Search
  • Follow NativePlanet
Share
» »ಮೈಸೂರಿನ ಸಮೀಪವಿರುವ ಈ ಅದ್ಬುತ ಜಲಪಾತಗಳ ಬಗ್ಗೆ ಗೊತ್ತೇ ?

ಮೈಸೂರಿನ ಸಮೀಪವಿರುವ ಈ ಅದ್ಬುತ ಜಲಪಾತಗಳ ಬಗ್ಗೆ ಗೊತ್ತೇ ?

ಮೈಸೂರಿನ ಪ್ರಾಚೀನ ಸ್ಮಾರಕಗಳನ್ನು ಬಿಟ್ಟು ಜಲಪಾತಗಳು ಮತ್ತು ಕಾಡುಗಳ ರೂಪದಲ್ಲಿ ವ್ಯಾಪಿಸಿರುವ ಅದರ ಸುಂದರವಾದ ಪರಿಸರವನ್ನು ಅನ್ವೇಷಿಸುವ ಬಗ್ಗೆ ಯೋಚಿಸುತ್ತಿದೀರ? ಹಚ್ಚ ಹಸಿರಿನಿಂದ ಕೂಡಿದ ವಾತಾವರಣದ ನಡುವೆ ನಿಮ್ಮ ವಾರಾಂತ್ಯವನ್ನು ಕಳೆಯಲು ನೀವು ಬಯಸಿದರೆ, ಈ ಲೇಖನವನ್ನು ನೀವು ಓದಲೇಬೇಕು. ಇಲ್ಲಿ ನಾವು ಮೈಸೂರಿ ಹತ್ತಿರದಲ್ಲಿರುವ ವಾರಾಂತ್ಯದ ವಿಹಾರಕ್ಕೆ ಹೋಗಬಹುದಾದ ಟಾಪ್ 5 ಜಲಪಾತಗಳನ್ನು ಪಟ್ಟಿ ಮಾಡಿದ್ದೇವೆ. ಈ ನೈಸರ್ಗಿಕ ಸೌಂದರ್ಯಗಳು ನಿಮಗೆ ಪ್ರಶಾಂತ ಮತ್ತು ನೆಮ್ಮದಿಯ ಅನುಭವವನ್ನು ನೀಡುತ್ತವೆ.

ಈ ಜಲಪಾತಗಳು ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಪುನರ್ಯೌವನಗೊಳಿಸುವ ಪರಿಪೂರ್ಣ ತಾಣಗಳಾಗಿವೆ. ಉತ್ಸಾಹಭರಿತ ಪರಿಸರದ ಮಧ್ಯೆ ನೀವು ಸಮಯವನ್ನು ಕಳೆಯಲು ಇಷ್ಟಪಡುವುದಿಲ್ಲವೇ? ಹೌದು ಎಂದಾದರೆ, ಈ ಮೋಡಿಮಾಡುವ ಜಲಪಾತಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

1) ಚೆಲವರ ಜಲಪಾತ

1) ಚೆಲವರ ಜಲಪಾತ

PC- Siddarth.P.Raj

ಮೈಸೂರಿನಿಂದ 125 ಕಿ.ಮೀ. ದೂರದಲ್ಲಿದೆ.

