Search
  • Follow NativePlanet
Share
» »ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!

ತಿರುವಣ್ಣಾಮಲೈನ ಜಾಗೃತ ಅರುಣಾಚಲೇಶ್ವರ!

By Vijay

ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ ತಿರುವಣ್ಣಾಮಲೈ. ಈ ದೇವಸ್ಥಾನಗಳ ನಗರವಿರುವುದು ತಮಿಳುನಾಡು ರಾಜ್ಯದಲ್ಲಿ. ಇಲ್ಲಿನ ಕೇಂದ್ರಸ್ಥಾನವೂ ತಿರುವಣ್ಣಾಮಲೈ ಜಿಲ್ಲೆಯೇ.

ಅದರಲ್ಲೂ ವಿಶೇಷವಾಗಿ ಇಲ್ಲಿರುವ ಶಿವನಿಗೆ ಮುಡಿಪಾದ ಅರುಣಾಚಲೇಶ್ವರನ ಸನ್ನಿಧಾನವು ಸಾಕಷ್ಟು ಪ್ರಭಾವಶಾಲಿಯಾದ ಕರ್ನಾಟಕ ಹಾಗೂ ಕೇರಳಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಅದ್ಭುತ ದೇವಾಲಯವಾಗಿದೆ. ಸಾಮಾನ್ಯವಾಗಿ ಪೌರಾಣಿಕವಾಗಿ ಮಹತ್ವ ಪಡೆದಿರುವ ಪಂಚಭೂತ ಸ್ಥಳಗಳ ಕುರಿತು ಬಹುತೇಕರಿಗೆ ತಿಳಿದಿದೆ.

ಚೋಳ ನಿರ್ಮಿತ ಅದ್ಭುತ ಬೃಹದೇಶ್ವರ ದೇವಾಲಯ!

ಆ ಪಂಚಭೂತ ಸ್ಥಳಗಳ ಪೈಕಿ ಅರುಣಾಚಲೇಶ್ವರನ ಸನ್ನಿಧಿಯೂ ಸಹ ಒಂದು. ಇದು ಪಂಚಭೂತಗಳಲ್ಲೊಂದಾದ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಶಿವನಿಗೆ ಮುಡಿಪಾದ ಅರುಣಾಚಲೇಶ್ವರನ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರಿಂದ, ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ.

ಪ್ರಸ್ತುತ ಲೇಖನದ ಮೂಲಕ ಅರುಣಾಚಲೇಶ್ವರನ ಈ ಭವ್ಯ ದೇವಾಲಯ ಹಾಗೂ ತಿರುವಣ್ಣಾಮಲೈ ಕುರಿತು ಪ್ರವಾಸಿ ಮಾಹಿತಿಯನ್ನು ಪಡೆಯಿರಿ. ಬೆಂಗಳೂರಿನಿಂದ ತಿರುವಣ್ಣಾಮಲೈ 200 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ.

ಆಸಕ್ತಿದಾಯಕ

ಆಸಕ್ತಿದಾಯಕ

ಆಸಕ್ತಿದಾಯಕ ವಿಷಯವೆಂದರೆ ಈ ನಗರದಲ್ಲಿ ಕಾನೂನು ಕಟ್ಲೆಯ ವಿಚಾರಗಳು ಅಪರಾಧ ಪ್ರಕರಣಗಳು ಸಂಪೂರ್ಣ ಶೂನ್ಯ. ಅತಿ ಅಪರೂಪಕ್ಕೆ ಅಪರೂಪವೆಂಬಂತೆ ಇಲ್ಲಿ ನ್ಯಾಯ ಅನ್ಯಾಯದ ವಿಚಾರ ತಲೆದೋರುತ್ತದೆ.

ಚಿತ್ರಕೃಪೆ: Govind Swamy

ಶಿವನ ನೆಲೆ

ಶಿವನ ನೆಲೆ

ಇದಕ್ಕೆ ಮುಖ್ಯ ಕಾರಣವೆಂದರೆ, ತಿರುವಣ್ಣಾಮಲೈನಲ್ಲಿ ವಾಸಿಸುವ ಮಂದಿ ದೇವರಲ್ಲಿ ಭಯ ಭಕ್ತಿ ಉಳ್ಳವರು. ಆದಷ್ಟು ತೊಂದರೆಗಳಿಂದ ದೂರ ಉಳಿಯಲು ಬಯಸುವವರು. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರನ್ನೂ ತಿರುವಣ್ಣಾಮಲೈನ ಜನ ಪ್ರೀತಿಯಿಂದ ಸ್ವಾಗತಿಸುತ್ತಾರೆ.

