Search
  • Follow NativePlanet
Share
» »ಬೆರಗು ಗೊಳಿಸುವ ಬೆಲ್ಲಂ ಗುಹೆ

ಬೆರಗು ಗೊಳಿಸುವ ಬೆಲ್ಲಂ ಗುಹೆ

ಬೆಂಗಳೂರಿನಿಂದ 298.5 ಕಿ.ಮೀ. ದೂರದಲ್ಲಿರು ಬೆಲ್ಲಂ ಗುಹೆ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೆಲ್ಲಂ ಗ್ರಾಮದಲ್ಲಿದೆ.

By Divya

ಎಲ್ಲಕ್ಕಿಂತಲೂ ಭಿನ್ನ, ಅದೇನೋ ಒಂದು ಹೊಸತನ ಇರುವ ಸ್ಥಳಕ್ಕೆ ಭೇಟಿಕೊಡಬೇಕು ಎನ್ನುವ ಬಯಕೆ ಆಗಾಗ ನನ್ನನ್ನು ಕಾಡುತ್ತಿತ್ತು. ಒಮ್ಮೆ ಒಂದು ಮಾಸಿಕ ಪತ್ರಿಕೆ ಓದುವಾಗ ಕಣ್ಣಿಗೆ ಬಿದ್ದಿದ್ದು ಬೆಲ್ಲಂ ಗುಹೆಯ ವಿಚಾರ. ಇದೇನೋ ಒಂದು ಬಗೆಯ ಅಪರೂಪದ ತಾಣ ಎಂದು ಆಕ್ಷಣಕ್ಕೆ ಅನಿಸಿದ್ದು ನಿಜ. ಆಮೇಲೆ ಅಲ್ಲಿಗೆ ಹೋಗಬೇಕೆನ್ನುವ ತುಡಿತವೂ ಹೆಚ್ಚಾಗ ತೊಡಗಿತು. ನನ್ನ ಈ ಮನಸ್ಸಿನ ಇಂಗಿತವನ್ನು ಸ್ನೇಹಿತೆಯಲ್ಲಿ ಹೇಳಿಕೊಂಡಾಗ ಆಕೆಯೂ ಸಮ್ಮತಿ ಸೂಚಿಸಿದಳು. ಅಲ್ಲಿಂದ ಬೆಲ್ಲಂ ಗುಹೆಗೆ ಹೋಗಬೇಕೆನ್ನುವ ಕನಸು ನನಸಾಗಲು ಪ್ರಾರಂಭವಾಯಿತು.

ಬೆಂಗಳೂರಿನಿಂದ 298.5 ಕಿ.ಮೀ. ದೂರದಲ್ಲಿರು ಬೆಲ್ಲಂ ಗುಹೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೆಲ್ಲಂ ಗ್ರಾಮದಲ್ಲಿದೆ. ಭಾರತದಲ್ಲಿರುವ ಗುಹೆಗಳಲ್ಲಿಯೇ ಎರಡನೇ ಅತಿ ಉದ್ದವಾದ ಈ ಗುಹೆಗೆ ಬಂದಾಗ ಉಂಟಾದ ಅನುಭವ ಹಾಗೂ ಸಿಕ್ಕ ಮಾಹಿತಿಗಳು ಹೀಗಿದ್ದವು...

ವಿಷ್ಮಯ ಗುಹೆ

ವಿಷ್ಮಯ ಗುಹೆ

ಭೂಮಿಯ ಆಳದಲ್ಲಿರುವ ಈ ಗುಹೆಗೆ ಪ್ರವೇಶಿಸುತ್ತಿದ್ದಂತೆ ಏನೋ ಒಂದು ರೀತಿಯ ಭಯ ಕಾಡಲಾರಂಭಿಸಿತು. ಆಕ್ಷಣಕ್ಕೆ ಚಿಕ್ಕವಳಿದ್ದಾಗ ಕೇಳಿದ ಗುಹೆಯ ಭಯಾನಕ ಕಥೆಗಳ ದೃಶ್ಯ ಒಮ್ಮೆ ಕಣ್ಣಿಗೆ ಕಟ್ಟಿದಂತಾಯಿತು. ಮರುಕ್ಷಣವೇ ಕಲ್ಪನೆಯಿಂದ ವಾಸ್ತವಕ್ಕೆ ಬಂದೆ. ವಾಸ್ತವದ ಈ ಗುಹೆಯಲ್ಲಿ ಅಂತರ್ಜಲದ ಹರಿವು ಹಾಗೂ ಉದ್ದನೆಯ ದಾರಿ ಇರುವುದು ಕಂಡಿತು.

ಗುಹೆಗೆ ಹೆಸರು

ಗುಹೆಗೆ ಹೆಸರು

ಈ ಗುಹೆ ಪಾತಾಳಗಂಗೆಯ ಪ್ರವೇಶ ದ್ವಾರದಿಂದ ಸುಮಾರು 150 ಅಡಿ ಆಳದಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿ ಬಿಲಂ ಎಂದು ಕರೆಯುತ್ತಾರೆ. ಅಂದರೆ ಗುಹೆಗೌಳ ಎಂದರ್ಥ.

