Search
  • Follow NativePlanet
Share
» »ಕ್ಯಾಲಿಕಟ್‌ನಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿದ್ದೀರಾ?

ಕ್ಯಾಲಿಕಟ್‌ನಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿದ್ದೀರಾ?

ಕ್ಯಾಲಿಕಟ್ ಕೇರಳದ ಒಂದು ಸುಂದರ ನಗರವಾಗಿದೆ. ಇದು ಸುದೀರ್ಘ ದಾಖಲೆಯ ಇತಿಹಾಸವನ್ನು ಹೊಂದಿದೆ. ಈ ನಗರವು ತನ್ನ ಸಮೃದ್ಧಿಯೊಂದಿಗೆ ಪ್ರಯಾಣಿಕರನ್ನು ಸೆಳೆದಿದೆ. ಇದು ಕರಿಮೆಣಸು ಮತ್ತು ಏಲಕ್ಕಿ ಮುಂತಾದ ಮಸಾಲೆಗಳಲ್ಲಿ ಅರಬ್ಬರು, ಯಹೂದಿಗಳು, ಫೀನಿಷಿಯನ್ಸ್ ಮತ್ತು ಚೀನಿಯರ ಜೊತೆ 500 ಕ್ಕಿಂತ ಹೆಚ್ಚು ವರ್ಷಗಳ ಕಾಲ ವ್ಯಾಪಾರ ಮಾಡಿದೆ. ಕ್ಯಾಲಿಕಟ್‌ನಲ್ಲಿ ನೀವು ನೋಡಬೇಕಾದಂತಹ ಸಾಕಷ್ಟು ತಾಣಗಳಿವೆ. ಒಂದು ವೇಳೆ ನೀವು ಕೇರಳದ ಕ್ಯಾಲಿಕಟ್‌ಗೆ ಹೋಗುತ್ತೀದ್ದೀರೆಂದಾದರೆ ಅಲ್ಲಿನ ಈ ಪ್ರಮುಖ ಸ್ಥಳಗಳನ್ನು ಅನ್ವೇಷಿಸುವುದನ್ನು ಮರೆಯದಿರಿ.

ತಿಕ್ಕೋಟಿ ಲೈಟ್ ಹೌಸ್

ತಿಕ್ಕೋಟಿ ಲೈಟ್ ಹೌಸ್

ತಿಕ್ಕೋಟಿ ಲೈಟ್ ಹೌಸ್, ಕ್ಯಾಲಿಕಟ್‌ನ ಅತ್ಯಂತ ಮನೋಹರವಾದ ಸ್ಮಾರಕಗಳಲ್ಲಿ ಒಂದಾಗಿದೆ. ಇದು ತಿಕ್ಕೋಟ ಎಂಬ ಸಣ್ಣ ಗ್ರಾಮದಲ್ಲಿದೆ. ಕ್ಯಾಲಿಕಟ್ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಈ ಐತಿಹಾಸಿಕ ಸ್ಮಾರಕವು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 1847 ರಲ್ಲಿ ಇಲ್ಲಿನ ಲೈಟ್‌ ಹೌಸ್ ಅನ್ನು ನಿರ್ಮಿಸಲಾಯಿತು. ಲೈಟ್‌ ಹೌಸ್ 33.5 ಮೀಟರ್ ಎತ್ತರದಲ್ಲಿದೆ ಮತ್ತು ಪ್ರವಾಸಿಗರು ಲೈಟ್‌ ಹೌಸ್‌ನ ಮೇಲಕ್ಕೆ ಹೋಗಬಹುದು. ಮೇಲಿನಿಂದ ಸುತ್ತಮುತ್ತಲಿನ ಅದ್ಭುತ ನೋಟವನ್ನು ಆನಂದಿಸಬಹುದು. ಪ್ರವಾಸಿಗರು ಲೈಟ್ ಹೌಸ್‌ನ ಅಂಕುಡೊಂಕಾದ ಮೆಟ್ಟಿಲುಗಳನ್ನು ಏರಲು ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು.

