Search
  • Follow NativePlanet
Share
» »ಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ

ಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ

ಡಿಸೆಂಬರ್‌ ಬಂತೆಂದರೆ ಕ್ರಿಸ್ಮಸ್ ರಜೆಯೂ ಪ್ರಾರಂಭವಾಗುತ್ತದೆ. ಈಗಾಗಲೇ ಚಳಿಯ ವಾತಾವರಣ ಪ್ರಾರಂಭವಾಗಿದೆ. ಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಪ್ಲ್ಯಾನ್ ಮಾಡೋದು ನಿಜಕ್ಕೂ ಒಳ್ಳೆಯ ಉಪಾಯವಾಗಿದೆ. ಇನ್ನು ಡಿಸೆಂಬರ್‌ನ ಈ ಚಳಿಯಲ್ಲಿ ಹನಿಮೂನ್‌ಗೆ ಹೋಗುವುದಾದರೂ ಎಲ್ಲಿಗೆ ಅನ್ನೋದು ಮುಖ್ಯ. ಹಾಗಾಗಿ ನಾವು ಇಂದು ಚಳಿಗಾಲದಲ್ಲಿ ಸುತ್ತಾಡಲು ಯೋಗ್ಯವಾದ ಅತ್ಯುತ್ತಮ ಹನಿಮೂನ್ ತಾಣಗಳನ್ನು ತಿಳಿಸಲಿದ್ದೇವೆ.

ಅಲೆಪ್ಪಿ

ಅಲೆಪ್ಪಿ

ಭಾರತದ ಅತ್ಯಂತ ಸುಂದರವಾದ ಹಿನ್ನೀರಿನ ಹನಿಮೂನ್‌ ತಾಣಗಳಲ್ಲಿ ಅಲೆಪ್ಪಿ ಒಂದಾಗಿದೆ. ಪ್ರಕೃತಿಯ ಉತ್ಕೃಷ್ಟತೆಯ ಮಧ್ಯೆ ನಿಮ್ಮ ಹನಿಮೂನ್‌ ಇನ್ನಷ್ಟು ಮಧುರವಾಗುವುದು . ಮರದ ನೆಲಹಾಸುಗಳು ಮತ್ತು ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ದೋಣಿಮನೆಗಳಲ್ಲಿ ರಾಯಲ್ ಅನುಭವವನ್ನು ಪಡೆಯಬಹುದು.

ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ! ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!

ಗೋವಾ

ಗೋವಾ

ಹನಿಮೂನ್ ಅಂದಾಕ್ಷಣ ಹೆಚ್ಚಿನವರು ಇಷ್ಟಪಡೋದು ಗೋವಾ. ತೆಂಗಿನ ಮರಗಳೊಂದಿಗೆ ಮಬ್ಬಾದ ಮಂಜಿನಿಂದ ಕೂಡಿರುವ ವಾತಾವರಣ ಮೋಡಿ ಮಾಡುವ ಕಡಲತೀರಗಳಲ್ಲಿ ನೀವು ಸಾಕಷ್ಟು ಸಮಯ ಕಳೆಯಬಹುದು. ಬಿಳಿ ಮರಳಿನೊಂದಿಗೆ ಆಟವಾಡಬಹುದು. ಇಲ್ಲಿ ಪಾರ್ಟಿ ಮಾಡುವಂತಹ ಸಾಕಷ್ಟು ಸ್ಥಳಗಳಿವೆ. ಗೋವಾ ಬಳಿ ಸಾಕಷ್ಟು ದ್ವೀಪಗಳಿವೆ, ಅದು ಖಾಸಗಿ ಮತ್ತು ನಿಕಟವಾದ ರೋಮ್ಯಾಂಟಿಕ್ ಸಮಯವನ್ನು ಹೊಂದಲು ಸಹಾಯ ಮಾಡುತ್ತದೆ.

ಮುನ್ನಾರ್

ಮುನ್ನಾರ್

ಮುನ್ನಾರ್‌ನ್ನು ಭಾರತದ ಹನಿಮೂನ್‌ನನ ರಾಜಧಾನಿ ಎನ್ನಲಾಗುತ್ತದೆ. ಇದು ಬೇರೆ ಗಿರಿಧಾಮಗಳಂತೆಯೇ ಇದೆ. ಆದರೆ, ಇದು ಅಪರೂಪದ ಹವಾಗುಣ, ಹಿತವಾದ ಪರಿಸರ, ಆಹ್ಲಾದಕರ ಗಾಳಿಯನ್ಮು ಹೊಂದಿದೆ. ಇದು ನಿಮ್ಮ ಹನಿಮೂನ್‌ಗೆ ಉತ್ತಮ ಆರಂಭವನ್ನು ನೀಡುತ್ತದೆ. ಮುನ್ನಾರ್‌ ಹಚ್ಚಹಸಿರಿನ ಜೊತೆಗೆ ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿದೆ.

