Search
  • Follow NativePlanet
Share
» »ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿನ ಸಮೀಪವಿರುವ ಸುಂದರ ಜಲಪಾತಗಳಿಗೆ ಪ್ರವಾಸಕ್ಕೆ ತಯಾರಾಗಿ!

ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿನ ಸಮೀಪವಿರುವ ಸುಂದರ ಜಲಪಾತಗಳಿಗೆ ಪ್ರವಾಸಕ್ಕೆ ತಯಾರಾಗಿ!

ಏಷ್ಯಾದ ಇತರ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಭಾರತದಲ್ಲಿ ಬೇಸಿಗೆಯು ತುಲನಾತ್ಮಕವಾಗಿ ತುಂಬಾ ಬಿಸಿಯಾಗಿರುತ್ತದೆ, ಏರು ಬಿಸಿಲಿನ ದಿನಗಳು ಮತ್ತು ಆರ್ದ್ರ ರಾತ್ರಿಗಳನ್ನು ಒಳಗೊಂಡಿರುತ್ತದೆ. ಆದರೆ ಬೆಂಗಳೂರು ಈ ರೀತಿಯ ಹವಾಮಾನಕ್ಕೆ ಒಂದು ಅಪವಾದವಾಗಿದೆ, ಇದು ತುಲನಾತ್ಮಕವಾಗಿ ಹೆಚ್ಚು ಆಹ್ಲಾದಕರವಾಗಿರುತ್ತದೆ, ಆದರೆ ಉದ್ಯಾನ ನಗರವು ತ್ವರಿತ ನಗರೀಕರಣಕ್ಕೆ ಬಲಿಯಾಗುತ್ತಿದೆ, ಆದುದರಿಂದ ಇದು ಇತ್ತೀಚೆಗೆ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರಲು ಕಾರಣವಾಗುತ್ತಿದೆ.

ಇಲ್ಲಿ ಮಳೆಯನ್ನು ಸ್ವಾಗತಿಸುವುದು ಆಶ್ಚರ್ಯವೇನಲ್ಲ ಬೆಂಗಳೂರಿನಲ್ಲಿ ಮಳೆಯನ್ನು ಎಲ್ಲಾ ಕಡೆಯಲ್ಲೂ ಸ್ವಾಗತಿಸಲಾಗುತ್ತದೆ. ಇದರಿಂದ ನಗರವು ತಂಪಾಗುತ್ತದೆ ಮತ್ತು ಜಲಪಾತಗಳು ತುಂಬಿ ಹರಿಯಲು ಸಹಾಯವಾಗುತ್ತದೆ. ಬೇಸಿಗೆಯ ಬಿಸಿಯಿಂದ ಬೇಸತ್ತ ಜನರು ಹಲವಾರು ಜಲಪಾತಗಳ ಕಡೆಗೆ ತಮ್ಮ ಪ್ರವಾಸವನ್ನು ಆಯೋಜಿಸಲು ತಮ್ಮ ನೆರೆಹೊರೆಯ ಸ್ಥಳಗಳಿಗೆ ಹೋಗಲು ಇಚ್ಚಿಸುತ್ತಾರೆ ಮತ್ತು ಅಲ್ಲಿಯ ಮಂತ್ರಮುಗ್ದಗೊಳಿಸುವ ಹಾಗೂ ಅಪಾರ ಎತ್ತರದಿಂದ ನೆಲಕ್ಕೆ ಅಪ್ಪಳಿಸುವ ವಿಶಾಲವಾದ ನೀರಿನ ರುದ್ರರಮಣೀಯ ದೃಶ್ಯದ ಎಲ್ಲಾ ಸೌಂದರ್ಯವನ್ನು ಆನಂದಿಸಲು ಉತ್ಸುಕರಾಗಿರುತ್ತಾರೆ.

ಇಂತಹ ಜನರಲ್ಲಿ ನೀವೂ ಒಬ್ಬರಾಗಿದ್ದಲ್ಲಿ, ಉದ್ಯಾನನಗರಿ ಬೆಂಗಳೂರಿನ ಸುತ್ತಮುತ್ತಲಿರುವ ನೈಸರ್ಗಿಕ ಅದ್ಬುತಗಳಾದ ಜಲಪಾತಗಳಿಗೆ ಪ್ರವಾಸಕ್ಕೆ ತಯಾರಾಗಿ ಬೆಂಗಳೂರಿನ ಸುತ್ತಮುತ್ತಲಿರುವ ಜಲಪಾತಗಳಿಗೆ ಭೇಟಿ ಕೊಟ್ಟು ನಿಮ್ಮ ವಾರಾಂತ್ಯವನ್ನು ಸುಂದರವಾಗಿ ಕಳೆಯಿರಿ.

