Search
  • Follow NativePlanet
Share
» »"ಬ್ಲ್ಯಾಕ್ ಆಂಡ್ ವೈಟ್" ಕರ್ನಾಟಕ ನೋಡಿ

"ಬ್ಲ್ಯಾಕ್ ಆಂಡ್ ವೈಟ್" ಕರ್ನಾಟಕ ನೋಡಿ

By Vijay

ಇತಿಹಾಸದ ಪುಟಗಳನ್ನು ಕೆದಕಿದಾಗ ಕರ್ನಾಟಕದ ಕುರಿತು ಇತಿಹಾಸವು ಎರಡು ಮಿಲಿಯನ್ ಅಂದರೆ 20,00,000 ವರ್ಷಕ್ಕೂ ಹಿಂದೆ ಕರೆದೊಯ್ಯುತ್ತದೆ. ಸಾಕಷ್ಟು ಮಹಾ ಸಾಮ್ರಾಜ್ಯಗಳು ಹಾಗೂ ಆಡಳಿತಗಾರರು ಕರ್ನಾಟಕವನ್ನು ಆಳಿದ್ದಾರೆ ಹಾಗೂ ತಮ್ಮದೆ ಆದ ಅಭೂತಪೂರ್ವ ಕೊಡುಗೆಗಳನ್ನು ಈ ರಾಜ್ಯಕ್ಕೆ ನೀಡಿದ್ದಾರೆ.

ಹೋಟೆಲ್ಸ್ ಡಾಟ್ ಕಾಮ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ಗಳಷ್ಟು ಕಡಿತ ಪಡೆಯಿರಿ

ಮೊದ ಮೊದಲಿಗೆ ವಿವಿಧ ಪ್ರಾಂತಗಳ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದ ಕರ್ನಾಟಕವು ಕಾಲ ಉರುಳಿದಂತೆ ಒಂದು ಸ್ಪಷ್ಟ ರೂಪ ಪಡೆಯುತ್ತ ಹೋಯಿತು ಹಾಗೂ ಅಂತಿಮವಾಗಿ ನವಂಬರ್ 1, 1956 ರಂದು ಭಾರತದ ವಾಯವ್ಯ ದಿಕ್ಕಿನಲ್ಲಿ ಅಖಂಡ ಕರ್ನಾಟಕವಾಗಿ ರೂಪಗೊಂಡಿತು.

ವಿಶೇಷ ಲೇಖನ : ಸಂತಸ ನೀಡುವ ಹಳೆಯ ಮದ್ರಾಸ್ ನೋಡಿ

ಇಂದಿನ ಕರ್ನಾಟಕದಲ್ಲಿರುವ ಸಾಕಷ್ಟು ಐತಿಹಾಸಿಕ ಸ್ಥಳಗಳು ಹಿಂದೆ 18 ಹಾಗೂ 19 ನೆಯ ಶತಮಾನಗಳಲ್ಲಿ ಪ್ರಮುಖ ಸ್ಥಳಗಳಾಗಿ ಹೆಸರುವಾಸಿಯಾಗಿದ್ದವು. ಆ ಸಮಯದಲ್ಲಿ ಆ ಸ್ಥಳಗಳು ಹೇಗೆ ಕಾಣುತ್ತಿದ್ದವು, ಜೀವನಶೈಲಿ ಹೇಗಿತ್ತು..ಮುಂತಾದ ಅಂಶಗಳನ್ನು ತಿಳಿದುಕೊಳ್ಳಲು ಹೆಚ್ಚಿನ ಕುತೂಹಲ ಉಂಟಾಗುವುದು ಸಹಜ. ಅಂತೆಯೆ ಸ್ಥಳಗಳ ಹಳೆಯ ಚಿತ್ರಗಳನ್ನು ನೋಡುವುದೂ ಸಹ ಒಂದು ರೀತಿಯ ಸಂತಸ ಉಂಟುಮಾಡುತ್ತದೆ.

