» » ಪ್ರಾಣಿಗಳ ಪರಿಚಯಕ್ಕೆ ಹಿಮಾಲಯ ಪ್ರವಾಸ

ಪ್ರಾಣಿಗಳ ಪರಿಚಯಕ್ಕೆ ಹಿಮಾಲಯ ಪ್ರವಾಸ

By: Divya pandit

ಪ್ರಪಂಚದಲ್ಲಿ ಕಾಣ ಸಿಗುವಂತಹ ವಿಶೇಷ ಪರಿಸರಗಳನ್ನು ಭಾರತ ಒಂದರಲ್ಲೇ ಕಾಣಬಹುದು. ಹಾಗಾಗಿಯೇ ಉಳಿದ ದೇಶಕ್ಕಿಂತ ಭಾರತದ ಭೂ ಸಿರಿ ಅತ್ಯಂತ ಹಿರಿಮೆಯ ಸ್ಥಾನದಲ್ಲಿರುವುದು. ಭಾರತದ ಉದ್ದ-ಅಗಲಕ್ಕೂ ಇರುವ ಮನೋಹರವಾದ ಪರಿಸರ ವ್ಯವಸ್ಥೆಯಲ್ಲಿ ಜೀವಿಗಳ ವಾಸವೂ ಭಿನ್ನವಾಗಿದೆ. ಭಾರತೀಯ ಹಿಮಾಲಯದ ರೋಮಾಂಚಕ ಶ್ರೇಣಿಗಳು

ಅದರಲ್ಲೂ ಹೆಚ್ಚು ಭಾಗ ಹಿಮದಿಂದಲೇ ಕೂಡಿರುವಂತಹ ಹಿಮಾಲಯದಂತಹ ಸ್ಥಳದಲ್ಲಿ ವಾಸಿಸುವ ಜನರು ಹಾಗೂ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳುವುದು ಎಂದರೆ ಅದೇನೋ ಒಂದು ರೀತಿಯ ಕುತೂಹಲ. ಬೆರುಗುಗೊಳಿಸುವ ಹಿಮಾಲಯದ ಅದ್ಭುತ ಸತ್ಯಗಳು

ನಿಜ, ಅಂತಹ ವಿಶೇಷ ಸ್ಥಳ ಹಾಗೂ ಅಲ್ಲಿರುವ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದೆನಿಸಿದರೆ ಹಿಮಾಲಯಕ್ಕೆ ಬನ್ನಿ. ಹಿಮಾಲಯದ ಆ ಚಳಿಯಲ್ಲಿ ವಿರಳವಾಗಿ ಕಾಣಸಿಗುವ ಪ್ರಾಣಿ, ಪಕ್ಷಿಗಳ ಪರಿಚಯ ಮಾಡಿಕೊಳ್ಳೋಣ.

ರೆಡ್ ಪಾಂಡ

ರೆಡ್ ಪಾಂಡ

ನುಣುಪಾದ ಕೆಂಪುಕೂದಲಿಂದ ಆವೃತ್ತಗೊಂಡ ಈ ಪ್ರಾಣಿ ಹಿಮಾಲಯದ ಪೂರ್ವಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಚೈನಾದ ದಕ್ಷಿಣ ಹಾಗೂ ಪಶ್ಚಿಮ ಪ್ರದೇಶದಲ್ಲೂ ಈ ಪ್ರಾಣಿಯ ವಾಸವಿದೆ.
ಇದನ್ನು ಕೆಂಪು ಕರಡಿ ಎಂತಲೂ ಕರೆಯುತ್ತಾರೆ. ಇದು ಹಿಮಾಲಯದಲ್ಲಿರುವ ವಿಶೇಷ ಪ್ರಾಣಿಗಳಲ್ಲಿ ಒಂದು. ಡಾರ್ಜಲಿಂಗ್‍ನ ಸಿಂಗಲಿಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

