• Follow NativePlanet
Share
Menu
» »ಭಾರತದಲ್ಲಿನ ಈ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ...

ಭಾರತದಲ್ಲಿನ ಈ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ...

Written By:

ನಮ್ಮ ಭಾರತ ದೇಶ ಅತ್ಯಂತ ಅದ್ಭುತವಾದ ದೇಶ. ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿರುವ ಸ್ಥಳವೆಂದರೆ ಅದು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇಲ್ಲಿನ ಸಂಸ್ಕøತಿ, ಪ್ರಾಚೀನವಾದ ಪರಂಪರೆ, ಧರ್ಮ ಇವೆಲ್ಲಾ ಭಾರತದ ಮೆರುಗನ್ನು ಹೆಚ್ಚಿಸಲಿವೆ. ಅದೇನೆ ಇರಲಿ ಭಾರತ ವಿಶ್ವದಲ್ಲಿನ ಒಂದು ಹೆಮ್ಮೆಯ ದೇಶವಾಗಿ ಪ್ರಖ್ಯಾತತೆ ಪಡೆದಿದೆ.

ಹೀಗಿರುವಾಗ ನಮ್ಮ ಭಾರತ ದೇಶದಲ್ಲಿಯೇ ಭಾರತ ನಿವಾಸಿಗಳಿಗೆ ಕೆಲವು ಸ್ಥಳಗಳಿಗೆ ಪ್ರವೇಶವಿಲ್ಲ ಎಂದರೆ ಹೀಗಿರುತ್ತದೆ ಅಲ್ಲವೇ? ಬೇರೆ ದೇಶದಿಂದ ಬಂದ ಜನರಿಗೆ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅತಿಥ್ಯವನ್ನು ನಮ್ಮ ಭಾರತೀಯರು ವಿದೇಶಿಯರಿಗೆ ನೀಡುತ್ತಾರೆ. ಹೀಗಾಗಿಯೇ ವಿದೇಶಿಯರಿಗೆ ಭಾರತವೆಂದರೆ ಅಷ್ಟು ಅಭಿಮಾನ.

ಪ್ರತಿಯೊಬ್ಬ ಭಾರತೀಯನು ಕೂಡ ಸ್ಥಳದಿಂದ ಸ್ಥಳಕ್ಕೆ ತೆರಳುವ ಅಧಿಕಾರವಿದೆ ಎಂದು ನಮ್ಮ ಸಂವಿಧಾನದಲ್ಲಿಯೇ ಇದೆ. ಹೀಗಿರುವಾಗ ನಮ್ಮ ದೇಶದಲ್ಲಿಯೇ ನಮಗೆ ಪ್ರವೇಶವಿಲ್ಲ ಎಂದರೆ ಹೇಗೆ? ಅಲ್ಲವೇ ಅಂಥಹ ಸ್ಥಳಗಳು ಯಾವುವು ಗೊತ್ತೆ? ಹಾಗಾದರೆ ಲೇಖನದಲ್ಲಿ ಭಾರತೀಯರಿಗೆ ಪ್ರವೇಶವಿಲ್ಲದ ಭಾರತದಲ್ಲಿನ 10 ಸ್ಥಳಗಳ ಬಗ್ಗೆ ತಿಳಿಯೋಣ.

ಯುನೊ-ಇನ್ ಹೋಟೆಲ್, ಬೆಂಗಳೂರು

ಯುನೊ-ಇನ್ ಹೋಟೆಲ್, ಬೆಂಗಳೂರು

ಈ ಯುನೊ-ಇನ್ ಹೋಟೆಲ್ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿಯೇ ಇದೆ. ಇದು ಜಪಾನ್ ದೇಶಕ್ಕೆ ಸಂಬಂಧಪಟ್ಟಂತಹ ಹೋಟೆಲ್ ಆಗಿದ್ದು, ಇಲ್ಲಿ ಯಾವ ಭಾರತೀಯರಿಗೂ ಕೂಡ ಪ್ರವೇಶಕ್ಕೆ ಅವಕಾಶವನ್ನು ನೀಡಲಾಗುವುದಿಲ್ಲ. ಏಕೆಂದರೆ ಜಪಾನ್ ದೇಶದವರು ಈ ಹೋಟೆಲ್ ಅನ್ನು ತಮ್ಮ ಮನರಂಜನೆಗಾಗಿ ಸ್ಥಾಪನೆ ಮಾಡಿಕೊಂಡಿದ್ದಾರೆ. ಭಾರತೀಯರಾದ ನಮಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ ಎಂದು ನಿರಂತರ ಹೋರಾಟದ ನಂತರ ಈ ಹೋಟೆಲ್ ಮುಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ.

