Search
  • Follow NativePlanet
Share
» »ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಥಿತಿಕಾರನಾದ ವಿಷ್ಣುವಿನ ವಿಶೇಷವಾದ ದೈವ ಸ್ವರೂಪವೇ ರಂಗನಾಥ ಸ್ವಾಮಿ. ಈ ರೂಪದಲ್ಲಿ ವಿಷ್ಣುಭಗವಾನನಿಗೆ ಉತ್ತರ ಭಾರತ ದೇಶಕ್ಕೆ ಹೋಲಿಸಿದರೆ ದಕ್ಷಿಣ ಭಾರತ ದೇಶದಲ್ಲಿಯೇ ಹೆಚ್ಚು ದೆವಾಲಯಗಳು ಎಂದೇ ಹೇಳಬಹುದು. ಅದರಲ್ಲಿಯೂ ಕಾವೇರಿ ನದಿ ಪ್ರವಹಿಸುವ ರಾಜ್ಯಗಳಾದ ಕರ್ನಾಟಕ ಹಾಗು ತಮಿಳುನಾಡಿನಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ವಾಮಿಯ ದೇವಾಲಯಗಳಿವೆ.

ಈ ರಂಗನಾಥನ ದೇವಾಲಯಗಳು ಹೆಚ್ಚಾಗಿ ಈ ಎರಡು ರಾಜ್ಯದಲ್ಲಿಯೇ ಕಾವೇರಿ ನದಿ ತೀರದಲ್ಲಿಯೇ ನೆಲೆಸಿವೆ. ಇದು ಹೀಗೆ ಇದ್ದರೆ, ದಕ್ಷಿಣ ಭಾರತ ದೇಶದಲ್ಲಿರುವ ರಂಗನಾಥಸ್ವಾಮಿ ದೇವಾಲಯಗಳಲ್ಲಿ ವಿಶಿಷ್ಟವಾದ 5 ಶ್ರೀ ರಂಗನಾಥನ ದೇವಾಲಯಗಳನ್ನು ಪಂಚರಂಗ ಕ್ಷೇತ್ರಗಳೆಂದು ಕರೆಯುತ್ತಾರೆ. ಈ ಪಂಚರಂಗ ದೇವಾಲಯಗಳ ದರ್ಶನವು ಪುರಾಣ ಕಾಲದಿಂದಲೂ ಕೂಡ ಇದೆ ಎಂದು ಹೇಳುತ್ತಾರೆ.

ಅವುಗಳಲ್ಲಿ ಶ್ರೀರಂಗಪಟ್ಟಣ, ಶ್ರೀರಂಗ ಸಾರಂಗಪಾಣಿ ದೇವಾಲಯ ತದಿತರ ದೇವಾಲಯ. ಈ ಪಂಚರಂಗ ಕ್ಷೇತ್ರಗಳ ಸಂದರ್ಶನದಿಂದಾಗಿ ಮೋಕ್ಷ ಲಭಿಸುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಈ ಮೂಲಕ ಆ 5 ರಂಗನಾಥಸ್ವಾಮಿ ದೇವಾಲಯಗಳ ಜೊತೆಗೆ ಸ್ಥಳ ಪುರಾಣ ಮಾಹಿತಿಯನನು ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

1.ಶ್ರೀರಂಗಪಟ್ಟಣ

1.ಶ್ರೀರಂಗಪಟ್ಟಣ

PC:YOUTUBE

ಟಿಪ್ಪುಸುಲ್ತಾನ್‍ಗೆ ಹಾಗು ಶ್ರೀರಂಗಪಟ್ಟಣಕ್ಕೆ ಅವಿನಾಭಾವ ಸಂಬಂಧವಿದೆ. ತನ್ನ ರಾಜ್ಯಕ್ಕೆ ಶ್ರೀರಂಗ ಪಟ್ಟಣವನ್ನೇ ರಾಜಧಾನಿಯಾಗಿ ಮಾಡಿಕೊಂಡು ಟಿಪ್ಪುಸುಲ್ತಾನ್ ಆಳ್ವಿಕೆ ಸಾಗಿಸಿದರು. ಶ್ರೀರಂಗನಾಥನು ಇಲ್ಲಿ ನೆಲೆಸಿರುವ ಕಾರಣ, ಇದನ್ನು ಶ್ರಿರಂಗಪಟ್ಟಣ ಎಂದೇ ಕರೆಯುತ್ತಾರೆ.

