Search
  • Follow NativePlanet
Share
» »ಸಂಗಮ ದಾಟಿ ಭೇಟಿ ನೀಡಿ ಮೇಕೆದಾಟು

ಸಂಗಮ ದಾಟಿ ಭೇಟಿ ನೀಡಿ ಮೇಕೆದಾಟು

By Vijay

ಹೀಗೊಮ್ಮೆ ಸಮಯ ಸಿಕ್ಕರೆ, ಸ್ನೇಹಿತರೊಡಗೂಡಿದರೆ ಏನು ಮಾಡಬೇಕೆಂಬ ಆಲೋಚನೆ ಉಂಟಾದರೆ, ಚಿಂತಿಸದಿರಿ ಬೆಂಗಳೂರಿನಿಂದ ಒಂದೆರಡು ಗಂಟೆಗಳಷ್ಟು ದೂರದಲ್ಲಿರುವ ಸಂಗಮಕ್ಕೆ ಭೇಟಿ ನೀಡಿ, ಕಾವೇರಿ - ಅರ್ಕಾವತಿಗಳ ಸಮಾಗಮದಲ್ಲಿ ಒಂದಿಷ್ಟು ಅದ್ಭುತವಾದ ಸಮಯ ಕಳೆದು ನಂತರ ಅದನ್ನು ದಾಟಿ ನೇರವಾಗಿ ಮೇಕೆದಾಟಿಗೆ ಭೇಟಿ ನೀಡಿ.

ಸ್ಥಳೀಯ ಫ್ಲೈಟುಗಳ ಮೇಲೆ ನೇರ 10% ರಷ್ಟು ಕಡಿತ (ಹೆಚ್ ಡಿ ಎಫ್ ಸಿ ಗ್ರಾಹಕರಿಗೆ ಮಾತ್ರ)

ಎಲ್ಲೆಲ್ಲೂ ಕಾಂಕ್ರೀಟ್ ಅರಣ್ಯಗಳಿಂದ ತುಂಬಿರುವ ಬೆಂಗಳೂರಿನ ಆಚೆಯಲ್ಲಿರುವ ನಿಜವಾದ ಸಹಜ ಪ್ರಕೃತಿ ಸೊಬಗಿನ ಸಂಗಮ ಹಾಗೂ ಮೇಕೆದಾಟು ಸ್ಥಳಗಳು ಮನಸ್ಸನ್ನು ಶಾಂತಗೊಳಿಸುವುದಲ್ಲದೆ ಪ್ರಸನ್ನತೆಯ ಭಾವವನ್ನೂ ಸಹ ಮೂಡಿಸುತ್ತವೆ. ಅದರಲ್ಲೂ ಸ್ನೇಹಿತರೊಂದಿಗೆ ಜೊತೆಗೂಡಿ ಮಾಡುವ ಈ ಪ್ರವಾಸದಿಂದ ಎಲ್ಲಿಲ್ಲದ ಸಂತಸ ಉಂಟಾಗಿ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ.

ವಿಶೇಷ ಲೇಖನ : ಹೊಗೇನಕಲ್ ಜಲಪಾತ

ಈ ಪ್ರವಾಸಕ್ಕೆ ನಿಮ್ಮದೆ ಆದ ಸ್ವಂತ ವಾಹನ ಇಲ್ಲವೆ ಬಾಡಿಗೆ ವಾಹನವಿದ್ದರೆ ಒಳ್ಳೆಯದು. ಏಕೆಂದರೆ ಈ ಪ್ರವಾಸದಲ್ಲಿ ಮೊದಲಿಗೆ ಬೆಂಗಳೂರಿನಿಂದ 60 ಕಿ.ಮೀ ದೂರವಿರುವ ಕನಕಪುರಕ್ಕೆ ಹೋಗಿ ಅಲ್ಲಿಂದ ಸಂಗಮಕ್ಕೆ ತಲುಪಬೇಕು. ಇನ್ನೂ ಬೆಂಗಳೂರಿನಿಂದ ಕನಕಪುರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆಯಾದರೂ ಅಲ್ಲಿಂದ ಮುಂದೆ ಸಂಗಮಕ್ಕೆ ತೆರಳಲು ಬಸ್ಸುಗಳು ಸಿಗುವುದು ಬಲು ಕಷ್ಟ.

