Search
  • Follow NativePlanet
Share
» »ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಿರುಮಲಕ್ಕೆ ಒಂದು ಆಧ್ಯಾತ್ಮಿಕ ಪ್ರಯಾಣ

ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಿರುಮಲಕ್ಕೆ ಒಂದು ಆಧ್ಯಾತ್ಮಿಕ ಪ್ರಯಾಣ

ತಿರುಮಲವು ದೇಶದಲ್ಲಿಯ ಅತ್ಯಂತ ಪ್ರಸಿದ್ದ ದೇವಾಲಯ ಪಟ್ಟಣಗಳಲ್ಲೊಂದಾಗಿದೆ. ಇದು ವೆಂಕಟೇಶ್ವರ ದೇವರ ವಾಸ ಸ್ಥಾನವಾಗಿದೆ. ತಿರುಮಲ ಬೆಟ್ಟವು ಶೇಷಾಚಲಮ್ ಪರ್ವತ ಶ್ರೇಣಿಗಳ ಒಂದು ಭಾಗವಾಗಿದೆ. ಈ ಪರ್ವತವು ಏಳು ಬೆಟ್ಟಗಳನ್ನು ಒಳಗೊಂಡಿದ್ದು, ಈ ಏಳು ಬೆಟ್ಟಗಳು ಆದಿ ಶೇಷನ ಏಳು ಹೆಡೆಗಳನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿ. ಎಂದು ಈ ಏಳು ಬೆಟ್ಟಗಳನ್ನು ಹೆಸರಿಸಲಾಗುತ್ತದೆ.

ಹಿಂದೂತ್ವವನ್ನು ಪರಿಪಾಲಿಸುವವರಿಗೆ ತಿರುಮಲವು ಅತ್ಯಂತ ಪವಿತ್ರವಾದ ಸ್ಥಳಗಳಲ್ಲೊಂದೆಂದು ಪರಿಗಣಿಸಲಾಗುತ್ತದೆ.ಇದು ತಿರುಮಲ ತಿರುಪತಿ ದೇವಸ್ಥಾನ ಅಥವಾ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ನೆಲೆಯಾಗಿದ್ದು ಇದು ವಿಶ್ವದ ಎರಡನೇ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ತಿರುಮಲವು ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದಲ್ಲಿದೆ ಮತ್ತು ಸರಿಸುಮಾರು 26.8 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.

bangaloretoTirumala-01-1488365669-1660889029.jpg

ಆರಂಭದ ಸ್ಥಳ: ಬೆಂಗಳೂರು

ತಲುಪಬೇಕಾದ ಸ್ಥಳ: ತಿರುಮಲ

ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ ನಿಂದ ಫೆಬ್ರವರಿ

ತಲುಪುವುದು ಹೇಗೆ?

ವಾಯುಮಾರ್ಗ: ತಿರುಪತಿ ವಿಮಾನ ನಿಲ್ದಾಣವು ತಿರುಪತಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದ್ದು ಇದು ದೇವಾಲಯದಿಂದ ನಿಲ್ದಾಣವು ಇಲ್ಲಿಂದ ಸುಮಾರು 40 ಕಿಮೀ ದೂರದಲ್ಲಿದೆ ಮತ್ತು ಹೈದರಾಬಾದ್, ದೆಹಲಿ, ಚೆನ್ನೈ, ವೈಜಾಗ್ ಮುಂತಾದ ದೇಶದ ಪ್ರಮುಖ ನಗರಗಳಿಗೆ ನಿಯಮಿತ ದೇಶೀಯ ವಿಮಾನಗಳನ್ನು ಹೊಂದಿದೆ.

ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣವು ತಿರುಪತಿಯಲ್ಲಿದೆ, ಇದು ಇಲ್ಲಿಂದ ಸುಮಾರು 26 ಕಿಮೀ ದೂರದಲ್ಲಿದೆ ಮತ್ತು ದೇಶದಾದ್ಯಂತ ಎಲ್ಲಾ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳಿಗೆ ನಿಯಮಿತ ರೈಲುಗಳನ್ನು ಹೊಂದಿದೆ.