PC: flowcomm

ಹಿಮಾಲಯನ್ ಮೌನಲ್

ಹಿಮಾಲಯನ್ ಮೌನಲ್

ಹಿಮಾಲಯನ್ ತಾರ್ ಇದು ಮೇಕೆ ಜಾತಿಗೆ ಸೇರಿದ್ದು. ಹೆಚ್ಚಾಗಿ ಹಿಮಾಲಯ, ನೇಪಾಳ್ ಹಾಗೂ ಟಿಬೇಟ್‍ನಲ್ಲಿ ಕಂಡುಬರುತ್ತದೆ. ಇವುಗಳ ಕೋಡುಗಳು ಸುರುಳಿಯಂತೆ ಹಿಂಭಾಗಕ್ಕೆ ತಿರುವಿಕೊಂಡಿರುತ್ತವೆ. ಇವುಗಳನ್ನು ಕೇದಾರನಾಥ ಮಸ್ಕ್ ಡೀರ್ ಸೆಂಚ್ಯುರಿಯಲ್ಲಿ ನೋಡಬಹುದು.

PC: Dibyendu Ash

ಸ್ನೋ ಲಿಯೋಪಾರ್ಡ್

ಸ್ನೋ ಲಿಯೋಪಾರ್ಡ್

ಈ ಪ್ರಾಣಿ ದೊಡ್ಡ ಬೆಕ್ಕಿನ ಜಾತಿಗೆ ಸೇರಿದ್ದು, ಏಷ್ಯಾದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಕಾಣಬಹುದು. ಈ ಪ್ರಾಣಿ ಹಿಮಾಚಲ ಪ್ರದೇಶ, ಉತ್ತರಖಂಡ ಹಾಗೂ ಸಿಕ್ಕಿಂನ ಸ್ಥಳೀಯ ಪ್ರದೇಶದಲ್ಲಿ ಕಂಡುಬರುತ್ತದೆ. ಲಡಾಖ್‍ನ ಹೆಮಿಸ್ ನ್ಯಾಷನಲ್ ಪಾರ್ಕ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು.

PC: Kashif Pathan

ಹಿಮಾಲಯದ ಯಾಕ್

ಹಿಮಾಲಯದ ಯಾಕ್

ಹಿಮಾಲಯದ ಯಾಕ್ ಅಥವಾ ಕಾಡುಗಳಲ್ಲಿ ಕಂಡುಬರುವ ಯಾಕ್ ಎಲ್ಲವೂ ಸಾಕು ಪ್ರಾಣಿಗಳ ಗುಂಪಿಗೆ ಸೇರಿಕೊಳ್ಳುತ್ತವೆ. ಇದು ನೋಡಲು ಸ್ವಲ್ಪ ಕಾಡೆಮ್ಮೆಯನ್ನು ಹೋಲುತ್ತದೆಯಾದರೂ ಇದರ ಚರ್ಮ ಹಾಗೂ ರೋಮಗಳಲ್ಲಿ ಸ್ವಲ್ಪ ಭಿನ್ನತೆ ಇದೆ. ಹಿಮಾಚಲ ಪ್ರದೇಶ ಹಾಗೂ ಸಿಕ್ಕಿಂನ ಕೆಲವು ಸ್ಥಳೀಯ ಜನಾಂಗದವರು ಇದನ್ನು ಸಾಕುತ್ತಾರೆ.

PC: Vinodaao

ಹಿಮಾಲಯನ್ ಕಪ್ಪು ಕರಡಿ

ಹಿಮಾಲಯನ್ ಕಪ್ಪು ಕರಡಿ

ಹಿಮಾಲಯದ ಸ್ಥಳೀಯ ಭಾಗದಲ್ಲಿ ಕಪ್ಪು ಕರಡಿಗಳು ಕಂಡುಬರುತ್ತವೆ. ಈ ಪ್ರಾಣಿಯನ್ನು ಮೂನ್ ಬಿಯರ್ ಅಥವಾ ವೈಟ್ ಚೆಸ್ಟೆಡ್ ಬಿಯರ್ ಎಂದು ಕರೆಯುತ್ತಾರೆ. ಈ ಪ್ರಾಣಿಯ ಎದೆಯ ಮೇಲೆ ಇಂಗ್ಲಿಷ್ ವರ್ಣ ಮಾಲೆಯ ವಿ ಆಕಾರದಲ್ಲಿ ಬಿಳಿ ಬಣ್ಣ ಇರುತ್ತದೆ. ಇವು ಕಾಶ್ಮೀರ ಹಾಗೂ ಸಿಕ್ಕಿಂನಲ್ಲಿ ಇರುತ್ತವೆ.

