Search
  • Follow NativePlanet
Share
» »ಚುಂಬಕದಂತೆ ಆಕರ್ಷಿಸುವ ಬಿಸಿ ನೀರಿನ ಬುಗ್ಗೆಗಳು

ಚುಂಬಕದಂತೆ ಆಕರ್ಷಿಸುವ ಬಿಸಿ ನೀರಿನ ಬುಗ್ಗೆಗಳು

By Vijay

ಎಲ್ಲ ರೀತಿಯ ಜೀವಿಗಳು ತಮ್ಮದೆ ಆದ ವಿಶೇಷತೆಗಳಿಂದ ಬದುಕಲು ಅನುವು ಮಾಡಿಕೊಟ್ಟಿರುವ ಈ ಭೂಮಿಯ ವಿಧ ವಿಧವಾದ ರಹಸ್ಯಗಳು ಪ್ರಸ್ತುತ ವಿಜ್ಞಾನಕ್ಕಿಂತಲೂ ಮೀರಿದಿದುದಾಗಿದೆ ಎಂದರೆ ತಪ್ಪಲ್ಲ. ಈ ಭೂತಾಯಿಯ ಮಡಿಲಲ್ಲಿ ಅದೆಷ್ಟೊ ಚಿತ್ರ ವಿಚಿತ್ರ ಸನ್ನಿವೇಶಗಳು, ಚಟುವಟಿಕೆಗಳು ನಡೆಯುತ್ತಲೆ ಇರುತ್ತವೆ.

ಭೂಮಿಯಲ್ಲಿ ಕಂಡುಬರುವ ಅಚ್ಚರಿಗಳ ಕುರಿತು ಅಭ್ಯಸಿಸುವಾಗ ಕಂಡುಬರುವ ಒಂದು ವಿಷಯವೆಂದರೆ ನೈಸರ್ಗಿಕವಾಗಿ ನಿರ್ಮಿತವಾಗಿರುವ ಬಿಸಿ ನೀರಿನ ಬುಗ್ಗೆಗಳು. ಈ ಬಿಸಿ ನೀರಿನ ಬುಗ್ಗೆಗಳು ಭೂಮಿಯ ವಿವಿಧ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಭೂಪದರದೊಳಗಿನ ಭೂಶಾಖದಿಂದ ಅಂತರ್ಜಲದ ನೀರು ಕಾಯುವುದರಿಂದ ಈ ರೀತಿಯ ಬಿಸಿ ನೀರಿನ ತೊರೆಗಳು ಉತ್ಪತ್ತಿಯಾಗುತ್ತವೆ.

ನಿಮಗಿಷ್ಟವಾಗಬಹುದಾದ : ಭೇಟಿ ನೀಡಲೇಬೇಕಾದ ನೈಸರ್ಗಿಕ ವಿಸ್ಮಯಗಳು

ತಣ್ಣನೆಯ ನೀರಿಗಿಂತಲೂ ಬಿಸಿ ನೀರು ಹೆಚ್ಚಿನ ಪ್ರಮಾಣದ ಲವಣಾದಿಗಳನ್ನು ಕರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ, ಬಿಸಿ ನೀರಿನ ಬುಗ್ಗೆಗಳ ನೀರು ಅತಿ ಹೆಚ್ಚಿನ ಪ್ರಮಾಣದ ಲವಣಾಂಶಗಳಿಂದ ಶ್ರೀಮಂತವಾಗಿರುತ್ತದೆ. ಹಲವರು ಹೇಳುವ ಪ್ರಕಾರ ಇಂತಹ ನೀರು ಔಷಧೀಯ ಗುಣಗಳನ್ನು ಹೆಚ್ಚಾಗಿ ಹೊಂದಿರುತ್ತದೆ.

ಹೀಗೆ ಸದಾ ಕಾಲ ನೀರು ಬಿಸಿಯಾಗಿರುವುದು ಮತ್ತು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ ಬಿಸಿ ನೀರಿನ ಬುಗ್ಗೆಗಳು ಮೊದಲಿನಿಂದಲೂ ಚುಂಬದಂತೆ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ಆಕರ್ಷಣೆಗಳಾಗಿ ಹೆಸರುವಾಸಿಯಾಗಿವೆ. ಇಂತಹ ಪ್ರಕೃತಿ ವಿಸ್ಮಯವನ್ನು ಕಣ್ತುಂಬ ತುಂಬಿಕೊಳ್ಳಲೆಂದೆ ಸಾಕಷ್ಟು ಜನ ಪ್ರವಾಸಿಗರು ಹಾತೊರೆಯುತ್ತಿರುತ್ತಾರೆ.

