
ಅಚಲ್ ಘಡ್ ಕೋಟೆ ಒಂದು ಪರ್ವತದ ತುದಿಯಲ್ಲಿದೆ ಮತ್ತು ಸುಂದರ ದೃಶ್ಯಗಳನ್ನು ನೀಡುತ್ತದೆ. ಈ ಕೋಟೆಯು ಬೃಹತ್ ಗೋಡೆಗಳಿಂದ ಆವೃತವಾಗಿದೆ ಮತ್ತು ಬಹಳ ಭವ್ಯವಾದ ನೋಟವನ್ನು ಹೊಂದಿದೆ.

ಅಚಲ್‌ಘಡ್ ಕೋಟೆ ನಿರ್ಮಾಣವಾದದ್ದು
PC : Ranjith Kumar Inbasekaran
ಅಚಲ್‌ಘಡ್ ಕೋಟೆ ಮೂಲತಃ ಪರಮಾರ ರಾಜವಂಶದ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿದೆ ಆದರೆ 1452 ನೇ ಇಸವಿಯಲ್ಲಿ ಮೇವಾರದ ರಾಣಾ ಕುಂಭ ಅವರಿಂದ ಅದನ್ನು ನವೀಕರಿಸಲಾಯಿತು ಮತ್ತು ಪುನರ್ವಿನ್ಯಾಸಗೊಳಿಸಲಾಯಿತು. ಈ ಕೋಟೆಯನ್ನು ಪ್ರದೇಶವನ್ನು ರಕ್ಷಿಸಲು ಮತ್ತು ಶತ್ರುಗಳ ಚಲನೆಯನ್ನು ಗಮನದಲ್ಲಿಟ್ಟುಕೊಳ್ಳಲು ನಿರ್ಮಿಸಲಾಯಿತು. ದಕ್ಷಿಣ ರಾಜಸ್ಥಾನದ ಹಲವಾರು ಬೃಹತ್ ಕೋಟೆಗಳ ಉಸ್ತುವಾರಿ ವಹಿಸಿದ್ದ ರಾಣಾ ಕುಂಭ ಅವರು ಕೋಟೆಯನ್ನು ವಿಶೇಷವಾಗಿ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.

ಹನುಮಾನ್‌ಪೋಲ್
ಅಚಲ್ ಘಡ್ ಕೋಟೆ ಒಂದು ಪರ್ವತದ ತುದಿಯಲ್ಲಿದೆ ಮತ್ತು ಸುಂದರ ದೃಶ್ಯಗಳನ್ನು ನೀಡುತ್ತದೆ. ಈ ಕೋಟೆಯು ಬೃಹತ್ ಗೋಡೆಗಳಿಂದ ಆವೃತವಾಗಿದೆ ಮತ್ತು ಬಹಳ ಭವ್ಯವಾದ ನೋಟವನ್ನು ಹೊಂದಿದೆ. ಈ ಕೋಟೆಯು ಈಗ ಶಿಥಿಲಗೊಂಡ ಸ್ಥಿತಿಯಲ್ಲಿದೆ. ಕೋಟೆಯ ಮೊದಲ ದ್ವಾರವು ಹನುಮಾನ್‌ಪೋಲ್ ಎಂದು ಕರೆಯಲ್ಪಡುತ್ತದೆ. ಇದು ಕೆಳ ಕೋಟೆಯ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೊಡ್ಡ ಬ್ಲಾಕ್‌ಗಳ ಗ್ರಾನೈಟ್‌ಗಳಿಂದ ನಿರ್ಮಿಸಲ್ಪಟ್ಟ ಎರಡು ಗೋಪುರಗಳನ್ನು ಒಳಗೊಂಡಿದೆ. ಕೆಲವು ಏರಿಳಿತದ ನಂತರ, ಒಳ ಕೋಟೆಯ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸಿದ ಕೋಟೆಯ ಎರಡನೇ ದ್ವಾರವಾಗಿದ್ದ ಚಾಂಪಪೋಲ್ ನಿಂತಿದೆ.

ಅಚಲೇಶ್ವರ ಮಹಾದೇವ ದೇವಸ್ಥಾನ
ಕೋಟೆಯ ಹೊರಗಡೆ ಇರುವ ಪ್ರಸಿದ್ಧ ಅಚಲೇಶ್ವರ ಮಹಾದೇವ ದೇವಸ್ಥಾನದ ಕಾರಣದಿಂದಾಗಿ ಹಾಗೂ ಕೋಟೆಯ ಆವರಣದಲ್ಲಿ ನಿರ್ಮಿಸಲಾದ ಜೈನ ದೇವಾಲಯದಿಂದಾಗಿ ಅಚಲ್ ಘಡ್ ಕೋಟೆಯು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಅಚಲೇಶ್ವರ ಮಹಾದೇವ ದೇವಸ್ಥಾನದ ಮುಖ್ಯ ದೇವತೆ ಶಿವ, ಪವಿತ್ರ ಬಂಡೆಯ ಮೇಲೆ ದೇವರ ಹೆಜ್ಜೆಗುರುತನ್ನು ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ. ಅಚಲೇಶ್ವರ ದೇವಾಲಯವು 5 ಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳಿಂದ ತಯಾರಿಸಲ್ಪಟ್ಟಿದೆ. 4 ಟನ್‌ಗಳಿಗಿಂತಲೂ ಹೆಚ್ಚು ತೂಗುತ್ತದೆ ಎಂದು ಹೇಳಲಾಗುವ ನಂದಿ ವಿಗ್ರಹವನ್ನು ಹೊಂದಿದೆ. ಇಡೀ ದೇವಾಲಯವನ್ನು ಮಾರ್ಬಲ್ ಬ್ಲಾಕ್‌ಗಳಾಗಿ ಮಾಡಲಾಗಿರುತ್ತದೆ. ಪ್ರಾಚೀನ ಕವಿತೆಗಳನ್ನು ಅವುಗಳ ಮೇಲೆ ಕೆತ್ತಲಾಗಿದೆ. ದೇವಾಲಯದ ಹತ್ತಿರ, ಕೊಳದ ಸುತ್ತ ನಿಂತಿರುವ ಮೂರು ಕಲ್ಲಿನ ಎಮ್ಮೆಗಳಿವೆ.