ಚಿತ್ರಕೃಪೆ: KARTY JazZ

ನಾಲ್ಕು ರೀತಿ

ನಾಲ್ಕು ರೀತಿ

ನಾಲ್ಕು ರಿತಿಯ ಬ್ರಹ್ಮೋತ್ಸವಗಳು ಇಲ್ಲಿ ಆಚರಸಿಲ್ಪಡುತ್ತವೆ. ನವೆಂಬರ್/ಡಿಸೆಂಬರ್ ತಿಂಗಳಲ್ಲಿ ಆಚರಸಿಲ್ಪಡುವ ಒಂದು ಬ್ರಹ್ಮೋತ್ಸವ ಇಲ್ಲಿ ಪ್ರಸಿದ್ದಿ. ತಮಿಳು ಕ್ಯಾಲೆಂಡರ್ ಪ್ರಕಾರ, ಈ ತಿಂಗಳು ಕಾರ್ತೀಕ ಮಾಸವೆಂದು ಕರೆಯಲ್ಪುತ್ತವೆ.

ಚಿತ್ರಕೃಪೆ: Adam63

ಕಾರ್ತಿಕ ದೀಪ

ಕಾರ್ತಿಕ ದೀಪ

ಹತ್ತು ದಿನಗಳ ಆಚರಣೆಯ ಕೊನೆಯ ದಿನ ಕಾರ್ತೀಕದೀಪ ಆಚರಿಸಲಾಗುತ್ತದೆ. ಕೊನೆಯ ದಿನ ಭಕ್ತಾಧಿಗಳು ದೊಡ್ಡ ಕೊಪ್ಪರಿಗೆಯಲ್ಲಿ ಟನ್ನುಗಟ್ಟಲೆ ತುಪ್ಪವನ್ನು ಹಾಕಿ ದೀಪ ಹಚ್ಚುತ್ತಾರೆ. ಕೊಪ್ಪರಿಗೆಯನ್ನು ಅಣ್ಣಾಮಲೈ ಬೆಟ್ಟದ ತುದಿಯಲ್ಲಿ ಇಡಲಾಗುತ್ತದೆ.

ಚಿತ್ರಕೃಪೆ: Sakthiprasanna

ತುದಿಯಲ್ಲಿದೆ

ತುದಿಯಲ್ಲಿದೆ

ಅರುಣಾಚಲೇಶ್ವರ ದೇವಸ್ಥಾನ ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿದೆ. ಹಿಂದೂ ಭಕ್ತಾಧಿಗಳಿಗೆ ಇದು ಪವಿತ್ರ ಕ್ಷೇತ್ರ. ಇಲ್ಲಿ ಶಿವಪೂಜೆ ಸಡೆಯುತ್ತಿದ್ದು ಶೈವರಿಗೆ ಹೆಚ್ಚಿನ ಮಹತ್ವವುಳ್ಳ ಕ್ಷೇತ್ರವಿದು.

ಚಿತ್ರಕೃಪೆ: Vijayakumarblathur

ಶಿವಲಿಂಗ

ಶಿವಲಿಂಗ

ದೇವಸ್ಥಾನದಲ್ಲಿ ಶಿವನನ್ನು ಪ್ರತಿನಿಧಿಸುವ ಲಿಂಗವಿದೆ. ಲಿಂಗದ ಜೊತೆಗೆ ಪಾರ್ವತಿ ದೇವಿಯ ಪೂಜೆಯೂ ನಡೆಯುತ್ತದೆ. ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಪೂಜಿಸಲಾಗುತ್ತದೆ.

ಚಿತ್ರಕೃಪೆ: Parthiban ravichandiran

ಅಗ್ನಿಯ ಪ್ರತಿನಿಧಿ

ಅಗ್ನಿಯ ಪ್ರತಿನಿಧಿ

ದೇವಸ್ಥಾನವನ್ನು ಅಗ್ನಿ ಪ್ರತಿಕವೆಂದು ಭಾವಿಸಲಾಗುತ್ತದೆ ಮತ್ತು ಶಿವನನ್ನು ಅಗ್ನಿ ಲಿಂಗವೆಂದು ಕರೆಯುತ್ತಾರೆ.ತಮಿಳು ಸಂತರು ನಾಯನ್ನರು ಬರೆದ ಶಾಸ್ತ್ರೋಕ್ತ ಪದ್ಯಗಳಲ್ಲಿ ದೇವಸ್ಥಾನದ ಉಲ್ಲೇಖವಿದೆ.

