Search
  • Follow NativePlanet
Share
» »ಭಾರತದ 7 ನಿಗೂಢವಾದ ದೇವಾಲಯಗಳು

ಭಾರತದ 7 ನಿಗೂಢವಾದ ದೇವಾಲಯಗಳು

Written By:

ಪ್ರಾಚೀನ ಕಾಲದಿಂದಲೂ ನಮ್ಮ ಭಾರತ ದೇಶದಲ್ಲಿ ಹಲವಾರು ದೇವತೆಗಳನ್ನು ಪೂಜೆ ಮಾಡುತ್ತಿದ್ದೇವೆ. ಆದರೆ ಕೆಲವರಿಗೆ ಕೆಲವು ದೇವರುಗಳೆಂದರೆ ಇಷ್ಟ. ಇನ್ನು ಕೆಲವರಿಗೆ ಬೇರೆ ದೇವತೆಗಳೆಂದರೆ ಇಷ್ಟ. ಹಾಗೆಯೇ ಆಗಿನ ಕಾಲದ ರಾಜವಂಶಿಕರು ತಮ್ಮ ಘನತೆಗೆ ಹಾಗು ರುಚಿಗೆ ತಕ್ಕಂತೆ ವಾಸ್ತು ಶಿಲ್ಪವನ್ನು ಅಳವಡಿಸಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದರು.

2000 ವರ್ಷಗಳಿಗಿಂತಲೂ ಹಳೆಯದಾದ ದೇವಾಲಯಗಳನ್ನು ನಮ್ಮ ಭಾರತ ದೇಶದಲ್ಲಿ ಕಾಣಬಹುದಾಗಿದೆ. ಅವೆಲ್ಲವೂ ತಮ್ಮದೇ ಆದ ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ನಮ್ಮ ದೇವತೆಗಳ ಪಟ್ಟಿಯಲ್ಲಿ ಇನ್ನೂ ಕೆಲವು ವಿಭಿನ್ನವಾದ ದೇವತಾ ಮೂರ್ತಿಗಳು ಕೂಡ ಸೇರಿಕೊಂಡಿರುವ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾನ್ಯವಾಗಿ ಅಂದಿನ ರಾಜರು ತಮ್ಮ ದೇವಾಲಯಕ್ಕೆ ತಮ್ಮದೇ ಆದ ವೈಶಿಷ್ಟತೆ ಇರಬೇಕು ಎಂದು ಒಂದು ರಹಸ್ಯವನ್ನು ಅಡಗಿಸಿ ನಿರ್ಮಾಣ ಮಾಡಿಸುತ್ತಿದ್ದರು. ಆದರೆ ಭಾರತದಲ್ಲಿ ಕೆಲವು ಅತ್ಯಂತ ನಿಗೂಢವೆನಿಸುವ ದೇವಾಲಯಗಳು ಇವೆ. ಅವುಗಳ ಬಗ್ಗೆ ಲೇಖನದ ಮೂಲಕ ಮಾಹಿತಿ ಪಡೆಯೋಣ.....

ವಾರಣಾಸಿಯಲ್ಲಿನ ಮುಳುಗಿರುವ ಶಿವಾಲಯ

ವಾರಣಾಸಿಯಲ್ಲಿನ ಮುಳುಗಿರುವ ಶಿವಾಲಯ

ವಾರಾಣಾಸಿಯಲ್ಲಿನ ಸಿಂಧಿಯಾ ಘಾಟ್‍ಗೆ ಅತ್ಯಂತ ಸಮೀಪದಲ್ಲಿರುವ ಈ ಶಿವಾಲಯವು ಸುಂದರವಾದ ಗೋಪುರದಿಂದ ಭಕ್ತರನ್ನು ಆಕರ್ಷಿಸುತ್ತಿತ್ತು. ಈ ದೇವಾಲಯವನ್ನು 1830 ರಲ್ಲಿ ಪಾಟ್ನಾ ವಿವಾದದಿಂದಾಗಿ ನದಿಯೊಳಗೆ ಮುಳುಗಿ ಹೋಯಿತು. ಇಂದು ಈ ಶಿವಾಲಯವನ್ನು ಮುಚ್ಚಲಾಗಿದೆ. ಆದರೂ ಕೂಡ ಹಲವಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


