Search
  • Follow NativePlanet
Share
» »ಕರ್ನಾಟಕದಲ್ಲಿರುವ ಸುಂದರ ಗಿರಿಧಾಮಗಳು

ಕರ್ನಾಟಕದಲ್ಲಿರುವ ಸುಂದರ ಗಿರಿಧಾಮಗಳು

By Vijay

ಸಮತಟ್ಟಾದ ಬಯಲು ಪ್ರದೇಶದ ಬದಲು ಅದಕ್ಕೆ ಎತ್ತರವಾಗಿರುವ ಭೂಭಾಗದಲ್ಲಿ ನೆಲೆಸಿರುವ, ಜನವಾಸ ಯೋಗ್ಯವಾದ ಸ್ಥಳಗಳನ್ನು ಸಾಮಾನ್ಯವಾಗಿ ಗಿರಿಧಾಮಗಳೆನ್ನುತ್ತೇವೆ. ಗಿರಿಧಾಮಗಳು ಸ್ವಾಭಾವಿಕವಾಗಿ ಸಮುದ್ರ ಮಟ್ಟಕ್ಕಿಂತ ಹೆಚ್ಚು ಮೇಲೆ ಇರುವುದರಿಂದ ಇಲ್ಲಿ ತೇವಾಂಶವು ಕಡಿಮೆ ಅಥವಾ ಇಲ್ಲದೆಯೂ ಇರಬಹುದು.

ದಟ್ಟವಾದ ಗಿಡ ಮರಗಳು ಪರಿಣಾಮ ಹೆಚ್ಚಿನ ಪ್ರಮಾಣದ ಮಳೆ ಇದರಿಂದ ವಾತಾವರಣದಲ್ಲಿ ಹಿತಕರವಾದ ತಾಪಮಾನ ಇವೆಲ್ಲವೂ ಗಿರಿಧಾಮಗಳ ಗುಣ ಲಕ್ಷಣಗಳು. ಆದುದರಿಂದಲೆ ಗಿರಿಧಾಮಗಳು ಪ್ರವಾಸದ ಪ್ರಮುಖ ಆಕರ್ಷಣೆಗಳು. ಬೇಸಿಗೆಯಾಗಲಿ, ಮಳೆಗಾಲವಾಗಲಿ ಇಲ್ಲವೆ ಚಳಿಗಾಲವಾಗಲಿ ರಜೆ ಸಿಕ್ಕೊಡನೆ ಎಲ್ಲರೂ ಮುಖ್ಯವಾಗಿ ಹೋಗಬಯಸುವುದು ಗಿರಿಧಾಮ ಪ್ರದೇಶಗಳನ್ನ.

ವಿಶೇಷ ಲೇಖನ : ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

ಇನ್ನೂ ನವ ವಿವಾಹಿತ ದಂಪತಿಗಳಿಗಂತೂ ಗಿರಿಧಾಮಗಳು ಅಚ್ಚು ಮೆಚ್ಚಿನ ತಾಣಗಳು. ಹೀಗೆ ಎಲ್ಲರ ಪ್ರೀತಿಗಳಿಸಿರುವ ಗಿರಿಧಾಮ ತಾಣಗಳು ನಮ್ಮ ದೇಶದಲ್ಲೇನು ಕಮ್ಮಿ ಇಲ್ಲ. ಅದರಂತೆ ಭವ್ಯ ಕರ್ನಾಟಕ ರಾಜ್ಯವೂ ಸಹ ಕೆಲವು ಸುಂದರವಾದ ಗಿರಿಧಾಮ ಪ್ರದೇಶಗಳಿಗಾಗಿ ದೇಶದಲ್ಲೆ ಪ್ರಖ್ಯಾತಿಗಳಿಸಿದೆ.

ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿ ನೋಡಬಹುದಾದ ಕೆಲವು ಅನನ್ಯ ಗಿರಿಧಾಮಗಳಾವುವು ಎಂಬುದರ ಕುರಿತು ತಿಳಿಯಿರಿ. ಸಾಧ್ಯವಾದರೆ ಆವಾಗಾವಾಗ ಸಮಯ ಸಿಕ್ಕಾಗ ಒಂದೊಂದಾಗಿ ಈ ಎಲ್ಲ ಗಿರಿಧಾಮಗಳಿಗೆ ಭೇಟಿ ನೀಡಲು ಪ್ರಯತ್ನಿಸಿ. ಏಕೆಂದರೆ ಈ ಸುಂದರ ತಾಣಗಳು ಸದಾ ನಿಮ್ಮಲ್ಲಿ ಆನಂದಮಯ ಕ್ಷಣಗಳನ್ನು ನೆನಪಿಸುತ್ತ ನಿಮ್ಮನ್ನು ಪ್ರಸನ್ನರನ್ನಾಗಿಡುತ್ತದೆ.

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕೆಮ್ಮಣ್ಣುಗುಂಡಿ : ಚಿಕ್ಕಮಗಳೂರು ಜಿಲ್ಲೆಯು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕರ್ನಾಟಕದ ಒಂದು ಸುಂದರ ಜಿಲ್ಲೆಯಾಗಿದೆ. ಇಲ್ಲಿ ಸುಂದರವಾದ ಸಾಕಷ್ಟು ಗಿರಿಧಾಮ ಪ್ರದೇಶಗಳಿವೆ. ಅವುಗಳಲ್ಲೊಂದಾಗಿದೆ ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮ.

