Search
  • Follow NativePlanet
Share
» »ತಿರುಮಲದ ಬೆಟ್ಟದಲ್ಲಿ ಒಂದು ರಹಸ್ಯ ಮಾರ್ಗವಿದೆಯಂತೆ!!!

ತಿರುಮಲದ ಬೆಟ್ಟದಲ್ಲಿ ಒಂದು ರಹಸ್ಯ ಮಾರ್ಗವಿದೆಯಂತೆ!!!

ತಿರುಮಲ ತಿರುಪತಿ, ಆ 7 ಬೆಟ್ಟಗಳ ಹೆಸರನ್ನು ಸ್ಮರಿಸಿಕೊಂಡರೆನೇ ಭಕ್ತಿ-ಭಾವವೂ ಅವರಿಸುತ್ತದೆ. ಶ್ರೀ ಮಹಾವಿಷ್ಣುವಿನ ಅವತಾರವಾದ ವೆಂಕಟೇಶ್ವರ ಸ್ವಾಮಿಯ ಸಕಲ ಜೀವಿಗೆ ಆದಿಯಾಗಿ ನೆಲೆಸಿದ್ದಾನೆ. ಈತನನ್ನು ದರ್ಶನ ಮಾಡಿಕೊಳ್ಳಲು ಕೇವಲ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಈ ಸ್ವಾಮಿಯ ದರ್ಶನವನ್ನು ಕೋರಿ ಭೇಟಿ ನೀಡುತ್ತಾರೆ. ಕಲಿಯುಗದಲ್ಲಿ ಸ್ವಾಮಿಗೆ ಎಷ್ಟು ವಿಶೇಷತೆಗಳಿವೆಯೋ ಅಷ್ಟೇ ವಿಶೇಷತೆ ಹಾಗು ಪ್ರಾಮುಖ್ಯತೆ ಆ 7 ಬೆಟ್ಟಗಳಿಗೂ ಇದೆ.

ಹಚ್ಚ ಹಸಿರಿನಿಂದ ಕೂಡಿದ ಸುಂದರ ಪ್ರಕೃತಿ, ಜಲಪಾತ, ಅಪಾರ ವನ ಮೂಲಿಕೆಗಳು, ದಿವ್ಯವಾದ ಔಷಧಗಳು, ಕೋಟಿ ತೀರ್ಥಗಳು ಹೆಜ್ಜೆ -ಹೆಜ್ಜೆಗೂ ಪವಿತ್ರತೆಯ ಅನುಭವ ಆಹಾ ಎಲ್ಲರಿಗೂ ಪ್ರಿಯವಾದಂತಹ ಕ್ಷೇತ್ರ ಎಂದೇ ಹೇಳಬಹುದು. ತಿರುಮಲದಲ್ಲಿನ ಸ್ವಾಮಿಗೆ ಶೇಷಾಚಲ ಬೆಟ್ಟವೆಂದರೆ ತುಂಭ ಇಷ್ಟವಂತೆ.

ಆ 7 ಬೆಟ್ಟಗಳಿಗೆ ಅದರದೇ ಆದ ಕಥೆಗಳು ಇವೆ. ಕೋಪದಿಂದ ಧರೆಗೆ ಬಂದ ಲಕ್ಷ್ಮೀ ದೇವಿಯನ್ನು ಹುಡುಕಿಕೊಂಡು ಬರುವ ವೆಂಕಟೇಶ್ವರ ಸ್ವಾಮಿ 7 ಬೆಟ್ಟಗಳ ಮೇಲೆ ನೆಲೆಸುತ್ತಾನೆ ಎಂಬುದು ಸ್ಥಳ ಪುರಾಣವಾಗಿದೆ. ಪ್ರಸ್ತುತ ಲೇಖನದಲ್ಲಿ ತಿರುಮಲ ಬೆಟ್ಟದಲ್ಲಿ ಶ್ವೇತದೀಪವಾದ ಶೇಷಾಚಲ ಬೆಟ್ಟದ ಮೇಲಿರುವ ರಹಸ್ಯ ಮಾರ್ಗದ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.

Tirupati

1.ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿನ ಪಟ್ಟಣವೇ ತಿರುಪತಿ. ಈ ಪಟ್ಟಣದಲ್ಲಿ 7 ಬೆಟ್ಟಗಳ ಮೇಲೆ ಆ ವೆಂಕಟೇಶ್ವರ ಸ್ವಾಮಿಯು ನೆಲೆಸಿದ್ದಾನೆ. ಸ್ವಾಮಿ ನೆಲೆಸಿರುವ ತಿರುಮಲದಲ್ಲಿ, ಆದರೆ ತಿರುಪತಿ ತಿರುಮಲ ಎಂದೂ ಕೂಡ ವ್ಯವಹಾರಿಕವಾಗಿ ಜನರು ಕರೆಯುತ್ತಾರೆ.