ರಸ್ತೆಯ ಮೂಲಕ: ತಿರುಮಲವನ್ನು ತಲುಪಲು ಉತ್ತಮ ಮಾರ್ಗವೆಂದರೆ ರಸ್ತೆಯ ಮೂಲಕ. ಪಟ್ಟಣವು ರಸ್ತೆಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಪ್ರಮುಖ ನಗರಗಳಿಂದ ತಿರುಮಲಕ್ಕೆ ಸಾಮಾನ್ಯ ಬಸ್ಸುಗಳು ಕಾರ್ಯನಿರ್ವಹಿಸುತ್ತವೆ.

09-1399637516-07-1399462476-tvt1-1660889037.jpg

ಬೆಂಗಳೂರಿನಿಂದ ತಿರುಮಲಕ್ಕೆ ಒಟ್ಟು ಡ್ರೈವಿಂಗ್ ದೂರವು ಸುಮಾರು 267 ಕಿಮೀ.ಆಗಿದ್ದು, ತೆಗೆದುಕೊಳ್ಳಬಹುದಾದ ಮೂರು ಮಾರ್ಗಗಳಿವೆ, ಅವುಗಳು ಈ ಕೆಳಗಿನಂತಿವೆ

ಮಾರ್ಗ 1: ಬೆಂಗಳೂರು - ಕೋಲಾರ - ಮುಳಬಾಗಲು - ಪಲಮನೇರ್ - ಚಿತ್ತೂರು - ತಿರುಪತಿ - ತಿರುಮಲ, ರಾ.ಹೆ. 75 ಮತ್ತು ರಾ. ಹೆ. 69 ಮೂಲಕ

ಮಾರ್ಗ 2: ಬೆಂಗಳೂರು - ಹೊಸಕೋಟೆ - ಚಿಂತಾಮಣಿ - ಮದನಪಲ್ಲಿ - ಪಿಲೇರು - ತಿರುಪತಿ - ತಿರುಮಲ ಮೂಲಕ ಚೆನ್ನೈ - ಅನಂತಪುರ ಹೆದ್ದಾರಿ

ಮಾರ್ಗ 3: ಬೆಂಗಳೂರು - ಹೊಸೂರು - ಕೃಷ್ಣಗಿರಿ - ಅಂಬೂರು - ವೆಲ್ಲೂರು - ಚಿತ್ತೂರು - ತಿರುಪತಿ - ತಿರುಮಲ ರಾಷ್ಟ್ರೀಯ ಹೆದ್ದಾರಿ 48 ಮೂಲಕ

ಮಾರ್ಗ 1 ರಲ್ಲಿ ಪ್ರಯಾಣಿಸಲು ಆಯ್ಕೆ ಮಾಡುವವರಿಗೆ, ತಿರುಮಲವನ್ನು ತಲುಪಲು ಸುಮಾರು 6 ಗಂಟೆ ತೆಗೆದುಕೊಳ್ಳುತ್ತದೆ, ರಾ.ಹೆ 75 ಮತ್ತು 69 ಮೂಲಕ. ಈ ಮಾರ್ಗವು ನಿಮ್ಮನ್ನು ಕೋಲಾರ, ಮುಳಬಾಗಲು, ಚಿತ್ತೂರು ಮುಂತಾದ ಪ್ರಸಿದ್ಧ ಪಟ್ಟಣಗಳ ಮೂಲಕ ಕರೆದೊಯ್ಯುತ್ತದೆ.

