Search
  • Follow NativePlanet
Share
» »ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ಭಕ್ತರು ದೇವಸ್ಥಾನಕ್ಕೆ ಹೋದರೂ, ಹೋಗಲಿಲ್ಲದಿದ್ದರೂ ಅವರ ಗೋತ್ರ, ನಕ್ಷತ್ರಕ್ಕೆ ಪೂಜೆ ಮಾಡುವ ದೇವಸ್ಥಾನ ತಮಿಳುನಾಡಿನಲ್ಲಿದೆ. ಅಷ್ಟೇ ಅಲ್ಲದೆ ಪ್ರಪಂಚದ ಶಾಂತಿಗಾಗಿ ಪ್ರತಿದಿನ ಹೋಮ, ಯಾಗಗಳನ್ನೂ ನಡೆಸಲಾಗುತ್ತದೆ. ಜ್ಯೋತೀಷ್ಯ ಶಾಸ್ತ್ರದ ಪ್ರಕಾರ, ಮನುಷ್ಯರು 27 ರಾಶಿಗಳಲ್ಲಿ ಹುಟ್ಟಿರುತ್ತಾರೆ. ಪ್ರತಿಯೊಬ್ಬರು 12 ರಾಶಿಗಳು, 12 ಲಗ್ನಗಳಲ್ಲಿ ಜನಿಸಿದವರಾಗಿದ್ದಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: Youtube

ತಮಿಳುನಾಡಿನ ರತ್ನಮಂಗಲದಲ್ಲಿನ ವಂದಲೂರು ಎನ್ನುವಲ್ಲಿ ಶ್ರೀ ಲಕ್ಷ್ಮೀ ಕುಬೆರನ್ ದೇವಾಲಯದ ಸಮೀಪದಲ್ಲಿ ಇರುವ ಚಕ್ರಕಾಳಿ ದೇವಾಲಯವು ವಿಶಾಲವಾಗಿದ್ದು, ದೇವಿಗೆ ಅಪಾರ ಶಕ್ತಿ ಇದೆ ಎನ್ನಲಾಗುತ್ತದೆ.

ಪಟೇಲ್‌ರ ಪ್ರತಿಮೆ ನೋಡಲು 11 ದಿನದಲ್ಲಿ ಎಷ್ಟು ಜನರು ಬಂದ್ರು ಗೊತ್ತಾ?

ಎಲ್ಲಾ ನಕ್ಷತ್ರಗಳಿಗೆ ಪೂಜೆ ಮಾಡ್ತಾರೆ

ಎಲ್ಲಾ ನಕ್ಷತ್ರಗಳಿಗೆ ಪೂಜೆ ಮಾಡ್ತಾರೆ

PC: Youtube

ದೇವಿಯು ಪಂಚಭೂತಗಳನ್ನು ತನ್ನ ತ್ರಿಶೂಲದಲ್ಲಿ ಇರಿಸಿಕೊಂಡಿದ್ದಾಳೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ಪ್ರತಿದಿನ ಮುಂಜಾನೆ ಲಲಿತ ಸಹಸ್ರನಾಮದ ನಂತರ 27 ನಕ್ಷತ್ರಗಳು, 12 ರಾಶಿ, 12 ಲಗ್ನಗಳಿಗೆ ಪ್ರತ್ಯೇಕ ಹೆಸರನ್ನು ಕರೆದು ಪೂಜೆ ಮಾಡ್ತಾರೆ.

 ಕುಂಕುಮ ಪ್ರಸಾದ ನೀಡುತ್ತಾರೆ

ಕುಂಕುಮ ಪ್ರಸಾದ ನೀಡುತ್ತಾರೆ

PC: Youtube

ಹಾಗಾಗಿ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ನಕ್ಷತ್ರ, ರಾಶಿಗೂ ಪೂಜೆ ನಡೆಸಲಾಗುತ್ತದೆ. ಹಾಗೆಯೇ ಸಾಯಂಕಾಲ ದಕ್ಷಿಣ ಕಾಶಿ ಸಹಸ್ರನಾಮ ಪೂಜೆ ಮಾಡ್ತಾರೆ. ಆಗ ಕುಂಕುಮವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ಪೂಜೆಯ ಶಕ್ತಿ ದೊರೆಯುತ್ತದೆ

ಪೂಜೆಯ ಶಕ್ತಿ ದೊರೆಯುತ್ತದೆ

PC: Youtube

ಹಾಗೇ ಪೂಜೆ ಮಾಡಿದ ನಂತರ ನೀಡಲಾಗುವ ಕುಂಕುಮವನ್ನು ಹಚ್ಚಿಕೊಂಡ ನಂತರ ಪೂಜೆ ಮಾಡಿದ ಶಕ್ತಿಯು ನಮಗೆ ಬರುತ್ತದೆ ಎನ್ನಲಾಗುತ್ತದೆ. ಇಲ್ಲಿ ದೇವಸ್ಥಾನದಲ್ಲಿ ಭಕ್ತರು ಇದ್ದರೂ ಇಲ್ಲದಿದ್ದರೂ ಗಂಟೆಗೊಮ್ಮೆ ಆರತಿ ಮಾಡ್ತಾರೆ.

ಮಹಾ ಆರತಿ

ಮಹಾ ಆರತಿ

PC: Youtube

ಮುಖ್ಯವಾಗಿ ಬೆಳಗ್ಗೆ ಅಲಂಕಾರ ಮಾಡಿ 8 ಗಂಟೆಗೆ ಮಹಾ ದೀಪಾರಾಧನೆ ಮಾಡಲಾಗುತ್ತದೆ. ಸಂಜೆ 6 ಗಂಟೆಗೆ ಮಹಾಆರತಿ ನಡೆಸಲಾಗುತ್ತದೆ. ಆಗ ತುಂಬಾ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಚಕ್ರಕಾಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ.

ತಲುಪುವುದು ಹೇಗೆ?

PC: Youtube

ಚೆನ್ನೈನಿಂದ ರೈಲಿನಲ್ಲಿನಲ್ಲಿ ವಂದಲೂರು ತಲುಪಬಹುದು. ಅಲ್ಲಿಂದ ಕಲಾಬಾಕಂನಿಂದ ನಾಲ್ಕು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ವಂದಲೂರಿನಿಂದ ಸಾಕಷ್ಟು ಆಟೋಗಳು ಸಿಗುತ್ತವೆ.

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X