ಭೂಮಿಯ ಒಡಲಿನ ಒಳಗೆ ನುಸುಳಿದಂತೆ ಲಾವಾ ರಸದ ಕಾರಣ ತಾಪಮಾನವು ಹೆಚ್ಚಾಗುತ್ತ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಅಂತರ್ಜಲದ ನೀರು ಬಸಿದಂತೆ ಕಾಯತೊಡಗುತ್ತದೆ. ಹೆಚ್ಚು ಕಾಯುತ್ತಿರಲು ಶಾಖದ ಒತ್ತಡ ಉಂಟಾಗಿ ಮೆಲ್ಮೈಗೆ ಚಿಮುಕುತ್ತದೆ. ಗಮನವಿರಲಿ ಎಲ್ಲಾ ಬಿಸಿ ನೀರಿನ ಬುಗ್ಗೆಗಳು ಒಂದೆ ರೀತಿಯ ತಾಪಮಾನ ಹೊಂದಿರುವುದಿಲ್ಲ. ಕೆಲವು ಮನುಷ್ಯನ ದೇಹಕ್ಕೆ ಸ್ನಾನ ಮಾಡಲು ಯೋಗ್ಯವಾದ ತಾಪಮಾನ ಹೊಂದಿದ್ದರೆ ಇನ್ನೂ ಕೆಲವು ಅತಿ ಹೆಚ್ಚು ಉಷ್ಣತೆ ಹೊಂದಿದ್ದು ಜೀವಕ್ಕೆ ಅಪಾಯಕಾರಿಯಾಗಿರುತ್ತವೆ.

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಪ್ರಸ್ತುತ ಲೇಖನವು ಭಾರತ ದೇಶದಲ್ಲಿ ಕಂಡುಬರುವ ಅಥವಾ ಭೇಟಿ ನೀಡಲು ಯೋಗ್ಯವಾದ ಕೆಲವು ಪ್ರಮುಖ ಬಿಸಿ ನೀರಿನ ಬುಗ್ಗೆಗಳ ಕುರಿತು ತಿಳಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಬಿಸಿ ನೀರಿನ ಬುಗ್ಗೆಗಳ ಹಿನ್ನಿಲೆಯ ಕುರಿತು ದಂತ ಕಥೆಗಳು ಪ್ರಚಲಿತದಲ್ಲಿದ್ದು ಇವು ಧಾರ್ಮಿಕ ಆಕರ್ಷಣೆಗಳಾಗಿಯೂ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Brocken Inaglory

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಖೀರಗಂಗಾ : ಹಿಮಾಚಲ ಪ್ರದೇಶ ರಾಜ್ಯದ ಪಾರ್ವತಿ ಕಣಿವೆಯ ಬಳಿ ಈ ಬಿಸಿ ನೀರಿನ ಬುಗ್ಗೆಯು ಸ್ಥಿತವಿದೆ. ಪಾರ್ವತಿ ಕಣಿವೆಯಿಂದ ರುದ್ರ ನಾಗ್ ಎಂಬ ಜಲಪಾತದ ನಂತರ ಮೇಲ್ಕಕ್ಕೇರುವ ನೀರಿನ ಪಥವು ನಂತರ ಖೀರಗಂಗಾದ ಬಳಿ ಬಿಸಿ ನೀರಾಗಿ ಹೊರ ಹೊಮ್ಮುತ್ತದೆ. ರುದ್ರನಾಗ್ ಜಲಪಾತ. ನಂತರ ಈ ನೀರು ಖೀರಗಂಗಾ ತಾಣವನ್ನು ನಿರ್ಮಿಸುತ್ತದೆ.