ಹಾಗಾದರೆ ಬನ್ನಿ, ಈ ಲೇಖನದ ಮೂಲಕ ಕರ್ನಾಟಕದ ಕೆಲ ಸ್ಥಳಗಳ ಹಿಂದಿನ ಅಥವಾ ಹಳೆಯದಾದ ಕೆಲವು ಚಿತ್ರಗಳ ಸವಾರಿಯನ್ನು ಮಾಡೋಣ.

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ವೆಲ್ಲೆಸ್ಲಿ ಸೇತುವೆ : ಶ್ರೀರಂಗಪಟ್ಟಣದ ಬಳಿಯಿರುವ ವೆಲ್ಲೆಸ್ಲಿ ಸೇತುವೆ 1870 ರ ಸಂದರ್ಭದಲ್ಲಿ. 1804 ರಲ್ಲಿ ಮೈಸೂರು ಸಂಸ್ಥಾನದ ದೀವಾನರಾದ ಪೂರ್ಣಯ್ಯನವರ ಸುಪರ್ದಿಯಲ್ಲಿ ಒಟ್ಟು 5.50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಸೇತುವೆಯ ನಿರ್ಮಾಣ ಮಾಡಲಾಯಿತು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯು 1964 ರ ವರೆಗೂ ಪ್ರಚಲಿತದಲ್ಲಿತ್ತು.

ಚಿತ್ರಕೃಪೆ: Hansmuller

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಶ್ರೀರಂಗಪಟ್ಟಣದಲ್ಲಿರುವ ದರಿಯಾ ದೌಲತ್ ಬಾಗ್ ಕಟ್ಟಡ. 1870 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಶ್ರೀರಂಗಪಟ್ಟಣದಲ್ಲಿರುವ ಕೋಟೆಗಿರುವ ಚಿಕ್ಕ ಪ್ರವೇಶ ದ್ವಾರ. 1870 ರ ಸಂದರ್ಭದಲ್ಲಿ.

ಚಿತ್ರಕೃಪೆ: Hansmuller

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಮೈಸೂರಿನ ಅಂಬಾ ವಿಲಾಸ ಅರಮನೆ. ಈ ಅರಮನೆಗೆ ದರ್ಬಾರ್ ಹಾಲ್ ಅನ್ನು 1932-40 ರ ಮಧ್ಯದಲ್ಲಿ ನಿರ್ಮಿಸಲಾಯಿತು.

ಚಿತ್ರಕೃಪೆ: Sarvagnya

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಮೈಸೂರು ರಾಜರ ಆಡಳಿತವಿದ್ದಾಗ ರಾಜಸಭೆಯಲ್ಲಿ ಸಮಾರಂಭವೊಂದು ಜರುಗುತ್ತಿದ್ದ ಸಂದರ್ಭದಲ್ಲಿ.

ಚಿತ್ರಕೃಪೆ: Rajachandra

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬಾದಾಮಿಯ ಚೋಳಚಗುಡ್ಡದಲ್ಲಿರುವ ಪ್ರಸಿದ್ಧ ಬನಶಂಕರಿ ದೇವಸ್ಥಾನ, 1855 ರ ಸಂದರ್ಭದಲ್ಲಿ. ಇಂದಿಗೂ ಬಾದಾಮಿಯ ಬನಶಂಕರಿಯಲ್ಲಿ ಪ್ರತಿ ವರ್ಷ ಜನವರಿ ತಿಂಗಳಿನ ಸಂದರ್ಭದಲ್ಲಿ ದೇವಿಯ ಜಾತ್ರೆಯು ಅದ್ದೂರಿಯಾಗಿ ಜರುಗುತ್ತದೆ.

ಚಿತ್ರಕೃಪೆ: Biggs, Thomas

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬನಶಂಕರಿಯ ಜಾತ್ರೆಯ ಸಂದರ್ಭದಲ್ಲಿ ಎಳೆಯಲಾಗುವ ತೇರು. 1855 ರ ಸಂದರ್ಭದಲ್ಲಿ.