ಫ್ರೀ ಕಸಾಲ್ ಕೆಫೆ, ಕಸಾಲ್

ಫ್ರೀ ಕಸಾಲ್ ಕೆಫೆ, ಕಸಾಲ್

ಈ ಫ್ರೀ ಕಸಾಲ್ ಕೆಫೆಯ ಮ್ಯಾನೆಜರ್ ಒಂದು ದಿನ ಬೇಸರದಿಂದ ಇದ್ದನಂತೆ. ಒಂದು ಭಾರತೀಯ ಹುಡುಗಿಯು ಈ ಕೆಫೆಯಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದಳಂತೆ. ಇಷ್ಟೇ ಸಮಯ ಕಳೆದರೂ ಕೂಡ ಆಹಾರವನ್ನು ತಂದು ಕೊಡಲಿಲ್ಲವಂತೆ. ಇದೊಂದೇ ಕಾರಣಕ್ಕೆ ಅಲ್ಲ, ಬದಲಾಗಿ ಈ ಕೆಫೆಯಲ್ಲಿ ಭಾರತೀಯರಿಗೆ ವರ್ಣ ಭೇದವನ್ನು ಮಾಡುತ್ತಾರೆ. ಹಾಗಾಗಿಯೇ ಈ ಕೆಫೆಗೆ ಯಾವ ಭಾರತೀಯರು ಕೂಡ ಭೇಟಿ ನೀಡುವುದಿಲ್ಲ. ಇದು ಸಹ ಭಾರತೀಯರಿಗೆ ಭಾರತದಲ್ಲಿಯೇ ಪ್ರವೇಶವಿಲ್ಲದ ಸ್ಥಳವಾಗಿದೆ.

ರಷ್ಯಾದ ಕಲೋನಿ (ವಸಾಹತು), ಕುಂಡಂಕುಳಂ

ರಷ್ಯಾದ ಕಲೋನಿ (ವಸಾಹತು), ಕುಂಡಂಕುಳಂ

ಹಲವಾರು ಹೇಳಿಕೆಯ ಪ್ರಕಾರ, ಕುಂಡಂಕುಳಂ ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟ್ ವಸತಿ ಸಂಕೀರ್ಣ " ರಷ್ಯಾದ ವಸಾಹತು"ವನ್ನು ಹೊಂದಿತ್ತು. ಇಲ್ಲಿ ಮುಖ್ಯವಾಗಿ ಭಾರತೀಯರಿಗೆ ಪ್ರವೇಶವಿಲ್ಲ. ಈ ವಸಾಹತುವಿನಲ್ಲಿ ಕೇವಲ ರಷ್ಯಾನ್ನರಿಗೆ ಮಾತ್ರ ಅವಕಾಶವನ್ನು ಕಲ್ಪಿಸುತ್ತದೆ. ಇಲ್ಲಿ ಮನೆಗಳು, ಕ್ಲಬ್ ಮತ್ತು ಹೋಟೆಲ್‍ಗಳು ಕೂಡ ಇವೆ. ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟ್‍ನಲ್ಲಿ ಕೆಲಸ ನಿರ್ವಹಿಸುವವರಿಗೆ ಮಾತ್ರ ಇಲ್ಲಿ ಪ್ರವೇಶವನ್ನು ನೀಡಲಾಗುತ್ತದೆ. ಇದು ಕೂಡ ಭಾರತ ದೇಶದಲ್ಲಿನ ಭಾರತೀಯರಿಗೆ ಪ್ರವೇಶವಿಲ್ಲದ ಸ್ಥಳವಾಗಿದೆ.

