Search
  • Follow NativePlanet
Share
» »ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

ಮನಕೆ ತಂಪು ಕರುಣಿಸುವ ಅರಕು ನೋಡಿರಣ್ಣ!

By Vijay

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶವು ಪ್ರವಾಸೋದ್ಯಮದ ದೃಷ್ಟಿಯಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇಲ್ಲಿರುವ ಕರ್ವಾವಳಿ ಪ್ರದೇಶಗಳಿಂದ ಬೆಟ್ಟ ಗುಡ್ಡಗಳ ಪರದೇಶಗಳವರೆಗೆ ಸಾಕಷ್ಟು ಆಕರ್ಷಕ ಪ್ರವಾಸಿ ತಾಣಗಳಿವೆ.

ಪ್ರಸ್ತುತ ಲೇಖನದಲ್ಲಿ ಅಂತಹುದೆ ಒಂದು ವಿಶೇಷ ಸ್ಥಳದ ಕುರಿತು ತಿಳಿಸಲಾಗಿದೆ. ಪ್ರಾಯಶಃ ಅದ್ಭುತ ಪ್ರಾಕೃತಿಕ ಸೊಬಗಿನಿಂದ ಕೂಡಿದ ಆಂಧ್ರಪ್ರದೇಶದ ಏಕೈಕ ಕಣಿವೆ ಪ್ರದೇಶ ಇದಾಗಿದೆ. ಇಲ್ಲಿನ ಸುಂದರ ಪರಿಸರದಲ್ಲಿ ವಿಶೇಷವಾಗಿ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ವಿಹರಿಸುವುದೆ ಒಂದು ಚೆಂದದ ಅನುಭವ.

ಈ ಸುಂದರ ಕಣಿವೆ ಪ್ರದೇಶವು ಆಂಧ್ರದ ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿದ್ದು ಅರಕು ಕಣಿವೆ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಅಲ್ಲದೆ ಆಂಧ್ರಪ್ರದೇಶ ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಪ್ರಸ್ತುತ ಲೇಖನದ ಮೂಲಕ ಈ ಸುಂದರ ಕಣಿವೆಯ ಇತ್ತೀಚಿನ ಸುಂದರ ಚಿತ್ರಗಳ ಆನಂದ ಪಡೆಯಿರಿ ಹಾಗೂ ಒಮ್ಮೆ ಭೇಟಿ ನೀಡಿ ಬನ್ನಿ.

ಆಂಧ್ರದಲ್ಲಿದೆ

ಆಂಧ್ರದಲ್ಲಿದೆ

ಆಂಧ್ರಪ್ರದೇಶ ರಾಜ್ಯದಲ್ಲಿ ಸ್ಥಿತವಿರುವ ಅರಕು ಕಣಿವೆ ಒಂದು ಸುಂದರ ಗಿರಿಧಾಮ ಪ್ರದೇಶವಾಗಿರುವುದಲ್ಲದೆ ನಯನ ಮನೋಹರ ಸ್ಥಳವಾಗಿಯೂ ಕಂಡುಬರುತ್ತದೆ. ಸಾಮಾನ್ಯವಾಗಿ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಈ ಪ್ರದೇಶದಲ್ಲಿ ಸುತ್ತಾಟ ವಿಹಾರ ಅದ್ಭುತ ಅನುಭವವನ್ನೆ ನೀಡುತ್ತದೆ.

