Search
  • Follow NativePlanet
Share
» »ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

By Vijay

ಅಣ್ಣಮಾಚಾರ್ಯರ ಕುರಿತು ಬಹುತೇಕರಿಗೆ ತಿಳಿದಿಲಿಕ್ಕಿಲ್ಲ. ಇವರು ದಾಸರಿಗಿಂತಲೂ ಮುಂಚಿನವರಾಗಿದ್ದು ದೇವರ ಕುರಿತು ಅನೇಕ ಕೀರ್ತನೆ, ಸಂಕೀರ್ತನೆಗಳನ್ನು ಬರೆದಿದ್ದರೆನ್ನುವುದು ವಿಶೇಷ. ಇವರಿಗೆ ಮುಡಿಪಾದ ಸುಂದರ ಪ್ರತಿಮೆಯೊಂದು ಕಿರು ತಿರುಪತಿ ಎಂದೆ ಜನಜನಿತವಾದ ಚಿನ್ನ ತಿರುಪತಿಯಲ್ಲಿದೆ.ಏಕೆಂದರೆ ಇವರು ಆ ಕ್ಷೇತ್ರದ ದೇವರ ಪರಮ ಭಕ್ತರು ಎನ್ನುವುದರಲ್ಲಿ ಸಂದೇಹವಿಲ್ಲ.

ತಿರುಪತಿ ತಿರುಮಲದ ಅದ್ಭುತ ದಂತಕಥೆ

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಚಿತ್ರಕೃಪೆ: Redtigerxyz

ಭಾರತದಲ್ಲಿ ಅತಿ ಹಳೆಯ ದಾಖಲೆಗಳ ಮೂಲಕ ತಿಳಿದು ಬರುವ ಸಂಗೀತ ಸಂಯೋಜಕರಾಗಿದ್ದವರೆ ಅಣ್ಣಮ್ಮಾಚಾರ್ಯರು. ಸುಮಾರು 15 ನೇಯ ಶತಮಾನದಲ್ಲಿದ್ದ ಇವರು ಪರಮ ದೈವ ಭಕ್ತರಾಗಿದ್ದರು ಹಾಗೂ ಸಂಕೀರ್ತನೆಗಳನ್ನು ರಚಿಸಿ ಸಂಯೋಜಿಸಿದವರು. ಕರ್ನಾಟಿಕ್ ಶೈಲಿಯ ಸಂಗೀತದಲ್ಲಿ ಮೊದಲ ಬಾರಿಗೆ ಗೀತೆ ಸಂಯೋಜಿಸಿದರೆಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ಚಿತ್ರಕೃಪೆ: Venkat2336

ಪುರಂದರದಾಸರಂತಹ ದಾಸರು ಇವರ ನಂತರ ಬಂದರು ಎನ್ನಲಾಗುತ್ತದೆ. ಅಣ್ಣಮ್ಮಾಚಾರ್ಯರು ತಮ್ಮ ಸಾತ್ವಿಕ ಜೀವನ ಹಾಗೂ ವಿಷ್ಣುವಿನ ಪರಮ ಭಕ್ತರಾಗಿ ಇಂದಿಗೂ ಕರ್ನಾಟಿಕ್ ಸಂಗೀತಗಾರರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇವರ ಸುಂದರವಾದ ಪ್ರತಿಮೆಯೊಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ದ್ವಾರಕಾ ತಿರುಮಲದಲ್ಲಿದೆ. ಇದನ್ನು ಚಿನ್ನ ತಿರುಪತಿ ಎಂತಲೂ ಸಹ ಕರೆಯುತ್ತಾರೆ.

ಚಿನ್ನ ತಿರುಪತಿ, ಅಣ್ಣಮಾಚಾರ್ಯ ಏನು ವಿಶೇಷತೆ?

ದ್ವಾರಕ ತಿರುಮಲ ದೇವಾಲಯ ಗೋಪುರ, ಚಿತ್ರಕೃಪೆ: Ramireddy.y

ತೆಲುಗು ಸಾಹಿತ್ಯದಲ್ಲಿ ಅಣ್ಣಮ್ಮಾಚಾರ್ಯರನ್ನು ಆಂಧ್ರ ಪಟ ಕವಿತಾ ಪಿತಾಮಹ ಎಂದು ಸಂಭೋದಿಸಲಾಗಿದೆ. ಪ್ರಮುಖವಾಗಿ ಇವರು ವಿಷ್ಣುವಿನ ಖಡ್ಗಾಸ್ತ್ರವಾದ ನಂದಕದ ಅವತಾರವೆಂದು ನಂಬಲಾಗುತ್ತದೆ. ನಂದವಾರಿಕ ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರ ಮಡದಿಯು ತೆಲುಗು ಸಾಹಿತ್ಯದ ಮೊದಲ ಮಹಿಳಾ ಕವಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ತಿರುಪತಿಯಲ್ಲಿರುವ ಇತರೆ ಪ್ರಮುಖ ದೇವಾಲಯಗಳು

ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಜಂಪೇಟೆ ಮಂಡಲದ ತಲ್ಲಪಾಕ ಗ್ರಾಮ ಇವರ ಜನ್ಮ ಸ್ಥಳವಾಗಿದೆ. ಆಂಧ್ರದ ಕೆಲವೆಡೆ ಇವರ ಪ್ರತಿಮೆಗಳನ್ನು ನೋಡಬಹುದಾದರೂ ಪಶ್ಚಿಮ ಗೋದಾವರಿಯ ದ್ವಾರಕ ತಿರುಮಲದಲ್ಲಿರುವ ಅಣ್ಣಮಾಚಾರ್ಯರ ಈ ಪ್ರತಿಮೆಯು ಸಾಕಷ್ಟು ಆಕರ್ಷಕವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X