ರೆಡ್ ಲಾಲಿಪಾಪ್ ಹಾಸ್ಟೇಲ್, ಚೆನ್ನೈ

ರೆಡ್ ಲಾಲಿಪಾಪ್ ಹಾಸ್ಟೇಲ್, ಚೆನ್ನೈ

ಈ ಸುಂದರವಾದ ರೆಡ್ ಲಾಲಿಪಾಪ್ ಹಾಸ್ಟೇಲ್ ಚೆನ್ನೈನ ಮಾಂಡವೆಲಿಯಲ್ಲಿದೆ. ಈ ಹಾಸ್ಟೇಲ್‍ನಲ್ಲಿ ಕೇವಲ ವಿದೇಶದವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಕೂಡ ಭಾರತೀಯರಿಗೆ ಪ್ರವೇಶವನ್ನು ನೀಡುವುದಿಲ್ಲ. ಆದರೆ ಭಾರತೀಯರಾಗಿದ್ದು, ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುವವರಿಗೆ ಮಾತ್ರ ಈ ಹಾಸ್ಟೆಲ್‍ನಲ್ಲಿ ಪ್ರವೇಶವನ್ನು ನೀಡುತ್ತಾರೆ. ಇಲ್ಲಿನ ಹಾಸ್ಟೇಲ್‍ಗೆ ಪ್ರವೇಶ ಪಡೆಯಬೇಕಾದರೆ ಪಾಸ್‍ಪೋರ್ಟ್ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

"ವಿದೇಶಿಯರಿಗೆ ಮಾತ್ರ" ಗೋವಾದ ಈ ಬೀಚ್‍ನಲ್ಲಿ ಪ್ರವೇಶ

ಗೋವಾ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾದ ಸ್ಥಳವೇ ಆಗಿದೆ. ಆದರೆ ಈ ಸುಂದರವಾದ ಗೋವಾದ ಕೆಲವು ಸ್ಥಳಗಳಲ್ಲಿ ಭಾರತೀಯರಿಗೆ ಪ್ರವೇಶವನ್ನು ನೀಡಲಾಗುವುದಿಲ್ಲ. ಗೋವಾದ ಕೆಲವು ವಿಶೇಷವಾದ ಬೀಚ್‍ಗಳಿಗೆ ವಿದೇಶಿಯರಿಗೆ ಮಾತ್ರ ಮುಡಿಪಾಗಿದ್ದು, ಯಾವುದೇ ಕಾರಣಕ್ಕೂ ಭಾರತೀಯರಿಗೆ ಪ್ರವೇಶವಿಲ್ಲ. ಗೋವಾದ ಅರಾಂಬೋಲ್ ಬೀಚ್ ಅತ್ಯಂತ ಪ್ರಸಿದ್ಧವಾಗಿದ್ದು, ಇಲ್ಲಿ ಭಾರತೀಯರಿಗೆ ಪ್ರವೇಶ ನೀಡುವುದಿಲ್ಲ.

"ವಿದೇಶಿಯರಿಗೆ ಮಾತ್ರ" ಬೀಚ್, ಪುದುಚೇರಿ

ಗೋವಾದ ಬೀಚ್‍ಗಳಂತೆಯೇ ಪುದುಚೇರಿಯಲ್ಲಿಯೂ ಕೂಡ ಭಾರತೀಯರಿಗೆ ಬೀಚ್‍ಗಳಿಗೆ ಪ್ರವೇಶವಿಲ್ಲ. ಇದು ಮಾನವ ಹಕ್ಕುಗಳನ್ನು ಕಸಿದುಕೊಳ್ಳುವುದೇ ಆಗಿದೆ. ಇಲ್ಲಿನ ಬೀಚ್‍ಗಳಿಗೆ, ಖಾಸಗಿ ರೆಸ್ಟೋರೆಂಟ್‍ಗಳಿಗೆ ಮತ್ತು ಹೋಟೆಲ್‍ಗಳಿಗೆ ಭಾರತೀಯರಿಗೆ ಯಾವುದೇ ಪ್ರವೇಶ ಅವಕಾಶವನ್ನು ನೀಡಲಾಗುವುದಿಲ್ಲ.

