Search
  • Follow NativePlanet
Share
» »ಪನ್ನೀರಿನಷ್ಟೆ ಸವಿ ಕೇರಳದ ಹಿನ್ನಿರಿನ ಪ್ರವಾಸ

ಪನ್ನೀರಿನಷ್ಟೆ ಸವಿ ಕೇರಳದ ಹಿನ್ನಿರಿನ ಪ್ರವಾಸ

By Vijay

ಹಿನ್ನೀರಿನಲ್ಲಿ ಹಾಯಾಗಿ, ಆನಂದಮಯವಾಗಿ ಸಮಯ ಕಳೆಯುವುದರ ಹಿಂದಿರುವ ಮಜವೆ ಬೇರೆ. ಏಕೆಂದರೆ ಹಿನ್ನೀರು ಸಾಮಾನ್ಯವಾಗಿ ವೈವಿಧ್ಯಮಯ ಜೀವ ಸಂಕುಲ, ದಟ್ಟವಾದ ಗಿಡಮರಗಳು ಹಾಗೂ ಅದ್ಭುತವಾದ ಪ್ರಕೃತಿ ಸಂಪತ್ತಿನಿಂದ ಕೂಡಿರುತ್ತದೆ. ಅಲ್ಲದೆ ನೀರಿನಲ್ಲಿ ಹರಿವು (ರಭಸ) ಬಹುತೇಕವಾಗಿ ಇಲ್ಲವಾಗಿದ್ದು ಇದ್ದರೂ ಅದು ಅತ್ಯಂತ ಕಡಿಮೆಯೆ ಆಗಿರುತ್ತದೆ.

ಮೂಲತಃ ಹಿನ್ನೀರು ಎಂದರೇನು ಎಂದು ಕೆಲವರಿಗೆ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೆಂದರೆ ಕೆಲವೊಮ್ಮೆ ನದಿಗಳು ತಾವು ಹರಿಯುವ ಪಥದಲ್ಲಿ ಕೆಲವು ಶಾಖೆಗಳನ್ನು ಪಡೆದುಕೊಂಡಿರುತ್ತವೆ. ಬಹುಶಃ ಕೆಲವೊಮ್ಮೆ ಭೌಗೋಳಿಕವಾಗಿ ಕೆಲವು ಅಡೆ ತಡೆಗಳು ಬಂದಾಗ ಮುಖ್ಯ ಹರಿಯುವ ನದಿಗಳಲ್ಲಿ ಈ ರೀತಿ ಶಾಖೆಗಳು ಮೂಡುವುದು ಸಹಜ.

ವಿಶೇಷ ಲೇಖನ : ಭಾರತದ ಸಮಗ್ರ ಪ್ರವಾಸಿ ಖ್ಯಾತಿಯ ಕಡಲ ತೀರಗಳು

ಈ ರೀತಿ ಮೂಡಿದ ಶಾಖೆಗಳಲ್ಲಿ ನೀರು ಅತಿ ಕಡಿಮೆ ರಭಸವನ್ನು ಹೊಂದಿರಬಹುದು ಅಥವಾ ಹೊಂದಿರಲಿಕ್ಕೂ ಇಲ್ಲ. ಇವುಗಳನ್ನೆ ಹಿನ್ನೀರು ಎಂದು ಕರೆಯುತ್ತಾರೆ. ಇವು ನದಿಗಳಿಂದುಂಟಾದ ಹಿನ್ನೀರಾದರೆ ಜಲಾಶಯ ಹಾಗೂ ಸಮುದ್ರದಿಂದುಂಟಾಗುವ ಹಿನ್ನೀರಿನ ಪ್ರದೇಶಗಳನ್ನೂ ಸಹ ಕಾಣಬಹುದು.

ಈ ಹಿನ್ನೀರು ಪ್ರದೇಶಗಳು ವಾಸ್ತವಿಕವಾಗಿ ಪ್ರಕೃತಿ ಸಮ್ಪತ್ತುಗಳಿಂದ ಸಮೃದ್ಧವಾದ ತಾಣಗಳಾಗಿರುತ್ತವೆ. ಅಂತೆಯೆ ಪ್ರಕೃತಿ ಪ್ರಿಯ ಪ್ರವಾಸಿಗರಿಗೆ ಈ ಪ್ರದೇಶಗಳು ಸದಾ ಆಕರ್ಷಿಸುತ್ತವೆ. ಇದೇ ರೀತಿಯಾಗಿ ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯವೂ ಸಹ ತನ್ನ ಶ್ರೀಮಂತಮಯ ಹಿನ್ನೀರಿನ ಪ್ರವಾಸೋದ್ಯಮಕ್ಕಾಗಿ ವಿಶ್ವದಲ್ಲೆ ಪ್ರಖ್ಯಾತಿಗಳಿಸಿದೆ.

