Search
  • Follow NativePlanet
Share
» »ನೀವೊಬ್ಬ ಪ್ರಯಾಣಿಕರೆ? ಹಾಗಿದ್ದಲ್ಲಿ ಭಾರತದ ಈ ಕೆಲವು ನದಿ ಕಣಿವೆಗಳಿಗೆ ಭೇಟಿ ಕೊಡಿ

ನೀವೊಬ್ಬ ಪ್ರಯಾಣಿಕರೆ? ಹಾಗಿದ್ದಲ್ಲಿ ಭಾರತದ ಈ ಕೆಲವು ನದಿ ಕಣಿವೆಗಳಿಗೆ ಭೇಟಿ ಕೊಡಿ

ನೈಸರ್ಗಿಕ ಸೌಂದರ್ಯದ ಪ್ರತೀಕಗಳಾದ ಈ ಬೆರಗುಗೊಳಿಸುವ ನದಿ ಕಣಿವೆಗಳಲ್ಲಿ ಭಾರತದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

By Manjula Balaraj Tantry

ಭಾರತದಲ್ಲಿ ಅಸಂಖ್ಯಾತ ಕಣಿವೆಗಳಿವೆ. ಅವುಗಳಲ್ಲಿ ಕೆಲವು ಜನರಿಂದ ಕೂಡಿದ್ದು ಮತ್ತು ಕೆಲವು ವನ್ಯಜೀವಿಗಳೊಂದಿಗೆ ಶ್ರೀಮಂತವಾಗಿವೆ. ಈ ಋತುವಿನ ನದಿ ಕಣಿವೆಗಳನ್ನು ಅನ್ವೇಷಿಸುವ ಮತ್ತು ಮಾನವ ಮತ್ತು ವನ್ಯಜೀವಿ ನೆಲೆಗಳ ಕಡೆಗೆ ಹೋದರೆ ಹೇಗೆ? ಈ ಸರಣಿಯ ಅಡಿಯಲ್ಲಿ ಬರುವ ಕೆಲವು ನದಿ ಕಣಿವೆಗಳಲ್ಲಿ ಯಮ್ತಂಗ್ ಕಣಿವೆ, ಹರ್ ಕಿ ಡೂನ್ ಕಣಿವೆ, ಪಾರ್ವತಿ ಕಣಿವೆ, ಸ್ಪಿತಿ ಕಣಿವೆ ಮತ್ತು ಕುಲ್ಲು ಕಣಿವೆ ಸೇರಿವೆ.

ಉತ್ಕೃಷ್ಟವಾದ ಸೌಂದರ್ಯತೆಯನ್ನು ಹೊಂದಿರುವ ಭಾರತವು ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ಕೊಡುವ ಪ್ರಮುಖ ದೇಶಗಳಲ್ಲೊಂದಾಗಿದೆ. ಒಂದು ಕಡೆಯಲ್ಲಿ ಅದ್ಬುತಗಳಲ್ಲೊಂದಾದ ತಾಜ್ ಮಹಲ್ ಆದರೆ ಇನ್ನೊಂದು ಕಡೆ ಯಮ್ತಾಂಗ್ ಕಣಿವೆಗಳಂತಹ ಹುದುಗಿರುವ ಅನೇಕ ಸೌಂದರ್ಯತೆಗಳನ್ನು ಇಲ್ಲಿ ಕಾಣಬಹುದಾಗಿದೆ. ನಿಮ್ಮ ನಿರಂತರ ಜೀವನ ಶೈಲಿಯಿಂದ ಹೊರಬಂದು ಈ ಗುಪ್ತ ಆದ್ಭುತಗಳಲ್ಲಿಯ ಅಸಂಪ್ರದಾಯಿಕ ಮಾರ್ಗಗಳಲ್ಲಿ ಒಮ್ಮೆ ಏಕೆ ಪ್ರಯಾಣಿಸಬಾರದು ?