ದಶಾವತಾರ ದೇವಾಲಯ
ಅಚಲ್ ಘಡ್ ಕೋಟೆ ಕೂಡ ಸುಂದರವಾದ ಜೈನ ದೇವಾಲಯಗಳೊಳಗೆ ಕೂಡಿದೆ. ಈ ದೇವಸ್ಥಾನಗಳ ಪೈಕಿ, ಕಾಂತಿನಾಥ ಜೈನ ದೇವಾಲಯವು ಅತ್ಯುತ್ತಮ ದೃಶ್ಯವನ್ನು ನೀಡುತ್ತದೆ. ಈ ದೇವಸ್ಥಾನಗಳನ್ನು 1513 ರಲ್ಲಿ ನಿರ್ಮಿಸಲಾಯಿತು. ಕೋಟೆಯ ಒಳಗೆ ದಶಾವತಾರ ದೇವಾಲಯ ಕೂಡ ಇದೆ. ಈ ದೇವಾಲಯದ ಪ್ರವೇಶದ್ವಾರ ನೂರಾರು ಶಿಲ್ಪಗಳ ಪ್ರತಿಮೆಗಳೊಂದಿಗೆ ಮೇಲಾವರಣದಂತೆ ಇದೆ. ಯುಗದ ವಿವಿಧ ನೃತ್ಯ ಪ್ರಕಾರಗಳನ್ನು ಚಿತ್ರಿಸುತ್ತದೆ. ಅಚಲ್‌ಘಢದ ಎರಡೂ ದೇವಾಲಯಗಳು ಹಿಂದಿನ ಯುಗದ ಕುಶಲಕರ್ಮಿಗಳ ಮೇರುಕೃತಿಗಳು ಮತ್ತು ಸಾಮರ್ಥ್ಯಗಳನ್ನು ತೋರಿಸುತ್ತವೆ.

ತಲುಪುವುದು ಹೇಗೆ?
ಅಚಲ್ ಘಡ್ ಕೋಟೆಯು ನಗರದ ಹೊರವಲಯದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಇದು ಒಂದು ಕೋಟೆಯ ಅವಶೇಷಗಳು, ಆದರೆ ಇದು ಇನ್ನೂ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಪ್ರಮುಖ ಆಕರ್ಷಣೆಯಾಗಿದೆ. ಪಾಳುಬಿದ್ದ ರಚನೆಯ ಸೌಂದರ್ಯವನ್ನು ಅನ್ವೇಷಿಸುವ ಮಧ್ಯಾಹ್ನವನ್ನು ಕಳೆಯಲು ಇದು ಒಳ್ಳೆಯ ಸ್ಥಳವಾಗಿದೆ. ಕೋಟೆಯ ರಸ್ತೆ ಸರಿಯಾಗಿ ನಿರ್ವಹಿಸಲ್ಪಟ್ಟಿರುತ್ತದೆ ಮತ್ತು ಮುಖ್ಯ ನಗರಕ್ಕೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಗೆ ಬರಲು ಯಾವುದೇ ಬಸ್ಸುಗಳು ಲಭ್ಯವಿಲ್ಲದಿರುವುದರಿಂದ ಇಲ್ಲಿಗೆ ಹೋಗಲು ಉತ್ತಮ ಮಾರ್ಗವೆಂದರೆ ನಿಮ್ಮ ಸ್ವಂತ ವಾಹನ ಅಥವಾ ಟ್ಯಾಕ್ಸಿ ಮೂಲಕ.
ನಿಮ್ಮ ಸ್ವಂತ ವಾಹನವನ್ನು ಚಾಲನೆ ಮಾಡುತ್ತಿದ್ದರೆ, ಮೌಂಟ್ ಅಬುವಿನಿಂದ ಡೆಲ್ವಾರಾ ರಸ್ತೆಯನ್ನು ತೆಗೆದುಕೊಳ್ಳುವುದು ಮತ್ತು ನಂತರ ಒರಿಯಾ ರೋಡ್ ಅನ್ನು ತೆಗೆದುಕೊಳ್ಳುವುದು ಅತ್ಯುತ್ತಮ ಆಯ್ಕೆಯಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಈ ಕೋಟೆಯು ತೆರೆದಿರುತ್ತದೆ.