ಚಿತ್ರಕೃಪೆ: Imahesh3847

ಬುಡಕಟ್ಟು ಜನಾಂಗ

ಬುಡಕಟ್ಟು ಜನಾಂಗ

ಈ ಕಣಿವೆಯ ವಿಶೇಷತೆ ಎಂದರೆ ಇಲ್ಲಿ ಇಂದಿಗೂ ಹಲವಾರು ಬುಡಕಟ್ಟು ಜನಾಂಗಗಳು ವಾಸಿಸುತ್ತಿರುವುದನ್ನು ಕಾಣಬಹುದು. ಇಂದಿನ ಆಧುನಿಕತೆಯಿಂದ ದೂರವಿರುವ ಅವರ ಜೀವನಶೈಲಿಯು ಸಾಕಷ್ಟು ಕುತೂಹಲಕರವಾಗಿದ್ದು ಪ್ರಕೃತಿಯ ಸಹಜತೆಯೊಂದಿಗೆ ಸಹಜವಾಗಿ ಬೆರೆತು ಹೋಗಿರುವುದನ್ನು ಕಂಡಾಗ ಅಚ್ಚರಿಯಾಗದೆ ಇರಲಾರದು.

ಚಿತ್ರಕೃಪೆ: Raj

ವಿಶಾಖಾಪಟ್ಟಣದ ಬಳಿ

ವಿಶಾಖಾಪಟ್ಟಣದ ಬಳಿ

ಆಂಧ್ರದ ಪೂರ್ವಘಟ್ಟಗಳಲ್ಲಿ ಹರಡಿರುವ ಈ ಅರಕು ಕಣಿವೆಯು ವಿಶಾಖಾಪಟ್ಟಣದಿಂದ 125 ಕಿ.ಮೀ ದೂರದಲ್ಲಿ ಪ್ರಾರಂಭವಾಗಿ ಸಂಪೂರ್ಣ ಕರಾವಳಿಯವರೆಗೂ ಹರಡಿದೆ. ಸಮುದ್ರ ಮಟ್ಟದಿಂದ 1300 ಮೀ. ಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಈ ಕಣಿವೆ ಅಮೋಘವಾದ ಭೂದೃಶ್ಯಾವಳಿಗಳನ್ನು ಹೊಂದಿದೆ.

ಚಿತ್ರಕೃಪೆ: Arkadeepmeta

ರೋಮಾಂಚನ

ರೋಮಾಂಚನ

ಇನ್ನೊಂದು ವಿಶೇಷವೆಂದರೆ ಅರಕು ಕಣಿವೆಯ ಘಾಟ್ ರಸ್ತೆಯು ಒಟ್ಟಾರೆಯಾಗಿ 4500 ಅಡಿಗಳಷ್ಟು ಹತ್ತುವ ಅಥವಾ ಏರುವ ರಸ್ತೆ ಮಾರ್ಗ ಹಾಗೂ 3500 ಅಡಿಗಳಷ್ಟು ಇಳಿಯುವ ಪಥವನ್ನು ಹೊಂದಿದ್ದು ಆಕರ್ಷಕ ಭೂದೃಶ್ಯಗಳಿಂದ ಭೂಷಿತವಾಗಿದೆ.

ಚಿತ್ರಕೃಪೆ: Ashokdonthireddy

ಸೋಡಿಯಂ ಲ್ಯಾಂಪ್ ಮ್ಯಾಜಿಕ್

ಸೋಡಿಯಂ ಲ್ಯಾಂಪ್ ಮ್ಯಾಜಿಕ್

ಏನಿಲ್ಲವೆಂದರೂ 20 ಕ್ಕೂ ಅಧಿಕ ಸುರಂಗ ಮಾರ್ಗಗಳು, ಸುತ್ತಮುತ್ತಲಿನ ದಟ್ಟವಾದ ಹಸಿರಿನಿಂದ ಕೂಡಿದ ಅರಣ್ಯ ಪ್ರದೇಶಗಳು ಪ್ರವಾಸಿಗರು ಪ್ರಯಾಣಿಸುವಾಗಲೆ ಸಾಕಷ್ಟು ಸಂತಸ ಪಡುವಂತೆ ಮಾಡುತ್ತವೆ. ಅಲ್ಲದೆ ಸುರಂಗಗಳಲ್ಲಿ ಅಳವಡಿಸಲಾಗಿರುವ ಸೋಡಿಯಂ ಲ್ಯಾಂಪುಗಳು ವಿಶಿಷ್ಟ ರೀತಿಯಬೆಳಕನ್ನು ಹೊರಡಿಸುತ್ತ ರೋಮಾಂಚನಗೊಳ್ಳುವಂತೆ ಮಾಡುತ್ತವೆ.