ಕೆಜಿಎಫ್‌ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?ಕೆಜಿಎಫ್‌ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?

ಊಟಿ

ಊಟಿ

ಊಟಿಯು ತಮಿಳುನಾಡಿನ ಗಿರಿಧಾಮದ ರಾಣಿಯಾಗಿದೆ. ವಿಶ್ವಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ; ಊಟಿಯನ್ನು ಹನಿಮೂನ್‌ ತಾಣಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಗಿದೆ. ರೋಸ್ ಆರ್ಕಿಡ್‌ಗಳು, ಚಹಾ ಎಸ್ಟೇಟ್‌ಗಳು, ಹಚ್ಚ ಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವು ನಿಮಗೆ ಸ್ವರ್ಗದಲ್ಲಿರುವಂತಹ ಅನುಭವವನ್ನು ನೀಡುತ್ತದೆ.

ಅಂಡಮಾನ್

ಅಂಡಮಾನ್

ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಗೋವಾ ಶೈಲಿಯ ಬೀಚ್ ಹನಿಮೂನ್‌ಗಳನ್ನು ಆನಂದಿಸಬಹುದು. ಈ ದ್ವೀಪಗಳು ಪ್ರಣಯ ಪ್ರಿಯರಿಗೆ ಉತ್ತಮ ಹನಿಮೂನ್ ಸ್ಥಳವಾಗಿದೆ. ಮರಳಿನ ಮೇಲೆ ಮತ್ತು ಕಂದಕಗಳಲ್ಲಿ ಒಂದು ವಾರ ಕಳೆಯಲು ನೀವು ಬಯಸುತ್ತೀರಾ? ಹಾಗಾದರೆ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿ ನೀವು ಯಾವುದೇ ನೀರಿನ ಕಾಟೇಜ್‌ನಲ್ಲಿ ಉಳಿಯಬಹುದು.

ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ? ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ?

ಶಿಮ್ಲಾ

ಶಿಮ್ಲಾ

ಶಿಮ್ಲಾವು ಸುಂದರವಾದ ಸ್ಥಳವಾಗಿದೆ. ಹಿಮಾಚಲ ಪ್ರದೇಶದಲ್ಲಿ ಚಳಿಗಾಲದ ಸಮಯದಲ್ಲಿ ಹಿಮಕರಡಿಯೊಂದಿಗೆ ಭವ್ಯವಾದ ಹಿಮಾಲಯವನ್ನು ವೀಕ್ಷಿಸಿ. ಹಿಮದಿಂದ ಕೂಡಿರುವ ಶಿಮ್ಲಾವೂ ನವ ದಂಪತಿಗಳ ಸ್ವರ್ಗವೇ ಆಗಿದೆ. ದಂಪತಿಗಳಿಗೆ ಶಿಮ್ಲಾ ಕೂಡ ಒಂದು ಶಾಪಿಂಗ್ ಹಾಟ್‌ಸ್ಪಾಟ್‌ ಆಗಿದೆ.

ಮನಾಲಿ

ಮನಾಲಿ

ಮನಾಲಿ ಚಳಿಗಾಲದ ಮಧುಚಂದ್ರದ ತಾಣಗಳಿಗೆ ಉತ್ತಮ ಹಾಟ್‌ಸ್ಪಾಟ್‌ ಆಗಿದೆ. ಪ್ಯಾರಾಗ್ಲೈಡಿಂಗ್, ಹೈಕಿಂಗ್, ಸ್ಕೀಯಿಂಗ್, ವೈಟ್ ವಾಟರ್ ರಾಫ್ಟಿಂಗ್, ಝೋರ್ಬಿಂಗ್ ಮುಂತಾದ ವಿವಿಧ ಚಟುವಟಿಕೆಗಳಲ್ಲಿ ದಂಪತಿಗಳು ಪಾಲ್ಗೊಳ್ಳುತ್ತಾರೆ. ಸಹಜವಾಗಿ ಮಂಜಿನಿಂದ ಆವೃತವಾದ ಬೆಟ್ಟದ ಇಳಿಜಾರುಗಳನ್ನು ಆನಂದಿಸಿ.