PC: flowcomm

ಭರಲ್

ಭರಲ್

ಇದನ್ನು ಬ್ಲೂ ಶೀಪ್ ಎಂದು ಕರೆಯುತ್ತಾರೆ. ಹಾಗಂತ ಇದರ ಬಣ್ಣ ಬ್ಲೂ ಬಣ್ಣವಲ್ಲ. ಬದಲಿಗೆ ಬೂದು ಬಣ್ಣದಲ್ಲಿ ಇರುತ್ತದೆ. ಮೇಕೆ ಜನಾಂಗಕ್ಕೆ ಈ ಪ್ರಾಣಿ ಸೇರುತ್ತದೆ. ಇದು ಭಾರತದ ವಿವಿಧ ಸ್ಥಳೀಯ ಪ್ರದೇಶದಲ್ಲಿ ಕಂಡು ಬರುತ್ತದೆ. ಉತ್ತರ ಕಾಶಿಯಲ್ಲಿರುವ ಗಂಗೋತ್ರಿ ನ್ಯಾಷನಲ್ ಪಾರ್ಕ್‍ನಲ್ಲಿ ನೋಡಬಹುದು.

PC: Lokeshwar23

ಹಿಮಾಲಯನ್ ಮರ್ಮೋಟ್

ಹಿಮಾಲಯನ್ ಮರ್ಮೋಟ್

ಈ ಪ್ರಾಣಿ ಹಿಮಾಲಯದ ಹುಲ್ಲುಗಾವಲು ಪ್ರದೇಶದಲ್ಲಿ ಕಂಡುಬರುತ್ತದೆ. ಇವು ಬಿಲವನ್ನು ತೋಡಿ ಅಲ್ಲಿ ಅವಿತುಕೊಂಡಿರುತ್ತವೆ. ದಪ್ಪವಾದ ರೋಮಗಳಿಂದ ಕೂಡಿರುವ ಈ ಪ್ರಾಣಿ ಹಿಮಾಲಯದ ಸ್ಥಳೀಯ ಭಾಗದಲ್ಲಿ ಕಂಡುಬರುತ್ತದೆ.

PC: RounakArka1999

ಎಲ್ಲೋ ಥ್ರೋಟೆಡ್ ಮಾರ್ಟೇನ್

ಎಲ್ಲೋ ಥ್ರೋಟೆಡ್ ಮಾರ್ಟೇನ್

ಈ ಪ್ರಾಣಿಯ ಮೂಲ ಸ್ಥಳ ಏಷ್ಯಾ. ಇದನ್ನು ನೈನಿತಾದಲ್ಲಿರುವ ಜಿಮ್ ಕಾರ್ಬೇಟ್ ನ್ಯಾಷನಲ್ ಪಾರ್ಕ್‍ನಲ್ಲಿ ಹೆಚ್ಚಾಗಿ ಕಾಣಬಹುದು.

PC: Dibyendu Ash

ಹಿಮಾಲಯನ್ ತಾರ್

ಹಿಮಾಲಯನ್ ತಾರ್

ಹಿಮಾಲಯನ್ ತಾರ್ ಇದು ಮೇಕೆ ಜಾತಿಗೆ ಸೇರಿದ್ದು. ಹೆಚ್ಚಾಗಿ ಹಿಮಾಲಯ, ನೇಪಾಳ್ ಹಾಗೂ ಟಿಬೇಟ್‍ನಲ್ಲಿ ಕಂಡುಬರುತ್ತದೆ. ಇವುಗಳ ಕೋಡುಗಳು ಸುರುಳಿಯಂತೆ ಹಿಂಭಾಗಕ್ಕೆ ತಿರುವಿಕೊಂಡಿರುತ್ತವೆ. ಇವುಗಳನ್ನು ಕೇದಾರನಾಥ ಮಸ್ಕ್ ಡೀರ್ ಸೆಂಚ್ಯುರಿಯಲ್ಲಿ ನೋಡಬಹುದು.

PC: Koshy Koshy

Read more about: himalaya, sikkim, uttarakhand
Please Wait while comments are loading...