2.ಕಾವೇರಿ ಮಾತೆ ಸಹಿತವಾಗಿ

2.ಕಾವೇರಿ ಮಾತೆ ಸಹಿತವಾಗಿ

PC:YOUTUBE

ಇಲ್ಲಿ ಸ್ವಾಮಿಯು ಕಾವೇರಿ ಸಹಿತವಾಗಿ ನೆಲೆಸಿರುತ್ತಾನೆ. ಪಶ್ಚಿಮ ಗಂಗೆಯರ ಕಾಲದಲ್ಲಿ ನಿರ್ಮಾಣ ಮಾಡಲ್ಪಟ್ಟ ಈ ದೇವಾಲಯವು ಕೆಲವು ಸಾವಿರ ವರ್ಷಗಳ ಚರಿತ್ರೆಯನ್ನು ಹೊಂದಿದೆ. ಇಲ್ಲಿರುವ ರಂಗನಾಥನನ್ನು "ಆದಿರಂಗ" ಎಂದು ಕೂಡ ಕರೆದು ಆರಾಧಿಸುತ್ತಾರೆ. ಇಲ್ಲಿ ಮಾತ್ರವೇ ಶ್ರೀರಂಗನಾಥನ ಪಾದಗಳ ಸಮೀಪ ಕಾವೇರಿ ಮಾತೆ ಇರುವುದನ್ನು ಕಾಣಬಹುದು.

3.ತಿರುಪ್ಪುನಗರ್

3.ತಿರುಪ್ಪುನಗರ್

PC:YOUTUBE

ತಮಿಳುನಾಡಿನ ತಿರುಚಿರಾಪಲ್ಲಿಗೆ ಸಮೀಪದಲ್ಲಿರುವ ಒಂದು ಗ್ರಾಮ ತಿರುಪ್ಪುನಗರ್. ಇಲ್ಲಿರುವ ಮೂಲವಿಗ್ರಹ "ಅಪ್ಪಕುಡಗಾನ್ ಪೆರುಮಾಳ್" ಎಂದು ಕರೆಯುತ್ತಾರೆ. ಇಲ್ಲಿ ಸ್ವಾಮಿಯು ಉಭಮನ್ಯು ಎಂಬ ರಾಜನಿಗೆ ಒಬ್ಬ ವೃದ್ಧನ ರೂಪದಲ್ಲಿ ಕಾಣಿಸಿ ತನ್ನ ಹಸಿವನ್ನು ತೀರಿಸು ಎಂದು ಬೇಡಿಕೊಳ್ಳುತ್ತಾನೆ ಎಂಬುದು ಸ್ಥಳ ಪುರಾಣ.

4.ಅಪ್ಪಳ

4.ಅಪ್ಪಳ

PC:YOUTUBE

ರಾಜನು ಗರ್ವದಿಂದ ಹಸಿವೇ ಅಲ್ಲವೇ ಎಂದು ಹೇಳುತ್ತಾ ಪಂಚಭಕ್ಷಗಳನ್ನು ಬಡಿಸುತ್ತಾನೆ. ಎಷ್ಟೇ ತಿಂದರು ಆ ವೃದ್ಧನಿಗೆ ಹಸಿವು ಮಾತ್ರ ಕಡಿಮೆಯಾಗುವುದಿಲ್ಲ. ಇದರಿಂದಾಗಿ ತನ್ನ ಅಸ್ಥಾನದಲ್ಲಿರುವ ಮಹರ್ಷಿಯ ಸೂಚನೆಯ ಮೇರೆಗೆ ಭಕ್ತಿಯಿಂದ ಆ ವೃದ್ಧನಿಗೆ ಅಪ್ಪಳವನ್ನು ಬಡಿಸುತ್ತಾನೆ. ಇದರಿಂದಾಗಿ ಆತನ ಹಸಿವು ಸಂಪೂರ್ಣವಾಗಿ ಹೋಗಿ, ರಾಜನಿಗೆ ರಂಗನಾಥನ ರೂಪದಲ್ಲಿ ಸಾಕ್ಷಾತ್ಕರಿಸುತ್ತಾನೆ. ಅದ್ದರಿಂದಲೇ ಇಲ್ಲಿರುವ ಸ್ವಾಮಿಗೆ ಅಪ್ಪಕುಡತಾನ್ ಎಂದು ಕರೆಯುತ್ತಾರೆ.