ಥುಶರಗಿರಿ ಜಲಪಾತ

ಥುಶರಗಿರಿ ಜಲಪಾತ

PC:നിരക്ഷരൻ

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಸುತ್ತುತ್ತಿರುವ ಥುಶರಗಿರಿ ಜಲಪಾತವು ಮೂರು ಜಲಪಾತಗಳಂತೆ ಕೆಳಗೆ ಬೀಳುತ್ತದೆ. ಸಣ್ಣ ಬುಡಕಟ್ಟು ಗ್ರಾಮದಲ್ಲಿ ಈ ಜಲಪಾತವಿದೆ. ಚಾರಣಿಗರು ಮತ್ತು ಪರ್ವತ ಆರೋಹಿಗಳು ಲಕ್ಕಿಡಿ ಘಾಟ್‌ಗೆ ಟ್ರೆಕ್ಕಿಂಗ್ ಗೆ ಈ ದಟ್ಟವಾದ ಎಲೆಗಳು ಮತ್ತು ಸೊಂಪಾದ ಹಸಿರು ಮಾರ್ಗದ ಮೂಲಕ ಹಾದು ಹೋಗುತ್ತಾರೆ. ಥುಶರಗಿರಿ ಯು ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್ ಮತ್ತು ವನ್ಯಜೀವಿ ಅಭಯಾರಣ್ಯ ಭೇಟಿಗಳಿಗಾಗಿ ಅತ್ಯುತ್ತಮ ತಾಣವಾಗಿದೆ. ಇದು ಸುಮಾರು 50 ಕಿಲೋಮೀಟರ್ ದೂರದಲ್ಲಿದೆ.

ಬೇಪ್ಪೋರ್ ಬೀಚ್

ಬೇಪ್ಪೋರ್ ಬೀಚ್

PC: Pradeep717

ಕ್ಯಾಲಿಕಟ್ ನ ಹೃದಯ ಭಾಗದಲ್ಲಿರುವ ಬೇಪೋರ್ ಕೇರಳದ ಅತ್ಯಂತ ಜನನಿಬಿಡ ಮೀನುಗಾರಿಕೆ ಬಂದರುಗಳಲ್ಲಿ ಒಂದಾಗಿದೆ. ಕ್ಯಾಲಿಕಟ್‌ನಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಬೇಪ್ಪೋರ್ ಕಡಲ ತೀರವು ಹಡಗುಗಳನ್ನು ನಿರ್ಮಿಸುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ನಗರವು "ಉರು" ಎಂದು ಕರೆಯಲ್ಪಡುವ ತನ್ನ ಅನನ್ಯ ಹಡಗು ಸಾಗಾಟಕ್ಕಾಗಿ ಪ್ರಸಿದ್ಧವಾಗಿದೆ, ಇನ್ನು ಇಲ್ಲಿಗೆ ಹೋದಾಗ ಎರಡು ಕಿಲೋಮೀಟರ್ ಉದ್ದದ ಪುಲಿಮುಡು ಸೇತುವೆಯ ಮೇಲೆ ವಾಕ್‌ ಮಾಡುವುದನ್ನು ಮಾತ್ರ ಮರೆಯಬೇಡಿ.

