Search
  • Follow NativePlanet
Share
» »ಭೇಟಿ ನೀಡಲು ಪ್ರೇರೇಪಿಸುವ ಕರ್ನಾಟಕದ ಪ್ರಾಕೃತಿಕ ಸೊಬಗು

ಭೇಟಿ ನೀಡಲು ಪ್ರೇರೇಪಿಸುವ ಕರ್ನಾಟಕದ ಪ್ರಾಕೃತಿಕ ಸೊಬಗು

By Vijay

ಭಾರತ ದೇಶದ ದಕ್ಷಿಣಕ್ಕೆ ಐದು ರಾಜ್ಯಗಳನ್ನು ಒಳಗೊಂಡಿರುವ ಭೂಭಾಗವೆ ದಕ್ಷಿಣ ಭಾರತ. ಇಲ್ಲಿರುವ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಸಹ ಒಂದು ಹಾಗೂ ದೊಡ್ಡದಾದ ರಾಜ್ಯ. ಮಿಕ್ಕ ರಾಜ್ಯಗಳಂತೆ ಕರ್ನಾಟಕವೂ ಸಹ ಅತ್ಯದ್ಭುತ ಪ್ರಾಕೃತಿಕ ಸೊಬಗನ್ನು ಹೊಂದಿರುವ ಸಾಕಷ್ಟು ತಾಣಗಳನ್ನು ಹೊಂದಿದೆ.

ನಿಮಗಿಷ್ಟವಾಗಬಹುದಾದ : ಮೋಡಿ ಮಾಡುವ ಮಲೆನಾಡು ಸೌಂದರ್ಯ

ಈ ತಾಣಗಳು ತಮ್ಮಲ್ಲಿರುವ ನಿಸರ್ಗ ಸೌಂದರ್ಯದಿಂದಾಗಿ ಪ್ರವಾಸಿ ಆಕರ್ಷಣೆಗಳಾಗಿದ್ದು ಸಾಕಷ್ಟು ಪ್ರವಾಸಿಗರನ್ನು ದೇಶದ ಮೂಲೆ ಮೂಲೆಗಳಿಂದ ಚುಂಬಕದಂತೆ ಸೆಳೆಯುತ್ತವೆ. ರಮಣೀಯ ಪರ್ವತ ಶ್ರೇಣಿಗಳು, ದಟ್ಟ ಹಸಿರಿನಿಂದ ಕೂಡಿದ ವನಸಿರಿ, ಸುಶ್ರಾವ್ಯವಾಗಿ ಧರೆಗುರುಳುವ ಜಲಪಾತಗಳು, ಮನಸ್ಸಿಗೆ ಪ್ರಸನ್ನತೆ ಕರುಣಿಸುವ ದಟ್ಟಾರಣ್ಯಗಳು, ಉತ್ಸಾಹ ಹೆಚ್ಚಿಸುವ ಕಡಲ ತೀರಗಳು, ಸುಂದರ ನದಿಗಳು ಎಲ್ಲವೂ ಇಲ್ಲಿ ಲಭ್ಯ.

ನಿಸ್ಸಂಶಯವಾಗಿ ಪ್ರಸ್ತುತ ಲೇಖನವು ಕರ್ನಾಟಕದಲ್ಲಿರುವ ವಿವಿಧ ಸ್ಥಳಗಳ ಪ್ರಾಕೃತಿಕ ಸೊಬಗನ್ನು ತೋರಿಸುತ್ತದೆ. ಇಂತಹ ಸುಂದರ ಸ್ಥಳಗಳಿಗೆ ನೀವೂ ಬ್ಡುವು ಮಾಡಿಕೊಂಡು ತೆರಳಿ ಪ್ರಕೃತಿ ಮಾತೆಯ ಮಡಿಲಲ್ಲಿ ತಲ್ಲೀನರಾಗಿ ನವ ಚೈತನ್ಯ ಪಡೆಯಿರೆಂದು ನಾವು ಆಶಿಸುತ್ತೇವೆ.

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ದಟ್ಟ ಹಸಿರಿನಿಂದ ಕೂಡಿದ ಎತ್ತರದ ಬೆಟ್ಟಗಳು, ಕಲ್ಮಶರಹಿತ ವಾತಾವರಣ, ಉತ್ತಮ ಪರಿಸರದೊಂದಿಗೆ ಚಾರಣಕ್ಕೂ ಯೋಗ್ಯವಾಗಿರುವ ತಾನ ಇದಾಗಿದೆ. ಇದರ ಪ್ರಕೃತಿಯ ಸೊಬಗನ್ನು ನೋಡಿದವನೆ ಧನ್ಯ.

