Search
  • Follow NativePlanet
Share
» »ಸೀಯಮಂಗಲಂನ ಶಿವ ದೇವಾಲಯ!

ಸೀಯಮಂಗಲಂನ ಶಿವ ದೇವಾಲಯ!

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಸೀಯಾಮಂಗಲಂ ಎಂಬ ಗ್ರಾಮದಲ್ಲಿರುವ ಸ್ತಂಬೇಶ್ವರರ್ ಅಥವಾ ಅವನಿಭಜನ ಪಲ್ಲವೇಶ್ವರರ್ ದೇವಾಲಯವು ಬಂಡೆಯಲ್ಲಿ ಕಡೆಯಲಾದ ದೇವಾಲಯವಾಗಿದೆ

By Vijay

ಇದನ್ನು ಅವನಿಭಜನ ಪಲ್ಲವೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಇದು ನಿರ್ಮಾಣವಾದ ಕಾಲ, ಏನಿಲ್ಲವೆಂದರೂ ಸುಮಾರು ಏಳನೇಯ ಶತಮಾನ ಎಂದು ತಿಳಿದುಬರುತ್ತದೆ. ನಂತರ ಎಂಟು ಹಾಗೂ ಮುಂದಿನ ಕಾಲಮಾನದಲ್ಲಿ ಬಂದ ಚೋಳರು ಹಾಗೂ ವಿಜಯನಗರದ ಅರಸರು ಸಾಕಷ್ಟು ನವೀಕರಣವನ್ನು ಇದಕ್ಕೆ ಮಾಡಿದರು ಎಂದು ತಿಳಿದುಬರುತ್ತದೆ.

ಆದರೂ ದಕ್ಷಿಣ ಭಾರತದ ನಾಟ್ಯ ಭಂಗಿಯ ಹಾಗೂ ಬಂಡಿಯಲ್ಲಿ ಕಡೆಯಲಾದ ಅದ್ಭುತ ವಾಸ್ತುಶೈಲಿಯ ಸುಂದರ ದೇವಾಲಯಗಳಿಗಾಗಿ ಇದು ಹೆಸರುವಾಸಿಯಾಗಿದೆ. ಪಲ್ಲವ ದೊರೆ ಮಹೇಂದ್ರವರ್ಮನಿಂದ ಇದು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಸೀಯಮಂಗಲಂನ ಶಿವ ದೇವಾಲಯ!

ಚಿತ್ರಕೃಪೆ: Tnexplore

ಮಹೇಂದ್ರವರ್ಮನಿಗೆ ಅವನಿ ಎಂಬ ನಾಮವೂ ಸಹ ಇದ್ದಿದುದರಿಂದ ಇದಕ್ಕೆ ಅವನಿಭಜನ ಪಲ್ಲವೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇಲ್ಲಿ ಕೆತ್ತಲಾಗಿರುವ ನಟರಾಜನ ಚಿತ್ರವು ಬಲು ವಿಶೇಷವಾಗಿದ್ದು ಮೊದ ಮೊದಲು ನಟರಾಜನ ಕುರಿತು ಉಲ್ಲೇಖಿಸಲಾದ ರಚನೆಗಳ ಪೈಕಿ ಇದೂ ಸಹ ಒಂದೆನ್ನಲಾಗಿದೆ.

ಸೀಯಮಂಗಲಂನ ಶಿವ ದೇವಾಲಯ!

ಚಿತ್ರಕೃಪೆ: Tnexplore

ಅಲ್ಲದೆ ಶಿವನ ಸ್ವರೂಪದಲ್ಲೆ ಇರುವ ದ್ವಾರ ಪಾಲಕರ ಭಂಗಿಯೂ ಸಹ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವಂತಿರದೆ ವಿಶೇಷವಾಗಿ ಕೆತ್ತಲಾಗಿದೆ. ಹೀಗಾಗಿ ಇದೊಂದು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಶ್ಲಪಕ್ಲೆಗೆ ಸಾಕ್ಷಿಯಾಗಿರುವುದಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ.

ಸೀಯಮಂಗಲಂನ ಶಿವ ದೇವಾಲಯ!

ಚಿತ್ರಕೃಪೆ: Tnexplore

ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಈ ದೇವಾಲಯವು ಸಾಂಪ್ರದಾಯಿಕವಾಗಿ ಮಾನ್ಯತೆ ಪಡೆದಿರುವ ಸ್ಮಾರಕವಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿ ನಿತ್ಯವೂ ಶಿವನ ಇತರೆ ದೇವಾಲಯಗಳಲ್ಲಿ ನಡೆಯುವಂತೆ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತವೆ.

ಚಿದಂಬರ ದೇವಸ್ಥಾನದ ಚಿದಂಬರ ರಹಸ್ಯ!

ಪ್ರಸ್ತುತ ಈ ದೇವಾಲಯವು ಸೀಯಾಮಂಗಲಂ ಎಂಬ ಗ್ರಾಮದಲ್ಲಿದೆ. ಸೀಯಾಮಂಗಲಂ ಗ್ರಾಮವು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವಮ್ದವಸಿ ಎಂಬ ತಾಲೂಕಿನಲ್ಲಿ ಬರುತ್ತದೆ. ನೀವಿ ಇತಿಹಾಸಪ್ರಿಯ ಪ್ರವಾಸಿಗರಾಗಿದ್ದರೆ ಹಳೆಯ ರಚನೆಗಳಿಗೆ ಭೇಟಿ ನೀಡುವುದನ್ನು ಇಷ್ಟಪಡುವವರು ನೀವಾಗಿದ್ದರೆ ಖಮ್ದಿತವಾಗಿಯೂ ಈ ತಾಣಕ್ಕೊಮ್ಮೆ ಭೇಟಿ ನೀಡಿ.

ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X