Search
  • Follow NativePlanet
Share
» »ಫ್ರೆಂಡ್ಸ್‌ ಜೊತೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವ ಲಾಭಗಳೇನು ಗೊತ್ತಾ?

ಫ್ರೆಂಡ್ಸ್‌ ಜೊತೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವ ಲಾಭಗಳೇನು ಗೊತ್ತಾ?

ನಾವಿಂದು ಗುಂಪಿನಲ್ಲಿ ಪ್ರವಾಸಕ್ಕೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವುದರ ಲಾಭವನ್ನು ತಿಳಿಸಿಕೊಡಲಿದ್ದೇವೆ.

ಸಾಮಾನ್ಯವಾಗಿ ಟ್ರಿಪ್‌ಗೆ ಹೋಗೋದು, ಪ್ರವಾಸಕ್ಕೆ ಹೋಗೋದಂದ್ರೆ ಅದಕ್ಕೆ ಒಂದು ತಂಡ ಇರಬೇಕು. ನಾಲ್ಕೈದು ಜನರು ಸ್ನೇಹಿತರು ಜೊತೆಗೂಡಿ ಟ್ರಿಪ್ ಹೋದರೇನೆ ಮಜಾ. ಪ್ರವಾಸವನ್ನು ಚೆನ್ನಾಗಿ ಎಂಜಾಯ್ ಮಾಡಬಹುದು. ಅಷ್ಟೇ ಅಲ್ಲ ಒಬ್ಬರು ಇನ್ನೊಬ್ಬರ ಫೋಟೋ ಕ್ಲಿಕ್ ಮಾಡಬಹುದು. ಬಹಳಷ್ಟು ಜನರು ಗುಂಪಾಗಿ ಪ್ರವಾಸಕ್ಕೆ ಹೋಗೋದನ್ನು ಇಷ್ಟಪಟ್ಟರೆ ಕೆಲವರು ಒಬ್ಬಂಟಿಯಾಗಿ ಪ್ರಯಾಣಿಸುವುದನ್ನು ಇಷ್ಟಪಡುತ್ತಾರೆ. ನಾವಿಂದು ಗುಂಪಿನಲ್ಲಿ ಪ್ರವಾಸಕ್ಕೆ ಹೋಗೋದಕ್ಕಿಂತ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗುವುದರ ಲಾಭವನ್ನು ತಿಳಿಸಿಕೊಡಲಿದ್ದೇವೆ.

ಯಾವುದೇ ಅಡೆ ತಡೆ ಇಲ್ಲ

ಒಂದು ವೇಳೆ ನೀವು ನಿಮ್ಮ ಫ್ಯಾಮಿಲಿ ಜೊತೆ ಇಲ್ಲವಾದಲ್ಲಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದರೆ ಅಲ್ಲಿ ನಿಮಗೆ ಬೇಕಾದಂತೆ ಇರಲು ಆಗೋದಿಲ್ಲ. ಪ್ರತಿಯೊಂದು ಗುಂಪಿನಲ್ಲಿ ಯಾರಾದರೂ ಅಡೆ ತಡೆ ಒಡ್ಡುವವರು ಇದ್ದೇ ಇರುತ್ತಾರೆ. ಅದೇ ನೀವು ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋದರೆ ನೀವು ಸ್ವಚ್ಛಂಧ ಹಕ್ಕಿಗಳಂತೆ ನಿಮಗೆ ಬೇಕಾದಂತೆ ಇರಬಹುದು. ಇಷ್ಟ ಬಂದದನ್ನು ಮಾಡಬಹುದು.