ಪ್ರಸ್ತುತ ಲೇಖನದ ಮೂಲಕ ಕೇರಳದಲ್ಲಿರುವ ಅದ್ಭುತವಾದ ಹಿನ್ನೀರಿನ ತಾಣಗಳು, ಅಲ್ಲಿನ ಪರಿಸರ, ಜೀವ ಸಂಕುಲ ಹಾಗೂ ಇನ್ನೂ ಹಲವು ವಿಶೇಷತೆಗಳ ಕುರಿತು ತಿಳಿಯಿರಿ.

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳ ರಾಜ್ಯವು ಭಾರತದಲ್ಲೆ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅತ್ಯಂತ ಪ್ರಸಿದ್ಧಿ ಪಡೆದ ರಾಜ್ಯವಾಗಿದೆ. ರಾಜ್ಯದ ಒಟ್ಟಾರೆ ಉದ್ದದ ಸುಮಾರು ಅರ್ಧ ಭಾಗದಷ್ಟು ಭೂಪ್ರದೇಶವು ಹಿನ್ನೀರಿನಿಂದ ಆವ್ರೂತವಾಗಿದ್ದು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Simply CVR

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದಲ್ಲಿ ಹಿನ್ನೀರು ಮೂಲತಃ ಲಗೂನುಗಳಿಂದಾಗಿದ್ದು (ಜಲಾವೃತ, ಖಾರಿ) ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿವೆ. ಈ ಹಿನ್ನೀರುಗಳಿಗೆ ಮೂಲವಾಗಿದೆ ರಾಜ್ಯದಲ್ಲಿರುವ ಐದು ವಿಶಾಲ ಕೆರೆಗಳು ಹಾಗೂ ಕೆಲವು ಪ್ರಮುಖ ನದಿಗಳು. ಈ ಹಿನ್ನೀರು ಪ್ರದೇಶಗಳು ಕೆನಾಲುಗಳ ಮೂಲಕ ಸಂಪರ್ಕ ಜಾಲವನ್ನು ಹೊಂದಿದ್ದು ಪ್ರವಾಸಿಗರಿಗೆ ಅದ್ಭುತ ಅನುಭವ ಕರುಣಿಸುತ್ತವೆ. ಕೆಲವು ನೀರಿನ ಸಂಪರ್ಕ ಜಾಲಗಳು ನೈಸರ್ಗಿಕವಾಗಿದ್ದರೆ ಕೆಲವು ಕೃತಕವಾಗಿ ನಿರ್ಮಿಸಿದವುಗಳಾಗಿವೆ.

ಚಿತ್ರಕೃಪೆ: Saad Faruque

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಒಟ್ಟಾರೆಯಾಗಿ ಹೇಳಬೆಕೆಂದರೆ ಕೇರಳದ ಹಿನ್ನೀರು ಹಲವು ನದಿಗಳ ಶಾಖೆಗಳು, ಕೆರೆಗಳು, ಕೆನಾಲುಗಳು, ಕೊಳಗಳು, ಹಳ್ಳಗಳು ಹಾಗೂ ತೊರೆಗಳಿಂದ ಒಂದಕ್ಕೊಂದು ಸಂಪರ್ಕ ಸಾಧಿಸಿರುವ ಅದ್ಭುತ ನೀರಿನ ಜಾಲವಾಗಿದೆ. ಹೀಗಾಗಿ ಈ ವಲಯದಲ್ಲಿ ಬರುವ ಹಲವಾರು ಚಿಕ್ಕ ಪುಟ್ಟ ಪಟ್ಟಣಗಳು ಹಾಗೂ ಪ್ರದೇಶಗಳನ್ನು ತಲುಪಲು ಜನರು ಹಿನ್ನೀರಿನಲ್ಲಿ ದೋಣಿಗಳ ಪ್ರಯಾಣದ ಮೇಲೆಯೆ ಹೆಚ್ಚು ಅವಲಂಬಿತರಾಗಿದ್ದಾರೆ.