PC:Antoine Taveneau

ಚೀನಿ ಕಾಳಿ ದೇವಾಲಯ

ಚೀನಿ ಕಾಳಿ ದೇವಾಲಯ

ಚೀನಿ ಕಾಳಿ ದೇವಾಲಯದ ಬಗ್ಗೆ ಕೇಳುರುವಿರಾ? ಹಾಗಾದರೆ ಕೇಳಿ ಈ ವಿಚಿತ್ರವಾದ ದೇವಾಲಯವಿರುವುದು ಕೊಲ್ಕತ್ತಾದ ಟ್ಯಾಂಗ್ರಾದಲ್ಲಿನ ಚೈನಾಟೌನ್ ಎಂಬ ಸಣ್ಣ ಪಟ್ಟಣದಲ್ಲಿ. ಇಲ್ಲಿ ಹೆಚ್ಚಾಗಿ ಚೀನಿಯರು ನೆಲೆಸಿರುವ ತಾಣ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಹೆಚ್ಚಾಗಿ ಚೀನಿಯವರೆ ಭೇಟಿ ನೀಡುವುದು. ಅದರಲ್ಲೂ ಇನ್ನೊಂದು ಆಶ್ಚರ್ಯ ಎಂದರೆ ದೇವತೆಗೆ ನೈವೇಧ್ಯವಾಗಿ ನೂಡಲ್ಸ್, ಚಾಪ್ಸೂಯಿ ಮುಂತಾದವುಗಳನ್ನು ನೀಡುವುದು.


PC:Xianzi Tan

ಜಗತ್ತಿನ ಏಕೈಕ ಬ್ರಹ್ಮ ದೇವಾಲಯ

ಜಗತ್ತಿನ ಏಕೈಕ ಬ್ರಹ್ಮ ದೇವಾಲಯ

ವಿಶ್ವದ ಏಕೈಕ ಬ್ರಹ್ಮ ದೇವಾಲಯ ರಾಜಸ್ಥಾನದ ಪುಷ್ಕರಣಿಯಲ್ಲಿದೆ. ಈ ದೇವಾಲಯವನ್ನು 14 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು. ಇಲ್ಲಿ ನಾಲ್ಕು ತಲೆಯನ್ನು ಹೊಂದಿರುವ ಸೃಷ್ಟಿ ಕರ್ತ ಬ್ರಹ್ಮನನ್ನು ಕಾಣಬಹುದಾಗಿದೆ. ಈ ದೇವಾಲಯದ ನಿರ್ಮಾಣದ ಹಿಂದೆ ಆಸಕ್ತಿದಾಯಕವಾದ ಕಥೆಯನ್ನು ಹೊಂದಿದೆ. ಆಶ್ಚರ್ಯ ಏನಪ್ಪ ಎಂದರೆ ಬ್ರಹ್ಮಚಾರಿಗಳು ಈ ದೇವಾಲಯದ ಒಳಗೆ ಪ್ರವೇಶ ಮಾಡುವಂತಿಲ್ಲ.


PC: Vberger

ವಡೋದರಾ ಸಮೀಪದಲ್ಲಿನ ಕಣ್ಮರೆಯಾಗುತ್ತಿರುವ ದೇವಾಲಯ

ವಡೋದರಾ ಸಮೀಪದಲ್ಲಿನ ಕಣ್ಮರೆಯಾಗುತ್ತಿರುವ ದೇವಾಲಯ

ಒಂದು ದೇವಾಲಯವು ಕಣ್ಮರೆಯಾಗಬಹುದು ಮತ್ತು ಸ್ವಲ್ಪ ಸಮಯದ ನಂತರ ಮತ್ತೆ ಹಿಂತಿರುಗಬಹುದು ಎಂದು ನೀವು ಎಂದಾದರೂ ಊಹಿಸಿದ್ದೀರಾ? ಹೌದು, ವಡೋದರಾದಿಂದ ಸುಮಾರು 40 ಕಿ.ಮೀ ದೂರದಲ್ಲಿ ಪವಿತ್ರವಾದ ಸ್ತಂಭೇಶ್ವರ ಮಹಾದೇವ್ ದೇವಾಲಯವಿದೆ. ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಈ ದೇವಾಲಯವನ್ನು ಕಡಿಮೆ ಉಬ್ಬರಳಿತದ ಅಂದರೆ ಗಂಟೆಗಳಲ್ಲಿ ಮಾತ್ರ ಈ ದೇವಾಲಯವನ್ನು ಕಾಣಬಹುದಾಗಿದೆ.