Tirupati

2.ತಿರುಮಲ ವೆಂಕಟೇಶ್ವಸ್ವಾಮಿ ದೇವಾಲಯವನ್ನು ಪ್ರತಿದಿನ 1 ರಿಂದ 2 ಲಕ್ಷ ಜನ ಭಕ್ತರು ಸ್ವಾಮಿಯ ದರ್ಶನ ಕೋರಿ ಭೇಟಿ ನೀಡುತ್ತಾರೆ. ಪ್ರತ್ಯೇಕವಾದ ದಿನಗಳಲ್ಲಿ ಸಮಾರು 5 ಲಕ್ಷಮಂದಿ ಭಕ್ತರು ದರ್ಶನವನ್ನು ಮಾಡಿಕೊಳ್ಳುತ್ತಾರೆ. ಈ ಯಾತ್ರಾಸ್ಥಳವು ಶ್ರೀ ವೈಷ್ಣವ ಸಂಪ್ರದಾಯದಲ್ಲಿ 108 ನೇ ದಿವ್ಯಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ.

Tirupati

3.ತಿರುಮಲ ಪ್ರಪಂಚ ವ್ಯಾಪಕವಾಗಿ ಅತ್ಯಂತ ಪ್ರಖ್ಯಾತಿ ಪಡೆದಿರುವ ದೇವಾಲಯ. ಈ ದೇವಾಲಯದಲ್ಲಿನ 7 ಬೆಟ್ಟಗಳ ಒಡೆಯ ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತಾನೆ ಎಂದು ಹೇಳಲಾಗುತ್ತದೆ.

Tirupati

4.ಹಾಗಾಗಿಯೇ ಎಷ್ಟೇ ಬಾರಿ ತಿರುಮಲಕ್ಕೆ ತೆರಳಿದರು, ಸ್ವಾಮಿಯ ದರ್ಶನವನ್ನು ಮತ್ತೊಮ್ಮೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಸ್ವಾಮಿಯ ಅಲಂಕಾರ, ಸ್ವಾಮಿಯ ನಾಮ ಒಮ್ಮೆ ಭೂಲೋಕದ ಸ್ವರ್ಗ ಎಂದು ಅನ್ನಿಸದೇ ಇರಲಾರದು.

Tirupati

5.ತಿರುಮಲದಲ್ಲಿ ಕಾಲು ಇಡುತ್ತಿದ್ದಂತೆ ಭಕ್ತಿ-ಭಾವವು ಉದ್ಭವಿಸುತ್ತದೆ. ದೇವಾಲಯದ ಮಹಾದ್ವಾರವನ್ನು ದಾಟುತ್ತಿದ್ದಂತೆ ಸ್ವಾಮಿಯ ದರ್ಶನಕ್ಕೆ ಭಕ್ತರು ಹಾತೋರೆಯುತ್ತಾರೆ.

Tirupati

6.ಸ್ವಾಮಿಯನ್ನು ಕಂಡ ಭಕ್ತರು ಮತ್ತೇ ಮತ್ತೇ ಕಾಣಬೇಕು ಆ ವೈಕುಂಟಾಧಿಪತಿಯನ್ನು ಎಂದು ಅಂದುಕೊಳ್ಳದೇ ಇರಲಾರರು. ಈ ಸ್ವಾಮಿಯ ದೇವಾಲಯದಲ್ಲಿ ಹಲವಾರು ರಹಸ್ಯಗಳು ಇವೆ. ಅವು ಇಂದಿಗೂ ಕೂಡ ನಿಗೂಢವಾಗಿಯೇ ಇದೆ.

Tirupati

7.ಆ ವೈಕುಂಠಧಿಪತಿಯೇ ನೆಲೆಸಿರುವ ಪುಣ್ಯಕ್ಷೇತ್ರವಾಗಿ ನಿತ್ಯ ಲಕ್ಷಾಧಿಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಾರೆ. ಕೇವಲ ಭಕ್ತರೇ ಅಲ್ಲದೇ ದೇವತೆಗಳು ಕೂಡ ರಹಸ್ಯವಾಗಿ ಈ ಸ್ವಾಮಿಯ ದರ್ಶನ ಕೋರಿ ಭೇಟಿ ನೀಡುತ್ತಿರುತ್ತಾರೆ ಎಂದು ಅಲ್ಲಿನ ಪ್ರಧಾನವಾದ ಆರ್ಚಕರು ತಿಳಿಸುತ್ತಾರೆ.

