Search
  • Follow NativePlanet
Share
» »ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣ ಮಾಡೋವಾಗ ಇದನ್ನು ನೆನಪಿಟ್ಟುಕೊಳ್ಳಲೇ ಬೇಕು

ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣ ಮಾಡೋವಾಗ ಇದನ್ನು ನೆನಪಿಟ್ಟುಕೊಳ್ಳಲೇ ಬೇಕು

ಪ್ರತಿಯೊಬ್ಬ ಮಹಿಳೆಗೂ ತಾಯ್ತನ ಎನ್ನುವುದು ಜೀವನದ ಮುಖ್ಯ ಅಂಗವಾಗಿರುತ್ತದೆ. ಮಹಿಳೆಯು ಗರ್ಭಾವಸ್ಥೆಯಲ್ಲಿರುವಾಗ ಬಹಳಷ್ಟು ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದರೂ ಮಗುವಿನ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ತಿನ್ನುವ ಆಹಾರದಿಂದ ಪ್ರಯಣ ಎಲ್ಲವೂ ಜಾಗರೂಕರಾಗಿರಬೇಕು ಹೀಗಿರುವಾಗ ಗರ್ಭಾವಸ್ಥೆಯಲ್ಲಿರುವಾಗ ವಿಮಾನದಲ್ಲಿ ಪ್ರಯಾಣ ಮಾಡುವುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿ ನೀಡಲಾಗಿದೆ.

ವೈದ್ಯರ ಸಲಹೆ

ವೈದ್ಯರ ಸಲಹೆ

ಮೊತ್ತ ಮೊದಲಿಗೆ ನೀವು ಯಾವುದೇ ಪ್ರಯಾಣ ಮಾಡುವಾಗ ವೈದ್ಯರ ಸಲಹೆ ಪಡೆದಯುವುದು ಅವಶ್ಯಕ. ನಿಮ್ಮ ಆರೋಗ್ಯ ಸರಿಯಾಗಿದೆಯೇ? ಪ್ರಯಾಣ ಬೆಳೆಸಲು ಸಮರ್ಥರಾಗಿದ್ದೀರೋ ಇಲ್ಲವೋ ಎನ್ನುವುದರ ಬಗ್ಗೆ ತಿಳಿದುಕೊಳ್ಳಿ. ಆದಷ್ಟು ಕಡಿಮೆ ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳಿ. ಗರ್ಭಿಣಿ ಸ್ತ್ರೀಯರಿಗೆ 4ನೇ ತಿಂಗಳಿನಿಂದ 6 ನೇ ತಿಂಗಳ ಒಳಗೆ ವಿಮಾನದಲ್ಲಿ ಪ್ರಯಾಣಬೆಳೆಸುವುದು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ಏನರ್ಜಿ ಮಟ್ಟ ಕೂಡಾ ಹೆಚ್ಚು ಇರುತ್ತದೆ.

ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?

ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಾರದು

ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಾರದು

ಸಾಮಾನ್ಯವಾಗಿ ಕಮರ್ಶೀಯಲ್ ವಿಮಾನ ಉತ್ತಮ ಎನ್ನಲಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಸಣ್ಣ ಹಾಗೂ ನಾನ್‌ ಪ್ರೆಶರೈಸ್ಡ್‌ ವಿಮಾನ ಪ್ರಯಾಣಕ್ಕೆ ಸೂಕ್ತವಲ್ಲ. ಯಾಕೆಂದರೆ ಅಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಅದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ವಿದೇಶ ಪ್ರಯಾಣದ ಮೊದಲು

ವಿದೇಶ ಪ್ರಯಾಣದ ಮೊದಲು

ಒಂದುವೇಳೆ ನೀವು ಗರ್ಭಾವಸ್ಥೆಯಲ್ಲಿದ್ದಾಗ ನಿಮಗೆ ವಿದೇಶ ಪ್ರಯಾಣ ಬೆಳೆಸಬೇಕಾದ ಸಂದರ್ಭ ಬಂದಾಗ ನಿಮ್ಮ ಟ್ರಾವೆಲ್ ಇನ್ಸೂರೆನ್ಸ್‌ನ್ನು ಮರೆಯದಿರಿ. ಕೆಲವು ಕಂಪನಿಗಳು ಕೆಲವು ನಿರ್ಧೀಷ್ಟ ಗಂಟೆಗಳ ವರೆಗೆ ಮಾತ್ರ ಗರ್ಭಿಣಿ ಸ್ತ್ರೀಯರಿಗೆ ಇನ್ಸೂರೆನ್ಸ್ ಒದಗಿಸುತ್ತಾರೆ.