ರಸ್ತೆಗಳು ಇಲ್ಲಿ ಸುಸಜ್ಜಿತವಾಗಿ ನಿರ್ವಹಿಸಲ್ಪಟ್ಟಿದ್ದು, ಇದು 267 ಕಿ.ಮೀ ದೂರದ ಗಮ್ಯ ಸ್ಥಾನವನ್ನು ಈ ರಸ್ತೆಯ ಮೂಲಕ ಶಾಂತಿಯುತವಾಗಿ ತಲುಪಲು ಸಾಧ್ಯವಾಗುತ್ತದೆ.

ನೀವು 2 ನೇ ಮಾರ್ಗವನ್ನು ಆಯ್ಕೆ ಮಾಡುವವರಿಗೆ 258 ಕಿ.ಮೀ ದೂರದ ಗಮ್ಯ ಸ್ಥಾನವನ್ನು ತಲುಪಲು 6.3 ತಾಸುಗಳು ಬೇಕಾಗುತ್ತದೆ. ಇದು ಬೆಂಗಳೂರಿನಿಂದ ತಿರುಮಲ, ವಯಾ ಚೆನ್ನೈ - ಅನಂತಪುರ ಹೈವೇ ಯ ಮೂಲಕ ಚಲಿಸಬೇಕಾಗುತ್ತದೆ.

ಮಾರ್ಗ 3 ರಲ್ಲಿ, ಮಾರ್ಗ 3 ರಲ್ಲಿ, ತಿರುಮಲ ತಲುಪಲು ರಾ.ಹೆ 48 ಮೂಲಕ 337 ಕಿಮೀ ದೂರವನ್ನು ಕ್ರಮಿಸಲು ನಿಮಗೆ ಸುಮಾರು 7 ಗಂಟೆ ತೆಗೆದುಕೊಳ್ಳುತ್ತದೆ.

ಇಲ್ಲಿಗೆ ವಾರಾಂತ್ಯದ ಪ್ರಯಾಣವನ್ನು ಯೋಜಿಸಬಹುದು. ಆದ್ದರಿಂದ, ಇಲ್ಲಿಗೆ ಶನಿವಾರ ಬೆಳಿಗ್ಗೆ ಹೊರಡಲು ಆಯ್ಕೆ ಮಾಡಬಹುದು ಮತ್ತು ಸುಮಾರು ಒಂದೂವರೆ ದಿನ ಕಳೆದ ನಂತರ, ಒಬ್ಬರು ಭಾನುವಾರ ಬೆಳಿಗ್ಗೆ ಅಥವಾ ಮಧ್ಯಾಹ್ನ ಬೆಂಗಳೂರಿಗೆ ಪ್ರಯಾಣಿಸಲು ಪ್ರಾರಂಭಿಸಬಹುದು ಮತ್ತು ಸಂಜೆ ಅಥವಾ ರಾತ್ರಿಯ ಹೊತ್ತಿಗೆ ನಗರವನ್ನು ತಲುಪಬಹುದು.

28-1514445201-6-1660889045.jpg

ಮುಳಬಾಗಿಲು ಮತ್ತು ಚಿತ್ತೂರಿನಲ್ಲಿ ಒಂದು ಸಣ್ಣ ನಿಲುಗಡೆ

ಬೆಂಗಳೂರಿನ ಟ್ರಾಫಿಕ್ ತಪ್ಪಿಸಲು ಬೆಳಿಗ್ಗೆ ಬೇಗನೇ ಹೊರಡುವುದು ಹೆಚ್ಚು ಸೂಕ್ತವಾಗಿರುತ್ತದೆ ಇದರಿಂದಾಗಿ ನೀವು ಹೆದ್ದಾರಿಗಳಲ್ಲಿ ಹೆಚ್ಚು ವೇಗವಾಗಿ ಚಲಿಸಬಹುದಾಗಿದೆ. ಮತ್ತು ಗಡಿ ಭಾಗವನ್ನು ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನೀವು ಒಮ್ಮೆ ಹೆದ್ದಾರಿ ತಲುಪಿದಿರಿ ಎಂದರೆ ಸಾಕು ಇಲ್ಲಿ ಬೆಳಿಗ್ಗಿನ ಉಪಹಾರಕ್ಕಾಗಿ ಸಾಕಷ್ಟು ಆಯ್ಕೆಗಳನ್ನು ನೀವು ಕಾಣಬಹುದಾಗಿದೆ. ಮುಳಬಾಗಿಲು ಸ್ವಾದಿಷ್ಟ ದೋಸೆಗೆ ಪ್ರಸಿದ್ದಿಯನ್ನು ಪಡೆದಿದೆ.