5.ಸಾರಂಗಪಾಣಿ ದೇವಾಲಯ

5.ಸಾರಂಗಪಾಣಿ ದೇವಾಲಯ

PC:YOUTUBE

ಕುಂಭಕೋಣಂನಲ್ಲಿನ ರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಯು ಪವಣಿಸಿರುವ ಸ್ಥಿತಿಯಿಂದ ಸ್ವಲ್ಪ ಎದ್ದ ರೀತಿಯಲ್ಲಿ ಇರುತ್ತಾನೆ. ಇದನ್ನು ಉದ್ದಾನ ಶಯನ ಭಂಗಿಮ ಎಂದು ಕೂಡ ಕರೆಯುತ್ತಾರೆ. ಇಂತಹ ರೂಪದಲ್ಲಿರುವ ವಿಗ್ರಹವು ಪ್ರಪಂಚದಲ್ಲಿ ಇದೊಂದೆ ಎಂದು ಹೇಳಲಾಗುತ್ತದೆ.

6.ಮನೆ ಆಳಿಯ

6.ಮನೆ ಆಳಿಯ

PC:YOUTUBE

ಅದೇ ವಿಧವಾಗಿ ಇಲ್ಲಿ ಸ್ವಾಮಿಯು ಮನೆ ಆಳಿಯನಾಗಿದ್ದನು. ವೈಕುಂಠದಿಂದ ಮುನಿಸಿಕೊಂಡು ಬಂದ ಲಕ್ಷ್ಮಿದೇವಿಯನ್ನು ಹುಡುಕುತ್ತಾ ಬಂದ ಶ್ರೀನಿವಾಸ ಕುಂಭಕೋಣಂನಲ್ಲಿನ ಹೇಮ ಋಷಿಯ ಸಮೀಪದಲ್ಲಿದ್ದ, ಲಕ್ಷ್ಮೀ ದೇವಿಯನ್ನು ವಿವಾಹ ಮಾಡಿಕೊಂಡು ಇಲ್ಲಿಯೇ ಇದ್ದುಬಿಟ್ಟನು. ಹಾಗಾಗಿಯೇ ಸ್ವಾಮಿಯವರು ಇಲ್ಲಿ ಮನೆ ಆಳಿಯನಾಗಿ ಇದ್ದ ಎಂದು ಸ್ಥಳ ಪುರಾಣ ತಿಳಿಸುತ್ತದೆ.

7.ಮಯಿಲದುತುರೈ

7.ಮಯಿಲದುತುರೈ

PC:YOUTUBE

ಕಾವೇರಿ ನದಿತೀರದಲ್ಲಿ ತಮಿಳುನಾಡಿನಲ್ಲಿನ ಮಯುಲದುತುರೈ ಎಂಬ ಸ್ಥಳವಿರುವ ರಂಗನಾಥ ದೇವಾಲಯವು ಪಂಚರಂಗ ಕ್ಷೇತ್ರಗಳಲ್ಲಿ ಒಂದು. ಪರಾಕಲ್ ಎಂಬ ಆಳ್ವಾರ್ ಮೊದಲು ಕಳ್ಳನಾಗಿರುತ್ತಾನೆ. ಆತನನ್ನು ಭಕ್ತಿ ಮಾರ್ಗದಲ್ಲಿ ನಡೆಸಬೇಕು ಎಂದು ಶ್ರೀ ಮಹಾವಿಷ್ಣುವೇ ಇಲ್ಲಿ ಒಬ್ಬ ಬ್ರಾಹ್ಮಣ ವೇಶದಲ್ಲಿ ಆತನಿಗೆ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸುತ್ತಾನೆ ಎಂಬುದು ಕಥೆ.