ಕಕ್ಕಾಯಂ ಅಣೆಕಟ್ಟು

ಕಕ್ಕಾಯಂ ಅಣೆಕಟ್ಟು

PC:Vishak Pv

ಕಕ್ಕಾಯಂ ಕೇರಳ ರಾಜ್ಯದ ಕ್ಯಾಲಿಕಟ್‌ನಲ್ಲಿ ನೆಲೆಗೊಂಡಿರುವ ಒಂದು ಅಣೆಕಟ್ಟು ಪ್ರದೇಶವಾಗಿದೆ. ಇದು ಕಕ್ಕಾಯಂ ಬಸ್ ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. 'ಒರಕ್ಕುಜಿ' ಎಂಬುದು ಜಲಪಾತವಾಗಿದೆ. ಅಣೆಕಟ್ಟು ಸ್ಥಳದಲ್ಲಿ, ಆನೆಗಳು ಸೇರಿದಂತೆ ವಿವಿಧ ಪ್ರಾಣಿಗಳನ್ನು ಕಾಣಬಹುದು. ಇಲ್ಲಿ ಅರಣ್ಯ ಕಚೇರಿ ಇದೆ. ಅಣೆಕಟ್ಟು ಮೇಲೆ ಹತ್ತಬೇಕಾದರೆ ಅರಣ್ಯ ಅಧಿಕಾರಿಗಳಿಂದ ನೀವು ಅನುಮತಿಯನ್ನು ತೆಗೆದುಕೊಳ್ಳಬೇಕಾಗಿದೆ. ಅಣೆಕಟ್ಟು ಪ್ರದೇಶದ ಬಳಿ ಕ್ಯಾಮರಾಗಳನ್ನು ಅನುಮತಿಸಲಾಗುವುದಿಲ್ಲ. ಈ ಸ್ಥಳದ ಸಂರಕ್ಷಣೆ ಅರಣ್ಯ ಪೊಲೀಸರ ಅಡಿಯಲ್ಲಿ ಬರುತ್ತದೆ.

ಕ್ಯಾಲಿಕಟ್ ಬೀಚ್

ಕ್ಯಾಲಿಕಟ್ ಬೀಚ್

PC:Sulyab Thottungal

ಕೋಜಿಕೋಡ್‌ ಬೀಚ್‌ ಅನ್ನು ಮಲಬಾರ್ ತೀರದಲ್ಲಿರುವ ಕ್ಯಾಲಿಕಟ್ ಬೀಚ್ ಎಂದು ಕರೆಯಲಾಗುತ್ತದೆ. 1934 ರಲ್ಲಿ ಮಹಾತ್ಮ ಗಾಂಧಿಯವರು ಕ್ಯಾಲಿಕಟ್‌ಗೆ ಭೇಟಿ ನೀಡಿದ ನಂತರ ಬೀಚ್ ರಸ್ತೆ ಅನ್ನು 'ಗಾಂಧಿ ರಸ್ತೆ' ಎಂದು ಹೆಸರಿಸಲಾಯಿತು. ಸಾರ್ವಜನಿಕ ಸಭೆಗಳಿಗೆ ಆ ಸ್ಥಳವು ಯಾವಾಗಲೂ ಪ್ರಮುಖವಾಗಿದೆ. ಇದು ದಕ್ಷಿಣದಲ್ಲಿ ಬೇಪೋರ್ನಿಂದ ಉತ್ತರದಲ್ಲಿರುವ ಕಾಪ್ಪಡ್‌ಗೆ ರಸ್ತೆಯನ್ನು ಹೊಂದಿದೆ. ಕ್ಯಾಲಿಕಟ್‌ನಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದಕ್ಕೆ ಈ ಬೀಚ್ ಸೂಕ್ತವಾಗಿದೆ. ಅಲ್ಲದೆ, ಈ ಮಾರುಕಟ್ಟೆ ದೊಡ್ಡ ಶಾಪಿಂಗ್ ತಾಣವಾಗಿದೆ ಮತ್ತು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕ್ಯಾಲಿಕಟ್ ಹಿನ್ನೀರು