ಚಿತ್ರಕೃಪೆ: Thejas Panarkandy

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಪ್ರಖ್ಯಾತ ಹಿನ್ನೀರು ಸಂಚಾರ ಮಾರ್ಗದಲ್ಲಿ ರಾಷ್ಟ್ರೀಯ ಜಲಮಾರ್ಗ ಸಂಖ್ಯೆ 3 ಸಹ ಇರುವುದು ವಿಶೇಷ. ಈ ಜಲಮಾರ್ಗವು ಕೊಲ್ಲಂನಿಂದ ಕೊಟ್ಟಪುರಂವರೆಗಿದ್ದು ಸುಮಾರು 205 ಕಿ.ಮೀ ಗಳಷ್ಟು ದೂರದ ಜಲಮಾರ್ಗವನ್ನು ಹೊಂದಿದೆ.

ಚಿತ್ರಕೃಪೆ: Kerala Tourism

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಹಿನ್ನೀರಿನ ಜಾಲಕ್ಕೆ ತಮ್ಮ ಕೊಡುಗೆಯನ್ನು ನೀಡಿರುವ ಕೆಲವು ಮಹತ್ತರ ನದಿಗಳೆಂದರೆ ಪೆರಿಯಾರ್ ನದಿ, ಚಾಲಕ್ಕುಡಿ, ಭರತಪುಳಾ ನದಿ, ವಲಾಪಟ್ಟಣಂ, ಚಾಲಿಯಾರ್, ಕಡಲುಂದಿಪುಳಾ ಹಾಗೂ ಇನ್ನೂ ಹಲವು. ಈ ಎಲ್ಲಾ ನದಿಗಳಿಂದ ಹಿನ್ನೀರಿನ ಜಲಮಾರ್ಗವು ನಿರ್ಮಿತವಾಗಿದ್ದು ಸ್ಥಳೀಯ ದೋಣಿಗಳ ಮೂಲಕ ಕೇರಳದ ಮಧ್ಯ ಭಾಗದವರೆಗೂ ಪ್ರಯಾಣಿಸಬಹುದಾಗಿದೆ.

ಚಿತ್ರಕೃಪೆ: Koshy Koshy

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅಪಾರವಾದ ಕೊಡುಗೆ ನೀಡಿರುವ ಅಷ್ಟಮುಡಿ ಕೆರೆಯು ಕೇರಳದ ಕೊಲ್ಲಂನಲ್ಲಿ ನೆಲೆಸಿದ್ದು ಸುಮಾರು 200 ಚ.ಕಿ.ಮೀ ಗಳಷ್ಟು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ.

ಚಿತ್ರಕೃಪೆ: jay8085

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಇನ್ನೂ ಮಲಬಾರ್ ಕರಾವಳಿಯ (ಅರಬ್ಬೀ ಸಮುದ್ರಕ್ಕೆ ಸಮಾನಾಂತರವಾಗಿರುವ ಕೇರಳದ ಕರಾವಳಿ) ಹತ್ತಿರ ಬರ ಬರುತ್ತ ಈ ತಾಜಾ ನೀರಿನ ಹಿನ್ನೀರು ಸಮುದ್ರದ ಉಪ್ಪು ನೀರಿನೊಂದಿಗೆ ಸೇರಿ ಹೋಗಿದ್ದು ವಿಶಿಷ್ಟಮಯ ಜೀವ ಸಂಕುಲಕ್ಕೆ ಆಶ್ರಯ ತಾಣವಾಗಿದೆ. ಇನ್ನೂ ಕೆಲವು ಕಡೆ ತಡೆಗಳನ್ನು ನಿರ್ಮಿಸಲಾಗಿದ್ದು ಸಮುದ್ರದ ನೀರು ತಾಜಾ ನೀರಿನೊಂದಿಗೆ ಬೆರೆಯದ ಹಾಗೆ ಮಾಡಲಾಗಿದೆ. ಇಂತಹ ನೀರನ್ನು ಪ್ರಾಮುಖವಾಗಿ ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ಚಿತ್ರಕೃಪೆ: Soman

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಜೈವಿಕವಾಗಿ ಗಮನಿಸಿದಾಗ ಹಿನ್ನೀರಿನ ಪ್ರದೇಶಗಳಲ್ಲಿ ವೈವಿಧ್ಯಮಯ ಜೀವ ಸಂಪತ್ತನ್ನು ಕಾಣಬಹುದಾಗಿದೆ. ವಿವಿಧ ಪ್ರಜಾತಿಗಳ ಮೀನುಗಳು, ಏಡಿಗಳು, ಕಪ್ಪೆಗಳು, ಆಮೆಗಳು ಹೀಗೆ ವಿವಿಧ ಜಲಚರಗಳನ್ನು ಕಾಣಬಹುದು.

