Search
  • Follow NativePlanet
Share
» » ಭಾರತ ದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕಗಳನ್ನು ನೋಡಿದ್ದೀರಾ?

ಭಾರತ ದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕಗಳನ್ನು ನೋಡಿದ್ದೀರಾ?

ಭಾರತದ ಸಾಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕ ವಾಸ್ತುಶಿಲ್ಪ ಶೈಲಿಗಳು ಈಗ ಜನಪ್ರಿಯ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿವೆ. ದೇವಸ್ಥಾನಗಳಿಂದ ಹಿಡಿದು ಅರಮನೆಗಳವರೆವಿಗೂ ಅನೇಕ ಅದ್ಭುತವಾದ ಕಟ್ಟಡಗಳಿವೆ. ಇವುಗಳಲ್ಲಿ ಕೆಲವು U

ಭಾರತದ ಸಾಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕ ವಾಸ್ತುಶಿಲ್ಪ ಶೈಲಿಗಳು ಈಗ ಜನಪ್ರಿಯ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿವೆ. ದೇವಸ್ಥಾನಗಳಿಂದ ಹಿಡಿದು ಅರಮನೆಗಳವರೆವಿಗೂ ಅನೇಕ ಅದ್ಭುತವಾದ ಕಟ್ಟಡಗಳಿವೆ. ಇವುಗಳಲ್ಲಿ ಕೆಲವು UNESCO ನಿಂದ ಗುರುತಿಸಲ್ಪಟ್ಟ ಮತ್ತು ರಕ್ಷಿತವಾಗಿರುವ ರಚನೆಗಳ ಪಟ್ಟಿಗೆ ಕೂಡಾ ಸೇರುತ್ತದೆ. ಈ ರಚನೆಗಳ ವಾಸ್ತುಶಿಲ್ಪವು ನಿರ್ಮಾಣದ ವಾಸ್ತುಶೈಲಿಗೆ ಆಸಕ್ತಿ ಹೊಂದಿದೆ. ಅದಕ್ಕಾಗಿಯೇ ಈ ರಚನೆಗಳ ನಿರ್ಮಾಣ ಇನ್ನೂ ನೂರಾರು ವರ್ಷಗಳಾದರು ಅದರ ಮಹತ್ವ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಲೇಖನದ ಮೂಲಕ ಭಾರತದಲ್ಲಿನ ಭಾರತದ ಅತ್ಯುತ್ತಮ ಸ್ಮಾರಕಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೇಟಿವ್ ಪ್ಲಾನೆಟ್ನ ಮೂಲಕ ತಿಳಿದುಕೊಳ್ಳಿ....

1. ತಾಜ್ ಮಹಲ್

1. ತಾಜ್ ಮಹಲ್

ಉತ್ತರ ಪ್ರದೇಶದಲ್ಲಿನ ಯಮುನಾನದಿ ತೀರದಲ್ಲಿ ಆಗ್ರಾ ಪಟ್ಟಣದಲ್ಲಿ ಈ ಅದ್ಭುತವಾದ ತಾಜ್ ಮಹಲ್ ಇದೆ. ಒಟ್ಟು ಮಾರ್ಬಲ್‍ನಿಂದ ನಿರ್ಮಾಣ ಮಾಡಿರುವ ರಮಣೀಯವಾದ ಈ ಕಟ್ಟಡವನ್ನು ದೇಶದ ಮೂಲೆಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಅನೇಕ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ. ಪ್ರೇಮಕ್ಕೆ ಚಿಹ್ನೆಯಾಗಿರುವ ಈ ತಾಜ್ ಮಹಲ್‍ನನ್ನು ಮೊಘಲ್, ಪರ್ಷಿಯನ್ ಟರ್ಕಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಮಂದಿ ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು.

PC:YOUTUBE

2. ಮೈಸೂರು ಪ್ಯಾಲೆಸ್

2. ಮೈಸೂರು ಪ್ಯಾಲೆಸ್

ಮೈಸೂರ್ ಪ್ಯಾಲೆಸ್ ಚಾರಿತ್ರಾತ್ಮಕವಾಗಿಯೇ ಅಲ್ಲದೇ ವಾಸ್ತು ಪ್ರಕಾರವಾಗಿರು ಅತಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿರುವ ಭವನ ಇದಾಗಿದೆ. ಕರ್ನಾಟಕ ರಾಜ್ಯದಲ್ಲಿನ ಮೈಸೂರಿನಲ್ಲಿ ಈ ಅತ್ಯದ್ಭುತವಾದ ಪ್ಯಾಲೆಸ್ ಇದೆ. ಇದನ್ನು ಅಂಬಾ ವಿಲಾಸ್ ಎಂದು ಕೂಡ ಕರೆಯುತ್ತಾರೆ. ಈ ಪ್ಯಾಲೆಸ್‍ಗೆ ಸಮೀಪದಲ್ಲಿಯೇ ಚಾಮುಂಡಿ ಬೆಟ್ಟ ಕೂಡ ಇದೆ. ಈ ಸುಂದರವಾದ ಪ್ಯಾಲೆಸ್‍ನನ್ನು ಕಾಣುವ ಸಲುವಾಗಿ ದೇಶ ವಿದೇಶಗಳಿಂದ ಕೂಡ ಪ್ರವಾಸಿಗರು ಕೂಡ ಭೇಟಿ ನೀಡುತ್ತಿರುತ್ತಾರೆ.

