Search
  • Follow NativePlanet
Share
» »ಈ ವರ್ಷ ಮಿಥುನ ರಾಶಿಯವರು ಪ್ರವಾಸ ಬೆಳೆಸಬಹುದಾದ ತಾಣ ಇದು

ಈ ವರ್ಷ ಮಿಥುನ ರಾಶಿಯವರು ಪ್ರವಾಸ ಬೆಳೆಸಬಹುದಾದ ತಾಣ ಇದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಮೇ 21ರಿಂದ ಜೂನ್ 20ರವರೆಗೆ ಜನಿಸಿದವರು ಮಿಥುನ ರಾಶಿಯವರಾಗಿರುತ್ತದೆ. ಮಿಥುನ ರಾಶಿಯವರು ಮಾತುಕಾರರು ಹಾಗೂ ಉಲ್ಲಾಸದಿಂದಿರುವ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಆಲೋಚನೆಗೆ ಹೊಂದಿಕೊಳ್ಳುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಪಾರ್ಟಿ ಪ್ರಿಯರಾಗಿರುವ ಮಿಥುನ ರಾಶಿಯವರು 2018ರಲ್ಲಿ ಮಾಯನಗರಿಯಾಗಿರುವ ಮುಂಬೈಗೆ ಪ್ರವಾಸ ಕೈಗೊಳ್ಳಬಹುದು.

ಮಾಯಾನಗರಿ

ಮಾಯಾನಗರಿ

PC:Jasvipul Chawla

ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಮುಂಬೈ ಕೂಡಾ ಒಂದು. ಮಾಯಾನಗರಿ ಎಂದೇ ಕರೆಸಿಕೊಳ್ಳುವ ಮುಂಬೈ ಹೆಚ್ಚಿನ ಬಾಲಿವುಡ್‌ ಸ್ಟಾರ್‌ಗಳ ಮನೆಯನ್ನು ಹೊಂದಿದೆ. ಬಾಲಿವುಡ್ ಸಿನಿಮಾಗಳಿಗೂ ಫೇಮಸ್ ಆಗಿದೆ. ಪ್ರತಿಯೊಬ್ಬರ ಕನಸಿನ ನಗರ ಎಂದೇ ಹೇಳಬಹುದು. ಇಲ್ಲಿನ ಜೀವನ ಶೈಲಿ, ಫ್ಯಾಶನ್ ಎಲ್ಲವೂ ಉಳಿದ ರಾಜ್ಯಕ್ಕಿಂತಲೂ ವಿಭಿನ್ನವಾಗಿದೆ. ಇಲ್ಲಿರುವ ದೇವಾಲಯ, ಮಸೀದಿ ಹಾಗೂ ಚರ್ಚ್ ಗಳು ಕೇವಲ ಆಯಾ ಧರ್ಮದ ಜನರನ್ನು ಮಾತ್ರವಲ್ಲದೆ ಎಲ್ಲಾ ಧರ್ಮದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ನೈಟ್‌ ಲೈಫ್‌, ಮುಂಬೈ ಬೀಚ್

ನೈಟ್‌ ಲೈಫ್‌, ಮುಂಬೈ ಬೀಚ್

PC: Sebastianjude

ಮುಂಬೈ ಇಲ್ಲಿಗೆ ಬರುವ ಪ್ರವಾಸಿಗರಿಗೆ, ಆಹಾರ ಖರೀದಿಯಿಂದ ಹಿಡಿದು ಸಡಗರದ ರಾತ್ರಿ ಜೀವನ ಶೈಲಿ, ಸುಂದರ ಪ್ರಕೃತಿ ವೀಕ್ಷಣೆಯ ಸ್ಥಳದ ವರೆಗೆ ಎಲ್ಲಾ ಬಗೆಯ ಸನ್ನಿವೇಶಗಳನ್ನೂ ಒದಗಿಸುತ್ತದೆ. ಮುಂಬೈ ನಗರವು ಪ್ರಮುಖ ಮೂರು ಕಡಲ ತೀರಗಳನ್ನು ಹೊಂದಿದೆ, ಅವುಗಳೆಂದರೆ ಜುಹು ಬೀಚ್, ಚೌಪಾಟಿ ಹಾಗೂ ಗೊರೈ ಬೀಚ್ . ಯುವಕ, ಯುವತಿಯರಿಗೆ ಈ ಬೀಚ್‌ನ ತೀರವು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

ಸಿದ್ಧಿವಿನಾಯಕ ದೇವಾಲಯ , ಹಾಜಿ ಅಲಿ ದರ್ಗಾ

ಸಿದ್ಧಿವಿನಾಯಕ ದೇವಾಲಯ , ಹಾಜಿ ಅಲಿ ದರ್ಗಾ

PC: A.Savin

ಧಾರ್ಮಿಕತೆಯ ಫಲವಾಗಿ ಮುಂಬೈ ಕೆಲವು ಪ್ರಮುಖ ದೇವಾಲಯಗಳ ನೆಲೆಯಾಗಿದೆ. ಭಗವಂತ ಗಣಪತಿಗೆ ಮೀಸಲಾಗಿರುವ ಸಿದ್ಧಿವಿನಾಯಕ ದೇವಾಲಯ ಹಾಗೂ ಹಾಜಿ ಅಲಿ ಮಸೀದಿ, ಇವೆರಡೂ ತಮ್ಮದೇ ಆದ ವಿಭಿನ್ನವಾದ ಅನನ್ಯವಾದ ಕಥೆಗಳನ್ನು ಹೊಂದಿವೆ. ಮುಂಬೈ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಉತ್ತಮ ತಾಣವಾಗಿದೆ.

ಮುಂಬೈ ದರ್ಶನ

ಮುಂಬೈ ದರ್ಶನ

PC:Nichalp

ಮುಂಬೈ ಸುತ್ತಾಡೋದು ಗೊತ್ತಿಲ್ಲವೆಂದಾದರೆ ಅಲ್ಲೇ ಮುಂಬೈ ಗೇಟ್‌ವೇ ಬಳಿ ಮುಂಬೈ ದರ್ಶನ ಎಂದೇ ಕರೆಯಲ್ಪಡುವ ಸಾಕಷ್ಟು ಪ್ರವಾಸಿ ಬಸ್ ಗಳು ಸಿಗುತ್ತವೆ. ಈ ಬಸ್ ಗಳು ಭಾರತದ ಗೇಟ್‌ವೇಯಿಂದ ಹೊರಟು ಮುಂಬೈನಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಿಗೆ ಕೊಂಡೊಯ್ದು ಸಂಜೆ ಪುನಃ ಗೇಟ್ವೆ ಹತ್ತಿರ ನಿಮ್ಮನ್ನು ತಲುಪಿಸಲಾಗುತ್ತದೆ. ಶಾಪಿಂಗ್‌ ವಿಷ್ಯದಲ್ಲಿ ಮುಂಬೈ ಅಷ್ಟೇನು ದುಬಾರಿ ಅನಿಸೋದಿಲ್ಲ.

More News

Read more about: india travel mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+