• Follow NativePlanet
Share
Menu
» »ರೋಮಾಂಚನಕಾರಿ ಅನುಭವ ಪಡೆಯಬೇಕೆ ಹಾಗಾದರೆ ಒಮ್ಮೆ ಭೇಟಿ ಕೊಡಿ

ರೋಮಾಂಚನಕಾರಿ ಅನುಭವ ಪಡೆಯಬೇಕೆ ಹಾಗಾದರೆ ಒಮ್ಮೆ ಭೇಟಿ ಕೊಡಿ

Written By: Sowmyabhai

ಯುವಕರೆಂದರೆ ಪ್ರತಿನಿತ್ಯ ಹುಮ್ಮಸ್ಸಿನಿಂದ ಇರುತ್ತಾರೆ. ವಾರಾಂತ್ಯದಲ್ಲಿ ತಡ ಮಾಡದೇ ಪ್ರಯಾಣಕ್ಕೆ ಹೋರಟುಬಿಡುತ್ತಾರೆ. ಅವರಿಗೆ ನೆಚ್ಚಿನ ಸಾಹಸಮಯ ಟ್ರೆಕ್ಕಿಂಗ್, ರೈಡ್, ಸಫಾರಿ ಮಾಡಲು ಬಯಸುತ್ತಾರೆ. ಮೋಜು ಮಸ್ತಿಗಾಗಿ ಪಾರ್ಟಿಗಳಿಗೆ ಹೋಗುತ್ತಾರೆ. ಸದಾ ಒಂದಲ್ಲ ಒಂದು ಚಟುವಟಿಕೆಯಿಂದ ಇರುವುದೇ ಯುವಕರು. ನೀವು ಕೆಲವು ರೋಮಾಂಚನ ಹಾಗೂ ಸಾಹಸಮಯ ಪ್ರಯಾಣ ಮಾಡಲು ಸೂಕ್ತವಾದ ಸ್ಥಳವನ್ನು ನೀವು ಅನ್ವೇಷಿಸುತ್ತಿದ್ದರೆ ಪ್ರಸುತ್ತ ಲೇಖನದ ಮೂಲಕ ಹೊಸ ಬಗೆಯ ಪ್ರವಾಸ ತಾಣಗಳ ಬಗ್ಗೆ ನಿಮಗೆ ತಿಳಿಸುತ್ತೆನೆ.

 ಗೋವಾ ಪಾರ್ಟಿ

 ಗೋವಾ ಪಾರ್ಟಿ

                                              PC:Mike Lehmann


ಗೋವಾ ಮೋಜು ಮಸ್ತಿಗೆ ಹೇಳಿ ಮಾಡಿಸಿದ ಸ್ಥಳ. ಗೋವಾ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾಗಿದ್ದು, ಹಲವಾರು ಪ್ರವಾಸಿಗರು ಇಲ್ಲಿನ ಬೀಚ್, ಪಾರ್ಟಿ ಎಂದು ಹೋಗುತ್ತಿರುತ್ತಾರೆ. ಕೇವಲ ಸಾಮಾನ್ಯ ಜನರೇ ಅಲ್ಲದೆ ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಸಿನಿಮಾ ನಟ ನಟಿಯರು ಗೋವಾಗೆ ಭೇಟಿ ನೀಡುತ್ತಿರುತ್ತಾರೆ. ರಾತ್ರಿಯ ಸಮಯದಲ್ಲಿ ಪಾರ್ಟಿಗಳು ನಡೆಯುವುದರಿಂದ ಬಹಳ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಗೋವಾಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದು ನಂವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ ಉತ್ತಮವಾದ ಕಾಲಾವಧಿಯಾಗಿದೆ.