ಯಮ್ಥಾಂಗ್ ಕಣಿವೆ

ಯಮ್ಥಾಂಗ್ ಕಣಿವೆ

PC- soumyajit

ಹೂವುಗಳ ಕಣಿವೆ ಎಂದೂ ಕರೆಯಲ್ಪಡುವ ಯಮ್ಥಾಂಗ್ ಕಣಿವೆ ಭಾರತದ ಸಿಕ್ಕಿಂ ರಾಜ್ಯದಲ್ಲಿರುವ ಸುಂದರವಾದ ಮತ್ತು ವಿಸ್ಮಯಕಾರಿಯಾದ ನದೀ ಕಣಿವೆಯಾಗಿದೆ. ಸ್ವರ್ಗ ಸದೃಶ್ಯವಾಗಿರುವ ರಾಜ್ಯದ ನೆಲದಲ್ಲಿರುವ ಯಮ್ಥಾಂಗ್ ಕಣಿವೆಯು ಅಭಿವೃದ್ದಿಯನ್ನು ಹೊಂದುತ್ತಿರುವ ಕಣಿವೆಯಾಗಿದೆ.ಈ ಕಣಿವೆಯ ಮೂಲಕವಾಗಿ ಹರಿಯುವ ನದಿಯ ದಡದಲ್ಲಿರುವ ವರ್ಣರಂಜಿತವಾಗಿ ಅರಳುವ ಹೂವುಗಳ ಮನಮೋಹಕ ನೋಟವು ಮತ್ತು ಹಿತವಾದ ವಾತಾವರಣವು ಇಲ್ಲಿಯ ಸೌಂದರ್ಯವನ್ನು ವರ್ಧಿಸುತ್ತದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಬಿಸಿ ಬುಗ್ಗೆಗಳು ಮತ್ತು ಹುಲ್ಲುಗಾವಲುಗಳಿಂದ ಕೂಡಿದ, ಯುಮ್ಥಾಂಗ್ ಕಣಿವೆ ಖಂಡಿತವಾಗಿಯೂ ತನ್ನಲ್ಲಿ ನೈಸರ್ಗಿಕ ಸೌಂದರ್ಯತೆಯನ್ನು ತನ್ನಲ್ಲಿ ಹೊಂದಿರುವ ಸುಂದರವಾದ ತಾಣವಾಗಿದೆ.

ಪಾರ್ವತಿ ಕಣಿವೆ

ಪಾರ್ವತಿ ಕಣಿವೆ

PC- Alok Kumar

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಹರಡಿರುವ ಪಾರ್ವತಿ ಕಣಿವೆಯು ಪಾರ್ವತಿ ಕಣಿವೆಯು ಪಾರ್ವತಿ ನದಿ ಮತ್ತು ಬಿಯಸ್ ನದಿಯ ಆತ್ಮೀಯ ಸಂಗಮಕ್ಕೆ ನೆಲೆಯಾಗಿದೆ.ಬೆಟ್ಟಗಳ ಇಳಿಜಾರುಗಳಲ್ಲಿ ಸುತ್ತುವರೆದ ಕೋನಿಫೆರಸ್ ಮರಗಳು ಮತ್ತು ಸಮೃದ್ಧ ಸಸ್ಯಗಳಿಂದ ಸುತ್ತುವರಿದ ಪಾರ್ವತಿ ಕಣಿವೆಯು ನೀವು ಭೇಟಿ ಕೊಡಲೇಬೇಕಾದ ತಾಣವಾಗಿದೆ.ಈ ರೋಮಾಂಚಕಾರಿಯಾದ ಮತ್ತು ಜೀವಂತವಾಗಿರುವ ಪ್ರಕೃತಿಯಲ್ಲಿ ಮತ್ತು ಈ ಸಂಯೋಜಿತ ನದಿಗಳ ಬಳಿ ನಿಮ್ಮನ್ನು ನೀವು ಕಳೆದು ಕೊಂಡು ವಿರಮಿಸಲು ಬಯಸಿದಲ್ಲಿ ಈ ತಾಣವು ನಿಮಗೆ ಸೂಕ್ತವಾದುದಾಗಿದೆ. ಈ ಸುಂದರವಾದ ಸ್ಥಳಗಳಲ್ಲಿ ನೀವು ಒತ್ತಡರಹಿತರಾಗಿ ಕುಳಿತುಕೊಳ್ಳುವುದಕ್ಕಿಂತ ಉತ್ತಮವಾದುದು ಬೇರೆ ಯಾವುದೂ ಇರಲು ಸಾಧ್ಯವಿಲ್ಲ್ಲ.

ಸ್ಪಿತಿ ಕಣಿವೆ

ಸ್ಪಿತಿ ಕಣಿವೆ

PC- Quinn Comendant

ಬೌದ್ದ ಧರ್ಮದವರ ಸಾಂಸ್ಕೃತಿಕ ಕೇಂದ್ರವೆನಿಸಿರುವ ಸ್ಪಿತಿ ಕಣಿವೆಯು ಪ್ರಕೃತಿ ಆಧ್ಯಾತ್ಮಿಕತೆ ಮತ್ತು ಇತಿಹಾಸಗಳ ಸಮ್ಮಿಲನವಾಗಿದೆ. ಇದು ಅನೇಕ ಮಠಗಳು,ರಾಷ್ಟ್ರೀಯ ಉದ್ಯಾನವನಗಳು ಕಾಡುಗಳು, ಮತ್ತು ಸನ್ಯಾಸಿಗಳಿಗೆ ನೆಲೆಯಾಗಿದ್ದು ಇದು ಭಾರತದ ಸುಂದರವಾದ ಕಣಿವೆಗಳಲ್ಲೊಂದಾಗಿದೆ ಇದು ಅತೀ ಎತ್ತರದ ಹಿಮಾಲಯ ಪರ್ವತ ಶ್ರೇಣಿಗಳನಡುವೆ ಇದೆ.

