Search
  • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ಹವಾಮಾನ

ಅರಕು ಕಣಿವೆ ಹವಾಮಾನ

ಅರಕು ಕಣಿವೆಗೆ ಹೋಗಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಕಾಲವು ಅತ್ಯುತ್ತಮ ಅವಧಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಈ ಕಣಿವೆಯಲ್ಲಿನ ಹವಾಗುಣವು ಅತ್ಯಂತ ಹಿತವಾಗಿರುತ್ತದೆ. ಬೆಚ್ಚಗಿನ ಮಧ್ಯಾಹ್ನ, ಹಿತವಾದ ಹವಾಮಾನವು ಇಲ್ಲಿ ಸುತ್ತಾಡಲು ಹೇಳಿ ಮಾಡಿಸಿದ ಸಮಯವನ್ನಾಗಿಸಿವೆ. ಆದರೆ  ಇಲ್ಲಿಗೆ ಈ ಕಾಲದಲ್ಲಿ ಭೇಟಿಕೊಡಬೇಕೆಂದರೆ ಸ್ವೆಟರ್ ಮುಂತಾದ ಉಣ್ಣೆ ಬಟ್ಟೆಗಳನ್ನು ತರಲು ಮರೆಯಬೇಡಿ. ಏಕೆಂದರೆ ಸಂಜೆ ಮತ್ತು ರಾತ್ರಿಗಳು ಇಲ್ಲಿ ವಿಪರೀತ ಚಳಿಯಿಂದ ಕೂಡಿರುತ್ತವೆ.

ಬೇಸಿಗೆಗಾಲ

ಅರಕು ಕಣಿವೆಯು ಬೆಟ್ಟಗಳಿಂದ ಕೂಡಿರುವುದರಿಂದಾಗಿ ಬೇಸಿಗೆಯು ಹಿತವಾಗಿರುತ್ತದೆ. ಇಲ್ಲಿ ಬೇಸಿಗೆಯು ಮಾರ್ಚ್ ನಿಂದ ಶುರುವಾಗಿ ಮೇ ಅಂತ್ಯದವರೆಗೆ ಇರುತ್ತದೆ. ಆಗ ಇಲ್ಲಿ ಉಷ್ಣಾಂಶವು 30 ಡಿಗ್ರಿ ಸೆಲ್ಶಿಯಸ್‍ವರೆಗು ಏರಿಕೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿ ಮಧ್ಯಾಹ್ನ ಬೆಚ್ಚಗೆ ಇರುತ್ತದೆ. ಆದರೆ ಸಂಜೆ ಹಿತವಾಗಿ ಮತ್ತು ಚಳಿಯಿಂದ ಕೂಡಿರುತ್ತದೆ.

ಮಳೆಗಾಲ

ಮಳೆಗಾಲವು ಈ ಕಣಿವೆಯಲ್ಲಿ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ಅಲ್ಲದೆ ಈ ಪ್ರದೇಶವು ಮಿತವಾದ ಪ್ರಮಾಣದಿಂದ ಅಧಿಕ ಮಳೆಯವರೆಗು ಎಲ್ಲ ಪ್ರಮಾಣದ ಮಳೆಯನ್ನು ಕಾಣುತ್ತದೆ. ಇಲ್ಲಿ ಮಳೆಗಾಲವು ಜೂನ್ ತಿಂಗಳಿನಿಂದ ಶುರುವಾಗಿ ಸೆಪ್ಟೆಂಬರ್ ವರೆಗು ಇರುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅಲ್ಪ ಪ್ರಮಾಣದ ಸೋನೆ ಮಳೆ ಸಹ ಇಲ್ಲಿ ಬೀಳುತ್ತಿರುತ್ತದೆ. ಆಗ ಇಲ್ಲಿನ ಹವಾಗುಣವು ಹಿತವಾಗಿದ್ದು, ಉಷ್ಣಾಂಶವು 25 ಡಿಗ್ರಿಯಷ್ಟು ಕುಸಿಯುತ್ತದೆ.

ಚಳಿಗಾಲ

ಅರಕು ಕಣಿವೆಯಲ್ಲಿ ಚಳಿಗಾಲವು ನವೆಂಬರ್ ನಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೆ ಇರುತ್ತದೆ. ಈ ಕಣಿವೆಯಲ್ಲಿ ಚಳಿಗಾಲವು ಚಳಿಯಿಂದ ಕೂಡಿರುವುದಿಲ್ಲ. ಆದರು ತಂಪಾದ ಅನುಭವವನ್ನು ನೀಡುತ್ತದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು 20 ಡಿಗ್ರಿ ಸೆಲ್ಶಿಯಸ್‍ವರೆಗು ಕುಸಿಯುತ್ತದೆ. ಆದರೆ ಇದು 23 ಡಿಗ್ರಿ ಸೆಲ್ಶಿಯಸ್‍ವರೆಗು ಏರುವುದಿಲ್ಲ. ಒಮ್ಮೊಮ್ಮೆ ಸಂಜೆ ಮತ್ತು ರಾತ್ರಿಗಳಂದು ಮತ್ತಷ್ಟು ಕೊರೆಯುವ ಚಳಿ ಉಂಟಾಗುವ ಸಾಧ್ಯತೆಗಳು ಇಲ್ಲಿ ಉಂಟು.