ಡಿಬ್‍ರು ಸಾಯಿಕ್ ನ್ಯಾಷನಲ್ ಪಾರ್ಕ್

 ಡಿಬ್‍ರು ಸಾಯಿಕ್ ನ್ಯಾಷನಲ್ ಪಾರ್ಕ್

                                          PC:Dhruba Jyoti Baruah
ಡಿಬ್‍ರು ನ್ಯಾಷನಲ್ ಪಾರ್ಕ್ ಅಸ್ಸಾಂ ರಾಜ್ಯದಲ್ಲಿದ್ದು ಅತ್ಯಂತ ಸುಂದರವಾದ ವಾತಾವರಣವನ್ನು ಹೊಂದಿದೆ. ಇಲ್ಲಿ ಹಲವಾರು ಕಾಡು ಮೃಗಗಳನ್ನು ಕಾಣಬುಹುದಾಗಿದೆ. ಇಲ್ಲಿಗೆ ಹೋಗಬೇಕಾದರೆ ಜೀಪ್‍ನ ಮೂಲಕ ಸಫಾರಿಗೆ ಹೋಗುವ ಬದಲಾಗಿ ಕಾಡಿನ ಮಧ್ಯೆ ನಡೆದು ಕೊಂಡು ಹಾಗೂ ಬೋಟ್‍ನಲ್ಲಿ ಹೋಗಬೇಕು. ಇದೊಂದು ಅದ್ಭುತವಾದ ಪ್ರಯಾಣವಾಗಿರುತ್ತದೆ. ಈ ಪ್ರವಾಸಕ್ಕೆ ಹೋಗಲು ಉತ್ತಮವಾದ ಕಾಲಾವಧಿಯೆಂದರೆ ಅದು ನವೆಂಬರ್‍ನಿಂದ ಏಪ್ರಿಲ್ ಸೂಕ್ತವಾದುದು.

 ಪ್ಯಾರಾಗ್ಲೈಡಿಂಗ್

ಪ್ಯಾರಾಗ್ಲೈಡಿಂಗ್

                                                     PC:Astajyoti1
ಪ್ಯಾರಾಗ್ಲೈಡಿಂಗ್ ಎಂದರೆ ಗಗನದಲ್ಲಿ ಹಾರಾಡುವುದೇ ಆಗಿದೆ. ಯುವಕರಿಗೆ ಇಂತಹ ಸಹಾಸ ಪ್ರಯತ್ನ ಮಾಡಲು ಬಲು ಇಷ್ಟ. ಈ ಪ್ಯಾರಾಗ್ಲೈಡಿಂಗ್ ಅತ್ಯಂತ ರೋಮಾಂಚಕಾರಿ ಅನುಭುತಿ ನೀಡುವುದರಲ್ಲಿ ಅನುಮಾನವಿಲ್ಲ. ಗಗನದಲ್ಲಿ ಹಾರಾಟವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈ ಪ್ರಯೋಗಗಳು ಮಾಡುವಾಗ ಸಾಮಾನ್ಯವಾಗಿ ಭಯ ಅವರಿಸುತ್ತದೆ ಆದರೆ ಹೆದರಬೇಡಿ ನಿಮಗೆ ಭಧ್ರತೆಯನ್ನು ಸಹಾ ಈ ಪ್ಯಾರಾಗ್ಲೈಡಿಂಗ್‍ನಲ್ಲಿರುತ್ತದೆ. ಒಮ್ಮೆ ಮನಾಲಿಗೆ ಭೇಟಿ ನೀಡಿದಾಗ ಕೇವಲ 14 ಕಿ,ಮೀ ಇರುವ ಸ್ಥಳ ಸೊಲಾನಗ್‍ಗೆ ಹೋಗಿ ಪ್ಯಾರಾಗ್ಲೈಡಿಂಗ್‍ನ ಅನುಭವ ಪಡೆದು ಬನ್ನಿ.

ರ್ಯಾಫ್ಟಿಂಗ್

   