ಉಂಚಳ್ಳಿ ಜಲಪಾತ

ಉಂಚಳ್ಳಿ ಜಲಪಾತ

ಉತ್ತರ ಕನ್ನಡದಲ್ಲಿ ಬೆಂಗಳೂರಿನಿಂದ ಸುಮಾರು 400 ಕಿಮೀ ದೂರದಲ್ಲಿ ಉಂಚಳ್ಳಿ ಅಥವಾ ಲುಶಿಂಗ್ಟನ್ ಜಲಪಾತಗಳಿವೆ. ಈ ಜಲಪಾತಗಳನ್ನು 1845 ರಲ್ಲಿ ಬ್ರಿಟಿಷ್ ಸರ್ಕಾರದ ಅಡಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜೆ.ಡಿ.ಲುಶಿಂಗ್ಟನ್ ಕಂಡುಹಿಡಿದರು. ಇಲ್ಲಿ ಅಘನಾಶಿನಿ ನದಿಯು ಸುಮಾರು 400 ಅಡಿಗಳ ಮಂತ್ರಮುಗ್ದಗೊಳಿಸುವ ಎತ್ತರದಿಂದ ಜಲಪಾತವಾಗಿ ಧುಮುಕುತ್ತಾ ರಮಣೀಯ ನೋಟವನ್ನು ಒದಗಿಸುತ್ತದೆ.

ಧುಮ್ಮಿಕ್ಕುವ ಸಮಯದಲ್ಲಿ ಅದು ಮಾಡುವ ಶಬ್ದಕ್ಕಾಗಿ ಇದನ್ನು ಮಿನಿ ನಯಾಗರಾ ಎಂದೂ ಕರೆಯುತ್ತಾರೆ. ದಟ್ಟವಾದ ಕಾಡುಗಳು, ಕಡಿದಾದ ಪರ್ವತ ಇಳಿಜಾರುಗಳು, ಆಳವಾದ ಕಮರಿಗಳು ಮತ್ತು ಅದ್ಭುತ ಸಸ್ಯವರ್ಗದ ಮೂಲಕ ಹೆಗ್ಗರ್ಣೆ ಗ್ರಾಮದಿಂದ 5 ಕಿ.ಮೀ ಚಾರಣವು ಮರೆಯಲಾಗದ ಅನುಭವವನ್ನು ನೀಡುತ್ತದೆ.

ಸಿರಿಮನೆ

ಸಿರಿಮನೆ

ನಗರದಿಂದ ಸುಮಾರು 300 ಕಿಮೀ ದೂರದಲ್ಲಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿರಿಮನೆ ಜಲಪಾತವಿದೆ., ಇದು ದೇವಾಲಯದ ಪಟ್ಟಣವಾದ ಶೃಂಗೇರಿಗೆ ಸಮೀಪದಲ್ಲಿರುವ ಈ ಜಲಪಾತವು ಕಾಫಿ ಎಸ್ಟೇಟ್‌ಗಳ ಮೂಲಕ ಹರಿಯುವ ತೊರೆಗಳಿಂದ ಪೋಷಿಸಲ್ಪಟ್ಟಿದೆ. ಮೆಟ್ಟಿಲುಗಳಲ್ಲಿ ಇಳಿದಲ್ಲಿ ಇದು ನಿಮ್ಮನ್ನು ತಳಭಾಗಕ್ಕೆ ಕರೆದೊಯ್ಯುತ್ತದೆ, ಅಲ್ಲಿ ನೀವು ತಂಪಾದ ನೀರಿನಲ್ಲಿ ಸ್ನಾನ ಮಾಡಬಹುದು.

