Search
  • Follow NativePlanet
Share
» »ಲೈಫ್‌ನಲ್ಲಿ ಒಮ್ಮೆಯಾದರೂ ಪ್ಯಾರಗ್ಲೈಡಿಂಗ್ ಮಾಡಿದ್ದೀರಾ...ಇಲ್ಲಿದೆ ಪ್ಯಾರಗ್ಲೈಡಿಂಗ್ ತಾಣಗಳು

ಲೈಫ್‌ನಲ್ಲಿ ಒಮ್ಮೆಯಾದರೂ ಪ್ಯಾರಗ್ಲೈಡಿಂಗ್ ಮಾಡಿದ್ದೀರಾ...ಇಲ್ಲಿದೆ ಪ್ಯಾರಗ್ಲೈಡಿಂಗ್ ತಾಣಗಳು

ಪ್ಯಾರಗ್ಲೈಡಿಂಗ್ ಮೂಲಕ ಆಕಾಶದಲ್ಲಿ ತೇಲುತ್ತಾ ಕೆಳಗಿನ ಪ್ರಕೃತಿ ಸೌಂದರ್ಯವನ್ನು ಸವಿಯೋದು ಯಾರಿಗೆ ತಾನೇ ಇಷ್ಟವಿಲ್ಲ. ಇದಕ್ಕೆ ಭಯಪಡಬಾರದು. ಧೈರ್ಯವಾಗಿ ಪ್ಯಾರಗ್ಲೈಡಿಂಗ್ ಮಾಡಿ ನೋಡಿ. ಅದರ ಸುಂದರ ಅನುಭವವನ್ನು ಪಡೆಯಿರಿ. ದೇಶದಲ್ಲಿ ಅನೇಕ ಪ್ಯಾರಗ್ಲೈಡಿಂಗ್ ತಾಣಗಳಿವೆ. ಪ್ಯಾರಗ್ಲೈಡಿಂಗ್ ಮೂಲಕ ಆಕಾಶದಲ್ಲಿ ಹಕ್ಕಿಯಂತೆ ಹಾರಿ ನೋಡಿ .

ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?

 ಮನಾಲಿ, ಹಿಮಾಚಲ ಪ್ರದೇಶ

ಮನಾಲಿ, ಹಿಮಾಚಲ ಪ್ರದೇಶ

PC: Arupamdas
ಮನಾಲಿಯ ಸೋಲಾಂಗ್ ವ್ಯಾಲಿ ಪ್ರದೇಶವು ಬೇಸಿಗೆಯ ಹಾಗೂ ಚಳಿಗಾಲದ ಆಟಗಳಿಗೆ ಹೆಸರುವಾಸಿಯಾಗಿದೆ. ಪ್ಯಾರಚೂಟ್, ಸ್ಕೇಟಿಂಗ್, ಪ್ಯಾರಗ್ಲೈಡಿಂಗ್ ಎಲ್ಲಾ ಇಲ್ಲಿನ ಪ್ರಮುಖ ಆಟಗಳಾಗಿವೆ. ಪ್ಯಾರಗ್ಲೈಡಿಂಗ್ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಸೋಲಾಂಗ್ ವ್ಯಾಲಿ ಫೇಮಸ್ ಆಗಿದೆ.

ಬಿರ್ ಬಿಲ್ಲಿಂಗ್, ಹಿಮಾಚಲ ಪ್ರದೇಶ

ಬಿರ್ ಬಿಲ್ಲಿಂಗ್, ಹಿಮಾಚಲ ಪ್ರದೇಶ

PC: Okorok
ಹಿಮಾಚಲ ಪ್ರದೇಶದ ಜೋಗಿಂಧರ್ ನಗರ ವ್ಯಾಲಿಯನ್ನು ಭಾರತದ ಪ್ಯಾರಗ್ಲೈಡಿಂಗ್ ರಾಜಧಾನಿ ಎನ್ನಲಾಗುತ್ತದೆ. ಇದು ಪ್ಯಾರಗ್ಲೈಡಿಂಗ್‌ಗೆ ಫೇಮಸ್ ಆಗಿದೆ. ಬಿಲ್ಲಿಂಗ್ ಟೇಕ್‌ಆಫ್‌ ಸ್ಥಳವಾದರೆ ಬಿರ್‌ ಎನ್ನುವ ಹಳ್ಳಿಯಲ್ಲಿ ಲ್ಯಾಂಡಿಂಗ್ ಆಗುತ್ತದೆ.

ಕುಂಜಪುರಿ , ಉತ್ತರಖಂಡ

ಕುಂಜಪುರಿ , ಉತ್ತರಖಂಡ

PC:Bpa
ಉತ್ತರಖಂಡದ ರಿಷಿಕೇಶ್ ಸಾಹಸಮಯ ಚಟುವಟಿಕೆಗೆ ಪ್ರಸಿದ್ಧವಾದ ಸ್ಥಳವಾಗಿದೆ. ಇದನ್ನು ಉತ್ತರಖಂಡದ ಪ್ಯಾರಗ್ಲೈಡಿಂಗ್ ರಾಜಧಾನಿ ಎಂದೇ ಹೇಳಬಹುದು. ಇದು ಪ್ಯಾರಗ್ಲೈಡಿಂಗ್‌ನ ಅನುಭವ ಪಡೆಯಲು ಒಂದು ಉತ್ತಮ ಸ್ಥಳವಾಗಿದೆ.