ಚಿತ್ರಕೃಪೆ: Nabeelhut

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ ರಸ್ತೆಯ ಮೂಲಕ 40 ಕಿ.ಮೀ ದೂರದಲ್ಲಿರುವ ಕೈಗಾ ಬಳಿಯ ಕದ್ರಾ ಜಲಾಶಯದ ಹಿನ್ನೀರು ಹಾಗು ಸುತ್ತಮುತ್ತಲಿನ ಮನಮೋಹಕ ದೃಶ್ಯ.

ಚಿತ್ರಕೃಪೆ: Vinayak wiki

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಚಿಕ್ಕಮಗಳೂರು ನಗರದ ವಾಯವ್ಯಕ್ಕೆ ಸುಮಾರು 38 ಕಿ.ಮೀ ದೂರದಲ್ಲಿದೆ ಭದ್ರಾ ವನ್ಯಜೀವಿಧಾಮ. ಇದೊಂದು ರಕ್ಷಿತ ಹುಲಿ ಮೀಸಲು ಪ್ರದೇಶವಾಗಿದ್ದು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ. ಇಲ್ಲಿನ ದಟ್ಟಾರಣ್ಯದಲ್ಲಿ ಕಾಳಿ ನದಿಯು ಹರಿದಿದ್ದು ನೋಡಲು ಆಕರ್ಷಕವಾಗಿದೆ ಈ ತಾಣ.

ಚಿತ್ರಕೃಪೆ: D.V. Girish

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಕಾಡಿನಲ್ಲಿರುವ ವಿಶ್ರಾಂತಿ ಗೃಹ. ಇಂದು ಫಾರೆಸ್ಟ್ ಗಾರ್ಡ್ಸ್ ಅರಣ್ಯದ ಮಧ್ಯದಲ್ಲಿರುವ ಈ ಗೃಹದಲ್ಲೆ ವಸತಿ ಹೂಡುತ್ತಾರೆ. ನಾವು ಇಲ್ಲಿ ಸಫಾರಿ ಮಾಡುವಾಗ ಇದನ್ನು ನೋಡಬಹುದು.

ಚಿತ್ರಕೃಪೆ: L. Shyamal

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಖ್ಯಾತ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವೂ ಆದ ಬಾದಾಮಿಯಲ್ಲಿರುವ ಪ್ರಸಿದ್ಧ ಆಗಸ್ತ್ಯತೀರ್ಥ ಹಾಗೂ ಹಿನ್ನಿಲೆಯಲ್ಲಿ ಹೆಸರುವಾಸಿಯಾದ ಮೇಣದ ಬಸ್ತಿ ಎಂದು ಕರೆಯಲಾಗುವ ಶಿಲಾಬಂಡೆಗಳ ಪರ್ವತ.

ಚಿತ್ರಕೃಪೆ: G41rn8

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬೆಂಗಳೂರಿನ ಸಖತ್ "ಲ್ಯಾಂಡ್ ಮಾರ್ಕ್" ಆಗಿರುವ ಕಬ್ಬನ್ ಉದ್ಯಾನದ ವಿಶಾಲತೆ ಅಂದ ಚೆಂದ ತೋರಿಸುವ ಚಿತ್ರ.

ಚಿತ್ರಕೃಪೆ: Augustus Binu

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬೆಂಗಳೂರಿನ ಮತ್ತೊಂದು ಪ್ರಸಿದ್ಧ ತಾಣ ಲಾಲ್ ಬಾಗ್ ಉದ್ಯಾನದ ಸುಂದರ ನೋಟ.

ಚಿತ್ರಕೃಪೆ: Manojk

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬಳ್ಳಾರಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ಹಂಪಿ ಬಳಿ ಹರಿದಿರುವ ತುಂಗ ಭದ್ರಾ ನದಿ ಹಾಗೂ ಹಿನ್ನಿಲೆಯಲ್ಲಿ ಕಂಡುಬರುವ ಹಂಪಿಯ ಜನಪ್ರೀಯ ವಿರೂಪಾಕಷ ದೇವಾಲಯದ ಗೋಪುರ.

