Search
  • Follow NativePlanet
Share
» »ಈ ನಗೆ ತಾರೆಗಳು ಹುಟ್ಟಿದ್ದು ಈ ಸ್ಥಳದಲ್ಲೆ

ಈ ನಗೆ ತಾರೆಗಳು ಹುಟ್ಟಿದ್ದು ಈ ಸ್ಥಳದಲ್ಲೆ

By Vijay

ಕನ್ನಡ ಚಲನ ಚಿತ್ರೋದ್ಯಮ ಇಲ್ಲಿವರೆಗೂ ನೂರಾರು ಪ್ರತಿಭೆಗಳನ್ನು, ಉತ್ಕೃಷ್ಟ ಕಲಾವಿದರನ್ನು ಕನ್ನಡ ನಾಡಿನ ಜನತೆಗೆ ನೀಡಿದೆ. ಇಂತಹ ಪ್ರತಿಭೆಗಳಲ್ಲಿ ಹಾಸ್ಯ ಕಲಾವಿದರೂ ಸಹ ಪ್ರಮುಖರು. ಅಳಿಸುವುದೆಷ್ಟು ಸುಲಭವೊ ನಗಿಸುವುದಷ್ಟೆ ಕಷ್ಟ ಅಂತ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ.

ಆದರೆ ಈ ಲೆಖನದಲ್ಲಿ ನಿಡಲಾಗಿರುವ ಕೆಲವು ಕನ್ನಡ ಚಲನಚಿತ್ರೋದ್ಯಮದ ನಗಿಸುವ ತಾರೆಗಳು ಎಂದೆಂದಿಗೂ ಅವರ ಅಭಿಮಾನಿಗಳಲ್ಲಿ ಹೃದಯದಲ್ಲಿ ಸದಾ ಅಮರ ಹಾಗೂ ಚಿರಂಜೀವಿ. ಹಾಗಾದರೆ ಬನ್ನಿ ಯಾವ ತಾರೆ ಯಾವ ಊರಿನಲ್ಲಿ ಜನ್ಮ ತಳೆದಿದ್ದಾರೆಂದು ನೋಡೋಣ. ಈ ಸ್ಥಳಗಳಿಗೆ ತೆರಳಿದಾಗ ನಿಮ್ಮ ಮನದಲ್ಲಿ ಅವರ ನೆನಪು ಬಂದರೆ ಅಚ್ಚರಿಪಡಬೇಕಾಗಿಲ್ಲ.

ಹುಟ್ಟಿದ ಸ್ಥಳಗಳು:

ಹುಟ್ಟಿದ ಸ್ಥಳಗಳು:

ನರಸಿಂಹರಾಜು(24 July 1923 - 11 July 1979) : ಇವರನ್ನು ಕನ್ನಡ ಚಲನ ಚಿತ್ರೋದ್ಯಮದ ಹಾಸ್ಯ ಚಕ್ರವರ್ತಿ ಎಂದೆ ಗುರುತಿಸಲಾಗುತ್ತದೆ. ಡಾ.ರಾಜಕುಮಾರ್ ಜೊತೆಗೂಡಿ ಇವರು ನೀಡಿರುವ ಅಭಿನಯ ಎಂದಿಗೂ ಮರೆಯುವಂತಿಲ್ಲ. ಈ ಅಪ್ಪಟ ಹಾಸ್ಯ ಕಲಾವಿದ ಜನಿಸಿದ್ದು ತಿಪಟೂರಿನಲ್ಲಿ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ಮುಲತಃ ತೆಂಗಿನ ಮರಗಳು ಹಾಗೂ ಒಣ ಕೊಬ್ಬರಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Vaidyasr

ಹುಟ್ಟಿದ ಸ್ಥಳಗಳು:

ಹುಟ್ಟಿದ ಸ್ಥಳಗಳು:

ಬಾಲಕೃಷ್ಣ- ಮೊದಲಿಗೆ ಖಳ ನಟನಾಗಿ ಅಭಿನಯಿಸಿ ನಂತರ ಹಾಸ್ಯ ಕಲಾವಿದರಾಗಿ ಜನಮನದಲ್ಲಿ ನೆಲೆಯೂರಿದ ಬಾಲಕೃಷ್ಣರವರು ಜನಿಸಿದ್ದು ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ. ಅರಸೀಕೆರೆ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು. ಇನ್ನೊಬ್ಬ ಅದ್ಭುತ ಕಲಾವಿದ ದೊಡ್ಡಣ್ಣರವರು ಹುಟ್ಟಿದ್ದೂ ಸಹ ಅರಸೀಕೆರೆಯಲ್ಲೆ.

ಚಿತ್ರಕೃಪೆ: Karsolene

ಹುಟ್ಟಿದ ಸ್ಥಳಗಳು:

ಹುಟ್ಟಿದ ಸ್ಥಳಗಳು:

ಮುಖ್ಯಮಂತ್ರಿ ಚಂದ್ರು : ಖಳನಟನಾಗಿಯೂ ಅಭಿನಯಿಸಿರುವ ಮುಖ್ಯಮಂತ್ರಿ ಮೈಸೂರಿನಲ್ಲಿ ಜನಿಸಿದವರು. ಮೈಸೂರು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಪೈಕಿ ಒಂದಾಗಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಸ್ಥಳಗಳು.

ಚಿತ್ರಕೃಪೆ: Kiranravikumar
ಹುಟ್ಟಿದ ಸ್ಥಳಗಳು:

ಹುಟ್ಟಿದ ಸ್ಥಳಗಳು:

ಸಾಧು ಕೋಕಿಲ : ಇಂದಿನ ಕಲಾಪ್ರೀಯರ ನೆಚ್ಚಿನ ಹಾಸ್ಯ ಸರ್ದಾರನಾಗಿರುವ ಸಾಧು ಮಹಾರಾಜ್ ಎಂದು ಕರೆಯಲ್ಪಡುವ ಸಹಾಯ ಶೀಲನ್ ಅರ್ಥಾತ್ ಸಾಧು ಕೋಕಿಲ ಹುಟ್ಟಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೆ. ಬೆಂಗಳೂರಿಗೆ ಸಂಬಂಧಿಸಿದ ಲೇಖನಗಳು.

ಚಿತ್ರಕೃಪೆ: PP Yoonus

ಹುಟ್ಟಿದ ಸ್ಥಳಗಳು:

ಹುಟ್ಟಿದ ಸ್ಥಳಗಳು:

ರಂಗಾಯಣ ರಘು : ತಮ್ಮ ಮನೋಜ್ಞ ಅಭಿನಯದಿಂದ ಇಂದು ಎಲ್ಲರ ಬಾಯಲ್ಲಿ ಬೆರೆತು ಹೋಗಿರುವ ಇನ್ನೊಬ್ಬ ಶ್ರೇಷ್ಠ ಹಾಸ್ಯ ಕಲಾಕಾರ ರಂಗಾಯಣ ರಘುರವರು ಜನಿಸಿದ್ದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊಟ್ಟೂರು ಎಂಬ ಗ್ರಾಮದಲ್ಲಿ. ತುಮಕೂರು ಒಂದು ಅದ್ಭುತ ಜಿಲ್ಲೆಯಾಗಿದ್ದು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಮಾಹಿತಿಗಾಗಿ ಕ್ಲಿಕ್ ಮಾಡಿ.

ಚಿತ್ರಕೃಪೆ: Srinivasa S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X