ಚಿತ್ರಕೃಪೆ: Pradeep Kumbhashi

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಹಿಂದಿನ ಸಮಯದಲ್ಲಿ ರಾಜರುಗಳು ಅಥವಾ ಅರಸರುಗಳು ಬೇಸಿಗೆಯ ಸಮಯವನ್ನು ಹಾಯಾಗಿ ಕಳೆಯಲೆಂದು ಸ್ವಾಭಾವಿಕವಾಗಿ ತಂಪಾಗಿರುವ ಪ್ರದೇಶಗಳಿಗೆ ಹೋಗುತ್ತಿದ್ದರು. ಆ ಸ್ಥಳಗಳು ಆ ರಾಜರುಗಳ ಬೇಸಿಗೆಯ ರಾಜಧಾನಿಯಾಗಿ ಇಲ್ಲವೆ ವಿಶ್ರಾಂತಿ ತಾಣವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅದೇ ರೀತಿ ಕೆಮ್ಮಣ್ಣುಗುಂಡಿಯು ಮೈಸೂರಿನ ಅರಸರಾದ ನಾಲ್ಕನೆಯ ಕೃಷ್ಣರಾಜ್ ವಡೇಯರ್ ಅವರ ಬೇಸಿಗೆಯ ವಿಶ್ರಾಂತಿ ತಾಣವಾಗಿ ಹೆಸರುವಾಸಿಯಾಗಿತ್ತು.

ಚಿತ್ರಕೃಪೆ: Vijay Sawant

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಈ ಗಿರಿಧಾಮದಲ್ಲಿ ಕಂಡುಬರುವ ಮಣ್ಣಿನ ಬಣ್ಣವು ನಸುಗೆಂಪಾಗಿರುವುದರಿಂದ ಅಲ್ಲದೆ "ಗುಂಡಿ" ಗಳು(ಎಂದರೆ ಕಣಿವೆಗಳು) ಇಲ್ಲಿರುವುದರಿಂದ ಈ ಗಿರಿಧಾಮಕ್ಕೆ ಕೆಮ್ಮಣ್ಣುಗುಂಡಿ ಎಂಬ ಹೆಸರು ಬಂದಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಈ ಗಿರಿಧಾಮವು 53 ಕಿ.ಮೀ ಹಾಗೂ ತರೀಕೆರೆ ತಾಲೂಕಿನ ಲಿಂಗಡಹಳ್ಳಿಯಿಂದ 17 ಕಿ.ಮೀ ದೂರದಲ್ಲಿದೆ. ಲಿಂಗಡಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಖಾಸಗಿ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Bdeepu

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಮಹಾರಾಜರ ವಿಶ್ರಾಂತಿ ತಾಣವಾಗಿರುವ ಗೌರವ ಸೂಚಕವಾಗಿ ಈ ಸ್ಥಳವನ್ನು ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಎಂತಲೂ ಕರೆಯಲಾಗುತ್ತದೆ. ತನ್ನ ಸುತ್ತಲೂ ಬಾಬಾ ಬುಡನ್ ಗಿರಿ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುವ ಈ ಗಿರಿಧಾಮವು ತನ್ನಲ್ಲಿ ನಿಜವಾಗಿಯೂ ಪ್ರಕೃತಿ ದೇವಿಗೆ ಆಭರಣಗಳನ್ನು ತೊಡಿಸಿರುವಂತೆ ಸುಂದರ ಹಸಿರು ಚಾಪೆಯ ಉದ್ಯಾನಗಳು, ಬೆಟ್ಟ ಗುಡ್ಡಗಳು, ರಮಣೀಯ ಪರಿಸರ, ನೀರಿನ ತೊರೆಗಳಿಂದ ಅಲಂಕ್ರುತವಾಗಿದೆ.

ಚಿತ್ರಕೃಪೆ: Yathin S Krishnappa

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಆಂಗ್ಲದ "z" ಆಕಾರದಲ್ಲಿರುವ "ಜೆಡ್ ಪಾಯಿಂಟ್" ಕೆಮ್ಮಣ್ಣುಗುಂಡಿಯಲ್ಲಿ ತೆರಳಬಹುದಾದ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿಂದ ಸೂರ್ಯೋದಯದ ದೃಶ್ಯವು ಅತಿ ಮನೋಹರವಾಗಿ ಕಂಡುಬರುತ್ತದೆ. ಈ ವೀಕ್ಷಣಾ ತಾಣವನ್ನು ಕೆಮ್ಮಣ್ಣುಗುಂಡಿಯ ರಾಜಭವನದಿಂದ ಮೊನಚಾದ ಏರಿಕೆಯ ಮೇಲೆ ಜಾಗರೂಕವಾಗಿ ಸುಮಾರು 45 ನಿಮಿಷಗಳಷ್ಟು ಚಾರಣ ಮಾಡುವ ಮೂಲಕ ತಲುಪಬಹುದಾಗಿದೆ. ಜೆಡ್ ವೀಕ್ಷಣಾ ತಾಣದಿಂದ ಕಂಡುಬಾರುವ ವಿಹಂಗಮ ನೋಟ.