ಚಿತ್ರಕೃಪೆ: Gaura

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬಳ್ಳಾರಿ ಜಲ್ಲೆಯಲ್ಲಿರುವ ಸಂಡೂರು ಹಾಗೂ ತುಂಗಭದ್ರಾ ನದಿ. ಇದು ಬಳ್ಳಾರಿಯಿಂದ 35 ಕಿ.ಮೀ ಗಳಷ್ಟು ದೂರವಿದ್ದು ಬಳ್ಳಾರಿಯ ಇತರೆ ಸ್ಥಳಗಳಿಗೆ ಹೋಲಿಸಿದರೆ ಹೆಚ್ಚಾಗಿ ಬಿಸಿ ಇರುವುದಿಲ್ಲ. ಕಾರಣ ಇದು ಸಮುದ್ರ ಮಟ್ಟದಿಂದ ಸಾಕಷ್ಟು ಮೇಲೆ ನೆಲೆಸಿದೆ.

ಚಿತ್ರಕೃಪೆ: (WT-en) Smile53077

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬೀದರ್ ನಗರ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಹೊನ್ನಿಕೆರೆ ರಕ್ಷಿತ ಅಭಯಾರಣ್ಯ ಹಾಗೂ ವಿಲಾಸಪುರ ಕೆರೆ ಮಧ್ಯದಲ್ಲಿ ಸ್ಥಾಪಿತವಾಗಿರುವ ಬ್ಲ್ಯಾಕ್ ಬಕ್ಸ್ ರಿಸಾರ್ಟ್.

ಚಿತ್ರಕೃಪೆ: Santosh3397

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಚಾಮರಾಜನಗರವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಸರುವಾಸಿಯಾಗಿದೆ. ಆ ಅದ್ಭುತ ಗೋಪಾಲಸ್ವಾಮಿ ಬೆಟ್ಟ ಶ್ರೇಣಿಯು ಚಾಮರಾಜನಗರದ ಹೊಲಗದ್ದೆಗಳಿಂದ ಕಂದುಬರುವ ರಿತಿ.

ಚಿತ್ರಕೃಪೆ: Philanthropist 1

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದ ನಂದಿ ಬೆಟ್ಟಗಳು ಪ್ರಖ್ಯಾತ ಪ್ರವಾಸಿ ತಾನವಾಗಿದೆ. ಇಲ್ಲಿ ಮೆಲಿನಿಂದ ಕಂಡು ಬರುವ ಮೋಡಗಳ ಹಾಸಿಗೆ ಹಾಗೂ ಮಂಜು ಮುಸುಕಿದ ವಾತಾವರಣ ಇದನ್ನು ನೆಚ್ಚಿನ ತಾಣವನ್ನಾಗಿ ಮಾಡಿದೆ.

ಚಿತ್ರಕೃಪೆ: Subhasisa Panigahi

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಅಲ್ಲದೆ ಬೆಂಗಳೂರಿಗೆ ಹತ್ತಿರದಲ್ಲಿರುವ (ಸುಮಾಅರು 65 ಕಿ.ಮೀ) ಕಾರಣ ಇದು ವಾರಾಂತ್ಯ ರಜೆಗಳಲ್ಲಿ ಭೇಟಿ ನೀಡಬಹುದಾದ ಜನಪ್ರೀಯ ತಾಣವಾಗಿದೆ. ಅಲ್ಲದೆ ನಂದಿ ಬೆಟ್ಟದಲ್ಲಿ ಸೂರ್ಯೋದಯ ಬಹು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Nikhil.kawale

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಬಹಳ ಮಹತ್ವ ಪಡೆದಿರುವ ಜಿಲ್ಲೆಯಾಗಿದೆ. ಪಶ್ಚಿಮ ಘಟ್ಟಗಳ ಸುಂದರ ಕಾಡುಗಳು, ಕಡಲ ತೀರಗಳು, ಗಿರಿಧಾಮ, ಕಡಲ ತೀರಗಳು, ಚಹಾ ತೋಟಗಳನ್ನು ಈ ಜಿಲ್ಲೆಯಾದ್ಯಂತ ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಹೀಗೊಂದು ಹಚ್ಚ ಹಸಿರಿನ ಪರಿಸರ.