ಚಿತ್ರಕೃಪೆ: Zoeacs

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಇದರ ತಾಪಮಾನ ಸ್ನಾನ ಮಾಡಲು ಯೋಗ್ಯಕರವಾಗಿದೆ. ದಂತಕಥೆಯ ಪ್ರಕಾರ, ಇಲ್ಲಿ ಹಿಂದೊಮ್ಮೆ ಶಿವನು ಮೂರು ಸಾವಿರ ವರ್ಷಗಳ ಕಾಲ ತಪಸ್ಸನ್ನಾಚರಿಸಿದ್ದನಂತೆ. ಈ ಬಿಳಿ ಗಂಧಕದ ಈ ನೀರು ಪವಿತ್ರಮಯವಾಗಿದ್ದು ಔಷಧೀಯ ಗುಣಗಳಿಂದ ಸಂಪದ್ಭರಿತವಾಗಿದೆ ಎನ್ನಲಾಗಿದೆ. ಇದು ಭಾರತೀಯ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದ ಸ್ಮಾರಕವಾಗಿದೆ.

ಚಿತ್ರಕೃಪೆ: Asheesh123sharma

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ತತ್ತಾಪಾನಿ ಬಿಸಿ ನೀರಿನ ಬುಗ್ಗೆ : ಹಿಮಾಚಲದ ಶಿಮ್ಲಾದಿಂದ 50 ಕಿ.ಮೀ ಗಳಷ್ಟು ದೂರದಲ್ಲಿ ಈ ಸಟ್ಲೆಜ್ ನದಿಯಿಂದ ರೂಪಿತವಾಗಿರುವ ಈ ಬಿಸಿ ನೀರಿನ ಬುಗ್ಗೆಯ ಪ್ರವಾಸ ಮಾಡಬಹುದು. ಶಿಮ್ಲಾದಿಂದ ತತ್ತಾಪಾನಿ ತಾಣಕ್ಕೆ ಒಂದು ದಿನದ ಪ್ರವಾಸ ಸೌಲಭ್ಯಗಳು ಪ್ರವಾಸ ಆಯೋಜಕ ಸಂಸ್ಥೆಗಳಿಂದ ಲಭ್ಯವಿದೆ. ಈ ನೀರು ಚರ್ಮ ವ್ಯಾಧಿ, ಮೂಳೆಗಳ ಕೀಲು ನೋವುಗಳಿಗೆ ಉಪಶಮನ ನೀಡುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Rajafiaz

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮಣಿಕರಣ್ : ಹಿಮಾಚಲದ ಕುಲ್ಲು ಜಿಲ್ಲೆಯ ಭುಂತರ್ ಪಟ್ಟಣದ ಈಶಾನ್ಯಕ್ಕಿರುವ ಪಾರ್ವತಿ ಕಣಿವೆಯ ಪಾರ್ವತಿ ನದಿಗೆ ರೂಪಿತವಾಗಿರುವ ಈ ಬಿಸಿ ನೀರಿನ ಬುಗ್ಗೆಯು ಮಣಿಕರಣ್ ಎಂಬ ಸ್ಥಳದಲ್ಲಿದೆ. ಬಿಳಿ ಗಂಧಕಯುಕ್ತ ಬಿಸಿ ನೀರನ್ನು ಹೊಂದಿರುವ ಮಣಿಕರಣ್ ತಾಣವು ಹಿಂದೂ ಹಾಗೂ ಸಿಖ್ ಜನಾಂಗದವರಿಬ್ಬರಿಗೂ ಪ್ರಮುಖ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ಚಿತ್ರಕೃಪೆ: Nataraja

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಹಿಂದು ನಂಬಿಕೆಯಂತೆ ಒಂದೊಮ್ಮೆ ಶಿವ-ಪಾರ್ವತಿಯರು ಈ ಪ್ರದೇಶದಲ್ಲಿ ಸುತ್ತಾಡುತ್ತಿರುವಾಗ ಇದರ ಸುಂದರ ಪ್ರಾಕೃತಿಕ ಸೊಬಗಿಗೆ ಮಾರು ಹೋಗಿ ಅಲ್ಪ ಸಮಯಗಳ ಕಾಲ ಇಲ್ಲಿ ವಾಸಿಸಲಿ ಇಚ್ಛಿಸಿದರು. ಹೀಗೆ ಅವರಿಬ್ಬರು ಸುಮಾರು 1100 ವರ್ಷಗಳ ಕಾಲ ಇಲ್ಲಿ ತಂಗಿದ್ದರು.