ಚಿತ್ರಕೃಪೆ: Biggs, Thomas

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬಾದಾಮಿಯಲ್ಲಿರುವ ಭೂತನಾಥ ದೇವಾಲಯಗಳ ಸಂಕೀರ್ಣ. ಹಿಂದೆ ಗುಹಾ ದೇವಸ್ಥಾನಗಳಿರುವ ಬೃಹದಾಕಾರದ ಬಂಡೆ ಬೆಟ್ಟ, ವರ್ಷ 1880.

ಚಿತ್ರಕೃಪೆ: commons.wikimedia

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್ ನಗರದಲ್ಲಿರುವ ಐತಿಹಾಸಿಕ ಬೀದರ್ ಕೋಟೆ 1889 ರ ಸಮಯದಲ್ಲಿ.

ಚಿತ್ರಕೃಪೆ: AshLin

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬೀದರ್ ಕೋಟೆಯ ಪ್ರಾಂಗಣದಲ್ಲಿರುವ "ಸೋಲಾ ಖಂಬಾ" ಕಟ್ಟಡ. ಅಂದರೆ ಇದು ಕನ್ನಡದಲ್ಲಿ 16 ಖಂಬಗಳ ಕಟ್ಟಡ ಎಂದಾಗುತ್ತದೆ.

ಚಿತ್ರಕೃಪೆ: Aavindraa

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬಹಮನಿ ಸುಲ್ತಾನರಿಂದ ಬಳಸಲ್ಪಡುತ್ತಿದ್ದ ಸಿಡಿಮದ್ದಿನ ತೋಪು. ಬೀದರ್ ಕೋಟೆಯಲ್ಲಿರುವ ಈ ತೋಪಿನ ಚಿತ್ರವನ್ನು ಸೆರೆ ಹಿಡದದ್ದು 1917 ರಲ್ಲಿ.

ಚಿತ್ರಕೃಪೆ: Damitr

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಉತ್ತರ ಕರ್ನಾಟಕದ ಇನ್ನೊಂದು ಪ್ರಸಿದ್ಧ ಐತಿಹಾಸಿಕ ನಗರ ವಿಜಯಪುರ (ಹಿಂದಿನ ಬಿಜಾಪುರ). ಆದಿಲ್ ಶಾಹಿಗಳು ಆಳಿದ ಈ ಪಟ್ಟಣವು ಸಾಕಷ್ಟು ಐತಿಹಾಸಿಕ ಆಕರ್ಷಣೆಗಳನ್ನೊಳಗೊಂಡಿರುವ ಊರಾಗಿದೆ. ವಿಜಯಪುರದ ಪ್ರಖ್ಯಾತ ಗೋಲ ಗುಮ್ಮಟ. ವರ್ಷ 1890.

ಚಿತ್ರಕೃಪೆ: Hansmuller

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ವಿಜಯಪುರದಲ್ಲಿರುವ ಮತ್ತೊಂದು ಐತಿಹಾಸಿಕ ಆಕರ್ಷಣೆಯಾದ ಗಗನ್ ಮಹಲ್. ವರ್ಷ 1890.

ಚಿತ್ರಕೃಪೆ: Hansmuller

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ವಿಜಯಪುರದ ಪ್ರಖ್ಯಾತ ಇಬ್ರಾಹಿಂ ರೋಝಾ. 1860 ರ ಸಂದರ್ಭದಲ್ಲಿ.

ಚಿತ್ರಕೃಪೆ: Aravind parvatikar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

1860 ರಲ್ಲಿ ವಿಜಯಪುರ ಕೋಟೆಯ ಒಂದು ಭಾಗ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ವಿಜಯಪುರದಲ್ಲಿರುವ ಇನ್ನೊಂದು ಐತಿಹಾಸಿಕ ಆಕರ್ಷಣೆಯ ಸ್ಮಾರಕವಾದ ಅಸರ್ ಮಹಲ್. 1875 ರ ಸಂದರ್ಭದಲ್ಲಿ.