ಚಿತ್ರಕೃಪೆ: Elroy Serrao

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕೆಮ್ಮಣ್ಣುಗುಂಡಿಯ ರಾಜಭವನದಿಂದ ಇನ್ನೊಂದು ಎಂಟು ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಸಾಕು, ಆಕರ್ಷಕವಾದ ಹೆಬ್ಬೆ ಜಲಪಾತ ಕೇಂದ್ರವನ್ನು ನೋಡಬಹುದು. ಆದರೆ ಪ್ರಸ್ತುತ ಈ ಜಲಪಾತ ಕೇಂದ್ರಕ್ಕೆ ತೆರಳುವುದು ದುಸ್ತರವಾಗಿದೆ.

ಚಿತ್ರಕೃಪೆ: Srinivasa83

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮೂಡಿಗೆರೆ ಪಟ್ಟಣವು ಒಂದು ಸುಂದರವಾದ ಗಿರಿಧಾಮ ಪ್ರದೇಶವಾಗಿದೆ. ಪ್ರಖ್ಯಾತ ಧಾರ್ಮಿಕ ಸ್ಥಳಗಳಾದ ಹೊರನಾಡು ಹಾಗೂ ಕಳಸ ಕ್ಷೇತ್ರಗಳಿಗೆ ತವರಾಗಿರುವ ಈ ತಾಲೂಕು ಪ್ರದೇಶವು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Harsha K R

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕಣ್ಮನ ಸೆಳೆಯುವ ಪ್ರಕೃತಿಯ ನೋಟಗಳನ್ನು, ದೃಶ್ಯಾವಳಿಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಈ ಸುಂದರ ಗಿರಿಧಾಮವು ಪ್ರವಾಸಿಗರನ್ನು ಸದಾ ಕೈಬಿಸಿ ಕರೆಯುತ್ತದೆ. ಇನ್ನೊಂದು ವಿಷಯವೆಂದರೆ ಕನ್ನಡದ ಪ್ರಖ್ಯಾತ ಬರಹಗಾರರಾಗಿದ್ದ ಹಾಗೂ ಕುವೆಂಪುರವರ ಮಗನಾಗಿದ್ದ ಪೂರ್ಣ ಚಂದ್ರ ತೇಜಸ್ವಿಯವರು ತಮ್ಮ ಜೀವನದ ಕೊನೆಯ ದಿನಗಳನ್ನು ಈ ಗಿರಿಧಾಮ ಪ್ರದೇಶದಲ್ಲೆ ವಾಸವಿದ್ದು ಕಳೆದಿದ್ದರು.

ಚಿತ್ರಕೃಪೆ: Harsha K R

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಚಾರ್ಮಾಡಿ : ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆತುವ ಪರ್ವತ ರಹದಾರಿಯಲ್ಲಿರುವ ಒಂದು ಚಿಕ್ಕ ಗಿರಿಧಾಮವೆ ಚಾರ್ಮಾಡಿ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಗ್ರಾಮವಿದೆ. ಈ ಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯನ್ನು ಚಿಕ್ಕಮಗಳೂರಿನೊಂದಿಗೆ ಬೆಸೆಯುವ ವಾಹನ ಚಲಾಯಿಸಬಹುದಾದ ರಸ್ತೆಯನ್ನು ಹೊಂದಿದ್ದು ಈ ರಸ್ತೆಯನ್ನು ಚಾರ್ಮಡಿ ಘಾಟ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Jayaprakash B R

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಚಾರ್ಮಡಿ ಘಾಟ್ ದ್ವಿಚಕ್ರ ವಾಹನ ಚಲಾಯಿಸುವುದಕ್ಕಾಗಲಿ, ಸೈಕಲ್ ತುಳಿಯಲಿಕ್ಕಾಗಲಿ ಹೇಳಿ ಮಾಡಿಸಿದಂತಹ ಅದ್ಭುತವಾದ ಘಟ್ಟ ಪ್ರದೇಶ. ಆದರೆ ಜಾಗರೂಕತೆಯಿಂದ ಚಲಿಸಬೇಕಾದುದು ಅಷ್ಟೆ ಅವಶ್ಯಕ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಈ ಘಟ್ಟ ಪ್ರದೇಶವು ಜೀವ ಕಳೆ ತುಂಬಿಕೊಂಡಿರುತ್ತದೆ. ಅಲ್ಲಲ್ಲಿ ರೂಪಗೊಂಡಿರುವ ಚಿಕ್ಕ ಪುಟ್ಟ ಜಲಪಾತಗಳು ಸಾಗುವಾಗ ನಿಮ್ಮನ್ನು ಆನಂದಗೊಳಿಸಲು ಹಾತೊರೆಯುತ್ತಿರುತ್ತವೆ. ಆದರೆ ಭೂಕುಸಿತಗಳು ಸಹ ಸಾಮಾನ್ಯವಗಿರುವುದರಿಂದ ಜಾಗರೂಕರಾಗಿರುವುದು ಒಳ್ಳೆಯದು.