ಚಿತ್ರಕೃಪೆ: Aman Gupta

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಈ ಸಮಯದಲ್ಲಿ ಒಮ್ಮೆ ಪಾರ್ವತಿಯು ತನ್ನ ಮಣಿಯೊಂದನ್ನು ಕಳೆದುಕೊಂಡು ಬೇಸರಪಟ್ಟಳು. ಅದಕ್ಕೆ ಶಿವನು ತನ್ನ ಸೇವಕರನ್ನು ಕರೆದು ಅದನ್ನು ಹುಡುಕಲು ಹೇಳಿದನಾದರೂ ಸೇವಕರು ಯಶಸ್ವಿಯಾಗದ ಕಾರಣ ಶಿವನು ಕ್ರೋಧಗೊಂಡು ಮೂರನೆಯ ಕಣ್ಣು ತೆರೆದನು.

ಚಿತ್ರಕೃಪೆ: sandeepachetan.com travel photography

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಇನ್ನೇನು ಲೋಕ ನಾಶ ಹೊಂದದಂತೆ ಶೇಷನಾಗನು ಉಸಿರು ಬಿಟ್ಟು ನೀರು ಕುದಿಯುವಂತೆ ಮಾಡಿ ನೀರಿನಲ್ಲಿದ್ದ ಎಲ್ಲ ಮಣಿಗಳನ್ನು ಮೇಲೇರಿಸಿದನು. ತದನಂತರ ಪಾರ್ವತಿಗೆ ತನ್ನ ಮಣಿ ದೊರೆತು ಪರಿಸ್ಥಿತಿ ಶಾಂತವಾಯಿತು. ಹಾಗಾಗಿ ಇದಕ್ಕೆ ಮಣಿಕರಣ ಎಂಬ ಹೆಸರು ಬಂದಿತು ಹಾಗೂ ಆ ನೀರು ಇಂದು ಕುದಿಯುತ್ತಿದೆ ಎಂದು ಹೇಳಲಾಗುತ್ತದೆ. ಅತಿ ಚಳಿಗೆ ಪ್ರಖ್ಯಾತವಾದ ಈ ಸ್ಥಳದಲ್ಲಿ ಅಚ್ಚರಿ ಮೂಡಿಸುವಂತಿದೆ ಈ ನೀರಿನ ಬುಗ್ಗೆ. ಇಲ್ಲಿನ ನೀರು ಎಷ್ಟು ಬಿಸಿಯಿರುತ್ತದೆ ಎಂದರೆ ಅಕ್ಕಿಯಿಂದ ಅನ್ನವನ್ನು ಸರಾಗವಾಗಿ ಮಾಡಬಹುದು.

ಚಿತ್ರಕೃಪೆ: balu

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಇನ್ನೂ ಸಿಖ್ಖರ ನಂಬುಗೆಯಂತೆ, ಹಿಂದೆ ಗುರುನಾನಕರು ತಮ್ಮ ಶಿಷ್ಯನೊಂದಿಗೆ ಈ ಸ್ಥಳಕ್ಕೆ ಬಂದಿದ್ದರು. ದಣಿದಿದ್ದರಿಂದ ಹಸಿವು ತುಂಬಾ ಆಗಿ ಶಿಷ್ಯನು ಗ್ರಾಮದ ಜನರಿಂದ ಹಿಟ್ಟನ್ನು ತಂದನು. ಆದರೆ ಆ ಹಿಟ್ಟಿನಿಂದ ರೊಟ್ಟಿ ತಯಾರಿಸಲು ಬೇಕಾಗಿದ್ದ ಬೆಂಕಿಯ ಸುಳಿವೂ ಇರಲಿಲ್ಲ. ನಾನಕರು ಶಿಷ್ಯನನ್ನು ಕುರಿತು ಅಲ್ಲಿದ್ದ ಕಲ್ಲೊಂದನ್ನು ತಳ್ಳಲು ಹೇಳಲಾಗಿ ಅಲ್ಲಿಂದ ಬಿಸಿ ನೀರಿನ ಚಿಲುಮೆ ಉಕ್ಕಿ ಹರಿಯಿತು. ಇದರಲ್ಲಿ ತಯಾರಿಸಿದ್ದ ರೊಟ್ಟಿಯಾಕಾರದ ಹಿಟ್ಟನ್ನು ಹಾಕಿ ದೇವರನ್ನು ಕುರಿತು ಪ್ರಾರ್ಥಿಸಿದರು ಅಷ್ಟೆ. ಆ ನೀರಿನಲ್ಲಿದ್ದ ಎಲ್ಲ ರೊಟ್ಟಿಗಳು ಪಕ್ವವಾಗಿ ಬೆಂದು ಮೇಲೆ ತೇಲಾಡಿದವು.