ಚಿತ್ರಕೃಪೆ: Aavindraa

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ವಿಜಯಪುರದ ಕೋಟೆಯಲ್ಲಿರುವ ಪ್ರಚಂಡ ಸಿಡಿ ತಲೆಯ, ಆಕ್ರಮಣಕಾರರಿಗೆ ನೀರಿಳಿಸುತ್ತಿದ್ದ ಮಲಿಕ್ - ಎ - ಮೈದಾನ್ ಎಂಬ ಹೆಸರಿ ಸಿಡಿ ಮದ್ದಿನ ತೋಪು, 1865 ರ ಸಂದರ್ಭದಲ್ಲಿ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕರ್ನಾಟಕದಲ್ಲಿರುವ ಕೋಟೆಗಳಲ್ಲಿ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯು ಪ್ರಮುಖವಾದ ಆಕರ್ಷಣೆಯಾಗಿದೆ. ಮದಕರಿ ನಾಯಕರಾಳಿದ ಈ ಕೋಟೆಯು ಐತಿಹಾಸಿಕವಾಗಿಯೂ ಸಹ ಪ್ರಸಿದ್ಧಿಯನ್ನು ಪಡೆದಿದೆ.
ಚಿತ್ರದುರ್ಗ ಕೋಟೆ ಪ್ರಾಂಗಣ 1855 ರಲ್ಲಿ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಚಿತ್ರದುರ್ಗ ಕೋಟೆಯ ಪ್ರಾಂಗಣದಲ್ಲಿರುವ ಕೊಳ, 1855 ರ ಸಂದರ್ಭದಲ್ಲಿ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಚಿತ್ರದುರ್ಗದ ಕೋಟೆಯ ಪ್ರಾಂಗಣದಲ್ಲಿರುವ ಚಾಮುಂಡಿ ದೇವಿಯ ದೇವಾಲಯ. ವರ್ಷ 1857.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಯುರೋಪಿಯನ್ನರು ಚಿತ್ರದುರ್ಗದ ಬೆಟ್ಟ ಕೋಟೆಯ ಹತ್ತಿರ ನಿಂತು ಕ್ಯಾಮೆರಾಗೆ ಪೋಸು ನೀಡಿರುವ ಭಂಗಿ. ವರ್ಷ 1868.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಇಂದಿನ ಕಲಬುರಗಿ (ಹಿಂದಿನ ಗುಲಬರ್ಗಾ) ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಕಲಬುರಗಿ ಪಟ್ಟಣವೂ ಸಹ ಒಂದು ಐತಿಹಾಸಿಕ ಪಟ್ಟಣವಾಗಿದೆ. ಕಲಬುರಗಿಯ ಅಸಫ್ ಗಂಜ್ ಎಂಬ ಮಾರುಕಟ್ಟೆಯ ಬೀದಿ 1880 ರಲ್ಲಿ.

ಚಿತ್ರಕೃಪೆ: Aavindraa

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಲಬುರಗಿಯಲ್ಲಿರುವ ಬಂದೆ ನವಾಜರ ದರ್ಗಾ, 1880 ರಲ್ಲಿ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಗುಲಬರ್ಗಾ ಕೋಟೆಯಲ್ಲಿರುವ ಒಂದು ಮಸೀದಿ, 1880 ರಲ್ಲಿ.

ಚಿತ್ರಕೃಪೆ: Aavindraa

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಗುಲಬರ್ಗಾ ಕೋಟೆಯ ನೋಟ 1880 ರ ಸಂದರ್ಭದಲ್ಲಿ.

ಚಿತ್ರಕೃಪೆ: Nvvchar

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಹಂಪಿಯು ಬಳ್ಳಾರಿ ಜಿಲ್ಲೆಯಲ್ಲಿರುವ ಕರ್ನಾಟಕದ ಹೆಮ್ಮೆಯ ತಾಣವಾಗಿದೆ. ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಅದ್ಭುತ ಶಿಲ್ಪ ಕಲೆ ರಚನೆಗಳ ಬೀಡಾಗಿರುವ ಹಂಪಿ 1868 ರಲ್ಲಿ.