Tirupati

8.ತಿರುಮಲ ಬೆಟ್ಟದಲ್ಲಿ ಶ್ವೇತದೀಪ ಇದೆ ಎಂದು, ಇಲ್ಲಿ ಯೋಗಿಗಳು, ಸಿದ್ಧ ಪುರುಷರುಗಳ ಜೊತೆ ಜೊತೆಗೆ ದೇವತೆಗಳು ಕೂಡ ಈ ಸ್ವಾಮಿಯ ದರ್ಶನ ಕೋರಿ ಒಂದು ರಹಸ್ಯವಾದ ಮಾರ್ಗದ ಮೂಲಕ ಬಂದು ಹೋಗುತ್ತಿರುತ್ತಾರೆ ಎಂದು ಪುರಾಣಗಳಲ್ಲಿ ತಿಳಿಸಿವೆ. ಇಲ್ಲಿ ಒಂದು ವಿಶೇಷವಾದ ರಹಸ್ಯ ಮಾರ್ಗವಿದೆ ಎಂದು ಹೇಳಲಾಗುತ್ತಿದೆ.

Tirupati

9.ಹಾಗೆಯೇ ಪವಳಿಸಿದ ಸೇವೆಯ ನಂತರ ಸುಪ್ರಭಾತದ ಮುಂದೆ, ಅಸಂಖ್ಯಾ ದೇವತೆಗಳು ಸ್ವಾಮಿಯನ್ನು ಸಂದರ್ಶಿಸಲು ಬರುತ್ತಾರೆ ಎಂದು, ಸ್ವಾಮಿಗೆ ವೇದ ಘೋಷಣೆಗಳ ಶಬ್ಧ ಕೇಳಿಸುತ್ತಿದ್ದಂತೆ ಅಲ್ಲಿಂದ ದೇವತೆಗಳು ತೆರಳುತ್ತಾರೆ ಎಂದು ಕೂಡ ಹೇಳುತ್ತಾರೆ.

Tirupati

10.ಅಷ್ಟಾದಶ ಪುರಾಣವಾದ ಶ್ರೀ ವೆಂಕಟೇಶ್ವರ ಚರಿತ್ರೆಯಲ್ಲಿ ಈ ವಿವರದ ಕುರಿತು ಹೇಳಲಾಗಿದೆ. ಹಾಗೆಯೇ ಶ್ವೇತ ದೀಪವನ್ನು ಕಾಣಲು ಪ್ರಪಂಚ ವ್ಯಾಪಕವಾಗಿ ಕೆಲವು ಸ್ಥಳಗಳಲ್ಲಿ ರಹಸ್ಯ ಮಾರ್ಗದ ಮೂಲಕ ಸಿದ್ಧ ಪುರುಷರು, ಯೋಗಿಗಳು, ದೇವತೆಗಳು ಇದರ ಮೂಖಾಂತರವೇ ಹೋಗುವುದು-ಬರುವುದು ಮಾಡುತ್ತಿರುತ್ತಾರಂತೆ.

Tirupati

11.ಉತ್ತರ ಈಶಾನ್ಯ ಪ್ರದೇಶದಲ್ಲಿ ದಟ್ಟವಾದ ಅರಣ್ಯದಲ್ಲಿ ಒಂದು ಗುಹೆ ಇದೆ ಎಂದು, ಅದೇ ಶ್ವೇತ ದೀಪವಾದ ಶೇಷಾಚಲ ಬೆಟ್ಟವೆಂದೂ ಹೇಳಲಾಗುತ್ತದೆ. ಇದಕ್ಕೆ ರಹಸ್ಯವಾದ ಮಾರ್ಗ ಎಂದು ಗುರುತಿಸಲಾಗಿದೆ.

Tirupati

12.ಈ ಶ್ವೇತ ದೀಪದಲ್ಲಿ ರತ್ನ ಖಚಿತವಾದ ಸಿಂಹಾಸನದ ಮೇಲೆ ಒಬ್ಬ ಮಹಾಪುರುಷನಿರುತ್ತಾನೆ ಎಂದು, ಅಕ್ಕ-ಪಕ್ಕದಲ್ಲಿ ದೇವತೆಗಳು ಇರುತ್ತಾರೆ ಎಂಬ ಆಸಕ್ತಿಕರವಾದ ವಿಷಯವನ್ನು ಹೇಳುತ್ತಾರೆ.

Tirupati

13.ತಿರಮಲಕ್ಕೆ ರೈಲು ಮಾರ್ಗದ ಮೂಲಕ, ರಸ್ತೆ ಮಾರ್ಗದ ಮೂಲಕ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ರಸ್ತೆ ಮಾರ್ಗದ ಮೂಲಕವಾದರೆ ಹಲವಾರು ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಸೌಲಭವ್ಯವಿದ್ದು ತಿರುಪತಿಗೆ ಭೇಟಿ ನೀಡಬಹುದು.

Tirupati
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X