ಚಿತ್ರಕೃಪೆ: Hindrik

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೆಲವು ಹಿನ್ನೀರು ಪ್ರದೇಶಗಳು ಯೋಗ್ಯವಾದ ಪಕ್ಷಿಧಾಮಗಳಾಗಿಯೂ ಹೆಸರುವಾಸಿಯಾಗಿವೆ. ಇಲ್ಲಿ ವೈವಿಧ್ಯಮಯ ಪಕ್ಷಿಗಳು ಹಾಗೂ ಕೆಲ ಸಮಯದಲ್ಲಿ ವಲಸೆ ಬಂದ ಪಕ್ಷಿಗಳನ್ನೂ ಸಹ ಕಾಣಬಹುದಾಗಿದೆ. ದೋಣಿಗಳ ಮೂಲಕ ಪ್ರಶಾಂತವಾದ ಹಿನ್ನೀರಿನಲ್ಲಿ ನಿಧಾನವಾಗಿ ಸಾಗುತ್ತ ಪಕ್ಷಿಗಳ ಕಲರವ ಕೇಳುವುದೆ ಒಂದು ವಿಶಿಷ್ಟ ಅನುಭವವಾಗಿ ಪ್ರಕೃತಿ ಪ್ರಿಯ ಪ್ರವಾಸಿಗರನ್ನು ಅಪಾರವಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: Jiths

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಜಲಮಾರ್ಗದ ಅಕ್ಕ ಪಕ್ಕಗಳಲ್ಲಿ ಕಂಡುಬರುವ ದಟ್ಟವಾದ ಗಿಡಮರಗಳು ಅದರಲ್ಲೂ ವಿಶೇಷವಾಗಿ ತೆಂಗು, ಪಾಮ್ ಹಾಗೂ ಅಡಿಕೆ ಮರಗಳು ಪ್ರಯಾಣದ ಆನಂದವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೆ ಸಂಶಯವಿಲ್ಲ.

ಚಿತ್ರಕೃಪೆ: McKay Savage

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಇಂತಹ ವಿಶಿಷ್ಟ ಅನುಭವ ಪಡೆಯಲೆಂದೆ ಸಾಕಷ್ಟು ವಿದೇಶಿ ಪ್ರವಾಸಿಗರು ಕೇರಳಕ್ಕೆ ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ದೋಣಿ ಮನೆಗಳನ್ನು ಬಾಡಿಗೆಗೆ ಪಡೆದು ದಿನ ಪೂರ್ತಿ ನೀರಿನಲ್ಲೆ ವಿಹರಿಸುತ್ತ, ಪ್ರಕೃತಿಯ ಮೈಸಿರಿಯನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ಹಾಯಾಗಿ ಸಮಯ ಕಳೆಯಲು ಇಚ್ಛಿಸುತ್ತಾರೆ.

ಚಿತ್ರಕೃಪೆ: Thierry Leclerc

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಈ ಒಂದು ಕಾರಣದಿಂದಾಗಿಯೆ ಕೇರಳದ ಹಿನ್ನೀರು ಪ್ರವಾಸೋದ್ಯಮ ಉತ್ತುಂಗದ ಸ್ಥಿತಿಯಲ್ಲಿದೆ. ಅದರಲ್ಲೂ ದೋಣಿ ಮನೆಗಳಲ್ಲಿ ಹಾಯಾಗಿ ವಿಹರಿಸುವ ಅವಕಾಶ ಇಲ್ಲಿ ದೊರೆಯುವುದರಿಂದ ಭಾರತದ ವಿವಿಧೆಡೆಗಳಿಂದಲೂ ಸಾಕಷ್ಟು ಜನ ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Jo Kent