ಬನ್ನಿ ಯಾವ ರೀತಿಯಲ್ಲಿ ಈ ಒಂದು ಸುಂದರ, ಸರಳ ಹಾಗೂ ಅಷ್ಟೆ ಅದ್ಭುತವಾದ ರಸ್ತೆ ಪ್ರವಾಸವನ್ನು ಮಾಡಬಹುದೆಂದು ತಿಳಿದುಕೊಳ್ಳೋಣ.

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಮೊದಲಿಗೆ ಬೆಂಗಳೂರಿನಿಂದ ಕನಕಪುರಕ್ಕೆ ತೆರಳಬೇಕು. ಕನಕಪುರವು ಬೆಂಗಳೂರಿನಿಂದ 60 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದೊಮ್ಮೆ ಕನಕಪುರ ತಲುಪಿದ ಮೇಲೆ ಹೆದ್ದಾರಿಯನ್ನು ಎಡ ತಿರುವು ತೆಗೆದುಕೊಳ್ಳುವುದರ ಮೂಲಕ ಸಂಗಮಕ್ಕೆ ಹೊರಡಬೇಕು.

ಚಿತ್ರಕೃಪೆ: Renjith Sasidharan

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಕನಕಪುರದಿಂದ ಸಂಗಮಕ್ಕೆ ತೆರಳಲು ತುಸು ಕಷ್ಟವಾಗಬಹುದು. ಏಕೆಂದರೆ ಈ ಮಾರ್ಗದಲ್ಲಿ ಮಾರ್ಗಸೂಚಿ ಫಲಕಗಳು ಸಾಕಷ್ಟಿಲ್ಲದಿರುವುದೆ ಕಾರಣ. ಆದ್ದರಿಂದ ಅಲ್ಲಲ್ಲಿ ಸ್ಥಳೀಯರಿಂದ ಮಾರ್ಗದರ್ಶನ ಪಡೆದು ಮುಂದುವರೆಯಬೇಕು. ಸಂಗಮವು ಕನಕಪುರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರವಿದೆ.

ಚಿತ್ರಕೃಪೆ: Thejaswi

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

30 ಕಿ.ಮೀ ಗಳಷ್ಟು ಕ್ರಮಿಸಿದ ನಂತರ ಸಂಗಮವನ್ನು ತಲುಪುತ್ತೇವೆ. ಕಾವೇರಿ ಹಾಗೂ ಅರ್ಕಾವತಿ ನದಿಗಳು ಸಮಾಗಮ ಹೊಂದಿರುವ ಈ ಸ್ಥಳವು ಪ್ರಶಾಂತವಾಗಿದ್ದು, ಆದರ್ಶಮಯ ಪಿಕ್ನಿಕ್ ತಾಣವಾಗಿಯೂ ಇದೆ.

ಚಿತ್ರಕೃಪೆ: solarisgirl

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಸಂಗಮದಲ್ಲಿ ಬೇಸಿಗೆಯ ಸಂದರ್ಭಗಳಲ್ಲಿ ಅಷ್ಟೊಂದಾಗಿ ನೀರು ಇರುವುದಿಲ್ಲ ಹಾಗೂ ಆಳವೂ ಸಹ ಬಲು ಕಡಿಮೆಯಿರುತ್ತದೆ. ಆದ್ದರಿಂದ ನೀರಲ್ಲಿ ಹಾಯಾಗಿ ಆಟ ಆಡುವವರನ್ನು ಕಾಣಬಹುದು.