ವಿರಾಜ್‌ಪೇಟೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಚೆಯಂಡನೆ ಗ್ರಾಮದ ಸಮೀಪದಲ್ಲಿರುವ ಚೆಲವರ ಜಲಪಾತವು ಈ ಪ್ರದೇಶದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಇದು ಸ್ಥಳೀಯ ಪ್ರವಾಸಿಗರಲ್ಲಿ ಮಾತ್ರ ಜನಪ್ರಿಯವಾಗಿರುವ ಕಾರಣ, ಇತರ ಪ್ರವಾಸಿಗರಿಂದ ತೊಂದರೆಗೊಳಗಾಗದಂತೆ ನೀವು ಅದರ ಸೌಂದರ್ಯವನ್ನು ಆರಾಮವಾಗಿ ಅನುಭಸಿಸಬಹುದು . ಆದಾಗ್ಯೂ, ಜಲಪಾತದ ಬುಡದಲ್ಲಿರುವ ಕೊಳದ ಬಗ್ಗೆ ನೀವು ತಿಳಿದಿರಬೇಕು. ಮಳೆಗಾಲದಲ್ಲಿ ಈ ಕೊಳವು ಮಳೆನೀರಿನಿಂದ ತುಂಬಿಕೊಳ್ಳುತ್ತದೆ, ಅದರಲ್ಲಿ ಸ್ನಾನ ಮಾಡುವುದು ಅಪಾಯಕಾರಿ. ಇತ್ತೀಚಿನವರೆಗೂ ಇಲ್ಲಿ 15 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಆದ್ದರಿಂದ, ಸ್ನಾನಕ್ಕಾಗಿ ಕೊಳಕ್ಕೆ ಕಾಲಿಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಈ ಜಲಪಾತವು ವಿಸ್ತಾರವದ ಅರಣ್ಯ ಒಳಗೆ ಕಾವೇರಿ ನದಿಯ ಮಧ್ಯದಲ್ಲಿದೆ, ಆದ್ದರಿಂದ ಇದು ಪ್ರಕೃತಿಯ ನೈಜ ಸೌಂದರ್ಯವನ್ನು ಆಸ್ವಾದಿಸಲು ಪರಿಪೂರ್ಣ ತಾಣವಾಗಿದೆ.

2) ಚುಂಚನಕಟ್ಟೆ ಜಲಪಾತ

2) ಚುಂಚನಕಟ್ಟೆ ಜಲಪಾತ

PC- Sreehari p.v

ಮೈಸೂರಿನಿಂದ 56 ಕಿ.ಮೀ ದೂರದಲ್ಲಿದೆ.

ಕಾವೇರಿ ನದಿಯಲ್ಲಿರುವ ಮತ್ತೊಂದು ಸೌಂದರ್ಯ, ಚುಂಚನಕಟ್ಟೆ ಜಲಪಾತವು ಪ್ರತಿಯೊಬ್ಬ ಪ್ರವಾಸಿಗರು ಭೇಟಿ ನೀಡಲೇಬೇಕಾದ ತಾಣವಾಗಿದ್ದು, ಅದರ ನೈಸರ್ಗಿಕ ಸೌಂದರ್ಯದಿಂದಾಗಿ ಮಾತ್ರವಲ್ಲದೆ ಆಧ್ಯಾತ್ಮಿಕ ಸೆಳವನ್ನು ಕೂಡ ಹೊಂದಿದೆ. ಇದರ ಹತ್ತಿರ ಇರುವ ಕೊದಂಡ ರಾಮ ದೇವಸ್ಥಾನವು ಹೊಂದಿರುವ ಕಾರಣ ಇದು ಒಂದು ವಾರಾಂತ್ಯದ ಜನಪ್ರಿಯ ಸ್ಥಳವಾಗಿದೆ. ಇಲ್ಲಿ, ಒಂದು ಕಡೆ, ನೀವು ಚುಂಚನಕಟ್ಟೆ ಜಲಪಾತದ ನೀರಿನಲ್ಲಿ ಹಿತವಾದ ಸ್ನಾನ ಮಾಡಬಹುದು ಮತ್ತು ಮತ್ತೊಂದೆಡೆ, ನೀವು ಕೊದಂಡ ರಾಮ ದೇವಾಲಯದ ದೈವಿಕ ವಾತಾವರಣದಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ಅದು ನಿಮ್ಮನ್ನು ಪುನರುಜ್ಜೀವನಗೊಳಿಸುವುದಿಲ್ಲವೇ? ಹೌದು ಎಂದಾದರೆ, ಈ ಆಕರ್ಷಕ ಸೌಂದರ್ಯವನ್ನು ನಿಮ್ಮ ಮುಂದಿನ ಪ್ರಯಾಣದ ಪಟ್ಟಿಗೆ ಸೇರಿಸಿಕೊಳ್ಳಿ. ಇದು ಸುಮಾರು 70 ಅಡಿ ಎತ್ತರದಿಂದ ಬೀಳುತ್ತದೆ ಮತ್ತು ಸುಮಾರು 350 ಅಡಿ ಅಗಲವಿದೆ. ಭಗವಾನ್ ರಾಮನು ತನ್ನ ವನವಾಸದ ಸಮಯದಲ್ಲಿ ಸೀತಾ ದೇವತೆ ಮತ್ತು ಲಕ್ಷ್ಮಣನೊಂದಿಗೆ ವಾಸಿಸುತ್ತಿದ್ದ ಸ್ಥಳವೂ ಈ ಜಲಪಾತದ ಸುತ್ತಲಿನ ಪ್ರದೇಶ ಎಂದು ನಿಮಗೆ ತಿಳಿದಿರಲಿ.