ಚಿತ್ರಕೃಪೆ: Shyamal

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಶಿಥಿಲಗೊಂಡ ಹಂಪಿಯ ಕೃಷ್ಣ ದೇಗುಲ, 1868 ರ ಸಮಯದಲ್ಲಿ.

ಚಿತ್ರಕೃಪೆ: wikimedia

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಮಂಗಳೂರಿನ ಸಂತ ಅಲೋನಿಸಿಯಸ್ ಕಾಲೇಜು, 1913 ರಲ್ಲಿ.

ಚಿತ್ರಕೃಪೆ: Wuselig

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

1783 ರಲ್ಲಿ ಬ್ರಿಟೀಷರು ಮಂಗಳೂರು ಕೋಟೆಯನ್ನು ತಮ್ಮ ವಶಕ್ಕೆ ಪಡೆದ ನಂತರ ಅದು ಕಾಣುವ ರೀತಿಯನ್ನು ಚಿತ್ರಿಸಿರುವ ಒಬ್ಬ ಕಲಾವಿದ.

ಚಿತ್ರಕೃಪೆ: wikimedia

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕರ್ನಾಟಕದಲ್ಲಿ ಗೊಮ್ಮಟೇಶ್ವರನ ಅತಿ ಎತ್ತರದ ಮೂರ್ತಿಯನ್ನು ಹೊಂದಿರುವ ಹಾಗೂ ಪ್ರವಾಸಿ ಕ್ಷೇತ್ರವೂ ಆಗಿರುವ ಶ್ರವಣಬೆಳಗೋಳ 1899 ರಲ್ಲಿ ಹೀಗಿತ್ತು.

ಚಿತ್ರಕೃಪೆ: Shyamal

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಶ್ರವಣಬೆಳಗೋಳದ ಮಾತೂಂದು ವಿಹಂಗಮ ನೋಟ.

ಚಿತ್ರಕೃಪೆ: Subbu6699

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಶ್ರೀರಂಗಪಟ್ಟಣದ ಈ ಒಂದು ಸ್ಥಳದಲ್ಲಿಯೆ ಟಿಪ್ಪು ಸುಲ್ತಾನ ತನ್ನ ಕೊನೆಯುಸಿರೆಳೆದ.

ಚಿತ್ರಕೃಪೆ: Co9man

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಏನೀದು ಉಹಿಸಬಲ್ಲಿರಾ? ಹೌದು, ಇದು ಬೆಂಗಳೂರಿನ ಪ್ರತಿಷ್ಠಿತ ಹೆಚ್ ಎ ಎಲ್ ವಿಮಾನ ನಿಲ್ದಾಣ. 1947 ರಲ್ಲಿ ಹಾಲ್ ವಿಮಾನ ನಿಲ್ದಾಣ ಈ ರೀತಿ ಇತ್ತು.

ಚಿತ್ರಕೃಪೆ: Challiyan

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬೆಂಗಳೂರಿನ ಬ್ಯಾಂಡ್ ಸ್ಟ್ಯಾಂಡ್ ಹಾಗೂ ಸೇಂಟ್ ಮಾರ್ಕ್ಸ್ ಚರ್ಚ್, 1870 ರ ಸಮಯದಲ್ಲಿ.

ಚಿತ್ರಕೃಪೆ: Albert Thomas Watson Penn

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬೆಂಗಳೂರಿನ ಪ್ರತಿಷ್ಠಿತ ಕಬ್ಬನ್ ಉದ್ಯಾನದ ಆವರಣದಲ್ಲಿರುವ ಅಟ್ಟಾರಾ ಕಚೇರಿ, 1900 ರಲ್ಲಿ.

ಚಿತ್ರಕೃಪೆ: wikimedia

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಕಪ್ಪುಬಿಳುಪಿನ ಪ್ರವಾಸಿ ಸ್ಥಳಗಳು:

ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪ್ರಸಿದ್ಧ ಲಾಲ್ ಬಾಗ್ ಉದ್ಯಾನ 1860 ರ ಸಮಯದಲ್ಲಿ.

ಚಿತ್ರಕೃಪೆ: Nicholas Bros

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X