ಚಿತ್ರಕೃಪೆ: John Hill

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಉನಪದೇವ : ಮಹಾರಾಷ್ಟ್ರದ ನಂದರ್ಬರ್ ಜಿಲ್ಲೆಯ ಶಹದ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಉನಪದೇವ ತಾಣವು ಶಾಶ್ವತವಾದ ನೈಸರ್ಗಿಕ ಬಿಸಿ ನೀರಿನ ಚಿಲುಮೆಯನ್ನು ಹೊಂದಿದೆ. ಒಂದು ದಿನದ ಧಿಡೀರ್ ಪ್ರವಾಸಕ್ಕೆ ಯೋಗ್ಯವಾದ ತಾಣ ಇದಾಗಿದ್ದು ಇದರ ಪ್ರಮುಖ ಆಕರ್ಷಣೆ ಗೋಮುಖದ ಬಾಯಿಯಿಂದ ವರ್ಷದ ಎಲ್ಲಾ ಸಮಯದಲ್ಲೂ ಧುಮುಕುವ ಬಿಸಿ ನೀರು.

ಚಿತ್ರಕೃಪೆ: Potdarswapnil

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಗರಂಪಾನಿ : ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿರುವ ಗರಂಪಾನಿ ವನ್ಯಜೀವಿಧಾಮವು ತನ್ನಲ್ಲಿರುವ ಬಿಸಿ ನೀರಿನ ಚಿಲುಮೆ/ಬುಗ್ಗೆಗೆ ಪ್ರಸಿದ್ಧವಾಗಿದೆ. ಅಲ್ಲದೆ ಈ ಅದ್ಭುತವಾದ ಅರಣ್ಯದಲ್ಲಿ ಬಲು ಅಪರೂಪದ 51 ಬಗೆಯ ಆರ್ಕಿಡ್ ಹೂವುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Babulbaishya

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಬಾಕ್ರೇಶ್ವರ : ಪಶ್ಚಿಮ ಬಂಗಾಳ ರಾಜ್ಯದ ಬಿರ್ಭೂಮ್ ಜಿಲ್ಲೆಯಲ್ಲಿರುವ ಭಾಕ್ರೇಶ್ವರವು ಉಷ್ಣ ಸ್ಥಾವರ ಯೋಜನೆ ಹಾಗೂ ತನ್ನಲ್ಲಿರುವ ಸುಮಾರು ಹತ್ತು ಬಿಸಿ ನೀರಿನ ಚಿಲುಮೆಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: P.K.Niyogi

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ವಲಾಂಗ್ : ಅರುಣಾಚಲ ಪ್ರದೇಶ ರಾಜ್ಯದ ಅಂಜಾವ್ ಜಿಲ್ಲೆಯಲ್ಲಿ ಹರಿದಿರುವ ಲೋಹಿತ್ ನದಿ ಹಾಗೂ ದೀಚು ನದಿಗಳ ಸಂಗಮದ ಸ್ಥಳದಲ್ಲಿ ಈ ಬಿಸಿ ನೀರಿನ ಬುಗ್ಗೆಯಿದೆ. ಪ್ರದೇಶವು ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತದೆ. ಇಲ್ಲಿನ ಬಿಸಿ ನೀರು ಗಂಧಕಾಂಶದಿಂದ ಸಂಪದ್ಭರಿತವಾಗಿದ್ದು ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ಗುಣಪಡಿಸುತ್ತದೆ. ಸುತ್ತ ಮುತ್ತಲಿನ ಜನರ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಈ ಬುಗ್ಗೆ. ಲೋಹಿತ್ ನದಿ. ಈ ಸ್ಥಳದ ಬಳಿಯೆ ಬಿಸಿ ನೀರಿನ ಬುಗ್ಗೆಯಿದೆ.