3) ಮಲ್ಲಲ್ಲಿ ಜಲಪಾತ

3) ಮಲ್ಲಲ್ಲಿ ಜಲಪಾತ

PC- Shanmugamp7

ಮೈಸೂರಿನಿಂದ 135 ಕಿ.ಮೀ ದೂರದಲ್ಲಿದೆ.

ಕುಮಾರಧರ ನದಿಯ ಹಾದಿಯಲ್ಲಿ ಉದ್ಭವಿಸುವ ಮಲ್ಲಾಲಿ ಜಲಪಾತವು ಕಲ್ಲಿನ ಭೂಪ್ರದೇಶಗಳನ್ನು ಮತ್ತು ಪಶ್ಚಿಮ ಘಟ್ಟದ ​​ಸೊಂಪಾದ ಸಸ್ಯವರ್ಗವನ್ನು ಹೊಂದಿರುವ ಕಾರಣ ಇದು ಒಂದು ಫೋಟೊಜೆನಿಕ್ ಪ್ರದೇಶವಾಗಿ ರೂಪುಗೊಳ್ಳುತ್ತದೆ. ಆದ್ದರಿಂದ, ಇದನ್ನು ಪ್ರತಿಯೊಬ್ಬ ಪ್ರಕೃತಿ ಪ್ರೇಮಿ ಮತ್ತು ಛಾಯಾಗ್ರಾಹಕ ಸವಿಯಬೇಕು ಮತ್ತು ಸೆರೆಹಿಡಿಯಬೇಕು. ಇದು ಈ ಪ್ರದೇಶದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಜಲಪಾತದ ಸುಮಧುರ ರಾಗವನ್ನು ಕೇಳಲು ಮತ್ತು ಉಲ್ಲಾಸಕರವಾದ ತಂಪಾದ ಗಾಳಿಯನ್ನು ಅನುಭವಿಸಲು ಪ್ರಶಾಂತ ವಾತಾವರಣದಲ್ಲಿ ನಿಮ್ಮನ್ನು ಹುಡುಕಲು ನೀವು ಎದುರು ನೋಡುತ್ತಿದ್ದರೆ, ಮಲ್ಲಾಲಿ ಜಲಪಾತಕ್ಕಿಂತ ಉತ್ತಮವಾದ ಆಯ್ಕೆ ಬೇರೊಂದಿಲ್ಲ. ದಂಪತಿಗಳಿಂದ ಹಿಡಿದು ಫ್ಯಾಮಿಲಿ ಸಮೇತ ಮತ್ತು ಇತರ ರೀತಿಯ ಪ್ರವಾಸಿಗರಿಂದ ಆಗಾಗ್ಗೆ ಭೇಟಿ ನೀಡುವ ತಾಣವಾಗಿದೆ.

4) ಶಿವನಸಮುದ್ರ ಜಲಪಾತ

4) ಶಿವನಸಮುದ್ರ ಜಲಪಾತ

PC- Goutamsubudhi

ಮೈಸೂರಿನಿಂದ 78 ಕಿ.ಮೀ ದೂರದಲ್ಲಿದೆ.