ಇಷ್ಟ ಬಂದದ್ದನ್ನು ತಿನ್ನಬಹುದು

ನೀವು ಗುಂಪಿನಲ್ಲಿ ಪ್ರವಾಸಕ್ಕೆ ಹೋದರೆ ನಿಮಗೆ ಇಷ್ಟಬಂದದ್ದನ್ನು ತಿನ್ನುವಂತಿಲ್ಲ. ಆರ್ಡರ್ ಮಾಡುವಂತಿಲ್ಲ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಆರ್ಡರ್‌ ಮಾಡಬೇಕಾಗುತ್ತದೆ. ನಿಮಗೆ ನಾನ್‌ವೆಜ್ ಇಷ್ಟವಾದರೆ ನಿಮ್ಮ ಗುಂಪಿನಲ್ಲಿರುವ ಮತ್ಯಾರೋ ಮಾಂಸಾಹಾರವನ್ನು ಸೇವಿಸೋದಿಲ್ಲ ಆಗ ನೀವು ಅವರ ಇಷ್ಟಕ್ಕನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನೀವು ಕೂರ್ಗ್‌ಗೆ ಹೋದರೆ ಅಲ್ಲಿ ಹಂದಿ ಕರಿ ತುಂಬಾ ಪೇಮಸ್. ನಿಮಗೆ ಅದನ್ನು ಟೇಸ್ಟ್ ಮಾಡಬೇಕೆಂದಿರುತ್ತದೆ. ಆದ್ರೆ ನಿಮ್ಮ ಸ್ನೇಹಿತರು ಹಂದಿ ಕರಿ ತಿನ್ನೋದಿಲ್ಲ ಹಾಗಾಗಿ ನೀವು ಆ ಅವಕಾಶವನ್ನು ಮಿಸ್ ಮಾಡಿಕೊಳ್ಳ ಬೇಕಾಗುತ್ತದೆ.

ನಿಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ

ಯಾವುದೇ ಸಾಮಾಜಿಕ ಸುರಕ್ಷತೆಯ ಬೇಲಿ ಇಲ್ಲದೆ ನಿಮ್ಮ ಸ್ವಂತ ಜಗತ್ತಿನಲ್ಲಿ ಓಡಾಡಬಹುದು. ಇತರರೊಂದಿಗೆ ಸಂಹವನ ಮಾಡಲು ನಿಮಗೆ ಧೈರ್ಯ ಬರುತ್ತದೆ. ಅಪರಿಚಿತ ಪ್ರದೇಶದ ಮೂಲಕ ನಿಮ್ಮ ದಾರಿ ಹುಡುಕಿಕೊಳ್ಳುವುದು ನಿಮ್ಮ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೊಸ ಹೊಸ ಅನುಭವವನ್ನು ನಿಮಗೆ ನೀಡುತ್ತದೆ. ನಿಮ್ಮ ಸ್ವಂತ ಬುದ್ದಿ, ಸ್ವಂತ ಶ್ರಮದ ಮೂಲಕ ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳುವಂತಾಗುತ್ತದೆ.

ಖರ್ಚೂ ಕಡಿಮೆ ಬೀಳುತ್ತದೆ

ನೀವು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೀರೆಂದಾರೆ ನಿಮಗೆ ಖರ್ಚು ಕಡಿಮೆ ಬೀಳುತ್ತದೆ. ಒಬ್ಬನಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಸಿಕ್ಕಿದರೆ ಸಾಕು. ತಿನ್ನಲು ಆಹಾರ, ಒಬ್ಬರಿಗೆ ಟಿಕೇಟ್‌ ಕೂಡಾ ಕಡಿಮೆ ಬೀಳುತ್ತದೆ. ಹಾಗಾಗಿ ನೀವು ನಿಮಗಿಷ್ಟ ಬಂದ ಸ್ಥಳಕ್ಕೆ ಒಬ್ಬಂಟಿಯಾಗಿ ಕಡಿಮೆ ಖರ್ಚಿನಲ್ಲಿ ಓಡಾಡಬಹುದು. ನಿಮ್ಮ ಜೊತೆ ಪ್ರಯಾಣದಲ್ಲಿ ಸ್ನೇಹಿತರಿದ್ದ್ರರೆ ಅನಗತ್ಯ ಖರ್ಚುಗಳೇ ಹೆಚ್ಚಾಗುತ್ತದೆ.