ಚಿತ್ರಕೃಪೆ: Abhijit Shylanath

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ದೇವರಾಯನದುರ್ಗ : ಬೆಂಗಳೂರಿನ ವಾಯವ್ಯಕ್ಕೆ ಅಥವಾ ತುಮಕೂರಿನ ಈಶಾನ್ಯಕ್ಕೆ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿರುವ ಒಂದು ಪುಟ್ಟ ಗಿರಿಧಾಮವೆ ದೇವರಾಯನದುರ್ಗ. ತುಮಕೂರಿನಿಂದ ದೇವರಾಯನದುರ್ಗಕ್ಕೆ ತೆರಳುವಾಗ ಚಿಕ್ಕ ಘಾಟ್ ರಸ್ತೆಯು ನಿಮ್ಮನ್ನು ಬೆರಗಾಗಿಸುತ್ತದೆ ಹಾಗೂ ಇದೊಂದು ಗಿರಿಧಾಮ ಪ್ರದೇಶವೆಂಬುದಕ್ಕೆ ಮುನ್ಸೂಚನೆ ನೀಡುತ್ತದೆ. ದೇವರಾಯನದುರ್ಗ ತಾನು ಕರುಣಿಸುವ ಅದ್ಭುತ ಭೂದೃಶ್ಯಾವಳಿಗಳಿಗೆ ಹೆಸರುವಾಸಿಯಾದರೂ ತನ್ನಲ್ಲಿರುವ ಯೋಗ ಹಾಗೂ ಭೋಗ ನರಸಿಂಹನ ದೇವಸ್ಥಾನಗಳಿಗಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

ಚಿತ್ರಕೃಪೆ: Srinivasa83

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ನಂದಿ ಬೆಟ್ಟ : ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 10 ಕಿ.ಮೀ ದೂರವಿದ್ದು, ರಾಜಧಾನಿ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿ ಬೆಟ್ಟ ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ವಾರಾಂತ್ಯ ರಜಾದಿನಗಳ ತಾಣ ಹಾಗೂ ಸೊಗಸಾದ ಗಿರಿಧಾಮ ಪ್ರದೇಶ.

ಚಿತ್ರಕೃಪೆ: Harsha K R

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಪಕ್ಕದ ನಂದಿ, ಮುದ್ದೇನಹಳ್ಳಿ, ಕಣಿವೆನಾರಾಯಣಪುರ ಪಟ್ಟಣಗಳಿಂದ ಸುತ್ತುವರೆದಿರುವ ಈ ಪ್ರಸಿದ್ಧ ಬೆಟ್ಟ ಸಾಂಸ್ಕೃತಿಕವಾಗಿ ಅರ್ಕಾವತಿ ನದಿಯ ಮೂಲ ಎನ್ನಲಾಗಿದೆ. ನಂದಿ ಬೆಟ್ಟದ ಹಿನ್ನಿಲೆಯು ಹಲವಾರು ಸ್ವಾರಸ್ಯಕರ ಕಥೆಗಳನ್ನು ಒಳಗೊಂಡಿದೆ. ಚೋಳರು ಆಳುತ್ತಿದ್ದ ಕಾಲದಲ್ಲಿ ಇದಕ್ಕೆ ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು.

ಚಿತ್ರಕೃಪೆ: pulikken

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಇನ್ನೊಂದು ದಂತ ಕಥೆಯ ಪ್ರಕಾರ, ಯೋಗ ನಂದೀಶ್ವರರು ಇಲ್ಲಿ ತಪಸ್ಸನ್ನಾಚರಿಸಿದ್ದರಿಂದ ಇದಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿರುವ 1300 ವರ್ಷಗಳಷ್ಟು ಪುರಾತನವಾದ ದ್ರಾವಿಡ ಶೈಲಿಯ ನಂದಿ ದೇವಸ್ಥಾನದಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನುತ್ತದೆ ಇಲ್ಲಿನ ಮತ್ತೊಂದು ಕಥೆ. ಈ ಬೆಟ್ಟವನ್ನು ಕೆಲವೊಮ್ಮೆ ನಂದಿದುರ್ಗವೆಂದೂ ಸಹ ಸಾಮಾನ್ಯವಾಗಿ ಕರೆಯಲಾಗುತ್ತದೆ. ಏಕೆಂದರೆ ಹಿಂದೆ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನನು ಇಲ್ಲಿ ಒಂದು ಕೋಟೆಯನ್ನು ಕಟ್ಟಿದ್ದಾನೆ.

ಚಿತ್ರಕೃಪೆ: Koshy Koshy

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ನಂದಿ ಬೆಟ್ಟದಲ್ಲಿನ ಸೂರ್ಯೊದಯವನ್ನು ನೋಡುವುದೆ ಒಂದು ಚೆಂದದ ಅನುಭವ. ಅಲ್ಲದೆ 9 ನೇಯ ಶತಮಾನದ ಭೋಗ ನಂದೀಶ್ವರ ದೇವಸ್ಥಾನವಂತೂ ಪ್ರವಾಸಿಗರನ್ನು ತನ್ನ ವೈಭವದಿಂದ ಆನಂದಭರಿತರನ್ನಾಗಿ ಮಾಡುತ್ತದೆ. ನಂದಿ ಬೆಟ್ಟ ತಲುಪಲು ಬೆಂಗಳೂರು ಪಟ್ಟಣವು ಸುಗಮವಾದ ಕೊಂಡಿಯಾಗಿದ್ದು ಸಂಚಾರದ ಪ್ರಮುಖ ಮೂರು ಅಂಗಗಳಾದ ವಾಯು, ರೈಲು ಹಾಗೂ ರಸ್ತೆ ಮಾರ್ಗಗಳು ಬೆಂಗಳೂರಿಗೆ ಅತಿ ಉತ್ತಮವಾಗಿದೆ. ಅಲ್ಲದೆ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಲಭ್ಯವಿದೆ. ಆದರೆ ಯುವಜನಾಂಗದವರು ಈ ಬೆಟ್ಟಕ್ಕೆ ಸ್ನೇಹಿತರೊಡಗೂಡಿ ಬೈಕು, ಕಾರುಗಳಲ್ಲಿ ತೆರಳಲು ಬಹುವಾಗಿ ಇಷ್ಟಪಡುತ್ತಾರೆ.