ಚಿತ್ರಕೃಪೆ: Sanfy

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮವು ತನ್ನಲ್ಲಿರುವ ಮಾಗಡಿ ಕೆರೆಯಿಂದ ಪ್ರಖ್ಯಾತಿಗಳಿಸಿದೆ, ಕಾರಣ ಇಲ್ಲಿಗೆ ವಲಸೆ ಬರುವ ಪಕ್ಷಿಗಳು. ಇದು ಮಾಗಡಿ ಪಕ್ಷಿಧಾಮವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ವಿಶೇಷವೆಂದರೆ ಇಲ್ಲಿಗೆ ಬರುವ ಬಾತುಗಳು ಮೀನುಗಲಲ್ಲದೆ ಅಕ್ಕಿ, ಭತ್ತ ಮುಂತಾದ ಬೆಳೆಗಳನ್ನೂ ಸಹ ತಿನ್ನುತ್ತವೆ.

ಚಿತ್ರಕೃಪೆ: Samadkottur

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕರ್ನಾಟಕದಲ್ಲಿರುವ ಶಿಲ್ಪ ಕಲೆಗಳ ತವರೂರಾದ ಬೇಲೂರು ಹಾಗೂ ಹಳೆಬೀಡುಗಳಿಗೆಯೆ ತವರು ಜಿಲ್ಲೆಯಾಗಿದೆ ಹಾಸನ. ತಾಯಿ ಹಾಸನಾಂಬೆಯಿಂದ ಹಾಸನ ಎಂಬ ಹೆಸರು ಪಡೆದಿರುವ ಈ ಜಿಲ್ಲೆಯು ಸಾಕಷ್ಟು ಸುಂದರವಾದ ಪ್ರಕೃತಿ ಸೊಬಗಿನಿಂದ ಕಂಗೊಳಿಸುತ್ತದೆ. ಜಿಲ್ಲೆಯ ಸಕಲೇಶಪುರದಿಂದ ರೈಲು ಮಾರ್ಗದ ಮುಖಾಂತರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದವರೆಗಿರುವ ಪಥ ಹಸಿರು ಪಥ ಅಥವಾ "ಗ್ರೀನ್ ರೂಟ್" ಎಂದು ಕರೆಯಲ್ಪಡುತ್ತದೆ. ಪಶ್ಚಿಮ ಘಟ್ಟಗಳ ಬೆಟ್ಟ ಶ್ರೇಣಿಗಳ, ಕಂದಕ-ಪ್ರಪಾತಗಳ ಅತ್ಯದ್ಭುತ ನೋಟಗಳನ್ನು ಈ ಮಾರ್ಗದಲ್ಲಿ ಸಾಗುವಾಗ ಸವಿಯಬಹುದು.

ಚಿತ್ರಕೃಪೆ: Iamg

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:


ಕರ್ನಾಟಕದಲ್ಲಿ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಚ್ಚು ಪ್ರಖ್ಯಾತಿಗಳಿಸಿರುವ ನಾಡೆಂದರೆ ಕೊಡಗ ನಾಡು ಅಥವಾ ಕೊಡಗು. ಪಶ್ಚಿಮ ಘಟ್ಟಗಳ ಅದ್ಭುತ ಸೌಂದರ್ಯ, ಜಲಪಾತಗಳು, ಕೆರೆಗಳು, ಕೊಳಗಳು, ನಿತ್ಯ ಹರಿದ್ವರ್ಣದ
ಕಾಡುಗಳು, ತಾಜಾ ಪರಿಸರ ಈ ಗಿರಿಧಾಮಕ್ಕೆ ಹೆಚ್ಚು ಭೇಟಿ ನೀಡಲು ಆಕರ್ಷಿಸುತ್ತವೆ.

ಚಿತ್ರಕೃಪೆ: Shreyas Jayappa

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕೊಡಗಿನ ಸೋಮವಾರಪೇಟೆಯಿಂದ 25 ಕಿ.ಮೀ ದೂರದಲ್ಲಿರುವ ಪುಷ್ಪಗಿರಿ ಪರ್ವತದ ಬುಡದಲ್ಲಿ ನಯನ ಮನೋಹರವಾಗಿ ಧರೆಗೆ ಧುಮುಕುವ ಮಲ್ಲಳ್ಳಿ ಜಲಪಾತ.