ನಿಮಗಿಷ್ಟ ಬಂದಂತೆ ಪ್ಲ್ಯಾನ್ ಮಾಡಬಹುದು

ಯಾವ ಸ್ಥಳಕ್ಕೆ ಹೋಗಬೇಕು, ಹೇಗೆ ಹೋಗಬೇಕು, ಎಷ್ಟೇಲ್ಲಾ ಸ್ಥಳಗಳನ್ನು ಕವರ್ ಮಾಡಬೇಕು ಹೀಗೆ ಎಲ್ಲಾ ರೀತಿಯ ಪ್ಲ್ಯಾನ್‌ಗಳನ್ನು ನಿಮಗಿಷ್ಟ ಬಂದಂತೆ ಮಾಡಬಹುದು. ಅದೇ ನೀವು ಗುಂಪಾಗಿ ಹೋಗುವುದಾದರೆ ನೀವು ಹೋಗಬೇಕಿನಿಸಿರುವ ಸ್ಥಳ ಅವರಿಗೆ ಇಷ್ಟವಿಲ್ಲದೇ ಇರಬಹುದು. ಇಲ್ಲವಾದಲ್ಲಿ ಅವರು ಆಯ್ಕೆ ಮಾಡಿರುವ ಸ್ಥಳ ನೀವು ಈಗಾಗಲೇ ನೋಡಿರಬಹುದು. ಅಥವಾ ನಿಮಗೆ ಇಷ್ಟವಿಲ್ಲದೇ ಇರಬಹುದು.

ನಿಮ್ಮಲ್ಲೇ ನೀವು ಕಳೆದು ಹೋಗಿ

ಪ್ರತಿ ದಿನ ಆಫೀಸ್‌ ಅದೇ ಸ್ನೇಹಿತರು, ಅದೇ ಸಹಪಾಠಿಗಳು ಅದೇ ಸ್ಥಳದಲ್ಲಿ ನೀವು ಬೋರ್‌ ಆಗಿರುತ್ತದೆ. ಅವರೆಲ್ಲರಿಂದ ದೂರ, ಕಚೇರಿ ಕೆಲಸದ ಜಂಜಾಟದಿಂದ ದೂರವಾಗಿ ಶಾಂತವಾಗಿ ನಿಮಗಾಗಿ, ನಿಮ್ಮ ಸ್ವಂತ ಖಷಿಗಾಗಿ ಕಾಲ ಕಳೆಯಬಹುದು. ನೀವು ಒಬ್ಬಂಟಿಯಾಗಿ ಟ್ರಿಪ್‌ಗೆ ಹೋಗುವಾಗ ಆದಷ್ಟು ಲಗೇಜ್‌ಗಳನ್ನು ಕಡಿಮೆ ಕೊಂಡೊಯ್ಯುವುದೇ ಸೂಕ್ತ. ಬ್ಯಾಕ್‌ಪ್ಯಾಕ್‌ನಲ್ಲಿ ಒಂದೆರಡು ಜೊತೆ ಬಟ್ಟೆ ಇದ್ದರೆ ಸಾಕು. ಎಷ್ಟು ಕಡಿಮೆ ಲಗೇಜ್ ಇರುತ್ತದೆಯೋ ಅಷ್ಟು ಆರಾಮದಾಯಕವಾಗಿರುತ್ತದೆ, ಜೊತೆಗೆ ಟ್ರಿಪ್‌ನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬಹುದು.

ನಿಮ್ಮ ಇಷ್ಟಕ್ಕೆ ನೀವೇ ಯಜಮಾನರು

ಒಬ್ಬಂಟಿಯಾಗಿ ಪ್ರಯಾಣಕ್ಕೆ ಹೋಗುವುದರಿಂದ ನಿಮಗೆ ಯಾರ ಕಿರಿ ಕಿರಿಯೂ ಇರುವುದಿಲ್ಲ. ಇತರರ ಇಷ್ಟದಂತೆ ನಡೆದುಕೊಳ್ಳುವ ಅಗತ್ಯ ಇರುವುದಿಲ್ಲ. ನಿಮ್ಮ ಇಷ್ಟಕ್ಕೆ ನೀವೇ ಯಜಮಾನರು. ಒಂದು ವೇಳೆ ನಿಮ್ಮ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದರೆ ಅಲ್ಲಿ ನೀವಂದುಕೊಂಡಷ್ಟು ಮಜಾವಾಗಿಲ್ಲವೆಂದಾದಲ್ಲಿ ಆ ಸ್ಥಳವನ್ನು ಆಯ್ಕೆ ಮಾಡಿದವರನ್ನು ದೂರುವ ಅವಕಾಶ ಸೋಲೋ ಪ್ರವಾಸದಲ್ಲಿರೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X