ಚಿತ್ರಕೃಪೆ: Sean Ellis

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಆಗುಂಬೆ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಆಗುಂಬೆ ಒಂದು ಪುಟ್ಟ ಸುಂದರವಾದ ಗ್ರಾಮವಾಗಿದೆ. ಈ ಪುಟ್ಟ ಗಿರಿಧಾಮವು ಕರ್ನಾಟಕದಲ್ಲೆ ಅತಿ ಹೆಚ್ಚು ಮಳೆ ಪಡೆವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಮಳೆಗಾಡಿನ ಸೌಂದರ್ಯಕ್ಕೆ ಹೆಸರುವಾಸಿಯಾದ ಸುಂದರ ಗಿರಿಧಾಮ ಆಗುಂಬೆ.

ಚಿತ್ರಕೃಪೆ: Karunakar Rayker

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಭಾರತದ ಏಕೈಕ ಮಳೆಗಾಡು ಸಂಶೋಧನಾ ಸಂಸ್ಥೆಯನ್ನು ಹೊಂದಿರುವ ಆಗುಂಬೆಯ ಸುತ್ತಮುತ್ತಲು ದಟ್ಟವಾದ ಅರಣ್ಯವಿದ್ದು ಮನಮೋಹಕ ಜಲಪಾತ ಕೇಂದ್ರಗಳನ್ನು ಕಾಣಬಹುದು. ಇಲ್ಲಿನ ಸೂರ್ಯಾಸ್ತ ನೋಟವಂತೂ ಅತ್ಯದ್ಭುತವಾಗಿದೆ. ಅದಕ್ಕೆಂದೆ ಮೀಸಲಾದ ಸೂರ್ಯಾಸ್ತ ತಾಣವನ್ನೂ ಸಹ ಇಲ್ಲಿ ಕಾಣಬಹುದು. ಶಿವಮೊಗ್ಗದಿಂದ ಆಗುಂಬೆಗೆ ತೆರಳಲು ಬಸ್ಸುಗಳು ದೊರೆಯುತ್ತವೆ ಹಾಗೂ ಬಾಡಿಗೆ ವಾಹನಗಳನ್ನೂ ಸಹ ಲಭ್ಯವಿರುತ್ತವೆ.

ಚಿತ್ರಕೃಪೆ: Harsha K R

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಸಕಲೇಶಪುರ : ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು ಚಾರಣ ಮಾರ್ಗಗಳಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: snapper san

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಬೆಂಗಳೂರು, ಮೈಸೂರಿನಂತಹ ಮಹಾ ನಗರಗಳಿಂದ ವಿವಿಧ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಯುವ ಜನಾಂಗದವರಲ್ಲಿ ಸಕಲೇಶಪುರದ ಚಾರಣ ಮಾರ್ಗಗಳು ನೆಚ್ಚಿನ ಸ್ಥಳಗಳಾಗಿದ್ದು ವಾರಾಂತ್ಯ ರಜೆಗಳಲ್ಲಿ ಕೈಬಿಸಿ ಕರೆಯುತ್ತವೆ. ಅಂತೆಯೆ ಇಲ್ಲಿ ರಜಾ ಸಮಯಗಳಲ್ಲಿ ಚಾರಣ ಚಟುವಟಿಕೆಗಳು ಪ್ರಗತಿಯಲ್ಲಿರುವುದನ್ನು ಆಗಾಗ ಕಾಣಬಹುದು.

ಚಿತ್ರಕೃಪೆ: Vinayak Shankar Rao

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಇನ್ನು ಚಾರಣದ ವಿಷಯಕ್ಕೆ ಬಂದರೆ ಬಿಸಿಲೆ ಘಾಟ್, ಹಸಿರುಪಥ ಮುಂತಾದ ಉತ್ಸಾಹ ಹಾಗೂ ಸಾಹಸಭರಿತ ಚಾರಣ ಮಾರ್ಗಗಳನ್ನು ಇಲ್ಲಿ ಕಾಣಬಹುದು. ಹಸಿರು ಪಥವು ರೈಲು ಕಂಬಿಗಳ ಮೇಲೆಯೆ ನಡೆಯುತ್ತ ಸಾಗುವ ಚಾರಣ ಮಾರ್ಗವಾಗಿದ್ದು ಹೆಚ್ಚಿನ ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Ashwin Kumar

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಸಕಲೇಶಪುರದ ಹವಾಮಾನವು ವರ್ಷಪೂರ್ತಿ ಹಿತಕರವಾಗಿರುತ್ತದೆ. ಬೇಸಿಗೆಯ ಸಮಯದಲ್ಲಿ (ಏಪ್ರಿಲ್,ಮೇ) ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ ಜೊತೆಗೆ ಗಿರಿ ಪ್ರದೇಶವಾಗಿರುವುದರಿಂದ ಹಿತಕರವಾದ ತಂಗಾಳಿಯೂ ಇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ.