ಮುಳಬಾಗಿಲಿನಲ್ಲಿ ಒಂದು ವಿರಾಮ ತೆಗೆದುಕೊಂಡು ಇಲ್ಲಿಯ ದೋಸೆಯನ್ನು ಸವಿಯುತ್ತಾ ನಿಮ್ಮ ಬೆಳಗಿನ ಉಪಹಾರವನ್ನು ಮಾಡಬಹುದಾಗಿದೆ. ಹಾಗೆಯೇ ಇಲ್ಲಿನ ಪ್ರಸಿದ್ದ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬಹುದಾಗಿದ್ದು ಇಲ್ಲಿ ನಿಮ್ಮ ಮುಂದಿನ ಪ್ರಯಾಣಕ್ಕೆ ಬೇಕಾಗುವ ಶಕ್ತಿಯನ್ನು ಪಡೆದುಕೊಂಡು ನೀವು ಮುಂದಿನ ನಿಲುಗಡೆ ಮಧ್ಯಾಹ್ನದ ಊಟಕ್ಕೆ ಚಿತ್ತೂರಿನ ತನಕ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.

ಚಿತ್ತೂರು ಒಂದು ಅತ್ಯಂತ ಹೆಸರುವಾಸಿಯಾಗಿರುವ ದೇವಾಲಯ ಪಟ್ಟಣವೆನಿಸಿದ್ದು, ಇದು ಪ್ರಸಿದ್ದ ಶ್ರೀ ಕಾಳಹಸ್ತಿ ದೇವಾಲಯ ಮತ್ತು ಕಾನಿಪಾಕಂ ವಿನಾಯಕ ದೇವಾಲಯಗಳಿಗೆ ನೆಲೆಯಾಗಿದೆ. ದೇವಾಲಯ ಪಟ್ಟಣವಾಗಿರುವ ಚಿತ್ತೂರ್ ನಲ್ಲಿ ಸಾಕಷ್ಟು ಸಸ್ಯಹಾರಿ ಹೋಟೇಲುಗಳು ಕಾಣ ಸಿಗುತ್ತವೆ ಇವು ನಿಮಗೆ ಆಂಧ್ರ ಶೈಲಿಯ ಊಟವನ್ನು ಒದಗಿಸಿಕೊಡುತ್ತದೆ.

ಇದಾದ ನಂತರ ನೀವು ಇಲ್ಲಿಂದ 87 ಕಿ.ಮೀ ದೂರದಲ್ಲಿರುವ ತಿರುಮಲದ ಹಾದಿ ಹಿಡಿಯಬಹುದಾಗಿದೆ ತಿರುಮಲಕ್ಕೆ ತಲುಪಲು ಚಿತ್ತೂರಿನಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

