Search
  • Follow NativePlanet
Share
» »ಪತ್ನಿಯ ಶಾಪದಿಂದಾಗಿ ಬ್ರಹ್ಮದೇವನಿಗೆ ಹೆಚ್ಚು ಮಂದಿರಗಳೇ ಇಲ್ಲವಂತೆ !

ಪತ್ನಿಯ ಶಾಪದಿಂದಾಗಿ ಬ್ರಹ್ಮದೇವನಿಗೆ ಹೆಚ್ಚು ಮಂದಿರಗಳೇ ಇಲ್ಲವಂತೆ !

ಸೃಷ್ಠಿಕರ್ತರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರರನ್ನು ಹಿಂದೂ ಧರ್ಮದಲ್ಲಿ ತ್ರಿ ಮೂರ್ತಿಗಳು ಎಂದು ಕರೆಯಲಾಗುತ್ತದೆ. ಇವರನ್ನು ಸರ್ವಶ್ರೇಷ್ಠರೆಂದು ಹೇಳಲಾಳಗುತ್ತದೆ. ಆದರೂ ಶಿವ ಹಾಗೂ ವಿಷ್ಣುವಿನ ಪೂಜೆಯನ್ನೇ ಮೊದಲನೆಯದಾಗಿ ಮಾಡುತ್ತಾರೆ. ಬ್ರಹ್ಮನ ಪೂಜೆಯನ್ನು ಮಾಡಲಾಗುವುದಿಲ್ಲ. ಹಾಗೆ ನೋಡಿದ್ರೆ ಭಾರತದಲ್ಲಿ ಅನೇಕ ಬ್ರಹ್ಮದೇವನ ಮಂದಿರಗಳಿವೆ. ಆದರೆ ಪುಷ್ಕರದಲ್ಲಿರುವ ಬ್ರಹ್ಮದೇವನ ಮಂದಿರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಬ್ರಹ್ಮ ದೇವನ ಪತ್ನಿ ಸಾವಿತ್ರಿ ಬ್ರಹ್ಮದೇವನಿಗೆ ಶಾಪ ನೀಡಿದ್ದರಂತೆ. ಹಾಗಾಗಿ ದೇಶದಲ್ಲಿ ಕೇವಲ ಒಂದೇ ಒಂದು ಬ್ರಹ್ಮ ಮಂದಿರ ಪ್ರಸಿದ್ಧವಾಗಿರುವುದು. ಅದು ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ಮಂದಿರ.

ದೇವಿ ಸಾವಿತ್ರಿ ಬ್ರಹ್ಮದೇವನಿಗೆ ಶಾಪ ಯಾಕಿತ್ತಳು?

ದೇವಿ ಸಾವಿತ್ರಿ ಬ್ರಹ್ಮದೇವನಿಗೆ ಶಾಪ ಯಾಕಿತ್ತಳು?

Pc:Vberger

ಹಿಂದೂ ಕಥೆಗಳ ಪ್ರಕಾರ, ಬ್ರಹ್ಮದೇವನಿಗೆ ಪುಷ್ಕರ್ ದಲ್ಲಿ ಯಜ್ಞ ಮಾಬೇಕಿರುತ್ತದೆ. ಯಜ್ಞವನ್ನು ಪೂರ್ಣಗೊಳಿಸಲು ಬ್ರಹ್ಮದೇವನ ಜೊತೆ ಪತ್ನಿ ಇರುವುದು ಅವಶ್ಯವಾಗಿತ್ತು. ಆದರೆ ದೇವಿ ಸಾವಿತ್ರಿ ಸರಿಯಾದ ಸಮಯಕ್ಕೆ ಭಾರದಿದ್ದ ಕಾರಣ ಬ್ರಹ್ಮ ದೇವ ಗುರ್ಜರ ಸಮುದಾಯದ ಕನ್ಯೆ ಗಾಯತ್ರಿಯನ್ನು ವಿವಾಹವಾಗಿ ಯಜ್ಞವನ್ನು ಪ್ರಾರಂಭಿಸಿದರು. ಆಗಲೇ ಸಾವಿತ್ರಿ ಅಲ್ಲಿಗೆ ತಲುಪಿದರು. ಬ್ರಹ್ಮದೇವನ ಪಕ್ಕದಲ್ಲಿ ಬೇರೊಂದು ಸ್ತ್ರೀ ಕೂತಿರುವುದನ್ನು ನೋಡಿ ಕ್ರೋದಿತಳಾದಳು. ಇನ್ನುಮುಂದೆ ಬ್ರಹ್ಮ ದೇವನ ಪೂಜೆ ಪುಷ್ಕರದಲ್ಲಿ ಬಿಟ್ಟು ಬೇರೆಲ್ಲೂ ನಡೆಯೋದಿಲ್ಲ ಎಂದು ಶಾಪವನ್ನಿತ್ತಳು.