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಹಿನ್ನೀರಿನಲ್ಲಿ ಕಂಡುಬರುವ ಈ ದೋಣಿಮನೆಗಳನ್ನು ಸ್ಥಳೀಯ ಭಾಷೆಯಲ್ಲಿ ಅಂದರೆ ಮಲಯಾಳಂನಲ್ಲಿ ಕೆಟ್ಟುವಲ್ಲಂಗಳೆಂದು ಕರೆಯುತ್ತಾರೆ. ಕೊಲ್ಲಂನಲ್ಲಿ ಪ್ರವರ್ಧಮಾನಕ್ಕೆ ಬಂದ ಹಿನ್ನೀರಿನ ರಿಸಾರ್ಟ್ ಪ್ರವಾಅಸೋದ್ಯಮವು ಕೇರಳದ ಪ್ರವಾಸಿ ಖ್ಯಾತಿಯನ್ನು ಮತ್ತಷ್ಟು ಹೆಚ್ಚುಗೊಳಿಸಿದೆ. ಅಂದಾಜಿನ ಪ್ರಕಾರ ದಿನನಿತ್ಯ ಕೇರಳದ ಹಿನ್ನೀರಿನಲ್ಲಿ 2000 ಕ್ಕೂ ಅಧಿಕ ದೋಣಿ ಮನೆಗಳು ಸಂಚಾರ ನಡೆಸುತ್ತವೆಂದರೆ ನೀವೇ ಊಹಿಸಬಹುದು ಇವುಗಳ ಜನಪ್ರೀಯತೆಯನ್ನು.

ಚಿತ್ರಕೃಪೆ: McKay Savage

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಮೂಲತಃ ದೋಣಿ ಮನೆಗಳನ್ನು ಕಟ್ಟಿಗೆಗಳಿಂದ ನಿರ್ಮಿಸಲಾಗುತ್ತದೆ ಹಾಗೂ ಇವು ಕೋಣೆಗಳನ್ನು ಹೊಂದಿರುತ್ತವೆ. ಮೊದಲಿಗೆ ಇವುಗಳನ್ನು ಫಲವತ್ತಾದ ಭೂಮಿಗಳಲ್ಲಿ ಅಕ್ಕಿ, ಬೇಳೆ, ಕಾಳುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸಲು ಪ್ರಮುಖವಾಗಿ ಬಳಸಲಾಗುತ್ತಿತ್ತು.

ಚಿತ್ರಕೃಪೆ: McKay Savage

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಪ್ರಸ್ತುತ ಕೇರಳದ ಹಿನ್ನೀರು ಪ್ರವಾಸೋದ್ಯಮವು ಉತ್ತುಂಗಕ್ಕೇರಿದ ಸಂದರ್ಭದಲ್ಲಿ ಇವುಗಳನ್ನು ತೇಲುವ ಕುಟಿರಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಡೈನಿಂಗ್ ಹಾಲ್, ಪಾಶ್ಚಿಮಾತ್ಯ ಮಾದರಿಯ ಶೌಚಾಲಯ ಹಾಗೂ ಹಾಯಾಗಿ ಕುಳಿತು ವಿಶ್ರಮಿಸಲು ಸ್ಥಳವಿರುವ ಹಾಗೆ ಪರಿವರ್ತಿಸಲಾಗಿದೆ.

ಚಿತ್ರಕೃಪೆ: McKay Savage

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಅಷ್ಟೆ ಏಕೆ, ಪ್ರವಾಸಿಗರು ಈ ದೋಣಿ ಮನೆಗಳಲ್ಲಿ ರಾತ್ರಿಗಳನ್ನೂ ಸಹ ಆನಂದವಾಗಿ ಕಳೆಯಬಹುದು. ಊಟ, ತಿಂಡಿ ಇತ್ಯಾದಿಗಳನ್ನು ದೋಣಿ ಮನೆಯಲ್ಲಿ ನಿಮ್ಮೊಂದಿಗಿರುವ ಸಿಬ್ಬಂದಿಗಳೆ ತಯಾರಿಸಿ ನೀಡುತ್ತಾರೆ. ಈ ದೋಣಿ ಮನೆಗಳು ವಿವಿಧ ಗಾತ್ರಗಳಲ್ಲಿ ಲಭ್ಯವಿದ್ದು ಪ್ರವಾಸಿಗರು ತಮ್ಮ ಸಂಖ್ಯೆಗನುಗುಣವಾಗಿ ತಮಗೆ ಬೇಕಾದ ದೋಣಿ ಮನೆಗಳನ್ನು ಬಾಡಿಗೆಗೆ ಪಡೆಯಬಹುದು.