ಚಿತ್ರಕೃಪೆ: शंतनू

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಸೂರ್ಯಕುಂಡ : ಉತ್ತರಾಖಂಡ ರಾಜ್ಯದಲ್ಲಿರುವ ಧಾರ್ಮಿಕ ಆಕರ್ಷಣೆಯ ಯಮುನೋತ್ರಿ ದೇವಾಲಯದ ಬಳಿ ಈ ಬಿಸಿ ನೀರಿನ ಕುಂಡವಿದೆ. ಇದರಲ್ಲಿರುವ ಬಿಸಿ ಬಿಸಿ ನೀರು ಎರಡು ಕಾರ್ಯಗಳಿಗೆ ಪ್ರಮುಖವಾಗಿ ಬಳಸಲ್ಪಡುತ್ತದೆ. ಒಂದು ಭಕ್ತರು ಆಹಾರವನ್ನು ತಯಾರಿಸಿಕೊಳ್ಳಲು ಹಾಗೂ ಸಾರ್ವಜನಿಕವಾಗಿ ಸ್ನಾನ ಮಾಡಲು ನಿರ್ಮಿಸಲಾದ ಘಟ್ಟದಲ್ಲಿ ಮೈನಡುಗಿಸುವ ಚ್ಳಿಯಲ್ಲಿ ಹಾಯಾಗಿ ಬಿಸಿ ನೀರಿನ ಸ್ನಾನ ಮಾಡಲು. ಇಂದಿಗೂ ಪ್ರಚಲಿತದಲ್ಲಿರುವ ಪದ್ಧತಿಯಂತೆ ಭಕ್ತಾದಿಗಳು ಅಕ್ಕಿಯನ್ನು ತಂದು ಮುಸ್ಲಿನ್ ಬಟ್ಟೆಯಲ್ಲಿ ಹಾಕಿ ಅದು ತಿನ್ನಲು ಯೋಗ್ಯವಾದ ಅನ್ನವಾಗುವವರೆಗೂ ಅದನ್ನು ಬಿಸಿ ನೀರಿನಲ್ಲಿ ಬೇಯಿಸಿ ನಂತರ ಅದನ್ನು ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ.

ಚಿತ್ರಕೃಪೆ: Guptaele

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ತಪ್ತಾ ಪಾನಿ : ಕುದಿಯುತ್ತಿರುವ ನೀರು ಎಂದು ಅರ್ಥ ಕೊಡುವ ಈ ಬಿಸಿ ನೀರಿನ ಚಿಲುಮೆಯು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯಲ್ಲಿದೆ. ತಪ್ತಾ ಪಾನಿ ಎಂತಲೆ ಕರೆಯಲ್ಪಡುವ ಈ ತಾಣವು ಬೆಹರಾಂಪುರ (ಸ್ಥಳೀಯವಾಗಿ ಬ್ರಹ್ಮಪುರ) ದಿಂದ 56 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ನೀರಿನ ಚಿಲುಮೆಯ ಪಕ್ಕದಲ್ಲಿ ನಿರ್ಮಿಸಲಾದ ಕೊಳದಲ್ಲಿ ಸ್ನಾನ ಮಾಡಬಹುದು. ಇದು ಔಷಧೀಯ ಗುಣ ಹೊಂದಿದೆ.

ಚಿತ್ರಕೃಪೆ: Ilya Mauter

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಅತ್ರಿ ಬಿಸಿ ನೀರಿನ ಬುಗ್ಗೆ : ಒಡಿಶಾ ರಾಜ್ಯದ ಖುರ್ದಾ ಜಿಲ್ಲೆಯ ಅತ್ರಿ ಎಂಬ ಹಳ್ಳಿಯು ತನ್ನಲ್ಲಿರುವ ಬಿಸಿ ನೀರಿನ ಬುಗ್ಗೆಗಾಗಿ ಪ್ರಸಿದ್ಧಿ ಪಡೆದಿದೆ. ಖುರ್ದಾ ನಗರ ಕೇಂದ್ರದಿಂದ ಕೇವಲ ಹದಿನೈದು ಕಿ.ಮೀ ಗಳಷ್ಟು ದೂರದಲ್ಲಿ ಅತ್ರಿಯಿದೆ.