ಶಿವಗಂಗಾ

ಶಿವಗಂಗಾ

ದಟ್ಟವಾದ ಕಾಡುಗಳಿಂದ ಆವೃತವಾಗಿರುವ ಹಾಗೂ ಅದರ ನಡುವೆ ಎತ್ತರದಿಂದ ಕೆಳಗೆ ಹರಿಯುವ ರುದ್ರರಮಣೀಯ ಹಿನ್ನೆಲೆಯ ದೃಶ್ಯವನ್ನು ಶಿವಗಂಗಾ ಜಲಪಾತವು ಹೊಂದಿದೆ. ಈ ಜಲಪಾತವು ಸೋಂದಾ ನದಿಯಿಂದ ರೂಪುಗೊಂಡಿದ್ದಾಗಿದ್ದು, 240 ಅಡಿ ಎತ್ತರದಿಂದ ಕೆಳಗೆ ಧುಮುಕುತ್ತದೆ. ಈ ಜಲಪಾತವು ಪಶ್ಚಿಮಘಟ್ಟಗಳಲ್ಲಿ ನೆಲೆಸಿರುವ ಒಂದು ವಿಭಿನ್ನವಾದ ಜಲಪಾತವೆನಿಸಿದೆ.

ಇದರ ದೃಶ್ಯಾವಳಿಗಳನ್ನು ನೋಡಲು ಕೊಂಡೊಯ್ಯಲು ಸಾಧ್ಯವಾಗುವಂತಹ ಹಲವಾರು ಮೆಟ್ಟಿಲುಗಳನ್ನು ಹೊಂದಿದೆ ಹಾಗೂ ಮತ್ತು ಕೆಲವು ಮಣ್ಣಿನ ಹಾದಿಯ ಮೂಲಕ ಹೋಗಿ ನಿಮ್ಮನ್ನು ಕೆಳಕ್ಕೆ ಕರೆದೊಯ್ಯುತ್ತವೆ. ನೀವು ಜಂಗಲ್ ಟ್ರೆಕ್ ಮಾಡಲು ಬಯಸಿದರೆ, ಈ ಸ್ಥಳವನ್ನು ಭೇಟಿ ಮಾಡಲೇಬೇಕು.

ಮಲ್ಲಳ್ಳಿ

ಮಲ್ಲಳ್ಳಿ

ಬಂಡೆಯಿಂದ ಕೆಳಗೆ ಬೀಳುವ ಪುಷ್ಪಗಿರಿ ಶ್ರೇಣಿಯಲ್ಲಿ ಮಲ್ಲಳ್ಳಿ ಜಲಪಾತವು ನೆಲೆಸಿದೆ. ಈ ಜಲಪಾತವು ಕುಮಾರಧಾರ ನದಿಯಿಯಿಂದ ರೂಪುಗೊಂಡಿದ್ದಾಗಿದೆ. 25ಕಿ.ಮೀ ಅಂತರದಲ್ಲಿಯ ಸೋಮವಾರ ಪೇಟೆಯಲ್ಲಿ ಕುಮಾರಧಾರ ನದಿಯು ಜಲಪಾತವಾಗಿ ರೂಪುಗೊಂಡು ಪ್ರಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕಡೆಗೆ ಹರಿಯುತ್ತದೆ. ಮತ್ತು ನಂತರ ನೇತ್ರಾವತಿ ನದಿಯನ್ನು ಕೂಡಿಕೊಂಡು ಆನಂತರ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಇರುಪ್ಪು

ಇರುಪ್ಪು

ಇರುಪ್ಪು ಜಲಪಾತವು ಕೊಡಗು ಜಿಲ್ಲೆಯ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ನೆಲೆಗೊಂಡಿದೆ ಮತ್ತು ಕೇರಳದ ವಯನಾಡ್ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ಬ್ರಹ್ಮಗಿರಿ ಶ್ರೇಣಿಯಲ್ಲಿ ರೂಪುಗೊಂಡಿರುವ ಇರುಪ್ಪು ಜಲಪಾತವು 170 ಅಡಿ ಎತ್ತರದಿಂದ ಲಕ್ಷ್ಮಣ ತೀರ್ಥ ನದಿಯಿಂದ ರೂಪುಗೊಂಡಿದೆ. ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯಲ್ಪಡುವ ಈ ಸಿಹಿ ನೀರಿನ ಜಲಪಾತವು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.

ಈ ಸ್ಥಳವನ್ನು ಯಾತ್ರಾಸ್ಥಳವಾಗಿಯೂ ಗುರುತಿಸಲ್ಪಡುತ್ತದೆ ಏಕೆಂದರೆ, ದಂತಕಥೆಗಳ ಪ್ರಕಾರ ಲಕ್ಷ್ಮಣನು ಬ್ರಹ್ಮಗಿರಿ ಬೆಟ್ಟಕ್ಕೆ ತನ್ನ ಬಾಣದಿಂದ ಹೊಡೆದು ಈ ನದಿಯನ್ನು ತೊರೆಯಾಗಿ ಕೆಳಗೆ ಹರಿಯುವಂತೆ ಮಾಡಿದನೆನ್ನಲಾಗುತ್ತದೆ.