ಚಿತ್ರಕೃಪೆ: Premnath Thirumalaisamy

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕೊಡಗಿನಲ್ಲಿ ಹರಿದಿರುವ ಕಾವೇರಿ ನದಿಯ ತಟದಲ್ಲಿ ನೆಲೆಸಿರುವ ದುಬಾರೆ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ವಿಶೇಷವಾಗಿ ಇದು ಕರ್ನಾಟಕ ಅರಣ್ಯ ಇಲಾಖೆಯ ಆನೆಗಳ ಶಿಬಿರ ಕೇಂದ್ರವಾಗಿದ್ದು ಒಮ್ಮೆ ಭೇಟಿ ನೀಡಲು ಯೋಗ್ಯವಾದ ತಾನವಾಗಿದೆ. ದಟ್ಟ ಹಸಿರಿನ ರಾಶಿಯಲ್ಲಿ ಮೈ ನೆರೆದು ಹರಿದಿರುವ ಕಾವೇರಿಯನ್ನು ನೋಡುತ್ತಿದ್ದಂತೆಯೆ ಎಲ್ಲಿಲ್ಲದ ಆನಂದ ಉಂಟಾಗುವುದಲ್ಲದೆ, ಪ್ರಕೃತಿ ಸೌಂದರ್ಯವು ಕಣ್ಣುಗಲ ಮುಂದೆ ಅನಾವರಣಗೊಳ್ಳುತ್ತದೆ.

ಚಿತ್ರಕೃಪೆ: Ramesh NG

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕೊಡಗಿನಲ್ಲಿರುವ ಜನಾಕರ್ಷಣೆಯ ಅಬ್ಬಿ ಜಲಪಾತದ ಮನಮೋಹಕ ದೃಶ್ಯ.

ಚಿತ್ರಕೃಪೆ: Sooraj Shajahan

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕೊಡಗಿನಲ್ಲಿ ಕರಿಮೆಣಸು, ಕಾಫಿ ತೋಟಗಳ ಮಧ್ಯದಲ್ಲಿ....

ಚಿತ್ರಕೃಪೆ: Dcrjsr

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಆವರಿಸಿರುವ ನಾಗರಹೊಳೆ ಅಭಯಾರಣ್ಯ. ಇದೊಂದು ರಾಷ್ಟ್ರೀಯ ಉದ್ಯಾನವಾಗಿದ್ದು ಜಂಗಲ್ ಸಫಾರಿಯಂತಹ ಚಟುವಟಿಕೆಯೂ ಇಲ್ಲಿ ಲಭ್ಯವಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Vijay S

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಮಂಡ್ಯ ಜಿಲ್ಲೆಯಲ್ಲಿರುವ ಭೀಮೇಶ್ವರಿ ಒಂದು ಆಕರ್ಷಕ ಪ್ರವಾಸಿ ತಾನವಾಗಿದೆ. ಇಲ್ಲಿ ಹರಿದಿರುವ ಕಾವೇರಿ ನದಿಯು ಸುಂದರವಾದ ದೃಶ್ಯಾವಳಿಗಳನ್ನು ಭೇಟಿ ನೀಡುಗರಿಗೆ ಕರುಣಿಸುತ್ತದೆ. ಇಲ್ಲಿರುವ ಕೆಲವು ರಿಸಾರ್ಟುಗಳು ವೈವಿಧ್ಯಮಯ ಹಾಗೂ ಸಾಹಸಮಯ ಪ್ರವಾಸಿ ಚಟುವಟಿಕೆಗಳ ಸೌಲಭ್ಯಗಳನ್ನು ಹೊಂದಿದ್ದು ಪ್ರವಾಸಿಗರು ಅವನ್ನು ಅನುಭವಿಸಬಹುದು. ವಿಶೇಷವಾಗಿ ಮೀನು ಹಿಡಿದು ಮತ್ತೆ ನಿರಿಗೆ ಬಿಡುವ ಚಟುವಟಿಕೆಯೂ ಇಲ್ಲಿ ಲಭ್ಯ. ಇದು ಬೆಂಗಳೂರಿಗೆ ಹತ್ತಿರವಿದ್ದು 100 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ashwin Kumar

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಬೆಂಗಳೂರಿಗೆ ಹತ್ತಿರದಲ್ಲಿರುವ ಹಾಗು ಮಂಡ್ಯ ಜಿಲ್ಲೆಯಲ್ಲಿರುವ ಶಿವನಸಮುದ್ರ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಇದು ಮುಖ್ಯವಾಗಿ ತನ್ನಲ್ಲಿರುವ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಿಗೆ ಹೆಚ್ಚು ಜನಪ್ರೀಯವಾಗಿದೆ.