ಚಿತ್ರಕೃಪೆ: ArunCyriac

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಇನ್ನೂ ಮಳೆಗಾಲದ ಸಂದರ್ಭದಲ್ಲಿ ನೀರು ಅತಿ ರಭಸದಿಂದ ಹರಿಯುತ್ತದೆ ಹಾಗೂ ತೆಪ್ಪಗಳ ಸವಾರಿಯು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಗಮಕ್ಕೆ ವರ್ಷದ ಯಾವ ಸಮಯದಲ್ಲಾದರೂ ಭೇಟಿ ನೀಡಬಹುದು.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಸಂಗಮದಲ್ಲಿ ಸರ್ಕಾರದಿಂದ ಹಾಕಲಾದ ಮೊಸಳೆಗಳಿರುವ ಕುರಿತು ಸೂಚನಾ ಫಲಕವಿದೆ. ಸಾಧ್ಯವಾದಷ್ಟು ನೀವು ಜಾಗರೂಕರಾಗಿರುವುದು ಅವಶ್ಯಕ. ಆದರೆ ಬೇಸಿಗೆಯ ಸಂದರ್ಭದಲ್ಲಿ ನೀರು ಕಡಿಮೆಯಿರುವ ಹಾಗೂ ಗುಂಪು ಗುಂಪಾಗಿ ಜನರು ನೀರಿನಲ್ಲಿಳಿಯುವ ಕಾರಣ ಮೊಸಳೆಗಳ ಕುರಿತು ಯಾರು ಅಷ್ಟೊಂದು ಗಮನ ಹರಿಸುವುದಿಲ್ಲ, ಆದರೂ ಮುಂಜಾಗ್ರತೆ ಅತ್ಯವಶ್ಯ.

ಚಿತ್ರಕೃಪೆ: Vikram Vetrivel

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಸಂಗಮದಲ್ಲಿ ಮನ ತೃಪ್ತವಾಗುವಷ್ಟು ಸಮಯವನ್ನು ಕಳೆದ ಮೆಲೆ ಮೇಕೆದಾಟುವಿಗೆ ಹೊರಡಲು ಸಿದ್ಧರಾಗಿ. ಮೇಕೆದಾಟು ಸಂಗಮದಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿದ್ದು ಇದನ್ನು ತಲುಪಲು ಸಂಗಮದ ನದಿಯನ್ನು ದಾಟಬೇಕಾಗುತ್ತದೆ. ಬೇಸಿಗೆಯಲ್ಲಿ ಅಥವ ನೀರು ಕಡಿಮೆಯಿದ್ದ ಸಂದರ್ಭದಲ್ಲಿ ನಡೆದುಕೊಂಡೆ ನದಿಯನ್ನು ದಾಟಬಹುದು.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ದಾಟಿದ ನಂತರ ಅಲ್ಲಿಂದ ಸರ್ಕಾರಿ ಬಸ್ಸುಗಳು ಮೇಕೆದಾಟುವಿಗೆ ಕರೆದೊಯ್ಯಲು ಸಿದ್ಧವಿರುತ್ತವೆ. ಒಬ್ಬರಿಗೆ ನಿಗದಿತ ಶುಲ್ಕ ನೀಡಿ ಮೇಕೆದಾಟುವಿಗೆ ತೆರಳಬಹುದು. ಬಸ್ಸುಗಳು ಅನುಕೂಲತೆಯು ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆಯ ಮೇಲೆ ಅವಲಂಬಿಸಿರುತ್ತದೆ.

ಚಿತ್ರಕೃಪೆ: Rishabh Mathur

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಬೇಕಿದ್ದರೆ ಅಥವಾ ನಿಸರ್ಗದ ಮಡಿಲಿನಲ್ಲಿ ಸಂತೋಷದಿಂದ ನಡೆಯಲು ಮನ ಬಯಸಿದರೆ ಬಸ್ಸುಗಳೇರದೆ ಹಾಯಾಗಿ ಟ್ರೆಕ್ ಮಾಡುತ್ತಲೂ ಸಹ ಮೇಕೆದಾಟುವನ್ನು ತಲುಪಬಹುದು.