 4 ಮುಖದ ಬ್ರಹ್ಮದೇವನ ವಿಗ್ರಹ

4 ಮುಖದ ಬ್ರಹ್ಮದೇವನ ವಿಗ್ರಹ

Pc:V.Vasant

ಈ ಮಂದಿರವನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು. ಈ ಮಂದಿರದಲ್ಲಿ ತಾವರೆ ಮೇಲೆ ಕೂತಿರುವ 4 ಮುಖದ ಬ್ರಹ್ಮದೇವನ ವಿಗ್ರಹವಿದೆ. ಈ ಮೂರ್ತಿಯ ಎಡ ಬದಿ ಗಾಯತ್ರಿ ಹಾಗೂ ಬಲ ಬದಿ ಸಾವಿತ್ರಿ ದೇವಿಯ ವಿಗ್ರಹವಿದೆ.

ಪುಷ್ಕರದ ಬ್ರಹ್ಮಮಂದಿರವೇ ಫೇಮಸ್

ಪುಷ್ಕರದ ಬ್ರಹ್ಮಮಂದಿರವೇ ಫೇಮಸ್

ಇತರ ದೇವಿ, ದೇವತೆಗಳತೆ ಬ್ರಹ್ಮದೇವನ ಮಂದಿರ ಭಾರತದಲ್ಲಿ ಕಡಿಮೆ ಇದೆ. ಭಾರತದಲ್ಲಿ ಪ್ರಸತುತ ಇರುವ ಬ್ರಹ್ಮದೇವನ ಮಂದಿರಗಳಲ್ಲಿ ಪುಷ್ಕರದ ಬ್ರಹ್ಮಮಂದಿರವೇ ಫೇಮಸ್. ಪುಷ್ಕರದಲ್ಲಿರುವ ಈ ಮಂದಿರ ಪ್ರತಿವರ್ಷ ಅನೇಕ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಮೊತ್ತ ಮೊದಲನೆಯದಾಗಿ ಬ್ರಹ್ಮದೇವನಿಗಾಗಿ ಮಂದಿರ ಸ್ಥಾಪನೆಯಾದ ಸ್ಥಳವೆಂದರೆ ಅದು ಪುಷ್ಕರ್. ಈ ಮಂದಿರವನ್ನು ಸಂಗಮರ್ಮರ್ ನಿಂದ ನಿರ್ಮಿಸಲಾಗಿದೆ. ಸುಮಾರು 2000 ವರ್ಷಗಳ ಹಿಂದೆ ಈ ಮಂದಿರ ನಿರ್ಮಾಣವಾಗಿದೆ. ಆದರೆ ಮಂದಿರದಲ್ಲಿರುವ ವಾಸ್ತುಕಲೆಯ ಪ್ರಕಾರ ಈ ಮಂದಿರ 14ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.

ಮಂದಿರಗಳ ನಗರ ಪುಷ್ಕರ್

ಮಂದಿರಗಳ ನಗರ ಪುಷ್ಕರ್

ಪುಷ್ಕರ್‌ನ್ನು ಮಂದಿರಗಳ ನಗರ ಎನ್ನಲಾಗುತ್ತಿದೆ. ಆದರೆ ಔರಂಗಜೇಬನ ಶಾಸನದ ಕಾಲದಲ್ಲಿ ಇಲ್ಲಿದ್ದ ಹಿಂದೂ ಮಂದಿರಗಳನ್ನು ನಷ್ಟಪಡಿಸಲಾಗಿತ್ತು. ಆದರೆ ಇಂದಿಗೂ ಪುಷ್ಕರ್ ನದಿಯ ದಡದಲ್ಲಿ ಬ್ರಹ್ಮ ಮಂದಿರ ಹಾಗೂ ಇನ್ನಿತರ ಮಂದಿರಗಳನ್ನು ಕಾಣಬಹುದು.