ಚಿತ್ರಕೃಪೆ: snapper san

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕುದುರೆಮುಖ : ಕರ್ನಾಟಕದ ಪ್ರಖ್ಯಾತ ಪ್ರವಾಸಿ ಜಿಲ್ಲೆ ಚಿಕ್ಕಮಗಳೂರಿನಲ್ಲಿರುವ ಕುದುರೆಮುಖವು ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ಮನಮೋಹಕ ಪಶ್ಚಿಮ ಘಟ್ಟಗಳ ದಟ್ಟ ಒಡಲಿನಲ್ಲಿ ನೆಲೆಸಿರುವ ಈ ಸುಂದರ ಗಿರಿಧಾಮವು ಕರ್ನಾಟಕದ ಸುಪ್ರಸಿದ್ಧ ಗಿರಿಧಾಮಗಳ ಪೈಕಿ ಒಂದಾಗಿದೆ. ತನ್ನಲ್ಲಿರುವ ಯಥೇಚ್ಛ ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯ, ಸುಂದರ ಭೂದೃಶ್ಯಾವಳಿಗಳು ಹಾಗೂ ಜೀವವೈವಿಧ್ಯತೆಗಳಿಂದ ಸಾಕಷ್ಟು ಪ್ರವಾಸಿಗರ ಆಕರ್ಷಿಸುತ್ತದೆ.

ಚಿತ್ರಕೃಪೆ: Praveen

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಪಶ್ಚಿಮಘಟ್ಟದಲ್ಲೇ ಕುದುರೆಮುಖ ರಾಷ್ಟ್ರೀಯ ಪಾರ್ಕ್‌ ಎರಡನೇ ಅತಿ ದೊಡ್ಡ ರಕ್ಶಿತ ಅರಣ್ಯವಾಗಿದೆ. ಇದು ಸುಮಾರು 600 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯವನ್ನು ಹೊಂದಿದೆ. ಈ ಪ್ರದೇಶದಲ್ಲಿ ಪ್ರತಿವರ್ಷ ಸುಮಾರು 7000 ಮಿಲಿಮೀಟರು ಮಳೆಯಾಗುತ್ತದೆ. ನೀರನ್ನು ಇಂಗಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಿಂದಾಗಿ ಇಲ್ಲಿ ಹಲವು ತೊರೆಗಳು, ನದಿಗಳಿ ಹಾಗೂ ಕೆರೆಗಳು ನಿರ್ಮಾಣಗೊಂಡಿವೆ.

ಚಿತ್ರಕೃಪೆ: solarisgirl

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕುದುರೆಮುಖವು ತನ್ನ ವಿಶಾಲ ಅರಣ್ಯ ಪ್ರದೇಶದಲ್ಲಿ ಚಾರಣಿಗರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿ ಚಾರಣ ಮಾಡುವುದಕ್ಕೆ ನೀವು ಅರಣ್ಯ ಇಲಾಖೆಯಿಂದ ಪರವಾನಗಿ ತೆಗೆದುಕೊಳ್ಳಬೇಕು. ಪ್ರಸ್ತುತ ಇಲ್ಲಿ ಚಾರಣದ ಕುರಿತು ಮೊದಲೆ ತಿಳಿದುಕೊಂಡು ಹೋದರೆ ಉತ್ತಮ. ಕುದುರೆಮುಖದ ಸುತ್ತಮುತ್ತ ನಡೆಯುವ ಬಹುತೇಕ ಟ್ರೆಕ್ಕಿಂಗ್‌ಗಳು ಲೋಬೋ ಪ್ರದೇಶದಿಂದ ಆರಂಭವಾಗುತ್ತದೆ. ಅರಣ್ಯದ ಮಧ್ಯದಲ್ಲಿ ಈ ಪ್ರದೇಶವು ಕುದುರೆಮುಖ ಬೆಟ್ಟದ ಆರಂಭ.

ಚಿತ್ರಕೃಪೆ: Praveen

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕುದುರೆಮುಖದ ಸುತ್ತಮುತ್ತ ಹಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಲಕ್ಯಾ ಡ್ಯಾಮ್‌, ರಾಧಾಕೃಷ್ಣ ದೇವಸ್ಥಾನ, ಗಂಗಾಮೂಲ ಬೆಟ್ಟ ಮತ್ತು ಹನುಮಾನ್‌ ಗುಂಡಿ ಜಲಪಾತಗಳು, ಇಲ್ಲಿ ನೀರು ಸುಮಾರು 100 ಅಡಿ ಮೇಲಿನಿಂದ ಕೆಳಗೆ ಕಲ್ಲಿನ ಮೇಲೆ ಬೀಳುತ್ತದೆ. ಕುದುರೆಮುಖಕ್ಕೆ ನೀವು ಭೇಟಿ ನೀಡಿದರೆ ಈ ಪ್ರದೇಶವು ಪಿಕ್‌ನಿಕ್‌ಗೆ ಅತ್ಯುತ್ತಮ ಸ್ಥಳ. ಚಿತ್ರದಲ್ಲಿರುವುದು ಲಕ್ಯಾ ಡ್ಯಾಮ್.