ಚಿತ್ರಕೃಪೆ: solarisgirl

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಒಂದೊಮ್ಮೆ ಮೇಕೆದಾಟು ತಲುಪಿದರೆ ಕೆಲವು ನೂರು ಮೆಟ್ಟಿಲುಗಳಷ್ಟು ಕೆಳಗಿಳಿದು ಮತ್ತೆ ಮೇಲೇರಿ ಮೇಕೆದಾಟುವಿನ ಪ್ರಮುಖ ವೀಕ್ಷಣಾ ಕೇಂದ್ರಕ್ಕೆ ತಲುಪಬಹುದು. ಮೇಕೆದಾಟುವಿನ ವಿಶೇಷವೆಂದರೆ ಸಂಗಮದಲ್ಲಿ ನೂರು ಮೀಗೂ ಅಧಿಕ ಅಗಲವಾಗಿರುವ ನದಿಯು ಇಲ್ಲಿ ಕೇವಲ ಹತ್ತು ಮೀ ಗಳಷ್ಟು ಅಗಲದಲ್ಲಿ ಹರಿಯುತ್ತದೆ.

ಚಿತ್ರಕೃಪೆ: Thejaswi

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಇಲ್ಲಿ ನೀರಿನ ಹರಿತ ತೀವ್ರವಾಗಿರುತ್ತದೆ ಹಾಗೂ ಇದರಲ್ಲಿಳಿಯುವುದು ಬಹು ಅಪಾಯಕಾರಿ. ಅದಕ್ಕೆಂತಲೆ ಇಲ್ಲಿ ಇದು ಅಪಾಯದ ಸ್ಥಳ ಎಂಬ ಸೂಚನೆ ನೀಡುವ ಫಲಕವನ್ನು ಕಾಣಬಹುದು.

ಚಿತ್ರಕೃಪೆ: Nagarjun Kandukuru

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಇಲ್ಲಿನ ಸ್ಥಳ ಪುರಾಣದ ಪ್ರಕಾರ, ಹಿಂದೆ ಮೇಕೆಯೊಂದು ಹುಲಿ ಬೆನ್ನಟ್ಟಿದ್ದಾಗ ಓಡುತ್ತ ಓಡುತ್ತ ಇಲ್ಲಿ ಬಂದು ಈ ನದಿಯನ್ನು ಒಂದೆ ಜಿಗಿತದಲ್ಲಿ ಪಾರು ಮಾಡಿತಂತೆ. ಆದರೆ ಇದು ಹುಲಿಯಿಂದ ಮಾತ್ರ ಸಾಧ್ಯವಾಗಲಿಲ್ಲವಂತೆ. ಮೇಕೆ ಸರಾಗವಾಗಿ ಇದನ್ನು ದಾಟಿದ್ದರಿಂದ ಮುಂದೆ ಈ ಸ್ಥಳಕ್ಕೆ ಮೇಕೆದಾಟು ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Karthik Prabhu

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಮೊನಚಾದ ಬೃಹತ್ ಕಲ್ಲು ಬಂಡೆಗಳ ಸಂದಿನಲ್ಲಿ, ಶಿಲೆಯನ್ನೆ ಕೊರೆದಂತೆ ರಭಸವಾಗಿ ಹರಿಯುವ ಕಾವೇರಿ ನದಿಯ ನೋಟವು ನೋಡಿದಾಗ ರೋಮಾಂಚನ ಆಗದೆ ಇರದು.

ಚಿತ್ರಕೃಪೆ: Bobinson K B

ಬೆಂಗಳೂರಿನಿಂದ ಮೇಕೆದಾಟು:

ಬೆಂಗಳೂರಿನಿಂದ ಮೇಕೆದಾಟು:

ಅದ್ಭುತ ಮೇಕೆದಾಟು.

ಚಿತ್ರಕೃಪೆ: Rishabh Mathur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X