ಮಾಗೋಡ್

ಮಾಗೋಡ್

ಕಾರವಾರದಿಂದ 80 ಕಿ.ಮೀ ದೂರದಲ್ಲಿ ಬೇಡ್ತಿ ನದಿಯು 200 ಮೀಟರ್ ಎತ್ತರದಿಂದ ಬೀಳುತ್ತದೆ ಮತ್ತು ದಟ್ಟವಾದ ಕಾಡುಗಳ ನಡುವೆ ಮಾಗೋಡು ಜಲಪಾತದ ರಚನೆಗೆ ಕಾರಣವಾಗುತ್ತದೆ. ಜಲಪಾತದ ಭವ್ಯವಾದ ನೋಟದೊಂದಿಗೆ, ಹರಿಯುವ ಹಾದಿಯಲ್ಲಿ, ಕವಡೆ ಕೆರೆ ಎಂಬ ದೊಡ್ಡ ಸರೋವರವನ್ನು ನೀವು ಕಾಣಬಹುದು.

ಅರಶಿನಗುಡಿ

ಅರಶಿನಗುಡಿ

ಕೊಲ್ಲೂರು ಸಮೀಪದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಕಾಡಿನೊಳಗೆ ಅಡಗಿರುವ ಪಶ್ಚಿಮ ಘಟ್ಟಗಳಲ್ಲಿನ ಮಂತ್ರಮುಗ್ದಗೊಳಿಸುವ ಜಲಪಾತವೆಂದರೆ ಅರಶಿನಗುಡಿ ಜಲಪಾತ. ಈ ಹೆಸರು ಸ್ವತಃ "ಅರಿಶಿನ ಸರೋವರ" ಎಂದು ಅರ್ಥೈಸುತ್ತದೆ. ಇಲ್ಲಿನ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಹಸಿರು ಮತ್ತು ಅರಣ್ಯದ ಒಳಗೆ, ಜಲಪಾತವು ನಿಮಗೆ ಅದ್ಭುತ ನೋಟವನ್ನು ನೀಡುತ್ತದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ, ನಾಗರಿಕತೆಯ ಯಾವುದೇ ರೂಪವನ್ನು ಕಂಡುಹಿಡಿಯಲಾಗುವುದಿಲ್ಲ, ಆದುದರಿಂದ ಇದು ಜಲಪಾತದ ಸೌಂದರ್ಯವನ್ನು ಆನಂದಿಸಲು ಇನ್ನಷ್ಟು ಶಾಂತಿಯುತವಾಗಿಸುತ್ತದೆ.

ಹೆಬ್ಬೆ

ಹೆಬ್ಬೆ

ಪ್ರಖ್ಯಾತ ಕೆಮ್ಮಣ್ಣುಗುಂಡಿಯ ಕಾಫಿ ಎಸ್ಟೇಟ್ ಗಳ ಮಧ್ಯದಲ್ಲಿ ನೆಲೆಸಿರುವ ಸುಂದರೆ ಹೆಬ್ಬೆ ಜಲಪಾತವು ಸುಮಾರು 168 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಕೆಳಗೆ ಹರಿಯುತ್ತದೆ. ಇದು ಹರಿಯುವಾಗ ಎರಡು ಕವಲುಗಳಾಗಿ ಹರಿಯುತ್ತದೆ ಇದನ್ನು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಕರೆಯಲಾಗುತ್ತದೆ.

ಈ ಜಲಪಾತವನ್ನು ಅನ್ವೇಷಿಸುವುದು ಮತ್ತುವಿರಾಮ ಪಡೆಯುವುದು ತಂಪಾದ ತೊರೆಯಲ್ಲಿ ಸಮಯ ಕಳೆಯಲು ಅವಕಾಶವಿರುವುದರಿಂದ ಇದು ಇಲ್ಲಿಗೆ ಭೇಟಿ ಮಾಡಲು ಬರುವ ಎಲ್ಲರಿಗೂ ತಣ್ಣನೆಯ ಅನುಭವವನ್ನು ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X