ಚಿತ್ರಕೃಪೆ: Arunkm44

ಪ್ಯಾಕೆಜುಗಳು ಲಭ್ಯ

ಪ್ಯಾಕೆಜುಗಳು ಲಭ್ಯ

ಅರಕು ಕಣಿವೆ ಆಂಧ್ರದಲ್ಲಿ ನೋಡಲೇಬೇಕಾದ ಕಣಿವೆ ಪ್ರವಾಸವಾಗಿದ್ದು ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯು ಅರಕು ಕಣಿವೆ ಪ್ರವಾಸದ ಹಲವಾರು ಪ್ರವಾಸಿ ಪ್ಯಾಕೆಜುಗಳನ್ನು ಈಗಾಗಲೆ ಪ್ರವಾಸಿಗರಿಗೆಂದು ಕೈಗೆಟುಕುವ ದರದಲ್ಲಿ ಪ್ರಕಟಿಸಿದೆ.

ಚಿತ್ರಕೃಪೆ: Ashokdonthireddy

ಚುಂಬಕದಂತೆ ಸೆಳೆಯುತ್ತದೆ

ಚುಂಬಕದಂತೆ ಸೆಳೆಯುತ್ತದೆ

ಅರಕು ಕಣಿವೆಯ ಪ್ರವಾಸದಲ್ಲಿ ರೈಲು ಪ್ರಯಾಣವು ಒಂದು ಆಕರ್ಷಕ ಚಟುವಟಿಕೆಯಾಗಿದೆ. ಸುಂದರವಾದ ನೀರಿನ ಕೊಳಗಲ ಮೂಲಕ, ಜಲಪಾತಗಳ ಮೂಲಕ, ದಟ್ಟ ಕಂದಕಗಳ ಮೂಲಕವಾಗಿ ಸಾಗುವ ರೈಲಿನಲ್ಲಿ ಪ್ರಯಾಣಿಸುವಾಗ ರೋಮ ರೋಮಗಳು ಸೆಟೆದು ನಿಲ್ಲುತ್ತವೆ.

ಚಿತ್ರಕೃಪೆ: Sunny8143536003

ಸ್ಲೈಡು ನೋಡಿ

ಸ್ಲೈಡು ನೋಡಿ

ಅರಕು ಕಣಿವೆಯು ವಿಶಾಲ ಹಾಗೂ ವಿಸ್ತೃತವಾದ ಪ್ರದೇಶವಾಗಿದ್ದು ಕೆಲವು ನಯನಮನೋಹರ ಆಕರ್ಷಣೆಗಳನ್ನು ಇಲ್ಲಿ ನೋಡಬಹುದಾಗಿದೆ. ನೀವು ಅರಕು ಕಣಿವೆಗೆ ಭೇಟಿ ನೀಡಿದರೆ ಮುಂದಿನ ಸ್ಲೈಡುಗಳಲ್ಲಿ ಹೇಳಲಾದ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಲು ಮರೆಯದಿರಿ. ಇವು ಖಂಡಿತವಾಗಿಯೂ ನೋಡಲೇಬೇಕಾದ ಪ್ರವಾಸಿ ಆಕರ್ಷಣೆಗಳು.