ಚಿತ್ರಕೃಪೆ: Krupasindhu Muduli

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಒಡಿಶಾ ರಾಜ್ಯ ಸರ್ಕಾರದ ಪ್ರವಾಸಿ ಇಲಾಖೆಯು, ಈ ಔಷಧಿಯುಕ್ತ ನೀರಿನ ಸ್ನಾನ ಮಾಡಲು ಭೇಟಿ ನೀಡಿದವರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ನಾನ ಗೃಹ ಸಂಕೀರ್ಣವನ್ನು ನಿರ್ಮಿಸಿದೆ.

ಚಿತ್ರಕೃಪೆ: Krupasindhu Muduli

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಯುಮ್ಥಾಂಗ್ ಬಿಸಿ ನೀರಿನ ಬುಗ್ಗೆ : ಸಿಕ್ಕಿಂ ರಾಜ್ಯದ ಲಾಚುಂಗ್ ಬಳಿಯಿರುವ ನಯನ ಮನೋಹರ ಕಣಿವೆಯೆ ಯುಮ್ಥಾಂಗ್. ಈ ಕಣಿವೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಸೇತುವೆಯ ಮೂಲಕ ಸಾಗಿ ಯುಮ್ಥಾಂಗ್ ಬಿಸಿ ನೀರಿನ ಬುಗ್ಗೆಯನ್ನು ಕಾಣಬಹುದು. ಇಲ್ಲಿ ಸ್ನಾನ ಮಾಡಲೆಂದು ಎರಡು ಸ್ನಾನದ ಕೊಳಗಳನ್ನು ನಿರ್ಮಿಸಲಾಗಿದೆ. ಬಿಸಿ ನೀರನ್ನು ಈ ಕೊಳಗಳಿಗೆ ಸೇರುವಂತೆ ಮಾಡಲಾಗಿದೆ.

ಚಿತ್ರಕೃಪೆ: Quinn Comendant

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಪನಾಮಿಕ್ : ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ನಲ್ಲಿರುವ ನುಬ್ರಾ ಕಣಿವೆಯ ಪನಾಮಿಕ್ ಎಂಬಲ್ಲಿ ಈ ಬಿಸಿ ನೀರಿನ ಬುಗ್ಗೆಯಿದೆ. ಹೆಚ್ಚಿನ ಪ್ರಮಾಣದ ಗಂಧಕವನ್ನು ಹೊಂದಿದ್ದು ಔಷಧಿಯ ಗುಣವನ್ನೂ ಸಹ ಹೊಂದಿದೆ.

ಚಿತ್ರಕೃಪೆ: Ajay Tallam

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ತಪ್ತ ಕುಂಡ : ಉತ್ತರಾಖಂಡ ಜಿಲ್ಲೆಯ ಚಮೋಲಿ ಜಿಲ್ಲೆಯಲ್ಲಿರುವ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಬದರಿನಾಥದಲ್ಲಿದೆ ಈ ಬಿಸಿ ನೀರಿನ ಬುಗ್ಗೆ. ಈ ನೀರಿನ ಸ್ಪರ್ಷ ಎಲ್ಲ ರೋಗಗಳು ಹಾಗೂ ಪಾಪಗಳನ್ನು ಕಳೆಯುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Priyanath

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ದಿಯುಲಾಝರಿ : ಒಡಿಶಾ ರಾಜ್ಯದ ಅಂಗುಲ್ ಜಿಲ್ಲೆಯಲ್ಲಿರುವ ದಿಯುಲಾಝರಿ ಎಂದು ಪುರಾತನ ದುರ್ಗ ಪ್ರದೇಶವಾಗಿದೆ. ಕಾಡುಮಲ್ಲಿಗೆಯ ದಟ್ಟವಾದ ಗಿಡಗಳಿಂದ ಕೂಡಿರುವ ಕಾಡು ಪ್ರದೇಶ ಇದಾಗಿದ್ದು, ಶಿವನಿಗೆ ಮುಡಿಪಾದ ಪುರಾತನವಾದ ಸಿದ್ಧೇಶ್ವರಬಾಬಾ ದೇವಸ್ಥಾನವನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Abhas Kumar Kheti