ಚಿತ್ರಕೃಪೆ: Creative commons

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಪ್ರಸ್ತುತ ಅಷ್ಟಮುಡಿ ಹಿನ್ನೀರಿನ ಕೆರೆಯು ಕೇರಳದ ಅತಿ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಅಂತೆಯೆ ಕೊಲ್ಲಂ ಪ್ರವಾಸಿ ತಾಣವು ಕೇರಳದಲ್ಲಿ ಅತಿ ಹೆಚ್ಚು ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲಂನಲ್ಲಿರುವ ಅಷ್ಟಮುಡಿ ಕೆರೆಯು ದೋಣಿ ಮನೆಗಳ ವಿಹಾರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Koen

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಒಂದು ನಿರ್ದಿಷ್ಟ ತಾಣದಿಂದ ದೋಣಿ ಮನೆಯಲ್ಲಿ ವಿಹರಿಸುತ್ತ ಒಂದು ದಿನ ಕಳೆದ ಬಳಿಕ ಮತ್ತೆ ಆ ಪ್ರಾರಂಭದ ಸ್ಥಳಕ್ಕೆ ಬರುವ ಪ್ರವಾಸಿ ಸೇವೆಯು ಸಾಕಷ್ಟು ಜನಪ್ರೀಯತೆಗಳಿಸುತ್ತಿದೆ. ಸಾಮಾನ್ಯವಾಗಿ ದೋಣಿ ಮನೆಗಳು ಮೋಟಾರುಗಳನ್ನು ಹೊಂದಿರುತ್ತವೆ. ಆದರೂ ಅವುಗಳನ್ನು ಅತ್ಯಂತ ನಿಧಾನವಾಗಿ ಚಲಾಯಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಮಲಗುವಾಗ ಇಲ್ಲವೆ ಊಟಮಾಡುವಾಗ ಹಿನ್ನೀರಿನ ಮೇಲೆ ಹಾಗೆಯ ಸ್ತಬ್ಧವಾಗಿ ಇವು ನಿಲ್ಲುತ್ತವೆ. ಇದೊಂದು ರೀತಿಯ ವಿಶಿಷ್ಟ ಅನುಭವವನ್ನು ಪ್ರವಾಸಿಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Koen

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳ ನೀರಾವರಿ ಇಲಾಖೆಯು ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಹಿನ್ನೀರಿನ ತಾಣಗಳ ಬಳಿಗೆ ತೆರಳಲು ಅಥವಾ ಕೆಲಸದ ನಿಮಿತ್ತ ಬೇರೆಡೆ ತೆರಳಲು ಫೆರ್‍ರಿಗಳ ಸೇವೆ ಒದಗಿಸಿದೆ. ಹೀಗಾಗಿ ಇವುಗಳ ಮೂಲಕವೂ ಪ್ರವಾಸಿಗರು ದೋಣಿ ವಿಹಾರದ ಸುಂದರ ಅನುಭವ ಪಡೆಯಬಹುದು.

ಚಿತ್ರಕೃಪೆ: www.david baxendale.com

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಹಿಂದೊಮ್ಮೆ ಅಷ್ಟಮುಡಿ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶವು ಸಾಧಾರಣ ಮಟ್ಟದಲ್ಲಿತ್ತು. ಯಾವ ಹೇಳಿಕೊಳ್ಳುವಂತಹ ಚಟುವಟಿಕೆಗಳು ಇಲ್ಲಿರಲಿಲ್ಲ. ಯಾವಾಗ ಹಿನ್ನೀರಿನ ಪ್ರವಾಸೋದ್ಯಮ ಚೇತರಿಸಿಕೊಂಡಿತೊ ಸಮಯ ಕಳೆದಂತೆ ಸೋಮಾರಿಯಾಗಿದ್ದ ಅಷ್ಟಮುಡಿ ಇಂದು ನಿರಂತರ ಚಟುವಟಿಕೆಯುಳ್ಳ, ಸದಾ ಲವಲವಿಕೆಯಿಂದಿರುವ ತಾಣವಾಗಿದೆ. ಹಲವಾರು ಅದ್ದೂರಿ ಹಾಗೂ ಅದ್ಭುತವಾದ ರಿಸಾರ್ಟುಗಳಿಗೆ ಮನೆಯಾಗಿದೆ.