ರ್ಯಾಫ್ಟಿಂಗ್
                              

                                                  PC:.israeltourism
ರ್ಯಾಫ್ಟಿಂಗ್ ಎಂದರೆ ಯಾರಿಗೆ ಇಷ್ಟವಿಲ್ಲ, ನೀರಲ್ಲಿ ಅಡ್ಡಾಡುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಬಲು ಇಷ್ಟವಾದುದು. ಸ್ನೇಹಿತರ ಜೊತೆಗೂಡಿ ಸಂತೋಷ ಪಡಲು, ಸಾಹಸಮಯವಾದ ರೋಮಾಂಚನ ಅನುಭವಿಸಲು ರ್ಯಾಫ್ಟಿಂಗ್ ಉತ್ತಮವಾದ ಮೋಜಿನ ಆಟ. ರಿಷಿಕೇಶಕ್ಕೆ ಒಮ್ಮೆ ಭೇಟಿ ಕೊಟ್ಟಾಗ ತಪ್ಪದೇ ಒಮ್ಮೆ ರ್ಯಾಫ್ಟಿಂಗ್ ಮಾಡದೇ ಇರಬೇಡಿ. ಈ ಸಾಹಸವನ್ನು ಕೈಗೊಳ್ಳಲು ಉತ್ತಮವಾದ ಸಮಯವೆಂದರೆ ಸೆಪ್ಟೆಂಬರ್‍ನಿಂದ ನವೆಂಬರ್ ಹಾಗೂ ಫೆಬ್ರವರಿಯಿಂದ ಜೂನ್ ಉತ್ತಮವಾದ ಕಾಲಾವಧಿ.

 ಮಥುರದಲ್ಲಿನ ಹೋಲಿ ಹಬ್ಬ

ಹೋಲಿ ಹಬ್ಬ

                                            PC:Steven Gerner
ಮಥುರದಲ್ಲಿ ಹೋಲಿ ಹಬ್ಬ ವಿಜೃಂಬಣೆಯಿಂದ ಆಚರಿಸುವುದರಿಂದ ಒಮ್ಮೆ ಇಲ್ಲಿಗೆ ಭೇಟಿ ಕೊಡಿ. ಸಾಮಾನ್ಯವಾಗಿ ಭಾರತದ ಮೂಲೆ ಮೂಲೆಗಳಲ್ಲೂ ಹೋಲಿ ಆಚರಿಸಲಾಗುತ್ತದೆ. ಹೋಲಿ ಹಬ್ಬ ಬಣ್ಣಗಳ ಹಬ್ಬ. ಈ ಹಬ್ಬವೆಂದರೆ ಯುವಕರಿಗೆ ಅತ್ಯಂತ ಪ್ರಿಯವಾದುದು. ಈ ಮಥುರಾದಲ್ಲಿ ಶ್ರೀ ಕೃಷ್ಣನ ಬದುಕಿದ ತತ್ವ ಶಾಸ್ತ್ರವನ್ನು ಒಳಗೊಂಡು ಈ ಬಣ್ಣಗಳ ಹಬ್ಬವನ್ನು ಆಚರಿಸುತ್ತಾರೆ. ಜೀವನದಲ್ಲಿ ಇದೊಂದು ಮರೆಯಲಾಗದ ಸುಂದರ ಅನುಭವವಾಗಿರುತ್ತದೆ.

 ಗುಹಾ ಅನ್ವೇಷಣೆ

 ಗುಹಾ

                                      PC:Biospeleologist
ಗುಹೆಗಳೆಂದರೆ ಅದೇನೂ ರೋಮಾಂಚಕಾರಿ, ಕುತೂಕಲ, ಭಯ ಅವರಿಸುತ್ತದೆ. ಇದು ಸಹ ಒಂದು ಸಹಾಸಮಯವಾದುದು. ಸ್ನೇಹಿತರ ಜೊತೆಗೂಡಿ ಗುಹೆಯನ್ನು ಅನ್ವೇಷಿಸುವುದೆಂದರೆ ಎಲ್ಲರಿಗೂ ಪ್ರಿಯ. ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರಸಿದ್ದವಾದ ಗುಹೆಗಳಿವೆ. ಮೇಘಾಲಯ ಗುಹೆಗಳ ತವರೂರು ಅತಿ ಹೆಚ್ಚು ಗುಹೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಗೆ ಪಡೆದಿದೆ. ಈ ಗುಹೆಗಳಿಗೆ ಭೇಟಿ ನೀಡಲು ದೇಶ ವಿದೇಶದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ನೀವು ಒಮ್ಮೆ ಇಂತಹ ಅನುಭವ ಪಡೆಯಲು ಭೇಟಿ ಕೊಡಿ. ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಮಾರ್ಚ್‍ನಿಂದ ಜುಲೈ ಸೂಕ್ತವಾದುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