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಇಲ್ಲಿನ ಪ್ರಮುಖ ಆಕರ್ಷಣೆ ಕುಂಡವೊಂದರಲ್ಲಿ ಉದ್ಭವಿಸಿರುವ ಬಿಸಿ ನೀರಿನ ಚಿಲುಮೆ. ಅದರಲ್ಲೂ ಇದೊಂದು ಪವಾಡಮಯ ಎಂದೆ ಹೇಳಬಹುದು. ಏಕೆಂದರೆ ಭೂತಳದಲ್ಲಿ ಉದ್ಭವಿಸಿದ ಇತರೆ ಹಲವು ನೀರಿನ ಮೂಲಗಳಿದ್ದರೂ ಸಹ ಅವು ಕೇವಲ ತಂಪು ನೀರನ್ನು ಹೊಂದಿವೆ. ಆದರೆ ಶಿವಲಿಂಗದ ಕೆಳಗಿನಿಂದ ಹೊರ ಚಿಮ್ಮುವ ಈ ಒಂದು ನಿರ್ದಿಷ್ಟ ಕುಂಡದಲ್ಲಿ ಮಾತ್ರವೆ ನೀರು ಸದಾ ಬಿಸಿಯಾಗಿರುತ್ತದೆ. ಹೀಗಾಗಿ ಸಾಕಷ್ಟು ಧಾರ್ಮಿಕ ಮಹತ್ವವನ್ನೂ ಸಹ ಈ ಸ್ಥಳ ಪಡೆದಿದೆ.

ಚಿತ್ರಕೃಪೆ: Aditya Mahar

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಸಪ್ತಪರ್ಣಿ : ಬಿಹಾರ ರಾಜ್ಯದ ನಳಂದಾ ಜಿಲ್ಲೆಯಲ್ಲಿರುವ ರಾಜಗೀರ್ ಪಟ್ಟಣದಲ್ಲಿದೆ ಈ ಬಿಸಿ ನೀರಿನ ಬುಗ್ಗೆ. ಇಲ್ಲಿನ ನೀರಿನಲ್ಲಿ ಔಷಧಿಯ ಗುಣವಿದೆ ಎನ್ನಲಾಗಿದೆ. ಹಿಂದು, ಜೈನ ಹಾಗೂ ಬೌದ್ಧ ಧರ್ಮಿಯರಿಗೂ ಇದು ಪವಿತ್ರ ಜಲವಾಗಿದೆ.

ಚಿತ್ರಕೃಪೆ: carol mitchell

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಮೈಚಳಿ ಬಿಡಿಸುವ ಬಿಸಿ ನೀರಿನ ಬುಗ್ಗೆಗಳು:

ಬೇಂದ್ರುತೀರ್ಥ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ 52 ಕಿ.ಮೀ ದೂರವಿರುವ ಪುತ್ತೂರಿನಿಂದ ಕೇವಲ ಹದಿನೈದು ಕಿ.ಮೀ ಗಳಷ್ಟು ದೂರದಲ್ಲಿ ಬೇಂದ್ರುತೀರ್ಥ ಎಂಬ ನೈಸರ್ಗಿಕವಾದ ಬಿಸಿ ನೀರಿನ ಚಿಲುಮೆಯಿದೆ. ಸ್ಥಳೀಯರು ಈ ನೀರು ಶುಭಕರ ಹಾಗೂ ಇದರಲ್ಲಿನ ಒಂದು ಸ್ನಾನವು ಚರ್ಮದ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ನಂಬುತ್ತಾರೆ. ಈ ಬಿಸಿ ನೀರಿನ ಕೊಳವು ಶ್ರೀಹೊಳೆ ಎಂಬ ನದಿಯ ದಂಡೆಯ ಬಳಿಯಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jim Bowen

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X