ಬ್ರಾಡ್ಲ್ಯಾಂಡ್ಸ್ ಹೋಟೆಲ್, ಚೆನ್ನೈ

ಬ್ರಾಡ್ಲ್ಯಾಂಡ್ಸ್ ಹೋಟೆಲ್, ಚೆನ್ನೈ

ಈ ಚೆನ್ನೈನ ಬ್ರಾಡ್ಲ್ಯಾಂಡ್ಸ್ ಹೋಟೆಲ್ ಬಗ್ಗೆ 2010 ರಲ್ಲಿ ಬೆಳಕಿಗೆ ಬಂದಿತ್ತು. ಇದರ ಪ್ರಕಾರ ಭಾರತೀಯರಿಗೆ ಯಾವುದೇ ಕಾರಣಕ್ಕೂ ಪ್ರವೇಶವನ್ನು ನೀಡಲಾಗುವುದಿಲ್ಲ. ಕೇವಲ ವಿದೇಶಿಯರಿಗೆ ಮಾತ್ರ ಇಲ್ಲಿ ಪ್ರವೇಶವನ್ನು ನೀಡಲಾಗುತ್ತದೆ. ಇಲ್ಲಿನ ಹೋಟೆಲ್‍ನಲ್ಲಿ ಕೊಠಡಿಯನ್ನು ಪಡೆಯಬೇಕಾದರೆ ಮೊದಲು ಪಾಸ್‍ಪೋರ್ಟ್ ಅನ್ನು ಹೊಂದಿರಬೇಕು ಅಷ್ಟೇ.

ನಾರ್ಬುಲಿಂಗ್ಕಾ, ಧರ್ಮಶಾಲ

ನಾರ್ಬುಲಿಂಗ್ಕಾ, ಧರ್ಮಶಾಲ

ಹಲವಾರು ಹೇಳಿಕೆಗಳ ಪ್ರಕಾರ, ಈ ನಿರ್ದಿಷ್ಟವಾದ ಕೆಫೆಯಲ್ಲಿ ಯಾವುದೇ ಭಾರತೀಯರಿಗೂ ಪ್ರವೇಶವಿಲ್ಲ. ಇದೊಂದು ವರ್ಣಬೇಧ ನೀತಿಯನ್ನು ಅನುಸರಿಸುತ್ತಿರುವ ಅತ್ಯಂತ ಪ್ರಮುಖವಾದ ಸ್ಥಳ ಕೂಡ ಇದಾಗಿದೆ.

ಚೀನಾ ಆಕ್ರಮಿತ ಅರುಣಾಚಲ ಪ್ರದೇಶ, ಅರುಣಾಚಲ ಪ್ರದೇಶ

ಚೀನಾ ಆಕ್ರಮಿತ ಅರುಣಾಚಲ ಪ್ರದೇಶ, ಅರುಣಾಚಲ ಪ್ರದೇಶ

ನಮ್ಮ ದೇಶದ ಈಶಾನ್ಯ ಸ್ವರ್ಗದಿಂದ ಬರುವ ಆನೇಕ ಕಥೆಗಳು ಚೀನಾ ತನ್ನದೇ ಭೂಪ್ರದೇಶವೆಂದು ಹೇಳಿಕೊಳ್ಳುತ್ತಿದೆ. ಆನೇಕ ಪ್ರದೇಶದಲ್ಲಿ ಭಾರತೀಯರಿಗೆ ರಾಷ್ಟ್ರೀಯತೆ ಹೊಂದಿದ್ದರು ಕೂಡ ಕಟ್ಟು ನಿಟ್ಟಾಗಿ ಚೀನಾ ಭಾರತೀಯರಿಗೆ ನೀಷೇದಿಸುತ್ತಿದೆ. ಹೀಗಾಗಿ ಇದು ಕೂಡ ಭಾರತೀಯರಿಗೆ ಪ್ರವೇಶವಿಲ್ಲದ ಸ್ಥಳವೇ ಆಗಿದೆ.

ಸೆಸರ್ ಲಾ, ಡಪ್ಸಾಂಗ್

ಸೆಸರ್ ಲಾ, ಡಪ್ಸಾಂಗ್

ಇದು ಕೂಡ ನಮ್ಮ ಭಾರತೀಯರಿಗೆ ಪ್ರವೇಶವನ್ನು ನೀಡದೇ ಇರುವ ಪ್ರದೇಶ ಇದಾಗಿದೆ. ಇಲ್ಲಿ ಮುಖ್ಯವಾಗಿ ವಿದೇಶಿಯರಿಗೆ ಮಾತ್ರ ಪ್ರವೇಶ ಅನುಮತಿಯನ್ನು ನೀಡಲಾಗುತ್ತದೆ. ಭಾರತೀಯರು ಏನಾದರೂ ಪ್ರವೇಶ ಮಾಡಿದರೆ ದಂಡವನ್ನು ತೆರಲೇಬೇಕಾಗುತ್ತದೆ.

ಬ್ರಿಟೀಷ್‍ರು ನಿರ್ಮಾಣ ಮಾಡಿದ ಏಕೈಕ ಹಿಂದೂ ದೇವಾಲಯ ಯಾವುದು ಗೊತ್ತೆ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