ಇಲ್ಲಿ ಚಳಿಗಾಲದಲ್ಲಿ ಹಿಮಪಾತವಾಗುವುದರಿಂದ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಇದು ಮುಚ್ಚಿರುತ್ತದೆ. ಆದುದರಿಂದ ಬೇಸಿಗೆಯಲ್ಲಿ ಸ್ಪಿತಿ ಕಣಿವೆಯನ್ನು ಭೇಟಿ ಮಾಡುವುದು ಸೂಕ್ತವಾಗಿದೆ. ಈ ಸಮಯದಲ್ಲಿ ಸ್ಪಿತಿ ನದಿಯು ಸೊಂಪಾದ ಹಸಿರಿನ ಮಧ್ಯೆ ತನ್ನ ದಡಗಳನ್ನು ಪರಿಧಿ ಇಲ್ಲದೆ ವಿಸ್ತರಿಸುತ್ತಾ ಹೋಗುತ್ತದೆ.

ಹರ್ ಕಿ ದೂನ್ ಕಣಿವೆ

ಹರ್ ಕಿ ದೂನ್ ಕಣಿವೆ

PC- Metanish

ಒಂಟಿ ಕಣಿವೆಗಳಲ್ಲಿ ಟ್ರಕ್ಕಿಂಗ್ ಮಾಡವುದು ಇಷ್ಟಪಡುವವರಾಗಿರುವಿರ? ಹಾಗಿದ್ದಲ್ಲಿ ನೀವು ಸರಿಯಾದ ಸ್ಥಳದಲ್ಲಿ ಇರುವಿರಿ.3500 ಮೀಟರ್ ಎತ್ತರದಲ್ಲಿರುವ ಹಾರ್ ಕಿ ದೂನ್ ಕಣಿವೆಯು ಆಲ್ಪೇನ್ ಸಸ್ಯವವರ್ಗಗಳ ಜೊತೆಗೆ ಶಾಂತಯುತವಾಗಿ ಹರಿಯುವ ನದಿಗಳ ಮೂಲಕ ನಿಮಗೆ ಟ್ರಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳವಾಗಿದೆ ಉತ್ತರಾಖಂಡ್ ರಾಜ್ಯದಲ್ಲಿರುವ ಶ್ರೇಷ್ಠ ಘರ್ವಾಲ್ ಹಿಮಾಲಯನ್ ಶ್ರೇಣಿಯ ನಡುವೆ ನೆಲೆಗೊಂಡಿರುವ, ಹಾರ್ ಕಿ ದೂನ್ ಕಣಿವೆಯು ದಟ್ಟವಾದ ಅರಣ್ಯ ಮತ್ತು ಸಮೃದ್ಧ ಬಯಲು ಪ್ರದೇಶಗಳಲ್ಲಿ ಶ್ರೀಮಂತ ವನ್ಯಜೀವಿಗಳನ್ನು ಹೊಂದಿದೆ.ಹಾರ್ ಕಿ ದೂನ್ ಕಣಿವೆಯಲ್ಲಿ ನಿಮ್ಮ ಶಕ್ತಿ ಮತ್ತು ಸಹನೆಯನ್ನು ಪರೀಕ್ಷಿಸಿದರೆ ಹೇಗೆ?

ಕುಲ್ಲು ಕಣಿವೆ

ಕುಲ್ಲು ಕಣಿವೆ

PC- Vivek Vikram

ಈ ಕಣಿವೆಯು ಪಿರ್ ಪಂಜಾಲ್ ಮತ್ತು ಹಿಮಾಲಯ ಶ್ರೇಣಿಗಳ ಮಧ್ಯೆ ಇರುವ ಕುಲ್ಲು ಕಣಿವೆಯು ಖಚಿತವಾಗಿಯೂ ಹೊಳೆಯುವ ಹಿಮಾಚಲ ಪ್ರದೇಶದ ಹೊಳೆಯುವ ವಜ್ರವಾಗಿದ್ದು ಇದರ ಸೌಂದರ್ಯತೆ ಮತ್ತು ಶ್ರೀಮಂತ ಬೀಸ್ ನದಿಗಳನ್ನು ಹೊಂದಿದ್ದು ಎಲ್ಲಾ ಒಟ್ಟಿಗೆ ಇಲ್ಲೊಂದು ದೈವಿಕ ಸೆಳೆತವನ್ನು ಸೃಷ್ಟಿ ಮಾಡುತ್ತದೆ.ವಿಶಾಲವಾದ ಕಣಿವೆಯಾಗಿರುವ ಕುಲ್ಲು ಕಣಿವೆ ತನ್ನ ಟ್ರೆಕ್ಕಿಂಗ್ ಮಾರ್ಗಗಳು, ಆಕಾಶ ಎತ್ತರದ ಬೆಟ್ಟಗಳು, ಕಲ್ಲಿನ ಬಯಲು ಮತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿದ್ದು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಸ್ಥಳಗಳನ್ನು ಅನ್ವೇಶಣೆ ಮಾಡುವುದಲ್ಲದೆ ಈ ನದಿ ಕಣಿವೆಯನ್ನು ಭೇಟಿ ಮಾಡಲು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X