ಬಾಗಲಕೋಟೆ ಜಿಲ್ಲೆಯಲ್ಲಿರುವ ಮಹಾಕೂಟ ಎಂಬ ಐತಿಹಾಸಿಕ ಪ್ರಸಿದ್ಧ ಪಟ್ಟಣವು ಬಾದಾಮಿಯ ಚಾಲೂಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾದ ಸುಮಾರು ಆರನೆ ಹಾಗು ಏಳನೆಯ ಶತಮಾನದ ಶೈವ ಸಮುದಾಯದ ದೇಗುಲಗಳಿಗೆ ಅತಿ ಪ್ರಸಿದ್ಧವಾಗಿದೆ. ಬಹುಸಂಖ್ಯಾತ ಹಿಂದು ಧರ್ಮದ ಶೈವ ಸಮುದಾಯದವರ ಪಾಲಿಗೆ ಇದೊಂದು ಮಹತ್ತರವಾದ ಯಾತ್ರಾಕ್ಷೇತ್ರವಾಗಿದೆ. ಇಲ್ಲಿ ದೊರೆತಿರುವ ಕೆಲವು ಶಾಸನಗಳನ್ನು ಪರಿಶಿಲಿಸಿದಾಗ ಈ ದೇಗುಲಗಳು ಸುಮಾರು 595-602 ರ ಸಮಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬರುತ್ತದೆ. ಈ ಶಾಸನಗಳು ಕನ್ನಡ ಹಾಗು ಸಂಸ್ಕೃತ ಭಾಷೆಗಳಲ್ಲಿ ಬರೆಯಲ್ಪಟ್ಟಿವೆ.
ಮಹಾಕೂಟ ದೇವಾಲಯ ಸಂಕೀರ್ಣದಲ್ಲಿ ಹಲವಾರು ದೇಗುಲಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಮಹಾಕೂಟೇಶ್ವರ ದೇವಸ್ಥಾನ ಹಾಗು ಮಾಲಿಕಾರ್ಜುನ ದೇವಾಲಯಗಳು ದೊಡ್ಡ ರಚನೆಗಳಾಗಿವೆ. ಇವುಗಳ ಆವರಣದಲ್ಲೆ ಶಿವಲಿಂಗವಿರುವ ಚಿಕ್ಕ ದೇಗುಲವೊಂದಿದ್ದು ಅದರ ಮುಂದೆ "ವಿಷ್ಣು ಪುಷ್ಕರಣಿ" ಎಂಬ ಕೊಳವನ್ನು ಕಾಣಬಹುದಾಗಿದೆ. ಈ ದೇಗುಲದ ಲಿಂಗವು ಪಂಚಮುಖ ಲಿಂಗವಾಗಿದೆ.
ಮಹಾಕೂಟವು ಬೆಂಗಳೂರಿನಿಂದ 460 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬಾದಾಮಿಗೆ ರಸ್ತೆ ಅಥವಾ ರೈಲುಗಳಿಂದ ತೆರಳಿ ಅಲ್ಲಿಂದ ದೊರಕುವ ಸ್ಥಳೀಯ ಟೆಂಪೊ, ಆಟೊ ಹಾಗು ಖಾಸಗಿ ಬಸ್ಸುಗಳ ಸಹಾಯದಿಂದ ಮಹಾಕೂಟವನ್ನು ಸುಲಭವಾಗಿ ತಲುಪಬಹುದು.

ವಿಷ್ಣು ದೇವಾಲಯ:
ನಗರ ವಾಸ್ತುಶಿಲ್ಪದಲ್ಲಿ ನಿರ್ಮಾಣವದ ವಿಷ್ಣು ದೇವಾಲಯ (ಎಡಕ್ಕೆ) ಹಾಗು ಕದಂಬ ಶೈಲಿಯ ದೇಗುಲ (ಬಲಕ್ಕೆ). ಇದೊಂದು ಅನನ್ಯ ಬಗೆಯ ವಾಸ್ತು ಶಿಲ್ಪದ ಸಂಯೋಜನೆಯಾಗಿದೆ.
ಚಿತ್ರಕೃಪೆ: Dineshkannambadi

ಮಲ್ಲಿಕಾರ್ಜುನ ದೇವಾಲಯ:
ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡ ಈ ಮಲ್ಲಿಕಾರ್ಜುನ ದೇವಾಲಯವು ಮಹಾಕೂಟ ದೇವಾಲಯ ಸಂಕೀರ್ಣದಲ್ಲಿರುವ ಮತ್ತೊಂದು ದೊಡ್ಡ ರಚನೆಯಾಗಿದೆ. ಸ್ಥಳೀಯವಾಗಿ ಇದನ್ನು ದಕ್ಷಿಣ ಕಾಶಿ ಎಂದು ಭಾವನಾತ್ಮಕತೆಯಿಂದ ಸಂಭೋದಿಸಲಾಗುತ್ತದೆ. ಈ ದೇವಾಲಯದ ಪಕ್ಕದಲ್ಲೆ ಪುಷ್ಕರಣಿಯೊಂದನ್ನು ಕಾಣಬಹುದು.
ಚಿತ್ರಕೃಪೆ: Dineshkannambadi

ಸಂಗಮೇಶ್ವರ ದೇವಾಲಯ:
ಪರಮೇಶ್ವರನ ರೂಪವೆನ್ನಲಾಗುವ ಸಂಗಮೇಶ್ವರನ ದೇವಾಲಯವು ಇಲ್ಲಿರುವ ಮತ್ತೊಂದು ದೇಗುಲವಾಗಿದ್ದು ನಗರ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಚಿತ್ರಕೃಪೆ: Dineshkannambadi

ಕನ್ನಡದಲ್ಲಿ ಬರೆಯಲಾದ ಶಾಸನ:
ಏಳನೆಯ ಶತಮಾನಕ್ಕೆ ಸಂಬಂಧಿಸಿದ್ದೆನ್ನಲಾದ, ಕನ್ನಡದಲ್ಲಿ ಬರೆಯಲಾದ ವಿನಾಪೋತಿ ಎಂಬ ಕಾಂಕ್ಯೂಬೈನೇಜ್ (ಉಪಪತ್ನಿತ್ವ) ಶಾಸನ.
ಚಿತ್ರಕೃಪೆ: Dineshkannambadi

ಅರ್ಧನಾರೀಶ್ವರ:
ಮಹಾಕೂಟ ದೇವಾಲಯ ಸಂಕೀರ್ಣದಲ್ಲಿರುವ ಆಕರ್ಷಕವಾಗಿ ಕೆತ್ತಲಾದ ಅರ್ಧನಾರೀಶ್ವರ ಶಿಲ್ಪ.
ಚಿತ್ರಕೃಪೆ: Dineshkannambadi

ಮಹಾಕೂಟ ದೇವಸ್ಥಾನ ಸಂಕೀರ್ಣ:
ಮಹಾಕೂಟ ದೇವಾಲಯ ಸಂಕೀರ್ಣದ ಒಂದು ಸುಂದರ ನೋಟ.
ಚಿತ್ರಕೃಪೆ: Dineshkannambadi


Click it and Unblock the Notifications



