7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ

ಡಾಲ್‌ಹೌಸಿ

ಡಾಲ್‌ಹೌಸಿ

ನಿಮ್ಮ ಅತ್ಯುತ್ತಮ ಚಳಿಗಾಲದಲ್ಲಿ ಹನಿಮೂನ್‌ನ್ನು ಕಳೆಯಲು ಇದು ಮತ್ತೊಂದು ಆಯ್ಕೆಯಾಗಿದೆ. ಚಳಿಗಾಲದ ತಿಂಗಳುಗಳಲ್ಲಿ ಭೇಟಿ ನೀಡಿದಾಗ ಈ ಸುಂದರ ತಾಣವು ಮಂಜುಗಡ್ಡೆಯಿಂದ ಕೂಡಿರುತ್ತದೆ ಮತ್ತು ಅದು ನಿಮ್ಮ ಹನಿಮೂನ್‌ನ ಅನುಭವವನ್ನು ಹೆಚ್ಚು ಸ್ಮರಣೀಯವಾಗಿ ಮಾಡುತ್ತದೆ. ಎತ್ತರದ ಪೈನ್ ಮರಗಳು ಹಿಮಪಾತದಿಂದ ಅಲಂಕರಿಸಲ್ಪಟ್ಟಿದೆ. ಇದು ನಿಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ನೈನಿತಾಲ್

ನೈನಿತಾಲ್

ನೈನಿತಾಲ್ ನೈನಿ ಸರೋವರದ ಹತ್ತಿರದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಈ ಚಳಿಗಾಲದ ಮಧುಚಂದ್ರದ ಸ್ವರ್ಗವನ್ನು ಮಂಜುಗಡ್ಡೆಯ ಕುಮಾನ್ ಬೆಟ್ಟಗಳಲ್ಲಿ ನೆಲೆಸಿದೆ. ಕುದುರೆ ಸವಾರಿ ಚಾರಣ, ಬೋಟಿಂಗ್ ಮತ್ತು ವಿಹಾರ ನೌಕೆ ಇಲ್ಲಿ ನೆಚ್ಚಿನ ಚಟುವಟಿಕೆಗಳಾಗಿವೆ.

ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಕೊಡಗು

ಕೊಡಗು

"ಭಾರತೀಯ ಸ್ಕಾಟ್ಲೆಂಡ್" ಎಂದೇ ಕರೆಯಲಾಗುವ ಕೊಡಗು 1748 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಕೊಡಗಿನ ಎತ್ತರದ ಪರ್ವತದ ಮೇಲೆ ಟ್ರೆಕ್ಕಿಂಗ್ ಮಾಡಲು ಚಳಿಗಾಲವು ಉತ್ತಮ ಸಮಯ. ಸಂಪೂರ್ಣ ನಿತ್ಯಹರಿದ್ವರ್ಣ ಸಸ್ಯ ಮತ್ತು ಭೂದೃಶ್ಯದ ಪ್ರಸಿದ್ಧ ಮಂಡಲ್ಪಟ್ಟಿ ಯಿಂದ ಪರಿಪೂರ್ಣ ನೋಟವನ್ನು ಇಲ್ಲಿ ಪಡೆಯಿರಿ.

ಜೈಸಲ್ಮೇರ್

ಜೈಸಲ್ಮೇರ್

ಜೈಸಲ್ಮೇರ್ ಪ್ರೇಮಪಕ್ಷಿಗಳಿಗೆ ಚಳಿಗಾಲದ ಸೂಕ್ತ ಸ್ಥಳವಾಗಿದೆ. ಖಾಸಗಿ ಕ್ಯಾಂಪಿಂಗ್ ಮತ್ತು ದೀಪೋತ್ಸವ, ಮರುಭೂಮಿಯಲ್ಲಿ ಸಫಾರಿ, ರೊಮ್ಯಾಂಟಿಕ್ ಬೋಟಿಂಗ್, ಒಂಟೆ ಸಫಾರಿ, ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಮತ್ತು ಮರುಭೂಮಿಯಲ್ಲಿ ಮೋಂಬತ್ತಿ ದೀಪಗಳು ಮುಂತಾದ ಚಟುವಟಿಕೆಗಳಿಗಾಗಿ ನೀವು ಹುಡುಕುತ್ತಿದ್ದಿರೆಂದಾದರೆ ನೀವು ಜೈಸಲ್ಮೇರ್‌ಗೆ ಹೋಗಬೇಕು.

 ಕೂರ್ಗ್‌ನಲ್ಲಿರುವ ನೀಲಕಂಡಿ ಜಲಪಾತವನ್ನು ಕಂಡಿದ್ದೀರಾ? ಕೂರ್ಗ್‌ನಲ್ಲಿರುವ ನೀಲಕಂಡಿ ಜಲಪಾತವನ್ನು ಕಂಡಿದ್ದೀರಾ?