ಉದ್ದ ಅಳತೆ

ಉದ್ದ ಅಳತೆ

3229 ಮೀ. ಉದ್ದ ಇರುವ ಇದು, ಭಾರತದ ಉದ್ದವಾದ ಗುಹೆಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ಗುಹೆಯನ್ನು ಬ್ರಿಟೀಷ್ ಗೇಣಿದಾರ ರಾಬರ್ಟ್ ಬ್ರೂಸ್ ಫೊಟೆ ಎಂಬುವವರು ಕಂಡುಹಿಡಿದರು ಎನ್ನಲಾಗುತ್ತದೆ.

ಗುಹೆಯ ವಿಶಿಷ್ಟತೆ

ಗುಹೆಯ ವಿಶಿಷ್ಟತೆ

3.5 ಕಿ.ಮೀ. ಇರುವ ಈ ಗುಹೆ ಒಳಗೆ ಕೇವಲ 1.5 ಕಿ.ಮೀ. ದೂರದ ವರೆಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇದಕ್ಕೆ 16 ಬಾಗಿಲುಗಳಿವೆ.

ಗುಹೆಗೆ ಅಲಂಕಾರ

ಗುಹೆಗೆ ಅಲಂಕಾರ

ಗುಹೆಯ ಪ್ರವೇಶದ್ವಾರ ಬೆಣಚು ಕಲ್ಲುಗಳಿಂದ ಕೂಡಿದೆ. ಹಾಗೇ ಮುಂದೆ ಸಾಗಿದರೆ ಕಪ್ಪು ಸುಣ್ಣದ ಕಲ್ಲುಗಳಿಂದ ಮಾರ್ಪಟ್ಟಿರುವುದನ್ನು ಗಮನಿಸಬಹುದು. ಅಲ್ಲದೇ ಹೆಚ್ಚು ಆಕರ್ಷಕವಾಗಿ ಕಾಣಲು ಹಾಗೂ ಗುಹೆಯಲ್ಲಿ ಬೆಳಕನ್ನು ಕಲ್ಪಿಸುವ ಉದ್ದೇಶದಿಂದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಈ ದೀಪವು ಬೀರುವ ಸೊಬಗು ಗುಹೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಗುಹೆಯ ಒಳಗೆ

ಗುಹೆಯ ಒಳಗೆ

ನೈಸರ್ಗಿಕವಾಗಿ ಮಾರ್ಪಟ್ಟ ಈ ಗುಹೆಯ ಒಳಗೆ ಮರದ ತುಂಡಿನಿಂದ ಹೊಡೆದರೆ ಸಂಗೀತದ ಏಳು ಸ್ವರಗಳು ಕೇಳುತ್ತವೆ. ಅಲ್ಲಲ್ಲಿ ವಿಭಿನ್ನ ಬಗೆಯ ಆಕಾರವನ್ನು ಹೊಂದಿರುವ ಗೋಡೆಯನ್ನು ಕಾಣಬಹುದು. ಒಂದೆಡೆ ಶಿವಲಿಂಗದಂತಹ ಆಕಾರ, ಇನ್ನೊಂದೆಡೆ ಸಿಂಹದ ತಲೆಯಂತಹ ಆಕೃತಿ, ಹಾವಿನ ಹೆಡೆಯಂತಿರುವ ಆಕೃತಿಗಳೆಲ್ಲವೂ ಇವೆ.

ಇತಿಹಾಸ

ಇತಿಹಾಸ

ಪ್ರವೇಶ ದ್ವಾರದ ಬಳಿ ಹಾಸಿಗೆ ಹಾಗೂ ದಿಂಬಿನ ಆಕಾರವಿದೆ. ಸ್ಥಳೀಯರ ಪ್ರಕಾರ ಇದೇ ಧ್ಯಾನ ಮಂದಿರದಲ್ಲಿ ಹಲವಾರು ಸಾಧುಗಳು ವಾಸವಾಗಿದ್ದರು. ಅದಕ್ಕೆ ಸಾಕ್ಷಿಯಾಗಿ ಅನೇಕ ಬೌದ್ಧ ಸ್ತೂಪಗಳೂ ಇಲ್ಲಿ ದೊರೆತಿವೆ ಎನ್ನುತ್ತಾರೆ.

ಪ್ರವೇಶ ದ್ವಾರ

ಪ್ರವೇಶ ದ್ವಾರ

ಹೊರಗಿನಿಂದ ಒಂದು ಬಾವಿಯಂತೆ ಕಾಣುವ ಈ ಗುಹೆಯ ಒಳಕ್ಕೆ ಹೋದರೆ ಎರಡು ಬಾವಿಯಂತಿರುವುದು ಕಾಣುತ್ತದೆ. ಗುಹೆಯ ದ್ವಾರದಲ್ಲಿ ಸ್ವಯಂ ಚಾಲಿತ ಗೇಟ್‍ಗಳನ್ನು ಅಳವಡಿಸಲಾಗಿದೆ. ಇಲ್ಲಿ ಪ್ರವೇಶ ಶುಲ್ಕವೆಂದು 50 ರೂ. ಪಡೆಯುತ್ತಾರೆ.

Read more about: kurnool
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X