PC: sgbhagwat

ಬುಲೆಟ್ ಬಾಬಾ

ಬುಲೆಟ್ ಬಾಬಾ

ಬುಲೆಟ್ ಬಾಬಾ ಅಥವಾ ಓಂ ಬನ್ನಾ ದೇವಾಲಯವು ರಾಜಸ್ಥಾನದ ಜೋಧಪುರ್‍ಗೆ ಸಮೀಪದಲ್ಲಿದೆ. ಇಲ್ಲಿನ ಭಕ್ತರು ಬುಲೆಟ್ ಬಾಬಾ ಎಂದು ಕರೆಯಲ್ಪಡುವ ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನು ಪೂಜಿಸುತ್ತಾರೆ. ಇಲ್ಲಿ ದೇವರಿಗೆ ನೈವೇಧ್ಯವಾಗಿ ಮಧ್ಯ ಪಾನವನ್ನು ನೀಡಲಾಗುತ್ತದೆ. ಇಲ್ಲಿನ ಗ್ರಾಮದ ನಿವಾಸಿಗಳು ದೇವತೆಯು ರಸ್ತೆ ಅಪಘಾತಗಳಿಂದ ಮತ್ತು ಪ್ರಯಾಣ ಮಾಡುವಾಗ ಇತರ ಅಪಾಯಗಳಿಂದ ರಕ್ಷಿಸುತ್ತಾರೆ ಎಂದು ನಂಬಲಾಗಿದೆ.


PC: Sentiments777

ಕಾರಣೀ ಮಾತಾ ದೇವಾಲಯ

ಕಾರಣೀ ಮಾತಾ ದೇವಾಲಯ

ಇಲ್ಲಿ ಇಲಿಗಳನ್ನು ಪೂಜಿಸಲಾಗುತ್ತದೆ. ಈ ವಿಚಿತ್ರವಾದ ದೇವಾಲಯವಿರುವುದು ರಾಜಸ್ಥಾನದ ಬಿಕೆನಾರ್‍ನ ದಕ್ಷಿಣಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ದೇಶ್ನೋಕ್‍ನಲ್ಲಿ ಕಾರಣೀ ಮಾತಾ ದೇವಾಲಯವಿದೆ. ಇಲ್ಲಿ ಕಾಳಿ ರೂಪ ಎಂದು ಇಲಿಗಳನ್ನು ಪೂಜೆ ಮಾಡಲಾಗುತ್ತದೆ. ಈ ದೇವಾಲಯದಲ್ಲಿ 4 ಬಿಳಿ ಇಲಿಗಳು ಇವೆ. ಅವುಗಳನ್ನು ಕಾರಣೀ ಮಾತಾಳ ಸ್ವಂತ ಮಕ್ಕಳು ಎಂದು ನಂಬಲಾಗಿದೆ. ದೇವಾಲಯದ ಅವರಣದಲ್ಲಿ ಇಲಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡಲಾಗುತ್ತದೆ.


PC: Sentiments777

ಪಗೋಡಾ ಆಕಾರದ ದೇವಾಲಯ

ಪಗೋಡಾ ಆಕಾರದ ದೇವಾಲಯ

ಪಗೋಡಾ ಆಕಾರದ ದೇವಾಲಯವು ಮನಾಲಿಯಲ್ಲಿನ ದೇವಾಲಯವಾಗಿದೆ. ಈ ದೇವಾಲಯವು ನಾಲ್ಕು ಮಹಡಿಗಳನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯವು ಪಗೋಡಾ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ದೇವಾಲಯವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಈ ದೇವಾಲಯವು ಹಡಿಂಬಳ ಸಹೋದರಿ ದೇವಿ ಹಿಡಿಂಬಕ್ಕೆ ಸಮರ್ಪಿಸಲಾಗಿದೆ. ಈ ದೇವತೆಯು ಕುಲ್ಲು ರಾಜನ ಆರಾಧ್ಯ ದೇವತೆಯಾಗಿದ್ದಳು.


PC:Wordsmith86

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more