• Follow NativePlanet
Share
» »ದಕ್ಷಿಣ ಭಾರತದಲ್ಲಿ ಆಚರಿಸಲಾಗುವ 6 ದೊಡ್ಡ ಹಬ್ಬಗಳ ಬಗ್ಗೆ ಒಂದು ಕಿರು ಪರಿಚಯ

ದಕ್ಷಿಣ ಭಾರತದಲ್ಲಿ ಆಚರಿಸಲಾಗುವ 6 ದೊಡ್ಡ ಹಬ್ಬಗಳ ಬಗ್ಗೆ ಒಂದು ಕಿರು ಪರಿಚಯ

Posted By: MANJULA

ದಕ್ಷಿಣ ಭಾರತವನ್ನು ಹಲವು ಪ್ರಭಲ ರಾಜವಂಶಗಳು ಆಳಿದ ಕಾರಣ ಇಲ್ಲಿ ಅದ್ಭುತವಾದ ದೇವಸ್ಥಾನಗಳು, ಕೋಟೆಗಳು ಮತ್ತು ಸುಂದರವಾದ ಸ್ಮಾರಕಗಳು ಇತ್ಯಾದಿಗಳನ್ನು ಒಳಗೊಂಡ ಸಮೃದ್ಧ ಪ್ರದೇಶವಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ ಭಾರತದಲ್ಲಿ ಕೆಲವು ಉತ್ಸವಗಳನ್ನು ವಿವಿಧ ರೂಪಗಳಲ್ಲಿ ಆಚರಿಸುವ ಮೂಲಕ ಅಲ್ಲಿಯ ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿಯುತ್ತದೆ.

ಇಲ್ಲಿ ಕೆಲವು ಹಬ್ಬಗಳು ಆಯಾ ಪ್ರದೇಶಗಳಿಗಷ್ಟೇ ಸೀಮಿತವಾಗಿರುತ್ತದೆ. ಮೈಸೂರು ದಸರಾ ಮುಂತಾದ ಇತರ ಉತ್ಸವಗಳು ಬಹಳ ವೈಭವದಿಂದ ಆಚರಿಸಲ್ಪಡುತ್ತವೆ, ಅವು ಈ ಸ್ಥಳಕ್ಕೆ ಬಹುತೇಕವಾಗಿ ಸಮನಾರ್ಥವಾಗಿದೆ. ದಕ್ಷಿಣ ಭಾರತದ ಈ 6 ಪ್ರಮುಖ ಉತ್ಸವಗಳ ಬಗ್ಗೆ ಓದಿ.

Grand Festivals Celebrated In South India

PC: vilapicina

ಹಂಪಿ ಉತ್ಸವ

ಹಂಪಿ ಉತ್ಸವ ಅಥವಾ ವಿಜಯಾ ಉತ್ಸವ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಹಂಪಿಯ ಈ ಹಬ್ಬವು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಿಂದಲೂ ಪ್ರತಿವರ್ಷ ಆಚರಿಸಲ್ಪಡುವ 3-ದಿನಗಳ ದೀರ್ಘವಾಗಿ ನಡೆಯುವ ಉತ್ಸವವಾಗಿದೆ. ಭಾರತದ ವಿವಿಧ ಭಾಗದ ಕಲಾವಿದರು ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಸಾಂಸ್ಕೃತಿಕ ಸಂಗೀತ, ಕಲೆ ಮತ್ತು ನೃತ್ಯವನ್ನು ಸಂಪೂರ್ಣ ವೈಭವದಿಂದ ಪ್ರದರ್ಶಿಸಲಾಗುತ್ತದೆ. ಅದರಲ್ಲಿ ವಿಶೇಷವಾಗಿ ದೀಪ ಮತ್ತು ಧ್ವನಿಗಳ ಪ್ರದರ್ಶನವಾಗಿದೆ. ಹಂಪಿ ಅವಶೇಷಗಳ ನಡುವೆ ಸುಮಾರು 15 ಕಿ..ಮೀ ಉದ್ದಕ್ಕೂ ಈ ಪ್ರದರ್ಶನವು ನಡೆಸಲಾಗುತ್ತದೆ. ಹಬ್ಬವು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಬರುತ್ತದೆ.

Grand Festivals Celebrated In South India

Pc: Unni Nalanchira

ಓಣಮ್

ಓಣಮ್ ಹಬ್ಬವು ಮೂಲತಃ ಕೇರಳದ ಹಬ್ಬವಾಗಿದೆ. ಇದನ್ನು ಅಕ್ಕಿ ಸುಗ್ಗಿಯ ವಿಷ್ಣುವಿನ ವಾಮನ ಅವತಾರ ಮತ್ತು ಚಕ್ರವರ್ತಿ ಮಹಾಬಲಿಯನ್ನು ಮರಳುವಿಕೆಯನ್ನು ಗೌರವಿಸಲು ಈ ಉತ್ಸವನ್ನು ಆಚರಿಸಲಾಗುತ್ತದೆ.