ಚಿತ್ರಕೃಪೆ: Arunankapilan

ಹತ್ತು ಹೆಕ್ಟೇರ್

ಹತ್ತು ಹೆಕ್ಟೇರ್

ದೇಶದಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನಗಳಲ್ಲಿ ಇದೂ ಒಂದು. ಸುಮಾರು 10 ಹೆಕ್ಟೇರ್ ನಷ್ಟು ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅದ್ಭುತವಾದ ನಾಲ್ಕು ಗೋಪುರಗಳಿವೆ. ಪೂರ್ವದ ಗೋಪುರ 66 ಮೀಟರ್ ಎತ್ತರವಿದ್ದು ಭಾರತದ ಎತ್ತರದ ಗೋಪುರವೆಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಚಿತ್ರಕೃಪೆ: Sivaprarthana

ರೋಚಕ

ರೋಚಕ

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ದಂತಕಥೆಯ ಪ್ರಕಾರ, ಒಮ್ಮೆ ಕೈಲಾಸ ಪರ್ವತದಲ್ಲಿ ಶಿವ-ಪಾರ್ವತಿಯರು ಲೋಕಾಭಿರಾಮವಾಗಿ ಮಾತನಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ಪಾರ್ವತಿಗೆ ತಮಾಷೆ ಮಾಡ ಬೇಕೆಂಬ ಬಯಕೆ ಉಂಟಾಗಿ ಶಿವನ ಕಣ್ಣುಗಳನ್ನು ಮುಚ್ಚಿದಳು.

ಚಿತ್ರಕೃಪೆ: Moshikiran

ಅಂಧಕಾರ

ಅಂಧಕಾರ

ಇದರಿಂದ ಸಂಪೂರ್ಣ ಲೋಕದಲ್ಲೆ ಬೆಳಕು ಮಾಯವಾಗಿ ಎಲ್ಲೆಡೆ ಅಂಧಕಾರ ಉಂಟಾಯಿತು. ರಕ್ಕಸರು ಹೆಚ್ಚಾಗತೊಡಗಿದರು. ಲೋಕದಲ್ಲೆಲ್ಲ ಅಲ್ಲೋಲ ಕಲ್ಲೋಲ ಉಂಟಾಯಿತು. ಇತ್ತ ಶಿವನು ಕಣ್ಣು ಮುಚ್ಚಿಯೆ ಕುಳಿತಿದ್ದನು.

ಚಿತ್ರಕೃಪೆ: A.D.Balasubramaniyan

ಪಾರ್ವತಿಯ ಆಗಮನ

ಪಾರ್ವತಿಯ ಆಗಮನ

ಇದರಿಂದ ಭಯಭೀತರಾದ ದೇವತೆಗಳು ಪಾರ್ವತಿಯೆಡೆ ಧಾವಿಸಿ ಪ್ರಾರ್ಥಿಸಿಕೊಂಡರು. ವಸ್ತುಸ್ಥಿತಿಯ ಗಂಭೀರತೆಯನ್ನು ಅರಿತ ಪಾರ್ವತಿ ದೇವಿಯು ಅತ್ಯಂತ ಭಕ್ತಿ ಶೃದ್ಧೆಗಳಿಂದ ಶಿವನ್ನು ಕುರಿತು ಪ್ರಾರ್ಥಿಸತೊಡಗಿದಳು. ಪ್ರಸನ್ನನಾದ ಶಿವ ಗುಡ್ಡವೊಂದರ ಮೇಲೆ ಅತ್ಯಂತ ತೇಜಸ್ಸಿನಿಂದ ಕೂಡಿದ ಬೆಳಕಿನ ಕಿರಣವಾಗಿ ಪ್ರತ್ಯಕ್ಷನಾದ.

ಚಿತ್ರಕೃಪೆ: raguleo

ಮತ್ತೆ ಬೆಳಕು

ಮತ್ತೆ ಬೆಳಕು

ಎಲ್ಲೆಡೆ ಆವರಿಸಿದ್ದ ಅಂಧಕಾರವು ಕ್ಷಣ ಮಾತ್ರದಲ್ಲೆ ಮಂಗಮಾಯವಾಗಿ ಮತ್ತೆ ಭೂಮಿಯು ಪ್ರಕಾಶಿಸತೊಡಗಿತು. ಎಲ್ಲ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ತಲುಪಿದವು. ಆ ರೀತಿಯಾಗಿ ಶಿವನು ಪ್ರತ್ಯಕ್ಷನಾಗಿದ್ದು ತಿರುವಣ್ಣಾಮಲೈನ ಗುಡ್ಡದ ಮೇಲೆಯೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Govind Swamy

9 ನೇಯ ಶತಮಾನ

9 ನೇಯ ಶತಮಾನ

ಅರುಣಾಚಲೇಶ್ವರನ ದೇವಾಲಯವು ಸಾಕಷ್ಟು ಪುರಾತನವಾದ ರಚನೆಯಾಗಿದೆ. ಏನಿಲ್ಲವೆಂದರೂ ಇದರ ಕಾಲಮಾನವು ಸುಮಾರು ಒಂಭತ್ತನೇಯ ಶತಮಾನಕ್ಕೆ ಕರೆದೊಯ್ಯುತ್ತದೆ. ಆ ಸಂದರ್ಭದಲ್ಲಿ ಈ ಪ್ರದೇಶವು ಚೋಳರಿಂದ ಆಳಲ್ಪಡುತ್ತಿತ್ತು.

ಚಿತ್ರಕೃಪೆ: Sakthiprasanna

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more