PC:YOUTUBE

3. ಹವಾಮಹಲ್, ಜೈಪುರ್

3. ಹವಾಮಹಲ್, ಜೈಪುರ್

ರಾಜಪೂತರಿಗೆ ಸೇರಿದ ಅತಿ ದೊಡ್ಡ ಈ ಹವಾಮಹಲ್ ಅತ್ಯದ್ಭುತವಾಗಿದೆ. ಜೈಪೂರಕ್ಕೆ ಪಿಂಕ್ ಸಿಟಿ ಎಂದು ಬರುವುದಕ್ಕೆ ಕಾರಣವೇ ಈ ಮಹಲ್ ಎಂದು ಕೂಡ ಹೇಳುತ್ತಾರೆ. ರೆಡ್ ಆಂಡ್ ಸ್ಟಾಂಡ್ ಸ್ಟೋನ್‍ನಿಂದ ನಿರ್ಮಾಣ ಮಾಡಿರುವ ಈ ಐದು ಅಂತಸ್ತಿನ ಭವನವನ್ನು ಮಹಾರಾಜ ಪ್ರತಾಪ್ ಸಿಂಗ್‍ನು ನಿರ್ಮಾಣ ಮಾಡಿದನು. ಆ ಕಾಲದಲ್ಲಿ ಇವುಗಳಲ್ಲಿ ಕೇವಲ ಅಂತಃಪುರದ ಕನ್ಯೆಯರು ಮಾತ್ರವೇ ನಿವಾಸಿಸುತ್ತಿದ್ದರು ಎಂದು ಹೇಳುತ್ತಾರೆ. ಪ್ರಸ್ತುತ ಇದು ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಿದೆ.

PC:YOUTUBE

4. ಛತ್ರಪತಿ ಶಿವಾಜಿ ಟರ್ಮಿನಸ್

4. ಛತ್ರಪತಿ ಶಿವಾಜಿ ಟರ್ಮಿನಸ್

ಕನಸಿನ ನಗರವಾಗಿ ಹೆಸರುವಾಸಿಯಾಗಿರುವ ಮುಂಬೈನಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ಇದೆ. ಇದನ್ನು ವಿಕ್ಟೋರಿಯಾ ಟರ್ಮಿನಸ್ ಎಂದು ಕೂಡ ಕರೆಯುತ್ತಾರೆ. ಸೆಂಟ್ರಲ್ ರೈಲ್ವೆಯ ಪ್ರಧಾನವಾದ ಕೇಂದ್ರವಾಗಿರುವ ಈ ಛತ್ರಪತಿ ಶಿವಾಜಿ ಟರ್ಮಿನಸ್ ಭಾರತ ದೇಶದಲ್ಲಿನ ಅತ್ಯಂತ ಹೆಚ್ಚಿನ ಜನ ಜಂಗುಳಿಯಿಂದ ಕೂಡಿರುವ ರೈಲ್ವೆ ನಿಲ್ದಾಣಗಳಲ್ಲಿ ಇದೇ ಮೊದಲನೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

PC:YOUTUBE

5. ವಿಕ್ಟೋರಿಯಾ ಮೆಮೋರಿಯಲ್

5. ವಿಕ್ಟೋರಿಯಾ ಮೆಮೋರಿಯಲ್

ಪಶ್ಚಿವi ಬೆಂಗಾಲ್ ರಾಜಧಾನಿಯಾದ ಕೋಲ್ಕತ್ತದಲ್ಲಿ ಈ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಇದೆ. ಒಟ್ಟು ಮಾರ್ಬಲ್‍ನಿಂದ ನಿರ್ಮಿತವಾದ ಈ ಭವನವನ್ನು ನೋಡುವುದಕ್ಕೆ ವಿದೇಶಿಗರು ಕೂಡ ಹೆಚ್ಚು ಮಂದಿ ಆಸಕ್ತಿ ವಹಿಸುತ್ತಾರೆ. ಇಲ್ಲಿರುವ ಮ್ಯೂಸಿಯಂನಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟವಾದ ಆಭರಣಗಳು, ವಸ್ತುಗಳು, ಆಯುಧಗಳನ್ನು ನಾವು ಕಾಣಬಹುದು.

PC:YOUTUBE

6. ಕುತುಬ್ ಮಿನಾರ್

6. ಕುತುಬ್ ಮಿನಾರ್

ಪ್ರಪಂಚದಲ್ಲಿಯೇ ಅತ್ಯಂತ ಉದ್ದದ ಮಿನಾರ್‍ಗಳಲ್ಲಿ ದೆಹಲಿಗೆ ಸಮೀಪದಲ್ಲಿಯೇ ಇರುವ ಕುತುಬ್ ಮಿನಾರ್ ಕೂಡ ಒಂದು. ಭಾರತ ದೇಶದ ವಿಷಯಕ್ಕೆ ಬಂದರೆ ಎರಡನೇ ಅತಿ ದೊಡ್ಡದಾದ ಮಿನಾರ್ ಇದೆ. ಇಲ್ಲಿ ನಾವು ಇಂಡೋ ಇಸ್ಲಾಂ ಕಲೆಯಿಂದ ಕೂಡಿದ ವಾಸ್ತು ಶಿಲ್ಪ ಶೈಲಿಯನ್ನು ಕಾಣಬಹುದು. ಇದನ್ನು ಕುತುಬುದ್ದಿನ್ ಐಬಕ್ ನಿರ್ಮಾಣ ಮಾಡಿದನು. ಪ್ರತಿ ವರ್ಷ ಜೂನ್ 22ರಂದು ಈ ಮಿನಾರ್‍ನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X