ್ಷಿಯಲ್ ಸ್ಟ್ರೀಟ್

PC:Saad Faruque
ಬೆಂಗಳೂರಿನಲ್ಲಿರುವ ಬ್ಯುಸಿಯಾಗಿರುವ ನಗರಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ ಕೂಡಾ ಒಂದು, ಇಲ್ಲಿ ರಸ್ತೆ ಬದಿಯಲ್ಲಿ ನೂರಾರು ಅಂಗಡಿಗಳಿವೆ, ಬಟ್ಟೆ, ಬ್ಯಾಗ್, ಶೂ, ಆರ್ಟಿಫಿಶಿಯಲ್ ಆಭರಣಗಳನ್ನು ಮಾರಾಟಮಾಡುತ್ತಾರೆ. ಫ್ರೆಂಡ್ಸ್ ಜೊತೆ ಶಾಪಿಂಗ್ ಮಾಡೋದಾದರೆ ಇದು ಬೆಸ್ಟ್ ಆಯ್ಕೆಯಾಗಿದೆ.

ಡ್ಯು ಆರ್ಟ್ ಕೆಫೆ

ಡ್ಯು ಆರ್ಟ್ ಕೆಫೆ

PC: flickr
ಆಹಾರ ಪ್ರೀಯರಿಗೆ ಬಲು ಇಷ್ಟವಾದ ಸ್ಪಾಟ್ ಇದಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಇರುವ ಈ ಕೆಫೆಯಲ್ಲಿ ನೀವು ಲಂಚ್ ಡೇಟ್ ಮಾಡಬಹುದು. ನಿಮ್ಮ ಕಾಲೇಜ್ ಫ್ರೆಂಡ್ಸ್‌ಗಳನ್ನು ಭೇಟಿಯಾಗಬಹುದು. ಚಾಕಲೇಟ್ ಕೇಕ್ ವಿದ್ ಎಕ್ಸ್‌ಟ್ರಾ ಚಾಕೋಲೆಟ್ ಸಾಸ್ ಇಲ್ಲಿನ ಬೆಸ್ಟ್ ಮೆನುವಾಗಿದೆ. ಕೆಫೆ ಒಳಗೆ ವಿಭಿನ್ನ ಪೈಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X