8.ನಾದ ಸ್ವರ ಸಂಗೀತ

8.ನಾದ ಸ್ವರ ಸಂಗೀತ

PC:YOUTUBE

ಇನ್ನು ಆ ಆಳ್ವಾರರ ಕೋರಿಕೆಯ ಮೇರೆಗೆ ಈ ಕ್ಷೇತ್ರದಲ್ಲಿ ಕಲಿಯುಗಾಂತವಾಗುವವರೆವಿಗೂ ರಂಗನಾಥನ ರೂಪದಲ್ಲಿ ನೆಲೆಸಿರುತ್ತೇನೆ ಎಂದು ಮಹಾವಿಷ್ಣುವು ಸ್ವಯಂವಾಗಿ ಹೇಳಿದನು ಎಂದು ನಂಬಲಾಗಿದೆ. ಇಲ್ಲಿರುವ ಸ್ವಾಮಿಯನ್ನು ಪರಿಮಳ ಪೆರುಮಾಳ್ ಎಂದು ಕರೆಯುತ್ತಾರೆ. ಇಲ್ಲಿ ಸ್ವಾಮಿಯ ಅನುಗ್ರಹದಿಂದಾಗಿಯೇ ನಾದಸ್ವರ ಒಂದು ಸಂಗೀತ ವಾದ್ಯವಾಗಿ ರೂಪಾಂತರವಾಯಿತು ಎಂದು ಹೇಳುತ್ತಾರೆ.

9.ಶ್ರೀರಂಗ

9.ಶ್ರೀರಂಗ

PC:YOUTUBE

ಶ್ರೀರಂಗವನ್ನು "ಅಂತ್ಯ ರಂಗ" ಎಂದು ಕೂಡ ಕರೆಯುತ್ತಾರೆ. ಆದರೆ ಶ್ರೀರಂಗನಾಥನ ದೇವಾಲಯದಲ್ಲಿ ಈ ದೇವಾಲಯವು ಅತ್ಯಂತ ಪ್ರಮುಖವಾದುದು. ತಮಿಳುನಾಡಿನಲ್ಲಿರುವ ಈ ಕ್ಷೇತ್ರವನ್ನು "ಇಂಡಿಯನ್ ವಾಟಿಕನ್" ಎಂದು ಕೂಡ ಕರೆಯುತ್ತಾರೆ. ಈ ಕ್ಷೇತ್ರದಲ್ಲಿನ ಮೂಲ ವಿಗ್ರಹವು ರಾಕ್ಷಸರಾಜನಾದ ವಿಭೀಷನು ಪ್ರತಿಷ್ಟಾಪಿಸಿದನು ಎಂದು ನಂಬಲಾಗಿದೆ.

10.ಶೀಘ್ರವೇ ವಿವಾಹ

10.ಶೀಘ್ರವೇ ವಿವಾಹ

ಭಾರತ ದೇಶದಲ್ಲಿನ ಅತಿ ವಿಶಾಲವಾದ ದೇವಾಲಯಗಳಲ್ಲಿ ಇದೇ ಮೊದಲನೆಯದು. 108 ದಿವ್ಯ ದೇವಾಲಯಗಳಲ್ಲಿ ಒಂದು. 6,31,000 ಚದರ ಮೀಟರ್ ಅಂದರೆ 156 ಎಕರೆಗಳ ವಿಶಾಲವಾದ ವಿಸ್ತೀರ್ಣದಲ್ಲಿ ಈ ದೇವಾಲಯವಿದೆ. ರಾಜಗೋಪುರದ ಎತ್ತರ 236 ಅಡಿ. ಇಲ್ಲಿನ ಮೂಲ ವಿಗ್ರಹಕ್ಕೆ ವಸ್ತ್ರಗಳನ್ನು ಸಮರ್ಪಿಸಿದರೆ ಶೀಘ್ರವೇ ವಿವಾಹವಾಗುತ್ತದೆ ಎಂಬುದು ಭಕ್ತರ ಪ್ರಬಲವಾದ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X