
ಈ ವರ್ಷ ಮಿಥುನ ರಾಶಿಯವರು ಪ್ರವಾಸ ಬೆಳೆಸಬಹುದಾದ ತಾಣ ಇದು

ಹನುಮನ ಪೂಜೆ ನಿಷೇಧಿಸಿರುವ ಊರು ಯಾವುದು?
ಉತ್ತರಖಂಡದ ಚಮೇಲಿ ಜಿಲ್ಲೆಯ ದ್ರೋಣಗಿರಿಯಲ್ಲಿ ಹನುಮನ ಪೂಜೆ ಮಾಡೋದಿಲ್ಲ. ಚಮೇಲಿ ಜಿಲ್ಲೆಯ ಜೋಶಿಮಠ ಬ್ಲಾಕ್‌ನ ಅಂರ್ಗತದಲ್ಲಿ ದ್ರೋಣಗಿರಿ ಪರ್ವತದ ಮೇಲೆ ದ್ರೋಣಗಿರಿ ಎನ್ನುವ ಊರು ಇದೆ.

ಹನುಮನ ಬಹಿಷ್ಕಾರ ಮಾಡಲು ಕಾರಣವೇನು?
ಈ ಊರಿನಲ್ಲಿ ಹನುಮನ ಪೂಜೆ ಮಾಡದೇ ಇರುವುದರ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಅದೇನೆಂಧರೆ ಲಕ್ಷ್ಮಣ ಮೂರ್ಛೀತನಾಗಿ ಬಿದ್ದಿದ್ದಾಗ ಆತನನ್ನು ಉಳಿಸಲು ಸಂಜಿವಿನಿ ಗಿಡವನ್ನು ತರಲು ಹನುಮಂತನನ್ನು ಕಳಿಸಲಾಗಿತ್ತು. ಆ ಸಂದರ್ಭದಲ್ಲಿ ಹನುಮಂತ ದ್ರೋಣಪರ್ವತದ ಒಂದು ಭಾಗವನ್ನು ಹೊತ್ತೊಯ್ದಿದ್ದ. ಆ ಪರ್ವತವನ್ನು ಇಲ್ಲಿಯ ಜನರು ಪೂಜಿಸುತ್ತಿದ್ದರು. ಹಾಗಾಗಿ ಆ ಊರಿನ ಜನರು ಹನುಮಂತನ ಮೇಲೆ ಕ್ರೋಧಿತರಾಗಿದ್ದಾರೆ.

ವೃದ್ಧ ಮಹಿಳೆಯನ್ನು ಊರಿನಿಂದ ಬಹಿಷ್ಕರಿಸಲಾಗಿತ್ತು
ಸಂಜೀವಿನಿ ಗಿಡದ ಬಗ್ಗೆ ತಿಳಿಸಿ ಭಜರಂಗಬಲಿಗೆ ಸಹಾಯ ಮಾಡಿದಂತಹ ವೃದ್ಧ ಮಹಿಳೆಯನ್ನು ಸಮಾಜದಿಂದ ಬಹಿಷ್ಕರಿಸಲಾಗಿತ್ತು. ಅಷ್ಟೇಅಲ್ಲದೆ ಈ ಊರಿನಲ್ಲಿ ಪರ್ವತ ದೇವನ ಪೂಜೆ ಮಾಡಲಾಗುತ್ತದೆ. ಆ ದಿನ ಊರಿನ ಪುರುಷರು ಯಾರೂ ಮಹಿಳೆಯರ ಕೈಯಿಂದ ಮಾಡಿದಂತಹ ಆಹಾರ ಸೇವಿಸುವುದಿಲ್ಲ. ಅಲ್ಲದೆ ಮಹಿಳೆಯರಿಗೆ ಆ ಪೂಜೆಯಲ್ಲಿ ಭಾಗವಹಿಸಲು ಅನುಮತಿಯನ್ನೂ ನೀಡುವುದಿಲ್ಲ.

ಶ್ರೀಲಂಕಾದಲ್ಲಿದೆ ಆ ಪರ್ವತ
ಲಕ್ಷ್ಮಣನಿಗೆ ಪ್ರಜ್ಞೆ ಬಂದ ನಂತರ ಹನುಮಂತ ಆ ಪರ್ವತವನ್ನು ಮತ್ತೆ ಪರ್ವತವಿದ್ದ ಸ್ಥಳದಲ್ಲಿ ಇಟ್ಟು ಬಂದಿದ್ದಾನೆ ಎಂದು ವಾಲ್ಮಿಕಿ ಬರೆದಿರುವ ರಾಮಯಣದಲ್ಲಿದ್ದರೆ, ಹನುಮಂತ ಆ ಪರ್ವತವನ್ನು ಲಂಕೆಯಲ್ಲೇ ಬಿಟ್ಟು ಬಂದಿದ್ದಾನೆ ಎಂದು ತುಳಸಿದಾಸ ಬರೆದ ರಾಮಚರಿತಮಾನಸದಲ್ಲಿ ಹೇಳಲಾಗಿದೆ.