ಚಿತ್ರಕೃಪೆ: Adityamadhav83

ನೋಡಲೇಬೇಕಾದ

ನೋಡಲೇಬೇಕಾದ

ಸುತ್ತಲು ಹಸಿರು, ಶುಭ್ರವಾದ ನೀರು, ಎಳೆಯಾಗಿ ದಾರದ ಹಾಗೆ ಐವತ್ತು ಅಡಿಗಳಷ್ಟು ಎತ್ತರದಿಂದ ನವಿರಾಗು ಧುಮುಕುವ ಕತಿಕಿ ಜಲಪಾತವು ಅರಕು ಕಣಿವೆಯಲ್ಲಿ ನೋಡಲೇಬೇಕಾದ ಒಂದು ಸುಂದರ ಜಲಪಾತ ತಾಣ. ಗೋಸ್ತಾನಿ ನದಿಯಿಂದ ರೂಪಗೊಳ್ಳುವ ಈ ಜಲಪಾತ ಕತಿಕಿ ಎಂಬ ಗ್ರಾಮದ ಬಳಿಯಿದೆ.

ಚಿತ್ರಕೃಪೆ: Imahesh3847

ವಿಶಿಷ್ಟವಾದ

ವಿಶಿಷ್ಟವಾದ

ಅರಕು ಕಣಿವೆಯ ಹೃದಯ ಭಾಗದಲ್ಲಿರುವ ಅರಕು ರಸ್ತೆಯ ಮೇಲೆ ಈ ಆಕರ್ಷಕವಾದ ಬುಡಕಟ್ಟು ಸಂಗ್ರಹಾಲಯವಿದೆ. ಪೂರ್ವಘಟ್ಟಗಳಲ್ಲಿ ಮೊದಲಿನಿಂದಲೂ ವಾಸಿಸುತ್ತ ಬಂದಿರುವ ಕೆಲವು ಸ್ಥಳೀಯ ಬುಡಕಟ್ಟು ಜನಾಂಗಗಳ ಜೀವನಶೈಲಿಯ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಈ ಸಂಗ್ರಹಾಲಯದ ನಿರ್ಮಾಣವಾಗಿದೆ.

ಚಿತ್ರಕೃಪೆ: Ravi teja

ಕಾಫಿ ತೋಟ

ಕಾಫಿ ತೋಟ

ಅರಕು ಕಣಿವೆ ತನ್ನಲ್ಲಿರುವ ಕಾಫಿ ತೋಟಗಳಿಂದಾಗಿಯೂ ಸಹ ಸಾಕಷ್ಟು ಹೆಸರುವಾಸಿಯಾಗಿದೆ. 2007 ರಲ್ಲಿ ಪ್ರಥಮ ಬಾರಿಗೆ ಬುಡಕಟ್ಟು ಜನರಿಂದ ಬೆಳೆಸಲಾದ ಆರ್ಗ್ಯಾನಿಕ್ ಕಾಫಿಯ ಒಂದು ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು.

ಚಿತ್ರಕೃಪೆ: Bhaskaranaidu

ಪದ್ಮಪುರ ಉದ್ಯಾನ

ಪದ್ಮಪುರ ಉದ್ಯಾನ

ಹಿಂದೆ ಎರಡನೇಯ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ತರಕಾರಿ ವಿತರಿಸುವ ಉದ್ದೇಶದಿಂದ ಈ ಉದ್ಯಾನವನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಇದೊಂದು ಪ್ರವಾಸಿ ಆಕರ್ಷಣೆಯಾಗಿದ್ದು ತೋಟಗಾರಿಕೆ ಇಲಾಖೆಯ ಅಧೀನದಲ್ಲಿದೆ ಹಾಗೂ ಬಟಾನಿಕಲ್ ಉದ್ಯಾನ ಎಂದೆ ಕರೆಸಿಕೊಳ್ಳುತ್ತದೆ.

ಚಿತ್ರಕೃಪೆ: Bhaskaranaidu

ರೈಲು ಮಾರ್ಗ

ರೈಲು ಮಾರ್ಗ

ಅರಕು ಕಣಿವೆಯ ಮೂಲಕ ಹಾದು ಹೋಗುವ ಕೋತವಸಲಾ - ಕಿರಂದೂಲ್ ರೈಲು ಮಾರ್ಗ ಸಾಕಷ್ಟು ನಯನ ಮನೋಹರವಾದ ದೃಶ್ಯಾವಳಿಗಳನ್ನು ಕಣ್ಣಿಗೆ ಕಾಣುವಂತೆ ಮಾಡುತ್ತದೆ.