ಚಿತ್ರಕೃಪೆ: Arun Keerthi K. Barboza

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಕುದುರೆಮುಖಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಎಲ್ಲಾ ಪ್ರಮುಖ ನಗರಗಳಿಗೂ ಸಂಪರ್ಕವನ್ನು ಮಾಡಲಾಗಿದೆ. ಇದು ಪ್ರವಾಸಿಗರಿಗೆ ಸೂಕ್ತವಾದದ್ದು. ಪ್ರವಾಸಿಗರು ಡಿಲಕ್ಸ್‌, ವೋಲ್ವೋ, ಹವಾನಿಯಂತ್ರಿತ ಮತ್ತು ಲಕ್ಷುರಿ ಬಸ್‌ಗಳನ್ನು ಕಾರ್ಕಳ(50 ಕಿ.ಮೀ), ಮಂಗಳೂರು(130 ಕಿ.ಮೀ) ಮತ್ತು ಬೆಂಗಳೂರಿನಿಂದ(350 ಕಿ.ಮೀ) ಪಡೆಯಬಹುದು. ಕುದುರೆಮುಖಕ್ಕೆ ಸಮೀಪದ ರೈಲ್ವೆ ಸ್ಟೇಷನ್‌ ಎಂದರೆ ಮಂಗಳೂರು ರೈಲ್ವೆ ಸ್ಟೇಷನ್. ಇದು ಸುಮಾರು 110 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಭಾರತದ ಎಲ್ಲಾ ಪ್ರಮುಖ ಪಟ್ಟಣ ಮತ್ತು ನಗರಗಳಿಂದ ಸಂಪರ್ಕವಿದೆ. ಇಲ್ಲಿಂದ ಪ್ರವಾಸಿಗರು ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ಬಸ್‌ಗಳನ್ನು ಹಿಡಿದು ಪ್ರಯಾಣ ಮಾಡಬಹುದು.

ಚಿತ್ರಕೃಪೆ: Praveen

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಲ್ಲಾಪುರವು ಪಶ್ಚಿಮ ಘಟ್ಟಗಳ ಸುಂದರ ಕಾನನದಲ್ಲಿ ನೆಲೆಸಿರುವ ಪುಟ್ಟ ಗಿರಿ ಪ್ರದೇಶವಾಗಿದೆ. ಮೂಲತಃ ಈ ಗಿರಿ ಪ್ರದೇಶವು ತನ್ನಲ್ಲಿರುವ ವಿವಿಧ ನೈಸರ್ಗಿಕವಾಗಿ ರೂಪಿತವಾದ ಮನಮೋಹಕ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಮಾಗೋಡು ಹಾಗೂ ಸಾತೋಡಿ ಜಲಪಾತಗಳು ಪ್ರಮುಖ ಆಕರ್ಷಣೆಗಳಾಗಿವೆ. ಯಲ್ಲಾಪುರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅದ್ಭುತ ಸಾತೊಡ್ಡಿ ಜಲಪಾತ.

ಚಿತ್ರಕೃಪೆ: ShrinivasN

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಸಾತೊಡ್ಡಿ ಜಲಪಾತದ ಇನ್ನೊಂದು ಮನಮೋಹಕ ನೋಟ.

ಚಿತ್ರಕೃಪೆ: Adnan Alibaksh

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಇನ್ನೊಂದು ಜಲಪಾತವಾದ ಮಾಗೋಡು ಜಲಪಾತವು ಮಾಗೋಡು ಎಂಬ ಹೆಸರಿನ ಗ್ರಾಮದ ಬಳಿಯಿದೆ. ಇದು ಯಲ್ಲಾಪುರದಿಂದ 19 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಜಲಪಾತ ಕೇಂದ್ರದ ಬಳಿ ಜೇನು ಕಲ್ಲು ಗುಡ್ಡ ಎಂಬ ಮನಮೋಹಕ ಸೂರ್ಯಾಸ್ತ ತಾಣವನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: ShrinivasN

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ತೀರ್ಥಹಳ್ಳಿ : ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಪ್ರಕೃತಿ ಸೌಂದರ್ಯದಿಂದಾಗಿ ಸರ್ವಜನರ ಮನ್ನಣೆಯನ್ನುಗಳಿಸಿದೆ. ಈ ಜಿಲ್ಲೆಯಲ್ಲಿರುವ ತೀರ್ಥಹಳ್ಳಿ, ಒಂದು ಸೊಗಸಾದ ತೀರ್ಥ ಕ್ಷೇತ್ರ ಮಾತ್ರವಲ್ಲದೆ ಪ್ರಕೃತಿ ವೈಭವದಿಂದ ಮೆರೆಯುತ್ತಿರುವ ಒಂದು ಪುಟ್ಟ ಗಿರಿಧಾಮ ಪಟ್ಟಣವೂ ಸಹ ಆಗಿದೆ. ರಾಜಧಾನಿ ಬೆಂಗಳೂರು ಮಹಾನಗರದಿಂದ ಸುಮಾರು 340 ಕಿ.ಮೀ ದೂರವಿರುವ ಈ ಪಟ್ಟಣವು ಶಿವಮೊಗ್ಗ ನಗರದಿಂದ ಕೇವಲ 62 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ.

ಚಿತ್ರಕೃಪೆ: Pradeep Kumbhashi

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಶಿವಮೊಗ್ಗ ನಗರ ಹಾಗೂ ಬೆಂಗಳೂರು ನಗರಗಳಿಂದ ತೀರ್ಥಹಳ್ಳಿಗೆ ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ. ಇನ್ನೂ ರೈಲಿನಲ್ಲಿ ತೆರಳಬೇಕಿದ್ದರೆ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಶಿವಮೊಗ್ಗ ರೈಲು ನಿಲ್ದಾಣ. ಮೈಸೂರು ಹಾಗೂ ಬೆಂಗಳೂರುಗಳಿಂದ ಸಾಕಷ್ಟು ರೈಲುಗಳು ಶಿವಮೊಗ್ಗಕ್ಕೆ ಲಭ್ಯವಿದೆ. ಮಲೆನಾಡಿನ ಮೈಸಿರಿಯಲ್ಲಿ ಆವರಿಸಿರುವ ತೀರ್ಥಹಳ್ಳಿಯು ಭೇಟಿ ನೀಡುವ ಪ್ರವಾಸಿಗರಿಗೆ ಎಂದೂ ನಿರಾಸೆ ಮಾಡದು.