ಗುಲ್ಮಾರ್ಗ್

ಗುಲ್ಮಾರ್ಗ್

ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲಾ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಹಿಮಾಲಯ ಪಶ್ಚಿಮದ ಪಿರನ್ಜಾಲ್ ವ್ಯಾಪ್ತಿಯಲ್ಲಿದೆ. ಇದು ಚಳಿಗಾಲದ ಕ್ರೀಡಾ ಚಟುವಟಿಕೆಗಳಿಗೆ ಒಂದು ಕೇಂದ್ರವಾಗಿದೆ. ವಿಶೇಷವಾಗಿ ಸ್ಕೀಯಿಂಗ್ ಮತ್ತು ದೇಶದಲ್ಲಿ ಅತ್ಯುತ್ತಮ ವಿರಾಮ ತಾಣಗಳಲ್ಲಿ ಒಂದಾಗಿದೆ. ಗುಲ್ಮಾರ್ಗ್ ಹನಿಮೂನ್ ಪ್ಯಾಕೇಜ್ ಈ ಸುಂದರ ಪಟ್ಟಣದಲ್ಲಿ ನಿಮ್ಮ ಮರೆಯಲಾಗದ ಪ್ರಯಾಣವನ್ನು ಯೋಜಿಸುವ ಒಂದು ಪರಿಪೂರ್ಣ ಮಾರ್ಗವಾಗಿದೆ.

ಕೋವಲಂ

ಕೋವಲಂ

ಕೇರಳದ ತಿರುವನಂತಪುರಂನಲ್ಲಿರುವ ಕಡಲತೀರಗಳು ತುಂಬಿರುವ ವಿಲಕ್ಷಣವಾದ ಪಟ್ಟಣವು ಕೋವಲಂ ಆಗಿದೆ. ಈ ಸ್ಥಳವು ಅರೇಬಿಯನ್ ಸಮುದ್ರದ ಸಮೀಪದಲ್ಲಿದೆ ಮತ್ತು ಉತ್ತಮ ಹನಿಮೂನ್ ತಾಣವಾಗಿ ಪರಿಪೂರ್ಣ ಪರಿಸರವನ್ನು ಹೊಂದಿದೆ. ಬಾಯಲ್ಲಿ ನೀರೂರಿಸುವ ಸಮುದ್ರ ಆಹಾರ, ಆಯುರ್ವೇದ ಅಂಗಮರ್ಧನಗಳು, ಇದು ನವದಂಪತಿಗಳಿಗೆ ಉತ್ತಮ ರೆಸಾರ್ಟ್ ಇಲ್ಲಿದೆ.

ಊಟಿಯಲ್ಲಿ ನೀವು ನೋಡಬೇಕಾದ ಪ್ರಮುಖ 15 ತಾಣಗಳುಊಟಿಯಲ್ಲಿ ನೀವು ನೋಡಬೇಕಾದ ಪ್ರಮುಖ 15 ತಾಣಗಳು

ಕಸೌಲಿ

ಕಸೌಲಿ

6,322 ಅಡಿಗಳಷ್ಟು ಎತ್ತರದ ಪೈನ್ ಮರಗಳು, ಎತ್ತರದ ಶಿಖರಗಳು ಮತ್ತು ಉತ್ಸಾಹಭರಿತ ಸ್ಥಳೀಯರು, ನಿಮ್ಮ ಹನಿಮೂನ್‌ನ್ನು ನೀವು ಕಸೌಲಿಯಲ್ಲಿ ಕಳೆಯಬೇಕೆಂದಿದ್ದರೆ ಮಾಡಲು ಬಯಸುವಿರಿ. ಹಿಮಾಚಲ ಪ್ರದೇಶದ ಕಸೌಲಿಗೆ ನಿಮ್ಮ ಹನಿಮೂನ್‌ ಕನಸನ್ನು ನನಸಾಗಿಸುತ್ತದೆ.

ಮಸ್ಸೂರಿ

ಮಸ್ಸೂರಿ

ಉತ್ತರಾಖಂಡದ ಡೆಹ್ರಾಡೂನ್ ಸಮೀಪ ಮಸ್ಸೂರಿ ಇದೆ. ಸಮುದ್ರ ಮಟ್ಟಕ್ಕಿಂತ 1826 ಮೀಟರ್ ಎತ್ತರದ ಬೆಟ್ಟದ ಮೇಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಸುಂದರವಾದ ಜಲಪಾತಗಳಿಗೆ ಹೋಗಿ, ಬೆರಗುಗೊಳಿಸುವ ಕಣಿವೆಗಳ ಮೇಲೆ ಕೇಬಲ್-ಕಾರ್ ಸವಾರಿ ಮಾಡಿ, ಅದ್ಭುತ ಸರೋವರದಲ್ಲಿ ಬೋಟಿಂಗ್ ಮಾಡುವಾಗ ಪರಸ್ಪರ ಹಿತಕರವಾದ ಕ್ಷಣಗಳನ್ನು ಕಳೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X