ಚಿತ್ರಕೃಪೆ: Adityamadhav83

ಬುದ್ಧನ ಮುಖ

ಬುದ್ಧನ ಮುಖ

ಅರಕು ಕಣಿವೆಯ ಭಾಗವಾಗಿರುವ ಗೋಸ್ತಾನಿ ನದಿ ಸಮುದ್ರಕ್ಕೆ ಸೇರುವ ಸ್ಥಳವಾದ ಭೀಮುನಿಪಟ್ಟಣಂ ಕಡಲ ತೀರ ಬಲು ಆಕರ್ಷಕವಾದ ಪ್ರವಾಸಿ ಸ್ಥಳವಾಗಿದೆ.

ಚಿತ್ರಕೃಪೆ: lpiepiora

ಕುತೂಹಲ ಕೆರಳಿಸುತ್ತವೆ

ಕುತೂಹಲ ಕೆರಳಿಸುತ್ತವೆ

ಅರಕು ಕಣಿವೆ ಪ್ರದೇಶದಲ್ಲಿರುವ ಬೊರಾ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡ ವಿಸ್ಮಯಕಾರಿ ಗುಹಾ ಸಮೂಹವಾಗಿದೆ. ಇದು ಪ್ರಮುಖವಾಗಿ ಹೆಸರುವಾಸಿಯಾಗಿರುವುದು ಸ್ಟ್ಯಾಲಗ್ಮೈಟ್ ಮತ್ತು ಸ್ಟ್ಯಾಲಕ್ಟೈಟ್ ಎಂಬ ಶಿಲಾ ರಚನೆಗಳಿಗಾಗಿ.

ಚಿತ್ರಕೃಪೆ: Raj srikanth800

ನೋಡಲು ಬಲು ಆಕರ್ಷಕ

ನೋಡಲು ಬಲು ಆಕರ್ಷಕ

ಅತಿ ಆಳ ಹೊಂದಿರುವ ಹಾಗೂ ಬೃಹತ್ ಗುಹೆಗಳ ಪೈಕಿ ಒಂದಾಗಿರುವ ಬೊರ್‍ರಾ ಗುಹೆಗಳು ಕೌತುಕಮಯ ವಿನ್ಯಾಸ ಹಾಗೂ ಮನಮೋಹಕ ಬಣ್ಣ ಹೊಂದಿರುವ ಅನನ್ಯ ಶಿಲಾ ರಚನೆಗಾಗಿ ಪ್ರಖ್ಯಾತಿ ಪಡೆದಿವೆ.

ಚಿತ್ರಕೃಪೆ: Bhaskaranaidu

ಪ್ರವಾಸಿಗರ ನೆಚ್ಚಿನ ತಾಣ

ಪ್ರವಾಸಿಗರ ನೆಚ್ಚಿನ ತಾಣ

ಈ ಗುಹೆಗಳ ಹಿಂದೆ ಹಲವಾರು ದಂತ ಕಥೆಗಳು ತಳುಕು ಹಾಕಿಕೊಂಡಿರುವುದರಿಂದ ಪ್ರವಾಸಿಗರ ಸಾಕಷ್ಟು ಗಮನ ಸೆಳೆಯುತ್ತವೆ. ಪ್ರವೇಶಿಸಲು ಶುಲ್ಕವಿದ್ದು ಗುಹೆಗಳೊಳಗೆ ಬಣ್ಣ ಬಣ್ಣದ ಬೆಳಕು ಮೂಡುವ ಹಾಗೆ ಲೈಟುಗಳನ್ನು ವಿಶೇಷವಾಗಿ ಸಂಯೋಜಿಸಲಾಗಿದೆ.

ಚಿತ್ರಕೃಪೆ: Snehareddy

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more