Search
  • Follow NativePlanet
Share
ಮುಖಪುಟ » ಸ್ಥಳಗಳು » ವಡೋದರಾ » ಹವಾಮಾನ

ವಡೋದರಾ ಹವಾಮಾನ

ಬೇಸಿಗೆಗಾಲ

ಬೇಸಿಗೆ ಕಾಲ ತುಂಬಾ ಒಣ ಹಾಗೂ ಉಷ್ಣತೆಯಿಂದ ಕೂಡಿರುತ್ತದೆ. ಬೇಸಿಗೆಯ ಉಷ್ಣಾಂಶವು 23 ಡಿಗ್ರಿ ಸೆಲ್ಸಿಯಸ್ ನಿಂದ 36 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.

ಮಳೆಗಾಲ

ನೈರುತ್ಯ ಮಾನ್ಸೂನ್ ನಿಂದಾಗಿ ಆರ್ದ್ರವಾಗಿರುವ ಈ ಋತುವಿನಲ್ಲಿ 93 ಸೆ.ಮೀ. ಅಥವಾ 36.7 ಇಂಚು ಮಳೆಯಾಗುತ್ತದೆ. ಜೂನ್ ಮಧ್ಯಭಾಗದಿಂದ ಸೆಪ್ಟಂಬರ್ ಮಧ್ಯಭಾಗದವರೆಗೆ ಸರಾಸರಿ ಉಷ್ಣಾಂಶವು 24 ಡಿಗ್ರಿ ಸೆಲ್ಸಿಯಸ್ ನಿಂದ 36 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಭಾರೀ ಮಳೆಯಿಂದಾಗಿ ವಿಶ್ವಮಿತ್ರಿ ನದಿಯಲ್ಲಿ ಹೂಳೆತ್ತದ ಕಾರಣ ಪ್ರವಾಹ ಉಂಟಾಗುತ್ತದೆ.

ಚಳಿಗಾಲ

ತಣ್ಣನೆಯ ಉತ್ತರ ಮಾರುತಗಳಿಂದಾಗಿ ಚಳಿಗಾಲ ಇಲ್ಲಿ ಸ್ವಲ್ಪ ತಂಪಾಗಿರುತ್ತದೆ ಮತ್ತು ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ನವಂಬರ್ ನಿಂದ ಫೆಬ್ರವರಿ ತನಕ ಇಲ್ಲಿ ಚಳಿಗಾಲವಿರುತ್ತದೆ.