ಪುಷ್ಕರ್ ಸರೋವರ

ಪುಷ್ಕರ್ ಸರೋವರ

Pc:wikimedia

ಈ ಮಂದಿರಕ್ಕೂ ಪುಷ್ಕರ್ ನದಿಗೂ ಸಂಬಂಧವಿದೆ. ಪುಷ್ಕರ ನದಿ ಬ್ರಹ್ಮದೇವನ ತಾವರೆಯಿಂದ ಬಿದ್ದಿದ್ದ ಒಂದು ದಳದಿಂದ ಆಗಿದ್ದು ಎಂದು ಹೇಳಲಾಗುತ್ತದೆ.

ದೇವರ ದರ್ಶನ ಪಡೆಯುವವರು ನದಿಯಲ್ಲಿ ಮುಳುಗಿ ಬರಬೇಕು

ದೇವರ ದರ್ಶನ ಪಡೆಯುವವರು ನದಿಯಲ್ಲಿ ಮುಳುಗಿ ಬರಬೇಕು

Pc:Peretz Partensky

ಪ್ರಾಚೀನ ಹಿಂದೂ ಶಾಸ್ತ್ರಗಳಲ್ಲಿ ಪುಷ್ಕರ್ ನದಿಯನ್ನು ತೀರ್ಥ ರಾಜ ಎಂದು ವರ್ಣೀಸಲಾಗತ್ತು. ಪುಷ್ಕರಕ್ಕೆ ಬ್ರಹ್ಮ ದೇವರ ಆಶಿರ್ವಾದವನ್ನು ಪಡೆಯ ಬಯಸುವವರು ಮೊದಲು ಪುಷ್ಕರ್ ನದಿಯಲ್ಲಿ ಮುಳುಗಿ ಏಳಬೇಕು. ನಂತರವೇ ದೇವರ ದರ್ಶನ ಪಡೆಯುತ್ತಾರೆ ಭಕ್ತರು.

ಭಾರತದಲ್ಲಿ ಬ್ರಹ್ಮ ಮಂದಿರಗಳೇ ಕಡಿಮೆ

ಭಾರತದಲ್ಲಿ ಬ್ರಹ್ಮ ಮಂದಿರಗಳೇ ಕಡಿಮೆ

Pc:Ling Wang Marina

ಬ್ರಹ್ಮಮಂದಿರಗಳಲ್ಲಿ ಒಂದು ಬ್ರಹ್ಮ ಮಂದಿರದಲ್ಲಿ ಬ್ರಹ್ಮನ ಪ್ರತಿಮೆಯ ಬಳಿ ಗಾಯತ್ರಿ ದೇವಿಯ ಪ್ರತಿಮೆಯನ್ನು ಬ್ರಹ್ಮನ ಪತ್ನಿಯ ರೂಪದಲ್ಲಿ ಸ್ಥಾಪಿಸಲಾಗಿದೆ. ಆದರೆ ಸರಸ್ವತಿ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಲಾಗಿಲ್ಲ.

 ಕಾರ್ತಿಕ ಹುಣ್ನಿಯ ದಿನ ಜಾತ್ರೆ ನಡೆಯುತ್ತದೆ

ಕಾರ್ತಿಕ ಹುಣ್ನಿಯ ದಿನ ಜಾತ್ರೆ ನಡೆಯುತ್ತದೆ

Pc:Pablo Nicolás Taibi Cicaré

ಬ್ರಹ್ಮದೇವನು ಕಾರ್ತೀಕ ಹುಣ್ಣಿಮೆಯಂದೇ ಪುಷ್ಕರದಲ್ಲಿ ಯಾಗ ಮಾಡಿದ್ದರು. ಹಾಗಾಗಿ ಪ್ರತಿವರ್ಷ ಅಕ್ಟೋಬರ್-ನವಂಬರ್ ನಡುವೆ ಕಾರ್ತಿಕ ಪುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯ ನೆಪದಲ್ಲಿ ಬ್ರಹ್ಮನ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದಿನದಂದು ಬ್ರಹ್ಮದೇವನ ಪೂಜೆ ಮಾಡುವುದರಿಂದ ವಿಶೇಷ ಪೂಜೆ ಲಭಿಸುತ್ತದೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X