ಇದು ಮಲಯಾಳಿ ಹಿಂದೂಗಳಿಗೆ ಒಂದು ದೊಡ್ಡ ಹಬ್ಬವಾಗಿದ್ದು ಪ್ರತಿವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ.ಓಣಂ ಆಚರಣೆಯ ಭಾಗವಾಗಿ ನಡೆಯುವ ಅನೇಕ ಆಚರಣೆಗಳಲ್ಲಿ ಪುಲಿಕಾಲಯ (ಹುಲಿ ನೃತ್ಯ), ಒನಾಥುಲ್ಲು (ಸಮರ ಕಲೆ), ಒಣವಿಲ್ಲು (ಸಂಗೀತ), ಅಥವಾ ಪುಕ್ಕಲಮ್ ಎಂದು ಕರೆಯಲಾಗುವ ಸುಂದರವಾದ ಹೂವಿನ ವ್ಯವಸ್ಥೆಗಳು ಮುಂತಾದುವುಗಳನ್ನು ಒಳಗೊಂಡಿವೆ. ಈ ಸಮಯದಲ್ಲಿ ಜನರು ದೋಣಿಯ ಓಟ ಅಥವಾ ವಲ್ಲಂ ಕಾಳಿಯೂ ಈ ಹಬ್ಬದಲ್ಲಿ ನಡೆಯುತ್ತವೆ.

Grand Festivals Celebrated In South India

PC: Ananth BS

ಮೈಸೂರು ದಸರಾ

ಸುಂದರವಾದ ಅರಮನೆಯ ಹೊರತಾಗಿ ಮೈಸೂರು ಬಗ್ಗೆ ನೀವು ಒಂದು ವಿಷಯ ಯೋಚಿಸಬೇಕಾದರೆ, ಇದು ಬಹುಶಃ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ನಡೆಯುವ ಭವ್ಯವಾದ ಮೈಸೂರು ದಸರಾ ಉತ್ಸವವಾಗಿದೆ. 9 ದಿನಗಳ ಕಾಲ ನಡೆಯುವ ಉತ್ಸವವು ಶತಮಾನಗಳಿಂದಲೂ ನಡೆಯುತ್ತಿದೆ ಮತ್ತು ಸಾಮಾನ್ಯವಾಗಿ 20 ಕ್ಕೂ ಹೆಚ್ಚು ಸಂಗತಿಗಳು ಇಲ್ಲಿ ನಡೆಯುತ್ತದೆ.

ಜಂಬೂ ಸವಾರಿ ಎಂದು ಹೆಸರುವಾಸಿಯಾಗಿರುವ ಚಾಮುಂಡೇಶ್ವರಿ ದೇವತೆಯ ವಿಗ್ರಹದ ಮೆರೆವಣಿಗೆ, ಮೈಸೂರು 100,000 ಕ್ಕೂ ಹೆಚ್ಚು ಬಲ್ಬುಗಳೊಂದಿಗೆ ಬೆಳಕು ಚೆಲ್ಲುವ ಅರಮನೆಯ ದೀಪದ ಅಲಂಕಾರ, ಅರಮನೆಗೆ ಎದುರಿಗೆ ವಿರುದ್ಧ ದಿಕ್ಕಿನಲ್ಲಿ ನಡೆಯುವ ವಸ್ತು ಪ್ರದರ್ಶನ ಇತ್ಯಾದಿ ಈ ಭವ್ಯ ಉತ್ಸವದ ಕೆಲವು ಪ್ರಮುಖ ಆಕರ್ಷಣೆಗಳಾಗಿವೆ.

Grand Festivals Celebrated In South India

PC: amazingarfa

ನಾಟ್ಯಂಜಲಿ ನೃತ್ಯ ಉತ್ಸವ

ಕಲೆ ಮತ್ತು ನೃತ್ಯದೊಂದಿಗೆ ಆಧ್ಯಾತ್ಮಿಕತೆಯನ್ನು ಸಮ್ಮಿಲನವೇ ಈ ನಾಟ್ಯಾಂಜಲಿ ನೃತ್ಯ ಉತ್ಸವ ಈ ಉತ್ಸವವು ಭಗವಾನ್ ನಟರಾಜನಿಗೆ ಅರ್ಪಿತವಾಗಿದೆ. ನಟರಾಜನ ಮೂರ್ತಿ ಇಟ್ಟು ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದು ಮಹಾ ಶಿವರಾತ್ರಿ ಸಮಯದಲ್ಲಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ 5 ದಿನಗಳ ಕಾಲ ನಡೆಯುವ ಉತ್ಸವವಾಗಿದೆ.

ಚೆನ್ನೈನಿಂದ ಸುಮಾರು 230 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಚಿದಂಬರಂನಲ್ಲಿ ಈ ಹಬ್ಬವು ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೇಶಾದ್ಯಂತದ ಕಲಾಕಾರರು ಬರುತ್ತಾರೆ. ಈ ಕಾರ್ಯಕ್ರಮವನ್ನು ಅತಿ ಹೆಚ್ಚು ಉತ್ಸಾಹ ಹಾಗೂ ನಂಬಿಕೆಯಿಂದ ಆಚರಿಸುತ್ತಾರೆ ಮತ್ತು ಪ್ರತಿವರ್ಷ ಅತ್ಯುತ್ತಮ ನೃತ್ಯ ಪ್ರದರ್ಶನಗಳನ್ನು ಮಾಡುತ್ತಾರೆ.

