Search
  • Follow NativePlanet
Share
» »ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತೀಯರಿಗೆ ದೇಶ ಪ್ರೇಮ ತುಂಬಾನೇ ಇದೆ. ಹಾಗೆಯೇ ದೈವ ದೇವರ ಬಗ್ಗೆ ಭಯ, ಭಕ್ತಿ ಕೂಡಾ ಇದೆ. ನಮ್ಮ ದೇಶದಲ್ಲಿ ಎಷ್ಟೆಲ್ಲಾ ಚಿತ್ರ ವಿಚಿತ್ರ ದೇವಸ್ಥಾನಗಳಿವೆ. ಭಾರತ ಮಾತೆಯನ್ನು ತಾಯಿಯಂತೆ ಪೂಜಿಸುತ್ತೇವೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ದೇವಿ, ದೇವತೆಯ ವಿಗ್ರಹವನ್ನು ಅಳವಡಿಸಲಾಗುತ್ತದೆ. ಆದರೆ ಅವೆಲ್ಲದಕ್ಕಿಂತಲೂ ಸ್ವಲ್ಪ ಭಿನ್ನವಾಗಿದೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಒಂದು ಮಂದಿರ. ವಾರಣಾಸಿಯಲ್ಲಿ ಭಾರತ ಮಾತೆಗೂ ಒಂದು ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ. ವಾರಣಾಸಿಯಲ್ಲಿ ಹಲವು ಪವಿತ್ರ ಸ್ಥಳಗಳಿವೆ ಆದರೆ ಭರತ್ ಮಾತಾ ದೇವಸ್ಥಾನವು ಎಲ್ಲದಕ್ಕಿಂತಲೂ ಭಿನ್ನವಾಗಿದೆ.

ಭಾರತ್ ಮಾತಾ ಮಂದಿರ

ಭಾರತ್ ಮಾತಾ ಮಂದಿರ

PC: Manuel Menal

ಭಾರತ ಮಾತೆಯ ಫೋಟೋಗಳನ್ನು ಇಟ್ಟು ಪೂಜಿಸಿರುವುದನ್ನು ನೀವು ನೋಡಿರುವಿರಿ. ಆದರೆ ಈ ಮಂದಿರದ ವಿಶೇಷತೆ ಎಂದರೆ ಇಲ್ಲಿ ಯಾವುದೇ ದೇವಿಯ ಮೂರ್ತಿಯಾಗಲಿ, ಫೋಟೋವಾಗಲಿ ಇಲ್ಲ. ಬದಲಾಗಿ ದೊಡ್ಡ ಭಾರತದ ನಕ್ಷೆ ಇದೆ. ನೆಲದ ಮೇಲೆ ಭಾರತದ ಚಿತ್ರವನ್ನು ಕೆತ್ತಲಾಗಿದೆ.

ಎಲ್ಲಿದೆ ಈ ಭಾರತ ಮಾತ ಮಂದಿರ

ಎಲ್ಲಿದೆ ಈ ಭಾರತ ಮಾತ ಮಂದಿರ

ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಕ್ಯಾಂಪಸ್‌ನಲ್ಲಿರುವ ಭಾರತ ಮಾತಾ ಮಂದಿರ ವಾರಣಾಸಿ ಜಂಕ್ಷನ್ ರೈಲ್ವೆ ನಿಲ್ದಾಣದಿಂದ 1.5 ಕಿಲೋಮೀಟರ್ ದೂರದಲ್ಲಿದ್ದರೆ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಆರು ಕಿಲೋಮೀಟರ್ ಉತ್ತರಕ್ಕೆ ಇದೆ.

ಮಹಾತ್ಮ ಗಾಂಧಿ ಉದ್ಘಾಟಿಸಿದ್ದರು

ಮಹಾತ್ಮ ಗಾಂಧಿ ಉದ್ಘಾಟಿಸಿದ್ದರು

ಈ ದೇವಾಲಯವನ್ನು ಭಾರತ ಮಾತೆಗೆ ಸಮರ್ಪಿಸಲಾಗಿದೆ . ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿರುವ ಈ ಭಾರತ ಮಾತಾ ಮಂದಿರವನ್ನು 1936 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಬು ಶಿವ ಪ್ರಸಾದ್ ಗುಪ್ತ ನಿರ್ಮಿಸಿದ್ದರು. ಇದನ್ನು ಮಹಾತ್ಮ ಗಾಂಧಿ ಉದ್ಘಾಟಿಸಿದ್ದರು.

ಅಮೃತಶಿಲೆಯಿಂದ ಕೆತ್ತಲಾದ ಭಾರತದ ನಕ್ಷೆ

ಅಮೃತಶಿಲೆಯಿಂದ ಕೆತ್ತಲಾದ ಭಾರತದ ನಕ್ಷೆ

PC:Hiroki Ogawa

ಈ ಮಂದಿರವನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಅವಿಭಜಿತ ಭಾರತವನ್ನು ಪ್ರತಿನಿಧಿಸುವ ಅಮೃತಶಿಲೆಯಿಂದ ನಿರ್ಮಿಸಲಾದ ಭಾರತದ ನಕ್ಷೆಯನ್ನುಹೊಂದಿದೆ. ನಕ್ಷೆಯಲ್ಲಿ ಪರ್ವತಗಳು, ಸಮತಲಗಳು ಮತ್ತು ಸಾಗರಗಳನ್ನು ಚಿತ್ರಿಸಲಾಗಿದೆ.

ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ

ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ

PC: youtube

ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠವು ಉತ್ತರ ಪ್ರದೇಶದ ವಾರಣಾಸಿ ಅಥವಾ ಬನಾರಸ್‌ನಲ್ಲಿರುವ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದೆ. 1921 ರಲ್ಲಿ ಕಾಶಿ ವಿದ್ಯಾಪೀಠವಾಗಿ ಸ್ಥಾಪಿತವಾದ ನಂತರ ಅದನ್ನು ಮರುನಾಮಕರಣ ಮಾಡಲಾಯಿತು. ಇದು ಉತ್ತರ ಪ್ರದೇಶ ಸರಕಾರದ ರಾಜ್ಯ ಶಾಸನಸಭೆಯಲ್ಲಿದೆ. ವಿಶ್ವವಿದ್ಯಾಲಯವು ಆರು ಜಿಲ್ಲೆಗಳಲ್ಲಿ 400 ಕ್ಕಿಂತಲೂ ಹೆಚ್ಚು ಅಂಗಸಂಸ್ಥೆ ಕಾಲೇಜುಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X