ಕಮಶೇಟ್ , ಮಹಾರಾಷ್ಟ್ರ

ಕಮಶೇಟ್ , ಮಹಾರಾಷ್ಟ್ರ

PC: Extremehimalayan
ಪುಣೆಯಿಂದ ಸುಮಾರು 45 ಕಿ.ಮೀ ದೂರದಲ್ಲಿ ಕಮ್‌ಶೇಟ್ ಇದೆ. ಲೋನಾವ್‌ಲಾದಿಂದ 20 ಕಿ.ಮೀ ದೂರದಲ್ಲಿದೆ. ಮಹಾರಾಷ್ಟ್ರದಲ್ಲಿರುವ ಎರಡು ಪ್ಯಾರಗ್ಲೈಡಿಂಗ್ ಸ್ಪಾಟ್‌ಗಳಲ್ಲಿ ಇದೂ ಒಂದು. ಪ್ಯಾರಗ್ಲೈಡಿಂಗ್ ಸೀಸನ್ ಶುರುವಾಗುವುದು ಅಕ್ಟೋಬರ್‌ ತಿಂಗಳಿನಿಂದ.

ಯೆಲಗಿರಿ, ತಮಿಳುನಾಡು

ಯೆಲಗಿರಿ, ತಮಿಳುನಾಡು

PC:Extremehimalayan
ಯೆಲಗಿರಿ ಸಾಹಸಮಯ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಇದೊಂದು ಪ್ರಸಿದ್ಧ ಪ್ರವಾಸಿ ತಾಣ ಕೂಡಾ ಹೌದು. ವನಿಯಂಬಡಿ ತಿರುಪಟ್ಟೂರು ರಸ್ತೆಯಲ್ಲಿ ಸಣ್ಣ ಬೆಟ್ಟ ಪ್ರದೇಶಗಳಿದ್ದು ನೂರಾರು ಜಾತಿಯ ಹಾವುಗಳ ಮನೆಯೂ ಆಗಿದೆ.

ಸಿಕ್ಕಿಂ

ಸಿಕ್ಕಿಂ

PC:Anil1956
ಈಶಾನ್ಯ ಭಾರತದಲ್ಲಿ ಸಿಕ್ಕಿಂ ಅತ್ಯಂತ ಪ್ರಸಿದ್ಧ ಪ್ಯಾರಗ್ಲೈಡಿಂಗ್ ತಾಣವಾಗಿದೆ. ಇಲ್ಲಿ ಪ್ಯಾರಗ್ಲೈಡಿಂಗ್‌ನಲ್ಲಿ ಹಿಮಾಲಯದ ಬೆಟ್ಟಗಳು, ಹಿಮಾಲಯದ ಎತ್ತರವನ್ನು ಕಾಣಬಹುದು. ಸಾಹಸ ಪ್ರಿಯರಿಗೆ ಇದು ತುಂಬಾ ಇಷ್ಟವಾಗುತ್ತದೆ.

ಗೋವಾ

ಗೋವಾ

PC: Franz84
ಗೋವಾದಲ್ಲಿನ ಅರಂಬೋಲ್ ಬೀಚ್ ಪ್ಯಾರಗ್ಲೈಡಿಂಗ್‌ಗೆ ಉತ್ತಮ ಸ್ಥಳವಾಗಿದೆ. ಈ ಬೀಚ್ ಇತರ ಸಾಹಸಮಯ ಕ್ರೀಡೆಗಳಾದ ಬೋಟಿಂಗ್, ಪ್ಯಾರಸೈಕ್ಲಿಂಗ್‌ಗೂ ಈ ಸ್ಥಳ ಫೇಮಸ್ ಆಗಿದೆ.

ಪಂಚಗಣಿ ಮಹಾರಾಷ್ಟ್ರ

ಪಂಚಗಣಿ ಮಹಾರಾಷ್ಟ್ರ

PC:Antoine Lamielle
ಕಮಶೇಟ್‌ ನಂತರ ಪ್ಯಾರಗ್ಲೈಡಿಂಗ್‌ಗೆ ಫೇಮಸ್ ಆಗಿರೋ ಪ್ರದೇಶ ಪಂಚಗಣಿ ಸಿಡ್ನಿ ಪಾಯಿಂಟ್, ಕೃಷ್ಣ ವ್ಯಾಲಿ ಇವುಗಳನ್ನೆಲ್ಲಾ ಪಂಚಗಣಿ ಪ್ಯಾರಗ್ಲೈಡಿಂಗ್‌ನಲ್ಲಿ ಕಾಣಬಹುದು.

ಬೆಂಗಳೂರು, ಕರ್ನಾಟಕ

ಬೆಂಗಳೂರು, ಕರ್ನಾಟಕ

PC: Antoine Lamielle
ಬೆಂಗಳೂರಿನಲ್ಲಿ ಪ್ಯಾರಗ್ಲೈಡಿಂಗ್‌ಗೆ ಉತ್ತಮವಾದ ಸ್ಥಳ ನಂದಿಹಿಲ್ಸ್. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಬೋಗ ನಂದೀಶ್ವರ ದೇವಾಲಯ ಕೂಡಾ ಇಲ್ಲಿ ಇದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more