ಕ್ಯಾಲಿಕಟ್ ಹಿನ್ನೀರು

PC:Lenish

ಕೇರಳದ ಪ್ರಕೃತಿ ಸೌಂದರ್ಯದ ಉತ್ತರ ಭಾಗದಲ್ಲಿರುವ ಕ್ಯಾಲಿಕಟ್ ಯಾವಾಗಲೂ ತನ್ನ ಹಿನ್ನೀರುಗಳಿಗೆ ಜನಪ್ರಿಯ ತಾಣವಾಗಿದೆ. ಈ ಹಿನ್ನೀರುಗಳು ಈ ಪ್ರದೇಶದ ಒಂದು ವಿಶಿಷ್ಟವಾದ ಲಕ್ಷಣವಾಗಿದೆ. ಹೇರಳವಾಗಿ ನೈಸರ್ಗಿಕ ಸೌಂದರ್ಯ, ದಟ್ಟವಾದ ಹಸಿರು ಮತ್ತು ವಿಲಕ್ಷಣ ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದೆ. ಕೇರಳದ ಇತರ ಹಿನ್ನೀರುಗಳ ಪೈಕಿ, ಕ್ಯಾಲಿಕಟ್ ಜನರ ಸರಳ ಜೀವನಶೈಲಿ ನಿಮ್ಮ ಹೃದಯವನ್ನು ಗೆಲ್ಲುತ್ತದೆ. ರುಚಿಕರವಾದ ಸಮುದ್ರಾಹಾರ ಮತ್ತು ಹಿನ್ನೀರಿನ ಲಯವು ನಿಮಗೆ ಖುಷಿಯನ್ನು ನೀಡುತ್ತದೆ. ಕ್ಯಾಲಿಕಟ್‌ನ ಹಿನ್ನೀರುಗಳು ತುಂಬಾ ಸರಳ ಮತ್ತು ಸುಂದರವಾದವು. ಇದು ಭೇಟಿಗೆ ಯೋಗ್ಯವಾಗಿದ್ದು ಕೇರಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಮುಚುಂಡಿ ಪಲ್ಲಿ

ಮುಚುಂಡಿ ಪಲ್ಲಿ

PC:Nmkuttiady

13 ನೇ ಶತಮಾನದ ಈ ಮಸೀದಿಯಲ್ಲಿ ಸುಂದರ ಮರದ ಕೆತ್ತಿದ ಛಾವಣಿಗಳು ಮತ್ತು ಡಬಲ್ ಹೆಂಚುಗಳ ಛಾವಣಿಗಳನ್ನು ಅನನ್ಯ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಮಸೀದಿಯು ಶೇಖ್ ಜೈನುದ್ದೀನ್ ಮಖ್ದುಮ್ II ರ ಮಸೀದಿ ಎಂದು ಪ್ರಸಿದ್ಧವಾಗಿದೆ. ಇವರು ಪ್ರಸಿದ್ಧ ಪುಸ್ತಕವಾದ ತುಹಾತ್ ಉಲ್ ಮುಜಾಹಿದೀನ್ ನ ಲೇಖಕರಾಗಿದ್ದಾರೆ. ಈ ಮಸೀದಿಯು ಅರಾಬಿಕ್‌ನಲ್ಲಿ ಕೆತ್ತಲಾದ ಕಲ್ಲಿನ ಚಪ್ಪಡಿ ಮತ್ತು ಮಲೆಯಾಳಂನ ಹಿಂದಿನ ರೂಪವನ್ನು ಹೊಂದಿದೆ. ಇದು ಪ್ರದೇಶದ ಝಮೊರಿನ್ ರಾಜನ ಕಥೆಯನ್ನು ಚಿತ್ರಿಸುತ್ತದೆ.

ತಲುಪುವುದು ಹೇಗೆ?

ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವ ಕರೀಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಯಾಲಿಕಟ್‌ನಿಂದ 23 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣವು ಕ್ಯಾಲಿಕಟ್ನಿಂದ ದೆಹಲಿ, ಮುಂಬೈ, ಬೆಂಗಳೂರು, ಕೊಚ್ಚಿ, ಹೈದರಾಬಾದ್ ಮತ್ತು ಪ್ರಪಂಚದ ಇತರ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಕ್ಯಾಲಿಕಟ್ ರೈಲು ನಿಲ್ದಾಣ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ತಿರುವನಂತಪುರಂ, ಕೊಚ್ಚಿ, ಕೊಯಮತ್ತೂರು, ಮಂಗಳೂರು ಹಾಗೂ ಬೆಂಗಳೂರಿನಿಂದ ರಸ್ತೆ ಮಾರ್ಗಗಳ ಮೂಲಕ ಇಲ್ಲಿಗೆ ತಲುಪಬಹುದು.

Read more about: kerala ಕೇರಳ kozhikode
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more