tirumala-5-1660889053.jpg

ಗಮ್ಯ ಸ್ಥಾನ - ತಿರುಮಲ

ತಿರುಮಲವು ವೆಂಕಟೇಶ್ವರ ದೇವರ ವಾಸಸ್ಥಾನವಾಗಿದೆ ಆದುದರಿಂದ ತಡಮಾಡದೆ ಆದ್ದರಿಂದ ಹೆಚ್ಚು ವಿಳಂಬ ಮಾಡದೆ ದರ್ಶನ ಟ್ಯಾಗ್‌ಗಳನ್ನು ಹಿಡಿದುಕೊಳ್ಳಿ ಮತ್ತು ಭಕ್ತಾದಿಗಳಿಗೆ ವಸತಿಗಾಗಿ ನಿರ್ಮಿಸಲಾದ ಸರತಿ ಸಂಕೀರ್ಣಗಳಿಗೆ ಧಾವಿಸಿ, ವಾರಾಂತ್ಯದಲ್ಲಿ ದೇವಾಲಯವು ಭಕ್ತಾದಿಗಳ ಭಾರೀ ಸುರಿಮಳೆಯೇ ಇಲ್ಲಿಗೆ ಹರಿದು ಬರುತ್ತದೆ. ಇಲ್ಲಿ ವೆಂಕಟೇಶ್ವರನ ಒಂದು ಕ್ಷಣದ ದರ್ಶನಕ್ಕಾಗಿ ಬಹಳ ಸಮಯ ಕಾಯುವುದಕ್ಕಾಗಿ ಸಿದ್ದರಿರಬೇಕಾಗುತ್ತದೆ.

ವೆಂಕಟೇಶ್ವರನ ದರ್ಶನವಾದ ಬಳಿಕ ಇಲ್ಲಿನ ಅತ್ಯಂತ ಪ್ರಸಿದ್ದವಾದ 'ಲಡ್ಡು ಪ್ರಸಾದಂ' ಪಡೆಯಲು ಮರೆಯದಿರಿ ಮತ್ತು ತಿರುಪತಿಯಿಂದ ಸುಮಾರು 5ಕಿ.ಮೀ ದೂರವಿರುವ ತಿರುಚನೂರಿನ ವೆಂಕಟೇಶ್ವರ ದೇವರ ಪತ್ನಿಯಾದ ದೇವಿ ಪದ್ಮಾವತಿಯ ದರ್ಶನ ಪಡೆಯಲು ಕಾಲಾವಕಾಶ ಮಾಡಿಕೊಳ್ಳಿ. ಈ ಪ್ರದೇಶದ ಸುತ್ತಲಿನ ಹೆಚ್ಚಿನ ಪ್ರಮುಖ ದೇವಾಲಯಗಳು ತಿರುಮಲ ತಿರುಪತಿ ದೇವಸ್ಥಾನಗಳು ಅಥವಾ ಟಿಟಿಡಿ ಎಂಬ ಆಡಳಿತ ಮಂಡಳಿಯಿಂದ ನಿಯಂತ್ರಿಸಲ್ಪಡುತ್ತವೆ.

ತಿರುಮಲ ದೇವಾಲಯವನ್ನು 108 ದಿವ್ಯ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು, ಈ ದೇವಾಲಯವು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ಶಾಸನಗಳನ್ನು ಹೊಂದಿದೆ. ಇಲ್ಲಿ ದೇವರನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದಕ್ಕೆ ನಿಖರವಾದ ದಿನಾಂಕವಿಲ್ಲ. ದ್ರಾವಿಡ ಶೈಲಿಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ರಚನೆಯು ಕ್ರಿ.ಶ 300ರಿಂದ ಪ್ರಾರಂಭವಾಗುವ ಕಾಲಾವಧಿಯಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ.

ಲಕ್ಷಾಂತರ ಜನರು ದೇಗುಲಕ್ಕೆ ಭೇಟಿ ನೀಡುತ್ತಾರೆ ಮತ್ತು ಭಗವಂತನ ಆಶೀರ್ವಾದವನ್ನು ಪಡೆದು ಮತ್ತು ತಮ್ಮ ತಲೆಗಳನ್ನು ಬೋಳಿಸಿಕೊಂಡು ಹಿಂತಿರುಗುತ್ತಾರೆ ಮತ್ತು ಸಾಧ್ಯವಾದಾಗಲೆಲ್ಲಾ ಹಿಂತಿರುಗಿ ಬಂದು ಭಗವಂತನ ದರ್ಶನವನ್ನು ಪಡೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X