ಚಿತ್ರಕೃಪೆ: HPNadig

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ತಲಕಾವೇರಿ : ಕೊಡಗು ಜಿಲ್ಲೆಯಲ್ಲಿರುವ ತಲಕಾವೇರಿಯನ್ನು ಸಾಮಾನ್ಯವಾಗಿ ಕರ್ನಾಟಕದ ಜೀವನದಿಯಾದ ಕಾವೇರಿಯ ಉಗಮ ಸ್ಥಳವನ್ನಾಗಿ ಪರಿಗಣಿಸಲಾಗುತ್ತದೆ. ಬೆಟ್ಟವೊಂದರ ಮೇಲೆ ತಲಕಾವೇರಿಯ ದೇವಸ್ಥಾನವಿದ್ದು ಇಲ್ಲಿ ಕುಂಡವೊಂದನ್ನು ಕಾಣಬಹುದು. ಇಲ್ಲಿ ಉಗಮಗೊಳ್ಳುವ ಕಾವೇರಿಯು ನಂತರ ಭೂಒಡಲಿನೊಳಗೆ ನುಸುಳಿ ಸ್ವಲ್ಪ ದೂರ ಹರಿದು ಮತ್ತೆ ಹೊರಬಂದು ಹರಿಯುತ್ತಾಳೆನ್ನಲಾಗಿದೆ.

ಚಿತ್ರಕೃಪೆ: Rathishkrishnan

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಮಡಿಕೇರಿ : ಕೊಡಗು ಜಿಲ್ಲೆಯ ಜಿಲ್ಲಾಕೇಂದ್ರವಾದ ಮಡಿಕೇರಿಯು ಒಂದು ಸುಪ್ರಸಿದ್ಧ ಗಿರಿಧಾಮ ಪ್ರದೇಶವಾಗಿದೆ. ದೇಶದ ನಾನಾ ಭಾಗಗಳಿಂದ ಈ ಗಿರಿಧಾಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮುದ್ದುರಾಜನ ಕೇರಿ ಯಿಂದ ಮಡಿಕೇರಿ ಎಂಬ ಹೆಸರು ಪಡೆದಿರುವ ಈ ಸ್ಥಳವು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು ಪಶ್ಚಿಮ ಘಟ್ಟಗಳ ಪ್ರಕೃತಿ ವೈಭವದ ಮಧ್ಯೆ ನೆಲೆಸಿದೆ.

ಚಿತ್ರಕೃಪೆ: fozylet

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಭಾಗಮಂಡಲ : ಕೊಡಗು ಜಿಲ್ಲೆಯಲ್ಲಿರುವ ಭಾಗಮಂಡಲ ಒಂದು ಗಿರಿಧಾಮ ಪ್ರದೇಶವಾದರೂ ತೀರ್ಥ ಕ್ಷೇತ್ರವಾಗಿ ಹೆಚ್ಚು ಹೆಸರುವಾಸಿಯಾಗಿದೆ. ಮಡಿಕೇರಿಯಿಂದ ಸುಮಾರು 33 ಕಿ.ಮೀ ಗಳಶ್ಟು ದೂರದಲ್ಲಿ ಈ ಗಿರಿಧಾಮ ಸ್ಥಳವಿದೆ.

ಚಿತ್ರಕೃಪೆ: screaming_monkey

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಭಾಗಮಂಡಲ ಕ್ಷೇತ್ರವನ್ನು ಭಾಗಂಡೇಶ್ವರ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ ಕಾರಣ ಇಲ್ಲಿರುವ ಭಾಗಂಡೇಶ್ವರ ಶಿವನ ದೇವಾಲಯದಿಂದಾಗಿ. ಈ ದೇವಾಲಯದಲ್ಲಿ ಶಿವನ ಹೊರತಾಗಿ ವಿಷ್ಣು, ಗಣಪತಿ ಹಾಗೂ ಸುಬ್ರಹ್ಮಣ್ಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: Rkrish67

ಕರ್ನಾಟಕದ ಗಿರಿಧಾಮಗಳು:

ಕರ್ನಾಟಕದ ಗಿರಿಧಾಮಗಳು:

ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಕೃತಾರ್ಥರಾಗುತ್ತಾರೆ. ಇಲ್ಲಿ ಹರಿದಿರುವ ಕಾವೇರಿಯು ಇನ್ನೆರಡು ಉಪನದಿಗಳಾದ ಕನ್ನಿಕೆ ಮತ್ತು ರಹಸ್ಯಮಯವಾದ ಸುಜ್ಯೋತಿಯೊಂದಿಗೆ ಸಂಗಮ ಹೊಂದುತ್ತಾಳೆ. ಆದ್ದರಿಂದ ಇದೊಂದು ತ್ರಿವೇಣಿ ಸಂಗಮವಾಗಿಯೂ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Ashok Prabhakaran

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more