ಚಿತ್ರಕೃಪೆ: Neha

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಭೌಗೋಳಿಕವಾಗಿ ಕೇರದಲ್ಲಿರುವ ಹಿನ್ನೀರು ಪರಿಗಣಿಸಲಾಗುವಂತಹ ಭೂಪ್ರದೇಶವನ್ನು ಒಳಗೊಂಡಿರುವುದರಿಂದ ಸಂಚಾರ ಮಾಧ್ಯಮಕ್ಕೆ ಒಂದು ರೀತಿಯಲ್ಲಿ ವರದಾನವಾಗಿದೆ. ಈ ಹಿನ್ನೀರು ಹಲವು ಪ್ರದೇಶಗಳನ್ನು ಒಂದಕ್ಕೊಂದು ಬೆಸೆಯುವಂತೆ ಮಾಡಲು ಕೃತಕ ಕೆನಾಲುಗಳನ್ನು ಕೇರಳ ಸರ್ಕಾರವು ನಿರ್ಮಿಸಿದ್ದು ಇದರಿಂದ ಮಿತವ್ಯಯದ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ.

ಚಿತ್ರಕೃಪೆ: Peter Fristedt

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಈ ರೀತಿಯಾಗಿ ಕೇರಳದಲ್ಲಿ ಹಿನ್ನೀರಿನ ಅದ್ಭುತ ಪ್ರವಾಸದಾನಂದವನ್ನು ಪಡೆಯಬಹುದಾಗಿದೆ. ಕೇರಳದಲ್ಲಿ ನೀವು ಹಿನ್ನೀರಿನಲ್ಲಿ ಪ್ರವಾಸ ಮಾಡಲು ಬಯಸಿದ್ದರೆ, ಕೊಲ್ಲಂ, ಪರವೂರು, ಅಲ್ಲೆಪ್ಪಿ, ಕಾಸರಗೋಡು, ಮುನ್ರೋ, ತಿರುವಲ್ಲಂ, ಕೋಳಿಕೋಡ್ ಈ ಪ್ರದೇಶಗಳಿಗೆ ಭೇಟಿ ನೀಡಬಹುದು. ಅದರಲ್ಲೂ ವಿಶೇಷವಾಗಿ ಕೊಲ್ಲಂನಿಂದ ಅಲಪುಳಾ (ಅಲೆಪ್ಪಿ) ದವರೆಗಿನ ಎಂಟು ಘಂಟೆಗಳ ದೋಣಿ ಪ್ರವಾಸ ಅದ್ಭುತವಾಗಿರುತ್ತದೆ.

ಚಿತ್ರಕೃಪೆ: ShaaronS.

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಸರ್ವಂ ಜಲಮಯಂ....ದೋಣಿ ಪ್ರವಾಸಿಗರಿಗೆ ರೋಮಾಂಚನದ ಜೊತೆ ಆನಂದವೊ ಆನಂದ.

ಚಿತ್ರಕೃಪೆ: micah craig

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಪ್ರಶಾಂತ ಜಲದ ಮೇಲೆ ಶಾಂತಿಯಿಂದ ತೆವಳುತ್ತ ಸಾಗುತ್ತಿರುವ ಪ್ರವಾಸಿ ದೋಣಿ ಮನೆ.

ಚಿತ್ರಕೃಪೆ: Julia Maudlin

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಹಿನ್ನಿರಿನಲ್ಲಿ ಮೀನು, ಏಡಿ, ಕಪ್ಪೆಗಳ ಜೊತೆ ಜಲ ಸರ್ಪಗಳೂ ಸಾಮಾನ್ಯ.

ಚಿತ್ರಕೃಪೆ: mountainamoeba

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಹಿನ್ನೀರಿನ ಒಂದು ಸುಂದರ ಜಲಮಾರ್ಗ. ಎರಡೂ ಬದಿಗಳಲ್ಲೂ ದಟ್ಟ ಹಸಿರಿನ ಪಾಮ್ ಗಿಡಗಳು.