ಕಾವೇರಿ ನದಿ ದಕ್ಷಿಣ ಭಾರತದ ಅತ್ಯಂತ ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ನಗರಗಳು ಮತ್ತು ಪಟ್ಟಣಗಳ ನೀರಿನ ಅಗತ್ಯತೆಗಳನ್ನು ಪೂರೈಸುವುದರ ಹೊರತಾಗಿ, ಇದು ಹಲವಾರು ಸುಂದರವಾದ ಜಲಪಾತಗಳು ಮತ್ತು ಸರೋವರಗಳನ್ನು ಸೃಷ್ಟಿಸುತ್ತದೆ. ಅದರಲ್ಲಿ ಒಂದು ಶಿವನಸಮುದ್ರ ಜಲಪಾತ. ಇದನ್ನು ಎರಡು ಜಲಪಾತಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಗಗನಚುಕಿ ಜಲಪಾತ, ಪಶ್ಚಿಮ ಶಾಖೆ ಮತ್ತು ಭರಚುಕ್ಕಿ ಜಲಪಾತ ಪೂರ್ವ ಶಾಖೆ. ದೀರ್ಘಕಾಲದ ವರೆಗೆ ಇಲ್ಲಿ ನೀರು ಹರಿಯುವ ಕಾರಣ, ಇದು ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತದೆ. ನೀವು ಆಕರ್ಷಕ ಜಲಪಾತದ ಸೌಂದರ್ಯಕ್ಕೆ ಸಾಕ್ಷಿಯಾಗಲು ಬಯಸಿದರೆ, ಮಳೆಗಾಲದಲ್ಲಿ ಪೂರ್ಣ ವೈಭವದಿಂದ ನೀರು ತುಂಬಿಕೊಂಡು ಹರಿಯುವಾಗ ಭೇಟಿ ಮಾಡುವುದು ಸೂಕ್ತವಾಗಿದೆ. ಅದು ನಿಜವಾಗಿಯೂ ನಿಮ್ಮನ್ನು ವಿಸ್ಮಯಗೊಳಿಸುತ್ತದೆ.

5) ಚುಂಚಿ ಜಲಪಾತ

5) ಚುಂಚಿ ಜಲಪಾತ

PC- Mishrasasmita

ಮೈಸೂರಿನಿಂದ 102 ಕಿ.ಮೀ ದೂರದಲ್ಲಿದೆ.

ಭಗವಾನ್ ರಾಮ ತನ್ನ ವನವಾಸದ ಸಮಯದಲ್ಲಿ ತಂಗಿದ್ದ ಮತ್ತೊಂದು ಸ್ಥಳವಾದ ಚುಂಚಿ ಜಲಪಾತವು ಅರ್ಕಾವತಿ ನದಿಯಲ್ಲಿದೆ ಮತ್ತು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರೊಂದಿಗೆ ವಿಶ್ರಾಂತಿಯ ವಾರಾಂತ್ಯವನ್ನು ಕಳೆಯಲು ಇದು ಸೂಕ್ತ ತಾಣವಾಗಿದೆ. ಹಚ್ಚ ಹಸಿರು ಮತ್ತು ಸೊಂಪಾದ ಸಸ್ಯವರ್ಗದಿಂದ ಸುತ್ತುವರೆದಿರುವ ಇದು ಪರಿಪೂರ್ಣ ವಾತಾವರಣವನ್ನು ಕಾಪಾಡಿಕೊಂಡಿರುವ ಕಾರಣ ಇದು ಖಂಡಿತವಾಗಿಯೂ ಪ್ರಶಾಂತ ವಾತಾವರಣವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಅದ್ಬುತ ಸೌಂದರ್ಯದ ಜಗತ್ತಿನಲ್ಲಿ ನೀವು ಕಳೆದುಹೋಗುವ ತಾಣಕ್ಕೆ ನಿಮ್ಮ ಭೇಟಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more