Grand Festivals Celebrated In South India

PC: Ramkrishna Math

ಪೊಂಗಲ್

ಪೋಂಗಲ್ ಜನವರಿ 14 ಅಥವಾ 15 ರ ಸಮಯದಲ್ಲಿ ತಮಿಳುನಾಡಿನಲ್ಲಿ ಆಚರಿಸಲಾಗುವ ಸುಗ್ಗಿಯ ಹಬ್ಬವಾಗಿದೆ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಈ ಹಬ್ಬವನ್ನು ದೇಶದ ಉಳಿದ ಭಾಗದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.

ಈ ಪ್ರಮುಖ ಹಿಂದೂ ಹಬ್ಬವನ್ನು 4 ದಿನಗಳ ಕಾಲ ಆಚರಿಸಲಾಗುತ್ತದೆ, ಪ್ರತಿ ದಿನವೂ ಬೇರೆ ಬೇರೆ ಉದ್ದೇಶಕ್ಕಾಗಿ ಆಚರಿಸಲಾಗುತ್ತದೆ.ಈ ಋತುವಿನಲ್ಲಿ ಕಬ್ಬು, ಅರಿಶಿನ ಮತ್ತು ಧಾನ್ಯಗಳಂತಹ ಬೆಳೆಗಳ ಕೊಯ್ಲು ಮಾಡಲಾಗುತ್ತದೆ, ಮತ್ತು ಉತ್ಸವವನ್ನು ನಮಗೆ ಧಾನ್ಯಗಳನ್ನು ಕೊಡುವ ಪ್ರಕೃತಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಆಚರಿಸಲಾಗುತ್ತದೆ.

Grand Festivals Celebrated In South India

PC: Shankar S.

ತ್ರಿಶೂರ್ ಪೂರಮ್

ಈ ವಾರ್ಷಿಕ ಉತ್ಸವವು ಕೇರಳದ ತ್ರಿಶೂರಿನ ವಡಕ್ಕುನಾಥನ್ ದೇವಾಲಯದಲ್ಲಿ ನಡೆಯುತ್ತದೆ, ಚಂದ್ರನು ಪೂರಮ್ ತಾರೆಯೊಂದಿಗೆ ಉದಯಿಸಿದಾಗ ಈ ಉತ್ಸವವನ್ನು ನಡೆಸಲಾಗುತ್ತದೆ. ವಿಸ್ತಾರವಾಗಿ ಅಲಂಕೃತವಾದ ಆನೆಗಳು, ಪಟಾಕಿಗಳು, ಸಮ್ಮೋಹನಗೊಳಿಸುವ ಪರಾಸೋಲ್ ಗಳು ಮತ್ತು ತಾಳವಾದ್ಯ ಸಂಗೀತವನ್ನು ಪ್ರದರ್ಶಿಸುವ ಮೂಲಕ ಕೇರಳದ ಸಂಸ್ಕೃತಿಯ ಅತ್ಯುತ್ಕೃಷ್ಟತೆಯನ್ನು ಈ ಉತ್ಸವವು ಪ್ರದರ್ಶಿಸುತ್ತದೆ.

ಈ ಹಬ್ಬಗಳು ವಿಸ್ತಾರವಾಗಿ ಅಲಂಕೃತವಾದ ಆನೆಗಳು, ಪಟಾಕಿಗಳು, ಸಮ್ಮೋಹನಗೊಳಿಸುವ ಪರಾಸೋಲ್ ಗಳು ಮತ್ತು ತಾಳವಾದ್ಯಗಳು, ಸಂಗೀತವನ್ನು ಪ್ರದರ್ಶಿಸುವ ಮೂಲಕ ಕೇರಳದ ಸಂಸ್ಕೃತಿಯ ಮಟ್ಟವನ್ನು ಪ್ರತಿಬಿಂಬಿಸುತ್ತವೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಉತ್ಸವವನ್ನುಆಚರಿಸಲಾಗುತ್ತದೆ.

1700 ರ ದಶಕದ ಅಂತ್ಯದಲ್ಲಿ ಕೊಚ್ಚಿನ್ ರಾಜ ರಾಜಾ ರಾಮ ವರ್ಮಾ ಮೂಲತಃವಾಗಿ ತ್ರಿಶೂರ್ ಪೂರಮ್ ಅನ್ನು ಪ್ರಾರಂಭಿಸಿದರು. ಇಲಾನ್ಜಿಥರ ಮೆಲಮ್ 250 ಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡ ಮೋಡಿಮಾಡುವ ಸಂಗೀತ ಪ್ರದರ್ಶನವಾಗಿದ್ದು ಚೆಂಡೆ ಈ ಕಾರ್ಯಕ್ರಮದ ಎಂಬ ಪ್ರಮುಖ ವಾದ್ಯವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