ಚಿತ್ರಕೃಪೆ: Kerala Tourism

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ವಿಶೇಷವೆಂದರೆ ಕೇರಳದ ಹಿನ್ನೀರಿನಲ್ಲಿ ಅಲ್ಲಲ್ಲಿ ಕೆಲವು ಚಿಕ್ಕ ಪುಟ್ಟ ನಡುಗಡ್ಡೆಗಳನ್ನೂ ಸಹ ಕಾನಬಹುದು. ಈ ನಡುಗಡ್ಡೆಗಳು ವೈವಿಧ್ಯಮಯ ಪಕ್ಷಿಗಳು ಹಾಗೂ ಇತರೆ ಜೀವರಾಶಿಗಳಿಗೆ ಆಶ್ರಯ ತಾಣವಾಗಿದೆ.

ಚಿತ್ರಕೃಪೆ: www.david baxendale.com

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಮನೆಗಳ ಮುಂದೆ ಜಲ ಮಾರ್ಗವೆ ರಸ್ತೆಯಾದಾಗ....

ಚಿತ್ರಕೃಪೆ: Ryan

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಶಾಲೆಗಳಿಗೆ ಮಕ್ಕಳು ಜಲಮಾರ್ಗದ ಮುಖಾಂತರವೆ ತೆರಳಬೇಕು. ಪ್ರತಿ ದಿನ ದೋಣಿ ವಿಹಾರಕ್ಕೊಂದು ಮಾದರಿ!

ಚಿತ್ರಕೃಪೆ: Jean-Pierre Dalbéra

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಎರಡು ಬದಿ ರಸ್ತೆ, ಮಧ್ಯದಲ್ಲಿ ಕೆನಾಲು ಅದಕ್ಕೊಂದು ಸೇತುವೆ. ಇದುವೆ ಹಿನ್ನೀರು ಸೇತುವೆ. ದೋಣಿಗಳು ಬರುತ್ತಿರುವಾಗ ಕೈಯಿಂದಲೆ ಸೇತುವೆಯ ಪಾದಚಾರಿ ಮಾರ್ಗವನ್ನು ಎತ್ತಿ ಅನುವು ಮಾಡಿಕೊಡುವಂತೆ ಆಕರ್ಷಕವಾಗಿ ನಿರ್ಮಿಸಲಾಗಿರುತ್ತದೆ.

ಚಿತ್ರಕೃಪೆ: Arian Zwegers

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಬಸ್ ನಿಲ್ದಾಣದಲ್ಲಿ ಬಸ್ಸುಗಳು ನಿಂತಿರುವ ಹಾಗೆ ಹಿನ್ನೀರಿನಲ್ಲಿ ಪ್ರವಾಸಿ ಪ್ರಯಾಣಿಕರಿಗಾಗಿ ಕಾಯುತ್ತ ಸಾಲಾಗಿ ನಿಂತಿರುವ ದೋಣಿ ಮನೆಗಳು.

ಚಿತ್ರಕೃಪೆ: Kjetil Ree

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಪ್ರಕೃತಿಯ ದಟ್ಟ ಸೊಬಗಿನಲಿ ಹಾಯಾಗಿ ನೀರಿನ ಮೇಲೆ ವಿಹರಿಸುವುದೆ ಒಂದು ಸಂತಸದ ಅನುಭವ.

ಚಿತ್ರಕೃಪೆ: Alex Graves

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ನಾ ಮುಂದೆ... ತಾ ಮುಂದೆ... ಎಂದು ಪೈಪೋಟಿಯಿಂದ ಹಿನ್ನೀರಿನ ಮೇಲೆ ಸಾಗುತ್ತಿರುವ ದೋಣಿಗಳು.

ಚಿತ್ರಕೃಪೆ: Christian Haugen

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಕೇರಳದ ಶ್ರೀಮಂತ ಹಿನ್ನೀರು ಪ್ರವಾಸ:

ಏನೀದು ಹೋಗ್ತಾ ಇದ್ದೀರಾ...ಸರಿ ಬೈ ಬೈ...ಬೇಗ ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಮತ್ತೆ ಇಲ್ಲಿಗೆ ಭೇಟಿ ನೀಡಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ...

ಚಿತ್ರಕೃಪೆ: Peter Fristedt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X