ಚಿತ್ರಕೃಪೆ: Primejyothi

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಮಂಡ್ಯ ಜಿಲ್ಲೆಯಲ್ಲಿರುವ ಆದರೆ ಮೈಸೂರಿಗೆ ಬಹು ಹತ್ತಿರವಾಗಿರುವ ಬಲಮುರಿ ಜಲಪಾತ ಕೇಂದ್ರ. ಇದು ತನ್ನ ಅಡ್ಡವಾದ ಚಿಕ್ಕ ಜಲಪಾತದಿಂದಾಗಿ ಹೆಚ್ಚು ಜನಪ್ರೀಯವಾಗಿದೆ. ವಾರಾಂತ್ಯದ ರಜೆಗಳಲ್ಲಿ ಸಮಯವನ್ನು ಸಂತಸವಾಗಿ ಕಳೆಯಲೆಂದು ಸುತ್ತಮುತ್ತಲಿನ ಪ್ರದೇಶಗಳ ಸಾಕಷ್ಟು ಜನರು ಈ ತಾಣಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.

ಚಿತ್ರಕೃಪೆ: Ashwin Kumar

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಮಂಡ್ಯ ಜಿಲ್ಲೆಯಲ್ಲಿರುವ ಅದ್ಭುತ ಪಕ್ಷಿಧಾಮ ಹಾಗೂ ಸುಂದರ ಪ್ರವಾಸಿ ಆಕರ್ಷಣೆಯಾದ ರಂಗನತಿಟ್ಟು.

ಚಿತ್ರಕೃಪೆ: Pradeep Kumbhashi

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ರಾಯಚೂರು ಜಿಲ್ಲೆಯ ಬುದ್ದಿನ್ನಿ ಗ್ರಾಮದ ಸೂರ್ಯಕಾಂತಿ ಹೂವಿನ ತೋಟ.

ಚಿತ್ರಕೃಪೆ: MikeLynch

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಅತಿ ಸುಂದರ ತಾಣವೆ ಆಗುಂಬೆ. ಕರ್ನಾಟಕದಲ್ಲೆ ಅತಿ ಹೆಚ್ಚು ಮಳೆಪಡೆಯುವ ಸ್ಥಳ ಇದಾಗಿದ್ದು ತನ್ನ ಪ್ರಕೃತಿ ಸಂಪತ್ತಿನಿಂದ ಸಾಕಷ್ಟು ಕಂಗೊಳಿಸುತ್ತದೆ. ಈ ದಟ್ಟ ಹಸಿರಿನ ಸುಂದರ ತಾನದ ಸುತ್ತ ಮುತ್ತಲೂ ಸಾಕಷ್ಟು ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ಆಕರ್ಷಣೆಗಳಿರುವುದು ವಿಶೇಷ.

ಚಿತ್ರಕೃಪೆ: Harsha K R

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಅಥವಾ ಅಣಶಿ ರಾಷ್ಟ್ರೀಯ ಉದ್ಯಾನದ ಒಂದು ಸುಂದರ ನೋಟ. ದಟ್ಟ ಕಾಡಿನಲ್ಲಿ ಹರಿದಿರುವ ಕಾಳಿ ನದಿ ಹಾಗೂ ಅದರಲ್ಲಿ ಹಾಯಾಗಿ ದೋಣಿ ವಿಹಾರ ಮಾಡುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Amoghavarsha

ಸರಳ ಸುಂದರ ಸುಮಧುರ ಕರ್ನಾಟಕ:

ಸರಳ ಸುಂದರ ಸುಮಧುರ ಕರ್ನಾಟಕ:

ಪಶ್ಚಿಮ ಘಟ್ಟಗಳ ದಟ್ಟ ಕಾನನದಲ್ಲಿ ನೆಲೆಸಿರುವ ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯ ಒಂದು ರೋಮಾಂಚಕ ಪಟ್ಟಣವಾಗಿದೆ. ಇಲ್ಲಿನ ಕಾಡಿನ ಮಧ್ಯದಲ್ಲಿ ಹರಿದಿರುವ ಕಾಳಿ ನದಿಯು ರೋಮಾಂಚನಗೊಳಿಸುವ ರಾಫ್ಟಿಂಗ್ ಹಾಗೂ ದೋಣಿ ವಿಹಾರ ಹಾಗೂ ಚಾರಣಕ್ಕೆ ಹೆಸರುವಾಸಿಯಾಗಿದೆ. ದಾಂಡೇಲಿಯ ಕಾಳಿ ನದಿಯಲ್ಲಿ ರಾಫ್ಟಿಂಗ್ ಕ್ರೀಡೆ.

ಚಿತ್ರಕೃಪೆ: Balamurugan Natarajan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X