ತಲೆಕೆಳಗಾಗಿರುವ ಈ ಕೋಟೆಯ ರಹಸ್ಯ ಏನು ಗೊತ್ತಾ?ತಲೆಕೆಳಗಾಗಿರುವ ಈ ಕೋಟೆಯ ರಹಸ್ಯ ಏನು ಗೊತ್ತಾ?

ಸೀಟ್‌ನ್ನು ಆಯ್ದುಕೊಳ್ಳುವಾಗ

ಸೀಟ್‌ನ್ನು ಆಯ್ದುಕೊಳ್ಳುವಾಗ

ಎ.ಸಿ ಸೀಟ್‌ನ್ನು ಆಯ್ಕೆ ಮಾಡಿ ಇದು ಆರಾಮದಾಯಕವೂ ಆಗಿರುತ್ತದೆ. ಜೊತೆಗೆ ಕಾಲು ನೀಟಲು ಜಾಗವೂ ಇರುತ್ತದೆ. ಇದರಲ್ಲಿ ನೀವು ಆರಾಮವಾಗಿ ಕಾಲು ನೀಟಿಕೊಂಡು ಪ್ರಯಾಣಿಸಬಹುದು. ಎಕ್ಸ್‌ಸೈಸ್‌ ಕೂಡಾ ಮಾಡಬಹುದು. ಗರ್ಭಿಣಿಯರಿಗೆ ಒಂದೇ ಪೊಸಿಷನ್‌ನಲ್ಲಿ ಕುಳಿತುಕೊಳ್ಳಲು ಆಗೋದಿಲ್ಲ. ಹಾಗಾಗಿ ಆಗಾಗ ಮಗ್ಗುಲನ್ನು ಬದಲಾಯಿಸುತ್ತಾ ಇರಿ.

ಬುಕಿಂಗ್‌ಗೂ ಮೊದಲೇ ವಿಚಾರಿಸಿ

ಬುಕಿಂಗ್‌ಗೂ ಮೊದಲೇ ವಿಚಾರಿಸಿ

ಬಹಳಷ್ಟು ಏರ್‌ಲೈನ್ಸ್‌ ಕಂಪನಿಗಳು ಗರ್ಭಿಣಿಗೆ 36 ತಿಂಗಳ ನಂತರ ನಾಲ್ಕು ಗಂಟೆಗೂ ಅಧಿಕ ಸಮಯ ಪ್ರಯಾಣ ಬೆಳೆಸಲು ಸೌಕರ್ಯ ಒದಗಿಸೋದಿಲ್ಲ. ಒಂದು ವೇಳೆ ಗರ್ಭೀಣಿ ಮಹಿಳೆಯು 28ವಾರ ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಗರ್ಭೀಣಿಯಾಗಿದ್ದಲ್ಲಿ ವಿಮಾನ ಕಂಪನಿಯವರು ಡಾಕ್ಟರ್‌ನ ಸರ್ಟಿಫಿಕೇಟ್ ಕೇಳುತ್ತಾರೆ. ಅದರಲ್ಲಿ ನಿಮ್ಮ ಡೆಲಿವರಿ ಡೇಟ್ ಹಾಗೂ ನಿಮ್ಮ ಆರೋಗ್ಯದ ಕಂಡೀಷನ್ ಬಗ್ಗೆ ತಿಳಿಸಲಾಗಿರುತ್ತದೆ. ಹಾಗಾಗಿ ಟಿಕೇಟ್ ಬುಕ್ ಮಾಡುವ ಮೊದಲೇ ಗರ್ಭೀಣಿ ಮಹಿಳೆಯರಿಗೆ ಬೇಕಾಗುವ ಎಲ್ಲಾ ಸೌಕರ್ಯಗಳು ಇವೆಯೇ ಎಂದು ತಿಳಿದುಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X